ಸಹಸ್ರಯೋಗ

ಯೋಗಾಭ್ಯಾಸಗಳಲ್ಲಿ ಸಾವಿರ ವಿಧಗಳಿದ್ದರೂ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ನಿಮಗೆ ಸರಿಹೊಂದುವುದನ್ನು ಆರಿಸಿಕೊಳ್ಳಬಹುದು.

Published: 20th June 2013 02:00 AM  |   Last Updated: 20th June 2013 12:00 PM   |  A+A-


Posted By : Vishwanath
ವಿಷ್ಣು ಸಹಸ್ರನಾಮ ಕೇಳಿದೀವಿ. ಲಲಿತಾ ಸಹಸ್ರನಾಮ ಕೇಳಿದೀವಿ. 'ಸಹಸ್ರಯೋಗ' ಕೇಳಿದ್ದೀರಾ?
ಪ್ರತಿ ವ್ಯಕ್ತಿಯೂ ಅವನದೇ ರೀತಿಯಲ್ಲಿ ವಿಭಿನ್ನವಾಗಿರ್ತಾನೆ. ಅವನ ಅವಶ್ಯಕತೆಗಳೂ ವಿಭಿನ್ನವಾಗಿರುತ್ತದೆ. ಹಾಗೆಯೇ, ಯೋಗಾಭ್ಯಾಸಗಳಲ್ಲಿ ಸಾವಿರ ವಿಧಗಳಿದ್ದರೂ ನಿಮ್ಮ ಅವಶ್ಯಕತೆಗನುಗುಣವಾಗಿ, ನಿಮಗೆ ಸರಿಹೊಂದುವುದನ್ನು ಆರಿಸಿಕೊಳ್ಳಬಹುದು ಅಂತಾರೆ 'ಎ 1000 ಯೋಗ'ದ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ್ ಗೋವಿಂದ ಗೌಡ.
ಬೆಂಗಳೂರಿನ ಜಯನಗರ 5ನೇ ಬ್ಲಾಕ್‌ನಲ್ಲಿರುವ ಈ ಯೋಗ ಸೆಂಟರ್‌ನೊಳ ಹೊಕ್ಕರೆ ವಿಶಾಲವಾದ ಸ್ವಚ್ಛ ಶುಭ್ರ ಯೋಗ ಹಾಲ್, ಥೆರಪಿ ಸೆಂಟರ್, ಪ್ರಶಾಂತ ವಾತಾವರಣ, ನಿಮ್ಮ ದೇಹ ಪ್ರಕೃತಿಗನುಗುಣವಾಗಿ ತಾಳ್ಮೆಯಿಂದ ಕಲಿಸುವ ಯೋಗ ಇನ್ಸ್‌ಟ್ರಕ್ಟರ್ಸ್, ಹಿನ್ನೆಲೆಯಲ್ಲಿ ಓಂಕಾರ ನಿಮ್ಮ ಮನಸೆಳೆಯದಿರದು.
ಜಯನಗರದಲ್ಲಷ್ಟೇ ಅಲ್ಲದೆ, ಕೋರಮಂಗಲ, ಇಂದಿರಾನಗರದಲ್ಲೂ ಇದರ ಬ್ರಾಂಚ್‌ಗಳಿವೆ. ದೇಶದಾದ್ಯಂತ ಬ್ರಾಂಚ್ ತೆರೆದು ಹೆಚ್ಚು ಹೆಚ್ಚು ಮಂದಿಗೆ ಯೋಗ ಕಲಿಸುವಾಸೆಯಿದೆ ಅಂತಾರೆ ಪ್ರದೀಪ್. 7ನೇ ವಯಸ್ಸಿನಲ್ಲಿ ತಂದೆಯಿಂದ ಕಲಿತು, ಬಿಹಾರ್ ಯೋಗ ಸ್ಕೂಲ್‌ನಲ್ಲಿ ಎಂಎಸ್‌ಸಿ ಗೋಲ್ಡ್ ಮೆಡಲ್ ಪಡೆದು, ಪರಮಹಂಸ ಸ್ವಾಮಿ ನಿರಂಜನಾನಂದ ಸರಸ್ವತಿಯವರ ಬಳಿ, ಗಂಗಾನದಿ ತೀರದ ಗುರುಕುಲದಲ್ಲಿ 2 ವರ್ಷ ಅಭ್ಯಸಿಸಿ, ಪಟ್ಟಾಭಿ ಜೋಯಿಸ್ ಆಯ್ರಿ ಅವರ ಬಳಿ ಅಷ್ಟಾಂಗ ವಿನ್ಯಾಸದ ಅಭ್ಯಾಸ ಮಾಡಿ, ಬಿ.ಕೆ.ಎಸ್ ಐಯ್ಯಂಗಾರ್ ಶಿಷ್ಯ ಅರುಣ್ ಬಳಿ ಬೆಂಗಳೂರಿನಲ್ಲಿ ಟ್ರೈನಿಂಗ್ ಪಡೆದಿರುವ ಪ್ರದೀಪ್ ಭಾರತ, ಬ್ಯಾಂಕಾಕ್, ಕೌಲಾಲಂಪುರ, ಕೊಲಂಬೋ, ಹೈದರಾಬಾದ್ ಮುಂತಾದೆಡೆ ಕಲಿಸುತ್ತಿದ್ದಾರೆ. ಅವರ ಸಾಧನೆ ಮತ್ತು ಯೋಗ ವಿಚಾರಗಳು ಅವರದೇ ಮಾತಿನಲ್ಲಿ:
ಚಿಕ್ಕಂದಿನಲ್ಲಿ ತಂದೆಯಿಂದ ಯೋಗ ಕಲಿತೆ. ಇಂಜಿನಿಯರಿಂಗ್ ಮುಗಿಸಿ ಕೆಲಸ ಮಾಡಲಾರಂಭಿಸಿದಾಗ, ಯಾಕೋ ಮನಸ್ಸಿಗೆ ಹಿಡಿಸಲಿಲ್ಲ. ಇದೆಲ್ಲದರಿಂದ ಹೊರ ಹೋಗಬೇಕೆನಿಸಿದಾಗ, 'ಯೋಗ'ದಿಂದಲೇ ಮನಶ್ಯಾಂತಿ ಸಿಗಲು ಸಾಧ್ಯ ಎನಿಸಿತು. ಶಾಸ್ತ್ರೀಯ ರೀತಿಯಲ್ಲಿ ಅಭ್ಯಸಿಸಬೇಕೆನಿಸಿ ಬಿಹಾರ್ ಸ್ಕೂಲ್ ಆಫ್ ಯೋಗ ಸೇರಿದೆ. ಯೋಗ ನನಗೆ ಎಲ್ಲಿದ್ದರೂ ನಿಭಾಯಿಸಬಲ್ಲೆ ಎಂಬ ಮನೋಧೈರ್ಯ ತುಂಬಿತು. ನನ್ನಂತೆಯೇ ಇರುವ ಮಂದಿಗೆ ಯೋಗ ಕಲಿಸಬೇಕು ಎಂಬಾಸೆಯಿಂದ, ಹೆಚ್ಚಿನ ಪರಿಣಿತಿಗಾಗಿ ಐಯ್ಯಂಗಾರ್ ಯೋಗ, ಮೈಸೂರು ಯೋಗ ಮುಂತಾದ ಯೋಗ ಶಾಲೆಗಳಲ್ಲಿ ಕಲಿತು, ಕಲಿಸಲಾರಂಭಿಸಿದೆ.
ಯೋಗ ಸ್ಕೂಲ್‌ಗಳು ಬೇರೆ ಬೇರೆಯಾದರೂ, ಎಲ್ಲೆಡೆ ಇರುವ ಅಭ್ಯಾಸ ಒಂದೇ. ಯೋಗದಲ್ಲಿ 8 ಅಂಗಗಳಿದ್ದು, ಅದನ್ನು ಎಲ್ಲರೂ ಪಾಲಿಸಲೇಬೇಕು. ನಮ್ಮಲ್ಲಿ ಹಠಯೋಗಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಇದರಲ್ಲಿ ಆಸನ, ಪ್ರಾಣಾಯಾಮ ಮತ್ತು ಷಟ್ಕರ್ಮ ಸೇರಿದೆ. ಷಟ್ಕರ್ಮದ ಮೂಲಕ ದೇಹಶುದ್ಧಿಗೆ ಆದ್ಯತೆ ನೀಡಲಾಗುವುದು. ಇಂದಿನ ಪೀಳಿಗೆಗೆ ಹಠಯೋಗ ಅತ್ಯಂತ ಲಾಭದಾಯಕ. ಒಂದೇ ಸೂರಿನಡಿ ಐಯ್ಯಂಗಾರ್ ಯೋಗ, ಬಿಹಾರ್ ಯೋಗ, ಮೈಸೂರು ಯೋಗ, ಶಿವಾನಂದ ಯೋಗ ಹೀಗೆ ವಿವಿಧ ಶೈಲಿ ನಮ್ಮಲ್ಲಿ ಲಭ್ಯ. ಯಾರಿಗೆ ಯಾವುದು ಸರಿ ಹೊಂದುವುದೋ ಅದನ್ನು ಆರಿಸಿಕೊಳ್ಳಬಹುದು. ಅದಕ್ಕಾಗಿಯೇ 'ಎ 1000 ಯೋಗ' ಎಂದು ಕರೆದೆ. ಇದಲ್ಲದೆ 1000 ಅತ್ಯಂತ ಪವಿತ್ರ ಸಂಖ್ಯೆ. ಅತ್ಯುನ್ನತ ಸ್ಥಾನದ ಚಕ್ರವನ್ನು ಸಹಸ್ರ ದಳಗಳ ತಾವರೆಯಿಂದ ಗುರ್ತಿಸಲಾಗುವುದು.
ನಮ್ಮ ಯೋಗಶಾಲೆಯನ್ನು ಯೋಗ ಸ್ಟುಡಿಯೋ ಅಂತಲೂ ಕರೆಯುತ್ತೇವೆ. ಇಲ್ಲಿ ಅನೇಕ ರೀತಿಗಳಲ್ಲಿ ಯೋಗದ, ಆರೋಗ್ಯದ ಉಪಯುಕ್ತ ವಿಚಾರಗಳನ್ನು ಹಂಚಿಕೊಳ್ಳಲಾಗುವುದು. ಆಯುರ್ವೇದ ವೈದ್ಯರು, ತಜ್ಞರು, ಇಲ್ಲಿ ನಡೆವ ವರ್ಕ್‌ಶಾಪ್‌ಗಳಲ್ಲಿ ಜ್ಞಾನ ಹಂಚಿಕೊಳ್ಳುವರು. ಯೋಗ ಪ್ರತಿಯೊಬ್ಬರಿಗೂ ಮುಟ್ಟಬೇಕು ಎಂಬುದೇ ನಮ್ಮ ಗುರಿ. ಹಾಗಾಗಿ ಯೋಗ ಟೀಚರ್ ಟ್ರೈನಿಂಗ್ ಪ್ರೋಗ್ರಾಂ ಸಹ ಇಲ್ಲಿ ನಡೆಯುತ್ತೆ. ಹೆಚ್ಚು ಮಂದಿ ಕಲಿತು ಕಲಿಸಲು ಶಕ್ತರಾಗಬೇಕು.
ಯೋಗ, ವಾಕ್, ಎಲ್ಲದಕ್ಕೂ ನಿಲ್ಲಿಸದೆ ನಡೆಸಿಕೊಂಡು ಹೋಗಲು ಏನಾದರೊಂದು ಉತ್ತೇಜನವಿರಬೇಕಾಗುತ್ತೆ. ಇದು ಅತಿ ದೊಡ್ಡ ಚಾಲೆಂಜ್. ಇಂದಿನ ಪೀಳಿಗೆ ತುಂಬಾ ಬ್ಯುಸಿ. ಹಾಗಾಗಿ ನಮ್ಮ ಕ್ಲಾಸ್‌ಗಳನ್ನು ಫ್ಲೆಕ್ಸಿಬಲ್ ಮಾಡಿದೀವಿ. ದಿನವಿಡೀ ನಮ್ಮಲ್ಲಿ ಕ್ಲಾಸ್‌ಗಳು ನಡೆಯುತ್ತಿದ್ದು ಅವರ ಅನುಕೂಲಕ್ಕನುಗುಣವಾಗಿ ಬಂದು ಕಲಿಯಬಹುದು. ಒಂದು ಬ್ಯಾಚ್‌ನಲ್ಲಿ, ಒಂದು ಬ್ರಾಂಚ್‌ನಲ್ಲಿ ಮಿಸ್ ಆದರೆ ಇನ್ನೊಂದು ಬ್ಯಾಚ್, ಬೇರೆ ಬ್ರಾಂಚ್‌ನಲ್ಲಿ ಕಲಿಯಬಹುದು.
ಯೋಗ ಯೂನಿವರ್ಸಿಟಿ ನಿರ್ಮಿಸುವುದು ನಮ್ಮ ಕನಸು. ಇದರ ಮೂಲಕ ಶಾಸ್ತ್ರೀಯ ರೀತಿಯಲ್ಲಿ ಯೋಗ ಕಲಿಸುವಾಸೆ. ಇದಲ್ಲದೆ ಶಾಲೆಗಳಲ್ಲಿ ಯೋಗ ತರಬೇತಿ ನಡೆಸಬೇಕು.
ಬೆನ್ನು ನೋವು, ಮಧುಮೇಹ, ಹೈಪರ್ ಟೆನ್ಷನ್, ಸೈನಸೈಟಿಸ್, ಥೈರಾಯ್ಡ್ ಮುಂತಾದ ತೊಂದರೆಗಳಿಗೆ ಯೋಗದಲ್ಲಿ ಥೆರಪಿ ಇದೆ. ಇದಲ್ಲದೆ ಬಸುರಿ, ಬಾಣಂತನದ ಸಮಯದಲ್ಲಿ ಸಹ ಯೋಗ ಥೆರಪಿ ಉಂಟು. ಯೋಗಾಭ್ಯಾಸದಿಂದ ಉತ್ತಮ ಅಂಡಾಣು, ವೀರ್ಯಾಣು ಉತ್ಪತ್ತಿ ಸಾಧ್ಯ. ಹಾಗಾಗಿ ಭ್ರೂಣಾವಸ್ಥೆಯಿಂದ ಜನನದವರೆಗೆ ತಾಯಿಯ ಆರೋಗ್ಯ ಯೋಗದಿಂದ ಸಾಧ್ಯ. ಗರ್ಭಿಣಿಯರಿಗೆ ವರ್ಕ್‌ಶಾಪ್ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ: 9035721000

- ಗೀತಾ ಶ್ರೀನಿವಾಸನ್
Stay up to date on all the latest ಬೈಟುಕಾಫಿ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp