ನಿವೃತ್ತಿ ಘೋಷಿಸಿದ ರೋಜರ್ ಫೆಡರರ್, ಟೆನಿಸ್ ದಿಗ್ಗಜನ ಕೊನೆಯ ಆಟಕ್ಕೆ ಸಾಕ್ಷಿಯಾಗಲಿದೆ ಲೇವರ್ ಕಪ್

ಸೆರೆನಾ ವಿಲಿಯಮ್ಸ್ ನಿವೃತ್ತಿಯ ಬೆನ್ನಲ್ಲೇ ನಲವತ್ತೊಂದು ವರ್ಷದ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರು ಗುರುವಾರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ರೋಜರ್ ಫೆಡರರ್
ರೋಜರ್ ಫೆಡರರ್

ಸೆರೆನಾ ವಿಲಿಯಮ್ಸ್ ನಿವೃತ್ತಿಯ ಬೆನ್ನಲ್ಲೇ ನಲವತ್ತೊಂದು ವರ್ಷದ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರು ಗುರುವಾರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಪುರುಷರ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಅವರು ತಮ್ಮ ವೃತ್ತಿಜೀವನ ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ವಾರ ನಡೆಯುವ ಲೇವರ್ ಕಪ್ ತನ್ನ ವೃತ್ತಿಜೀವನದ ಕೊನೆಯ ಎಟಿಪಿ ಪಂದ್ಯಾವಳಿಯಾಗಿದ್ದು, ಅದರ ನಂತರ ಯಾವುದೇ ಗ್ರ್ಯಾಂಡ್ ಸ್ಲಾಮ್ ಅಥವಾ ಟೂರ್ ಈವೆಂಟ್‌ಗಳಲ್ಲಿ ಭಾಗವಹಿಸುವುದಿಲ್ಲ ಎಂದು ಫೆಡರರ್ ತಿಳಿಸಿದ್ದಾರೆ.

"ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನಾನು ಕಳೆದ ಮೂರು ವರ್ಷಗಳಿಂದ ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳ ರೂಪದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ನಾನು ಸಂಪೂರ್ಣ ಸ್ಪರ್ಧಾತ್ಮಕ ರೂಪಕ್ಕೆ ಮರಳಲು ಶ್ರಮಿಸಿದ್ದೇನೆ. ಆದರೆ ನನ್ನ ದೇಹದ ಸಾಮರ್ಥ್ಯಗಳು ಮತ್ತು ಮಿತಿಗಳು, ಅದರ ಸಂದೇಶ ನನಗೆ ತಿಳಿದಿದೆ. ನನಗೆ ಈಗ 41 ವರ್ಷ ” ಎಂದು ಫೆಡರರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಸಂದೇಶದಲ್ಲಿ ತಿಳಿಸಿದ್ದಾರೆ.

"ನಾನು 24 ವರ್ಷಗಳಲ್ಲಿ 1,500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ನಾನು ಕನಸು ಕಂಡಿರುವುದಕ್ಕಿಂತ ಹೆಚ್ಚು ಉದಾರವಾಗಿ ನನ್ನನ್ನು ನಡೆಸಿಕೊಂಡಿದೆ ಮತ್ತು ನನ್ನ ಸ್ಪರ್ಧಾತ್ಮಕ ವೃತ್ತಿಜೀವನ ಕೊನೆಗೊಳಿಸುವ ಸಮಯ ಈಗ ಬಂದಿದೆ ಎಂದು ಹೇಳಿದ್ದಾರೆ.

"ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್ ನನ್ನ ಅಂತಿಮ ATP ಪಂದ್ಯಾವಳಿ ಆಗಿರುತ್ತದೆ. ನಾನು ಭವಿಷ್ಯದಲ್ಲಿ ಹೆಚ್ಚು ಟೆನಿಸ್ ಆಡುತ್ತೇನೆ, ಆದರೆ ಯಾವುದೇ ಗ್ರಾಂಡ್ ಸ್ಲಾಮ್‌ಗಳಲ್ಲಿ ಅಥವಾ ಟೂರ್ ಈವೆಂಟ್‌ಗಳಲ್ಲಿ ಭಾಗವಹಿಸುವುದಿಲ್ಲ" ಎಂದು ಫೆಡರರ್ ತಿಳಿಸಿದ್ದಾರೆ.

ರೋಜರ್ ಫೆಡರರ್ ಅವರು ತಮ್ಮ ಎರಡು ದಶಕಗಳ ವೃತ್ತಿಪರ ವೃತ್ತಿಜೀವನದಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಅಲ್ಲದೆ ಈ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಪುರುಷ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com