Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi

ಲೋಕಸಭಾ ಚುನಾವಣೋತ್ತರ ಸಮೀಕ್ಷೆ-2019: ಎನ್ ಡಿಎಗೆ ಬಹುಮತ, ಮೋದಿ ಮತ್ತೊಮ್ಮೆ ಅಧಿಕಾರಕ್ಕೆ!

Don

ಚುನಾವಣೋತ್ತರ ಸಮೀಕ್ಷೆ ನಿಖರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಪಂಜಾಬ್ ಸಿಎಂ

Exit polls gossip, don

ಚುನಾವಣೋತ್ತರ ಸಮೀಕ್ಷೆಗಳು ಗಾಸಿಪ್ ಇದ್ದಂತೆ, ನಂಬಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

Voting

7ನೇ ಹಂತದ ಲೋಕಸಭಾ ಚುನಾವಣೆ: 6 ಗಂಟೆಯವರೆಗೂ ಶೇ.60. 21 ರಷ್ಟು ಮತದಾನ

Casual Photo

ಚುನಾವಣೋತ್ತರ ಸಮೀಕ್ಷೆ, ಉತ್ತರ ಪ್ರದೇಶದಲ್ಲಿ ತಗ್ಗಿದ ಕೇಸರಿ ಅಲೆ

Voters

7ನೇ ಹಂತದ ಲೋಕಸಭಾ ಚುನಾವಣೆ: ಮಧ್ಯಾಹ್ನ3 ಗಂಟೆಯ ವೇಳೆಗೆ ಶೇ.51. 95 ರಷ್ಟು ಮತದಾನ

Cave PM Modi meditated in can be rented for Rs 990/day

ಪ್ರಧಾನಿ ಮೋದಿ ದ್ಯಾನಕ್ಕೆ ಕುಳಿತಿದ್ದ ಕೇದಾರನಾಥ್ ಗುಹೆಯ ವಿಶೇಷತೆಗಳೇನು ಗೊತ್ತೆ?

Casual Photo

ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್ ದರ ಶೇ. 15 ರಷ್ಟು ಹೆಚ್ಚಳ

ಮುನಿರತ್ನ-ಸ್ಫೋಟ

ಆತಂಕ ಸೃಷ್ಠಿ: ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಬಳಿ ಸ್ಫೋಟ, ವ್ಯಕ್ತಿ ದೇಹ ಛಿದ್ರ ಛಿದ್ರ!

ಸಂಗ್ರಹ ಚಿತ್ರ

ಉಪ ಚುನಾವಣೆ: ಕುಂದಗೋಳ, ಚಿಂಚೋಳಿಯಲ್ಲೂ ಮತದಾನ ಆರಂಭ!

PM Modi

ಬದರೀನಾಥ್ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ, ವಿಶೇಷ ಪೂಜೆ

ಸಂಗ್ರಹ ಚಿತ್ರ

ಸ್ನೇಹಿತರೊಂದಿಗೆ ಸೇರಿ ಯುವತಿಯರಿಬ್ಬರ ಮೇಲೆ ಕನ್ನಡದ ನಟನಿಂದ ಅತ್ಯಾಚಾರ!

Where will BJP get 300 seats from? Will they buy it from Chorbazaar or Karolbagh?"

'ಬಿಜೆಪಿ ಎಲ್ಲಿಂದ 300 ಸೀಟು ತರುತ್ತೆ? ಚೋರ್ ಬಜಾರ್ ನಿಂದ ತರ್ತಾರಾ?'

ಮುಖಪುಟ >> ಪ್ರಧಾನ ಸುದ್ದಿ

ಎರಡು ಕ್ಷೇತ್ರ; ಏನಿದರ ಲೆಕ್ಕಾಚಾರ?

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಎರಡೆರಡು ಸ್ಥಾನಗಳಲ್ಲಿ ಸ್ಪರ್ಧಿಸುವ ಅಗತ್ಯವಿದೆಯೇ? ಮೋದಿ ಗುಜರಾತ್ ಹೊರಗೆ ಸ್ಪರ್ಧಿಸುತ್ತಿರುವುದು ಯಾಕೆ? ಸೋಲಿನ ಭೀತಿ ಕಾಡುತ್ತಿದೆಯೇ? ಇಂಥ ಹಲವು ಪ್ರಶ್ನೆಗಳು ಈಗ ಬಹುತೇಕರ ತಲೆ ತಿನ್ನುತ್ತಿದೆ.

ಹೌದು, ಬಹುತೇಕರು ಅಲ್ಲವಾದರೂ ಕೆಲ ಮುಖಂಡರು ಸೋಲುವ ಭೀತಿಯಿಂದಲೇ ಎರಡೆರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ. ಎರಡೂ ಕ್ಷೇತ್ರದಲ್ಲಿ ಗೆದ್ದರೆ ಗೌರವ, ಕೊನೆಗೆ ಒಂದರಲ್ಲಾದರೂ ಗೆದ್ದ ನೆಮ್ಮದಿಯಾದರೂ ಸಿಗುತ್ತದಲ್ವಾ ಎನ್ನುವುದು ಬಹುತೇಕರ ಲೆಕ್ಕಾಚಾರ. ಆದರೆ, ಮೋದಿ ಮತ್ತು ಮುಲಾಯಂ ಅವರು ಸುಲಭಕ್ಕೆ ಅರ್ಥವಾಗದ ಲೆಕ್ಕಾಚಾರ. ಇವರಿಬ್ಬರಿಗೂ ಸ್ವಕ್ಷೇತ್ರದಲ್ಲಿ ಸೋಲುವ ಭೀತಿ ಇಲ್ಲ. ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಹಿಂದಿರುವುದು ಬೇರೆ ತಂತ್ರಗಾರಿಕೆ.

ಶಕ್ತಿ ಪ್ರದರ್ಶನ: ಮೋದಿ ಅಲೆ ಈಗ ಗುಜರಾತ್‌ಗಷ್ಟೇ ಸೀಮಿತವಲ್ಲ. ದೇಶದ ಮೂಲೆ ಮೂಲೆಯಲ್ಲೂ ಮೋದಿ ಪರ ಅಭಿಮಾನ ಇದೆ. ಹೀಗಾಗಿ ಗುಜರಾತ್ ಅಭಿವೃದ್ಧಿ ಕುರಿತು ಪದೇ ಪದೆ ಮಾತನಾಡುತ್ತಿದ್ದರೂ ಗುಜರಾತ್‌ನಾಚೆಗೂ ಗೆಲ್ಲುವ ಸಾಮರ್ಥ್ಯ ಇದೆ ಎನ್ನುವ ಸಂದೇಶ ಸಾರುವುದು.

80 ಸೀಟು:  ಉತ್ತರಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಕಳೆದ ಲೋಕಸಭೆಯಲ್ಲಿ ಏಳು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ. ಸಮೀಕ್ಷೆಗಳಲ್ಲೂ ಇದು ಸಾಬೀತಾಗಿದೆ. ಮುಜಾಫರನಗರ ಗಲಭೆ ಈಗಾಗಲೇ ಪಶ್ಚಿಮ ಉತ್ತರಪ್ರದೇಶದಲ್ಲಿ ಹಿಂದು ಮತ್ತು ಮುಸ್ಲಿಂ ಮತದಾರರ ಮೇಲೆ ಪರಿಣಾಮ ಬೀರಿದೆ. ಪೂರ್ವದಲ್ಲೂ ಅದೇ ರೀತಿಯ ಪ್ರಚೋದನೆ ಬೇಕಿತ್ತು. ಮೋದಿ ವಾರಾಣಸಿಯಿಂದ ಸ್ಪರ್ಧಿಸುವುದರಿಂದ ಅನಿವಾರ್ಯವಾಗಿ ಬಿಎಸ್ಪಿ ಮತ್ತು ಮುಲಾಯಂ ಸಿಂಗ್ ಯಾದವ್ ಅವರು ಸಹಜವಾಗಿಯೇ ಮುಸ್ಲಿಂ ಮತದಾರರ ಓಲೈಕೆಗೆ ಮುಂದಾಗುತ್ತಾರೆ. ಇದರ ಒಟ್ಟಾರೆ ಪರಿಣಾಮ ಹಿಂದೂ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲುತ್ತದೆ.

ಸೋಮನಾಥದಿಂದ ವಿಶ್ವನಾಥ:

ಗುಜರಾತ್‌ನ ಸೋಮನಾಥಪುರ ಮತ್ತು ಕಾಶಿ ಎರಡೂ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರಗಳು. ಹಿಂದೂ ರಾಷ್ಟ್ರೀಯವಾದವನ್ನು ಪ್ರತಿಪಾದಿಸುವ ಮೋದಿ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಮತ್ತೊಮ್ಮೆ ಹಿಂದೂಗಳನ್ನು ಒಂದುಗೂಡಿಸುವ ಹಾಗೂ ಪೂರ್ವ ಮತ್ತು ಪಶ್ಚಿಮವನ್ನು ಬೆಸೆಯುವ ಪ್ರಯತ್ನ ಮಾಡಿದ್ದಾರೆ. ರಾಮಮಂದಿರ ನಿರ್ಮಾಣ ಮತ್ತು ಹಿಂದುತ್ವವನ್ನು ಈ ಚುನಾವಣೆಯಲ್ಲಿ ನೇರವಾಗಿ ಪ್ರಸ್ತಾಪಿಸಿಲ್ಲ ನಿಜ. ಆದರೆ, ಮೋದಿ ಅವರ ವಾರಾಣಸಿ ಸ್ಪರ್ಧೆ ಹಿಂದೆ ಹಿಂದುತ್ವದ ನಿಲುವನ್ನು ಸೂಕ್ಷ್ಮವಾಗಿ ತೋರ್ಪಡಿಸುವ ಲೆಕ್ಕಾಚಾರ ಅಡಗಿದೆ.

ಲಖನೌ- ಪಟನಾ ನಡುವೆ ವಾರಾಣಸಿ: ಹಿಂದುಳಿದ ವರ್ಗಕ್ಕೆ ಸೇರಿದ ಮೋದಿ ವಾರಾಣಸಿಯಿಂದ ನಡೆಸುವ ಸ್ಪರ್ಧೆ ಬಿಹಾರದ ಮೇಲೂ ಪರಿಣಾಮ ಬೀರಲಿದೆ. ಕನಿಷ್ಠ ಪಶ್ಚಿಮ ಬಿಹಾರದ ಮತದಾರರ ಮೇಲೆ ಮೋದಿ ಜಾದು ಕೆಲಸ ಮಾಡುವ ನಿರೀಕ್ಷೆ ಇದೆ.

ಮುಲಾಯಂ ಲೆಕ್ಕಾಚಾರ

ಮುಜಾಫರನಗರ ಗಲಭೆ ಬಳಿಕ ಸಮಾಜವಾದಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಮುಸ್ಲಿಂ ಮತಗಳು ಪಕ್ಷದ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. ಮೋದಿ ವಾರಾಣಸಿಯಿಂದ ಸ್ಪರ್ಧಿಸಿದರೆ ಯಾದವ ಮತಗಳೂ ಕೈಬಿಟ್ಟು ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೋದಿ ಅಲೆಯನ್ನು ವಾರಾಣಸಿಗೆ ಸೀಮಿತಗೊಳಿಸಲು, ಮುಸ್ಲಿಂ ಮತಗಳನ್ನು ಹಿಡಿದಿಟ್ಟುಕೊಳ್ಳಲು ಮುಲಾಯಂ ಸ್ವಕ್ಷೇತ್ರ ಮೈಯಿನ್‌ಪುರಿಯ ಜತೆಗೆ ಅಜಂಗಡದಿಂದಲೂ ಸ್ಪರ್ಧಿಸುತ್ತಿದ್ದಾರೆ. ಅಜಂಗಡ ವಾರಾಣಸಿಗೆ ಸಮೀಪದಲ್ಲೇ ಇದೆ.

Posted by: Vishwanath

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS