ಟೆನಿಸ್ ದಂತಕಥೆ ರೋಜರ್‌ ಫೆಡರರ್ ನಿವೃತ್ತಿ: ಇವರೊಟ್ಟಿಗೆ ರಾಫೆಲ್ ನಡಾಲ್ ಕಣ್ಣೀರಿಟ್ಟ ವಿಡಿಯೋ ವೈರಲ್

 ಸ್ವಿಟ್ಜರ್ಲ್ಯಾಂಡ್ ಲೆಜಂಡರಿ ಆಟಗಾರ, ಟೆನಿಸ್ ದಂತಕಥೆ ರೋಜರ್‌ ಫೆಡರರ್ ತಮ್ಮ ಎರಡು ದಶಕಗಳ ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ್ದು, ಕಣ್ಣೀರಿನ ವಿದಾಯ ಹೇಳಿದ್ದಾರೆ.
ರೋಜರ್‌ ಫೆಡರರ್, ರಾಫೆಲ್ ನಡಾಲ್
ರೋಜರ್‌ ಫೆಡರರ್, ರಾಫೆಲ್ ನಡಾಲ್

ಲಂಡನ್: ಸ್ವಿಟ್ಜರ್ಲ್ಯಾಂಡ್ ಲೆಜಂಡರಿ ಆಟಗಾರ, ಟೆನಿಸ್ ದಂತಕಥೆ ರೋಜರ್‌ ಫೆಡರರ್ ತಮ್ಮ ಎರಡು ದಶಕಗಳ ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ್ದು, ಕಣ್ಣೀರಿನ ವಿದಾಯ ಹೇಳಿದ್ದಾರೆ. ರಾಫೆಲ್ ನಾಡಲ್ ನೊಂದಿಗೆ ನಡೆದ ಕೊನೆಯ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ರೋಜರ್ ಭಾರವಾದ ಹೃದಯದಿಂದಲೇ ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಇದೇ ವೇಳೆ ರೋಜರ್ ಫೆಡರರ್ ಭಾವುಕರಾಗುತ್ತಿದ್ದಂತೆ ಟೆನಿಸ್ ಆಟಗಾರ ರಾಫೆಲ್ ನಾಡಲ್ ಭಾವುಕಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಇವರ ಈ ನಿರ್ಧಾರ ಕೇಳಿ ರಫೆಲ್ ನಡೆಲ್ ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ಇಬ್ಬರು ದಿಗ್ಗಜರ ಅಳು, ಸ್ನೇಹಕ್ಕೆ ಇಡೀ ಟೆನಿಸ್ ಜಗತ್ತೇ ಸಾಕ್ಷಿಯಾಗಿತ್ತು. ಪಂದ್ಯ ಮುಕ್ತಾಯದ ಬಳಿಕ ರೋಜರ್ ಫೆಡರರ್ ಕೊಂಚ ಭಾವೋದ್ವೇಗಕ್ಕೆ ಒಳಗಾಗಿ ತಮ್ಮ ಟೆನಿಸ್ ವೃತ್ತಿಬದುಕನ್ನು ಸ್ಮರಿಸಿದರು. ರೋಜರ್ ಫೆಡರರ್ ಭಾವುಕರಾಗುತ್ತಿದ್ದಂತೆ ವಿಜೇತ ಸಹ ದುಃಖ ತಡೆದುಕೊಳ್ಳದೇ ಕಣ್ಣೀರು ಹಾಕಿದ್ದಾರೆ.

ಯಾವ ಪ್ರತಿಸ್ಪರ್ಧಿಗಳು ಪರಸ್ಪರ ಈ ರೀತಿಯಾಗಿ ಭಾವುಕರಾಗುತ್ತಾರೆ. ಇದುವೇ ಕ್ರೀಡಾ ಸೌಂದರ್ಯ. ಇದು ನನ್ನ ಪಾಲಿಗೆ ಅತ್ಯಂತ ಸುಂದರವಾದ ಕ್ರೀಡಾ ಚಿತ್ರವಾಗಿದೆ. ಗೌರವಿಸುವುದನ್ನು ಬಿಟ್ಟು ಬೇರೆನೂ ಇಲ್ಲ. ಎಂದು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ.

ರೋಜರ್ ಫೆಡರರ್-ರಾಫೆಲ್ ನಡಾಲ್ ಎದುರು ರೆಸ್ಟ್‌ ಆಫ್‌ ದಿ ವಲ್ಡ್‌ರ್‍ ತಂಡದ ಫ್ರಾನ್ಸೆಸ್‌ ಟಿಯಾಫೋ ಮತ್ತು ಜ್ಯಾಕ್‌ ಸಾಕ್‌ ಜೋಡಿಯು 4-6, 7-6(7/2), 11-9 ಅಂತರದಲ್ಲಿ ಗೆಲುವು ದಾಖಲಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com