Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Nirav Modi

ಲಂಡನ್: ನೀರವ್ ಮೋದಿಗೆ ಜಾಮೀನು ನಿರಾಕರಣೆ, ಮಾ. 29ರ ವರೆಗೆ ಜೈಲೇ ಗತಿ

ಅಸೀಮಾನಂದ

ಸಂಜೋತಾ ಸ್ಫೋಟ ಪ್ರಕರಣ: ಅಸೀಮಾನಂದ ಸೇರಿ ಎಲ್ಲಾ 4 ಆರೋಪಿಗಳು ಖುಲಾಸೆ

Sumalanta Ambareesh

ಸಾವಿರಾರು ಬೆಂಬಲಿಗರೊಂದಿಗೆ ಬಂದು ಸುಮಲತಾ ನಾಮಪತ್ರ ಸಲ್ಲಿಕೆ: ಯಶ್, ದರ್ಶನ್ ಸಾಥ್!

Chowkidar is now synonymous with patriotism and honesty: PM Modi

ಚೌಕೀದಾರ್ ಪದ ಈಗ ದೇಶಭಕ್ತಿ, ಪ್ರಾಮಾಣಿಕತೆಗೆ ಸಮಾನಾರ್ಥಕ: ಪ್ರಧಾನಿ ಮೋದಿ

ಸಂಗ್ರಹ ಚಿತ್ರ

ಐವರು ಆಟಗಾರರಿಗೆ ಈ ಐಪಿಎಲ್ ಕೊನೆ, ಆ ಲೆಜೆಂಡ್ ಆಟಗಾರರು ಯಾರ್ಯಾರು ಗೊತ್ತ?

BJP rebel Shatrughan Sinha may enter the fray on Congress ticket

ಬಿಜೆಪಿ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧೆ

Major Setback For BJP In Northeast, 25 Quit Party In A Week Over Tickets

ಈಶಾನ್ಯ ಭಾರತದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ; ಒಂದೇ ವಾರದಲ್ಲಿ 25 ಮುಖಂಡರ ರಾಜಿನಾಮೆ!

Paralympic Girisha Nagarajegowda selected as Karnataka brand ambassador for Lok Sabha elections

ಗಿರೀಶ್ ಗೌಡ ಚುನಾವಣಾ ರಾಯಭಾರಿಯಾಗಿ ನೇಮಕ, ವಿಕಲಚೇತನರಿಗೆ ವಿಶೇಷ ಸೌಲಭ್ಯ

Hassan congress leaders list-out demands for offering support to JDS

ಸಚಿವ ರೇವಣ್ಣ ಭರವಸೆ ನೀಡಿದರಷ್ಟೇ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ: ಹಾಸನ ಕಾಂಗ್ರೆಸ್ ಮುಖಂಡರ ಷರತ್ತು

Karnataka congress requests Speaker for not to accept MLA Umesh Jadhav

ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್ ಗೆ ಕಾಂಗ್ರೆಸ್ ಮನವಿ

Politician friend clears Actress Pooja Gandhi

ಪೂಜಾ ಗಾಂಧಿ ಹೋಟೆಲ್ ಬಿಲ್ ಪಾವತಿಸಿದ ಬಿಜೆಪಿ ನಾಯಕ

Goa Chief Minister Pramod Sawant wins floor test

ವಿಶ್ವಾಸ ಮತ: ಅಗ್ನಿ ಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್!

Rahul Dravid

ಆಸೀಸ್‌ ವಿರುದ್ಧ ಸೋತಿದ್ದು ಭಾರತಕ್ಕೆ ಎಚ್ಚರಿಕೆ ಘಂಟೆ: ದ್ರಾವಿಡ್

ಮುಖಪುಟ >> ಕ್ರೀಡೆ

ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶಕ್ಕೆ ತಾತ್ಕಾಲಿಕ ನಿರ್ಬಂಧ: ಐಒಸಿ ನಿರ್ಧಾರ

ದೆಹಲಿಯಲ್ಲಿ ಶೂಟಿಂಗ್​ ವಿಶ್ವಕಪ್​: ಪಾಕ್ ಸ್ಪರ್ಧಿಗಳಿಗೆ ವೀಸಾ ನಿರಾಕರಣೆ ಹಿನ್ನಲೆಯಲ್ಲಿ ಐಒಸಿ ಕೆಂಗಣ್ಣು
IOC

ಸಂಗ್ರಹ ಚಿತ್ರ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ವಿಶ್ವಕಪ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕಿದ್ದ ಪಾಕಿಸ್ತಾನದ ಸ್ಪರ್ಧಿಗಳಿಗೆ ಭಾರತ ವೀಸಾ ನಿರಾಕರಣೆ ಮಾಡಿರುವ ಹಿನ್ನಲೆಯಲ್ಲಿ ಕೆಂಗಣ್ಣು ಬೀರಿರುವ ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿ ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಿದೆ.

ಈ ಬಗ್ಗೆ ಇಂದು ಐಒಸಿ ತನ್ನ ನಿರ್ಣಯ ಪ್ರಕಟಿಸಿದ್ದು, ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿ ಆಯೋಜಕತ್ವ ನೀಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ತನ್ನ ನಿರ್ಧಾರ ಪ್ರಕಟಿಸಿದೆ. ಜತೆಗೆ, ಶೂಟಿಂಗ್​ ವಿಶ್ವಕಪ್ ನ ಪುರುಷ ವಿಭಾಗದ 25 ಮೀಟರ್​ ರ‍್ಯಾಪಿಡ್​ ಫೈರ್​ ಸ್ಪರ್ಧೆಯ ಒಲಿಂಪಿಕ್​ ಅರ್ಹತಾ ಸ್ಥಾನಮಾನವನ್ನೂ ಸಮಿತಿ ಹಿಂಪಡೆದುಕೊಂಡಿದೆ.

ಈ ವಿವಾದದ ಬಗ್ಗೆ ತಿಳಿದ ಕೂಡಲೇ ಐಓಸಿ, ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಸಂಸ್ಥೆ (ಐಎಸ್‌ಎಸ್‌ಎಫ್) ಮತ್ತು ಭಾರತದ ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಎನ್‌ಓಸಿ) ಕೊನೆಯ ನಿಮಿಷದವರೆಗೂ ಪ್ರಯತ್ನ ನಡೆಸಿ ಭಾರತೀಯ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದವು. ಆದರೆ, ಪಾಕಿಸ್ತಾನದ ಕ್ರೀಡಾಪಟುಗಳಿಗೆ ಭಾರತಕ್ಕೆ ಬರಲು ಅವಕಾಶ ನೀಡುವ ವಿಚಾರವಾಗಿ ಪರಿಹಾರ ದೊಕರಲಿಲ್ಲ ಎಂದು ಐಓಸಿ ತನ್ನ ಕಾರ್ಯಕಾರಿ ಮಂಡಳಿ ಸಭೆ ಬಳಿಕ ಹೇಳಿಕೆ ನೀಡಿದೆ.

ಭಾರತವು ತಾರತಮ್ಯ ನೀತಿ ಅನುಸರಿಸುತ್ತಿರುವುದು ಹಾಗೂ ರಾಜಕೀಯ ಹಸ್ತಕ್ಷೇಪ ಮಾಡುತ್ತಿರುವುದು ಒಲಿಂಪಿಕ್​ ತತ್ವಗಳಿಗೆ ವಿರುದ್ಧವಾಗಿದೆ. ಮುಂದೆ ಈ ರೀತಿ ಆಗದಂತೆ ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಒಲಿಂಪಿಕ್​ ಸಂಬಂಧಿತ ಸ್ಪರ್ಧೆಗಳಿಗೆ ಆತಿಥ್ಯ ವಹಿಸಲು ಭಾರತಕ್ಕೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದು ಐಒಸಿ ಹೇಳಿದೆ. ಅಂತೆಯೇ ಸರ್ಕಾರದಿಂದ ಲಿಖಿತ ಭರವಸೆಗಳನ್ನು ಪಡೆದುಕೊಳ್ಳುವವರೆಗೂ ಯಾವುದೇ ಒಲಿಂಪಿಕ್ ಸಂಬಂಧಿತ ಕ್ರೀಡೆಗಳನ್ನು ಭವಿಷ್ಯದಲ್ಲಿ ಆಯೋಜಿಸಲು ಭಾರತಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಹ ಅದು ತಿಳಿಸಿದೆ.

ಪುಲ್ವಾಮ ಉಗ್ರ ದಾಳಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕ್ ನಡುವಿನ ಶೀಥಲ ಸಮರ ತಾರಕಕ್ಕೇರಿದ್ದು, ಇದೇ ಹೊತ್ತಿನಲ್ಲಿ ವಿಶ್ವಕಪ್​ ಶೂಟಿಂಗ್​ ಸ್ಪರ್ಧೆಗಳಲ್ಲಿ ಭಾಗವಹಿಸಲು ಪಾಕ್​ ಮೂಲದ ಶೂಟರ್ ​ಗಳು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇವರಿಗೆ ಭಾರತ ವೀಸಾ ನಿರಾಕರಿಸಿತ್ತು. 
ಸಂಬಂಧಿಸಿದ್ದು...
Posted by: SVN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New Delhi, Sports, IOC, Pulwama Terror Attack, ನವದೆಹಲಿ, ಕ್ರೀಡೆ, ಐಒಸಿ, ಪುಲ್ವಾಮ ಉಗ್ರ ದಾಳಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS