ಹಾಕಿ ವಿಶ್ವಕಪ್: ಸ್ಪೇನ್ ತಂಡವನ್ನು ಮಣಿಸಿ ಭಾರತ ಶುಭಾರಂಭ

ಒಡಿಶಾದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ ಭಾರತವು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಭಾರತ 2-0 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿದೆ. 
ಭಾರತ ಹಾಕಿ ತಂಡ
ಭಾರತ ಹಾಕಿ ತಂಡ

ಒಡಿಶಾದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ ಭಾರತವು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಭಾರತ 2-0 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿದೆ. 

ಭಾರತದ ಪರ ಅಮಿತ್ ರೋಹಿದಾಸ್ ಮತ್ತು ಹಾರ್ದಿಕ್ ಸಿಂಗ್ ಗೋಲು ಗಳಿಸಿದರು. ಭಾರತ ಎರಡನೇ ಪಂದ್ಯವನ್ನು ಜನವರಿ 15ರಂದು ಬಲಿಷ್ಠ ಇಂಗ್ಲೆಂಡ್ ವಿರುದ್ಧ ಆಡಲಿದೆ. ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ವೇಲ್ಸ್ ಅನ್ನು 5-0 ಗೋಲುಗಳಿಂದ ಸೋಲಿಸಿತ್ತು.

ಸ್ಪೇನ್ ವಿರುದ್ಧದ ಗೆಲುವಿನೊಂದಿಗೆ ಟೀಂ ಇಂಡಿಯಾ ಪೂಲ್ ಡಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ ಈ ಹಿಂದೆ ವೇಲ್ಸ್ ತಂಡವನ್ನು 5-0 ಅಂತರದಿಂದ ಸೋಲಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಭಾರತ ನಿಧಾನವಾಗಿ ಪಂದ್ಯ ಆರಂಭಿಸಿತು. ಮೊದಲ ಐದು ನಿಮಿಷಗಳ ಕಾಲ ಸ್ಪೇನ್ ಟೀಂ ಇಂಡಿಯಾವನ್ನು ಸಾಕಷ್ಟು ಕಂಗೆಡಿಸಿತು. ಆದರೆ ಪಂದ್ಯ ಮುಂದುವರೆದಂತೆ, ಭಾರತವು ಪಂದ್ಯದಲ್ಲಿ ಮೇಲುಗೈ ಸಾಧಿಸಲು ಪ್ರಾರಂಭಿಸಿತು. 11ನೇ ನಿಮಿಷದಲ್ಲಿ ಟೀಂ ಇಂಡಿಯಾ ತನ್ನ ಲಾಭ ಪಡೆಯಿತು.

ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ ಅದನ್ನು ಗೋಲ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮುಂದಿನ ನಿಮಿಷದಲ್ಲಿ ಎರಡನೇ ಪೆನಾಲ್ಟಿ ಕಾರ್ನರ್ ಸಿಕ್ಕಿದ್ದು ಅದನ್ನು ಅಮಿತ್ ರೋಹಿದಾಸ್ ಅದ್ಭುತ ಗೋಲು ಬಾರಿಸಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದರು.

26ನೇ ನಿಮಿಷದಲ್ಲಿ ಭಾರತ ಎರಡನೇ ಗೋಲು ದಾಖಲಿಸಿತು. ಹಾರ್ದಿಕ್ ಸಿಂಗ್ ಅಮೋಘ ಗೋಲು ದಾಖಲಿಸಿದರು. ಇದು ಈ ವಿಶ್ವಕಪ್‌ನಲ್ಲಿ ಭಾರತದ ಮೊದಲ ಫೀಲ್ಡ್ ಗೋಲ್ ಆಗಿದೆ. ಇದಾದ ಬಳಿಕ ಭಾರತ ಯಾವುದೇ ಗೋಲು ಗಳಿಸಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com