ಮೋಡ್ರಿಸಿ: ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಕ್ರೊವೇಷಿಯಾ ತಂಡದ ನಾಯಕನಾಗಿದ್ದ ಲ್ಯೂಕಾ ಮಾಡ್ರಿಕ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ದಶಕದ ಕಾಲ ಪ್ರಶಸ್ತಿ ಗಳಿಸಿಕೊಳ್ಳುವ ಫೇವರಿಟ್ ಆಟಗಾರರೆನಿಸಿದ್ದ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಿಯೋನಲ್ ಮೆಸ್ಸಿ ಏಕಸ್ವಾಮ್ಯ ಅಂತ್ಯ ಕಂಡಿದೆ.
2018ರ ಫಿಪಾ ವಿಶ್ವಕಪ್ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಗಳಿಸಿದ್ದ ಮಾಡ್ರಿಕೀ ವರ್ಷದ ಫಿಪಾ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಸಹ ಭಾಜನರಾಗಿದ್ದರು. ವಿಶೇಷವೆಂದರೆ 2007ರಿಂದ ಈಚೆಗೆ ರೊನಾಲ್ಡೋ ಅಥವಾ ಮೆಸ್ಸಿ ಹೊರತಾಗಿ ಈ ಗೌರವ ಪಡೆಯುತ್ತಿರುವ ಇನ್ನೊಬ್ಬ ಆಟಗಾರ ಮಾಡ್ರಿಕ್ ಆಗಿದ್ದಾರೆ.
"ನಂಬಲು ಅಸಾಧ್ಯ, ವಿಶೇಷ ಅನುಭವ, ಆ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಸೇರುತ್ತಿರುವುದು ಸಂತಸ ತಂದಿದೆ.ಅದ್ಭುತ ಆಟಗಾರರ ಗುಂಪಿನ ಭಾಗವಾಗಲು ನಾನಿನ್ನೂ ಪ್ರಯತ್ನಿಸುತ್ತೇನೆ.ಈ ಸಾಲಿನಲ್ಲಿ ಪ್ರಶಸ್ತಿ ಲಭಿಸಿದೆ ಎಂದಾದರೆ ಈ ವರ್ಷ ಣಾನು ಉತ್ತಮವಾಗಿ ಆಡಿದ್ದೇನೆ ಎಂದರ್ಥ,"ಮಾಡ್ರಿಕ್ ಹೇಳಿದರು.
ಇನ್ನು ಈ ಪ್ರತಿಷ್ಠಿತ ಗೌರವ ಪಡೆದ ಮೊದಲ ಕ್ರೊವೇಷಿಒಯನ್ ಆಟಗಾರನೆಂದು ಮಾಡ್ರಿಕ್ ಗುರುತಿಸಲ್ಪಟ್ಟಿದ್ದಾರೆ.