Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಭಾರತೀಯ ಸೇನೆಯ ದಾಳಿಗೆ ಹೆದರಿ ಜೈಶ್ ಉಗ್ರ ಸಂಘಟನೆಯ ಮುಂದಾಳತ್ವ ವಹಿಸಿಕೊಳ್ಳಲು ಹೆದರುತ್ತಿದ್ದಾರೆ!

ಸಂಗ್ರಹ ಚಿತ್ರ

ಡಿವಿಲಿಯರ್ಸ್-ಸ್ಟೋಯ್ನಿಸ್ ಸಿಡಿಲಬ್ಬರ ಬ್ಯಾಟಿಂಗ್; ಆರ್ಸಿಬಿ ವಿರುದ್ಧ ಗೆಲ್ಲಲು ಪಂಜಾಬ್‍ಗೆ 203 ರನ್ ಗುರಿ!

ಸಂಗ್ರಹ ಚಿತ್ರ

ಶ್ರೀಲಂಕಾದಲ್ಲಿ ರಕ್ತಪಾತ ಹರಿಸಿದ್ದ ಆತ್ಮಾಹುತಿ ಬಾಂಬರ್ ಪೈಕಿ 2 ಕೋಟ್ಯಾಧಿಪತಿ ಮಕ್ಕಳು!

Will go to the root of lawyer

ಸಿಜೆಐ ವಿರುದ್ಧದ 'ಷಡ್ಯಂತ್ರ ಆರೋಪ' ನಿಜವೇ ಆದರೆ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲು: ಸುಪ್ರೀಂ ಕೋರ್ಟ್ ಆತಂಕ

India extends ban on import of Chinese milk products, chocolates

ಚೀನಾದಿಂದ ಹಾಲು, ಹಾಲು ಉತ್ಪನ್ನಗಳ ಆಮದು ಮೇಲೆ ನಿಷೇಧ

Kamal Nath

ಸ್ವಿಟ್ಜರ್ಲ್ಯಾಂಡ್ ನಲ್ಲಿ ಸಿಎಂ ಕಮಲ್ ನಾಥ್ ವಾಸ್ತವ್ಯಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1.58 ಕೋಟಿ ಖರ್ಚು!

PM-Akshay chat

ವಿಫಲ ರಾಜಕಾರಣಿಯಿಂದ ನಟನಾಗಲು ಯತ್ನ: ಪ್ರಧಾನಿ ಮೋದಿ-ಅಕ್ಷಯ್ ಸಂದರ್ಶನದ ಬಗ್ಗೆ ಕಾಂಗ್ರೆಸ್ ಲೇವಡಿ

Narendra Modi and Akshay Kumar

ನಿಮ್ಮ ಅಕೌಂಟ್ ನಲ್ಲಿ ಎಷ್ಟು ದುಡ್ಡಿದೆ ಎಂದು ಕೇಳಿದ್ದಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?

ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ

ಪಕ್ಷದಲ್ಲಿನ ಭಿನ್ನಮತಕ್ಕೆ ಸತೀಶ್ ಜಾರಕಿಹೊಳಿ ಕಾರಣ: ರಮೇಶ್ ಜಾರಕಿಹೊಳಿ

One of the Lankan suicide bombers is a woman, another studied in UK, Australi

ಲಂಕೆಯಲ್ಲಿ ಸರಣಿ ಸ್ಪೋಟ: ಬಾಂಬರ್ ಪೈಕಿ ಓರ್ವ ಮಹಿಳೆ, ಇನ್ನೋರ್ವ ಯುಕೆ ನಲ್ಲಿ ವ್ಯಾಸಂಗ ಮಾಡಿದ್ದ!

New Bomb Found In Colombo 3 Days After Suicide Attacks In Sri Lanka: Report

ಭೀಕರ ಮಾರಣ ಹೋಮ ನಡೆದ 3 ದಿನಗಳ ಬಳಿಕ ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆ!

No ban on Pragya

ವಿವಾದಾತ್ಮಕ ಹೇಳಿಕೆ: ಸಾಧ್ವಿ ಪ್ರಗ್ಯಾ ಸಿಂಗ್ ಗೆ ಬಿಗ್ ರಿಲೀಫ್, ಚುನಾವಣಾ ಸ್ಪರ್ಧೆ ತಡೆ ಅಸಾಧ್ಯ ಎಂದ ಕೋರ್ಟ್!

CID probes other angles in Raichur rape-murder case

ರಾಯಚೂರು: ಮಧು ಕೊಲೆಯ ಹಿಂದೆ 'ಪ್ರಭಾವೀ ಕುಟುಂಬ'ದ ವ್ಯಕ್ತಿ ಕೈವಾಡ, ಸಿಐಡಿ ತನಿಖೆಯಿಂದ ಬಹಿರಂಗ

ಮುಖಪುಟ >> ಪ್ರಧಾನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಶಾಸಕರ ಅಸಮಾಧಾನ

ಬೆಂಗಳೂರು:  ಅಸಮರ್ಥ ಸಚಿವರನ್ನು ಸಂಪುಟದಿಂದ ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಕಾಂಗ್ರೆಸ್‌ನ 35ಕ್ಕೂ ಹೆಚ್ಚು ಶಾಸಕರು ಆಗ್ರಹಿಸಿದ್ದಾರೆ.

ಹಿರಿಯ ಶಾಸಕರಾದ ಡಿ.ಬಿ.ಇನಾಂದಾರ್, ಕೋಳಿವಾಡ, ರಾಜಣ್ಣ, ಬಸವರಾಜ ರಾಯರೆಡ್ಡಿ, ಡಾ.ಮಾಲಕರಡ್ಡಿ, ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಶಾಸಕರ ನಿಯೋಗ, ಮೂರು ವಿಧಾನಸಭಾ ಕ್ಷೇತ್ರಗಳ ಮರುಚುನಾವಣೆ ನಂತರ ನಿಗಮ-ಮಂಡಳಿ ನೇಮಕ ನಡೆಸದಿದ್ದರೆ ನಮ್ಮ ಸಹಕಾರ ಮುಂದೆ ನಿಮಗೆ ಸಿಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕರು ಮೊದಲ ಬಾರಿಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು, ಮರುಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆಯನ್ನು ಸೃಷ್ಟಿಸಿದೆ. ನಿಯೋಗದಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಶಾಸಕರ ಸಂಖ್ಯೆ ಸಮಬಲವಾಗಿದ್ದು, ಮುಖ್ಯವಾಗಿ ಸಂಪುಟಕ್ಕೆ ಭಾರಿ ಸರ್ಜರಿಗೆ ಆಗ್ರಹಿಸಿದ್ದಾರೆ.

ಎಲ್ಲವೂ ಉಪಚುನಾವಣೆ ಬಳಿಕ: ಆದರೆ ಶಾಸಕರ ಇಷ್ಟೆಲ್ಲ ಒತ್ತಾಯದ ನಡುವೆಯೂ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ ಒಪ್ಪಿಲ್ಲ. ಹೈಕಮಾಂಡ್ ಒಪ್ಪಿಗೆ ಪಡೆದು ಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ನಡೆಸುವುದಾಗಿ ಹೇಳಿದ್ದಾರೆ.

ಏನೇನು ಬೇಡಿಕೆ?

- ಸಂಪುಟ ವಿಸ್ತರಣೆ ನೆಪದಲ್ಲಿ ಕೆಲ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರುವುದರಿಂದ ಪ್ರಯೋಜನವಿಲ್ಲ. ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಒಳ್ಳೆ ಹೆಸರು ಬರಬೇಕಿದ್ದರೆ ಸಂಪುಟಕ್ಕೆ ಪುನಶ್ಚೇತನ ನೀಡಬೇಕು.

-ಹಾಲಿ ಸಚಿವರಲ್ಲಿ ಹಲವರು ಸರ್ಕಾರವನ್ನಾಗಲಿ, ಮುಖ್ಯಮಂತ್ರಿಗಳನ್ನಾಗಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಜನರ ಕೆಲಸ, ಶಾಸಕರ ಕೆಲಸವಾಗುತ್ತಿಲ್ಲ. ಹೀಗಾಗಿ ಅಂಥವರನ್ನು ಕೈ ಬಿಟ್ಟು ಅರ್ಹರಿಗೆ ಅವಕಾಶ ನೀಡಬೇಕು.

- ಮುಖ್ಯವಾಗಿ ನಿಗಮ -ಮಂಡಳಿ ನೇಮಕ ವಿಚಾರದಲ್ಲಿ ಯಾವುದೇ ಪ್ರಕ್ರಿಯೆಯನ್ನು ಇದುವರೆಗೆ ಆರಂಭಿಸಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಂದ ಸಮ್ಮತಿ ಸಿಕ್ಕರೂ ನೀವು ನೇಮಕಕ್ಕೆ ಮುಂದಾಗಿಲ್ಲ. ಇದು ಕಾರ್ಯಕರ್ತರಲ್ಲಿ ಹತಾಶೆ ಮೂಡಿಸಿದೆ.

-ಇಲ್ಲಿಯವರೆಗೆ ಸಹಿಸಿಕೊಂಡು ನಿಮಗೆ ಸಹಕಾರ ನೀಡಿದ್ದೇವೆ. ಆದರೆ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಂತರ ನಾವು ಸಹಿಸಿಕೊಳ್ಳುವುದಿಲ್ಲ.

- ನಿಗಮ-ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರ ನೇಮಕ ಸಂದರ್ಭದಲ್ಲಿ ಶೇ.50 ಶಾಸಕರಿಗೆ, ಶೇ.50 ಕಾರ್ಯಕರ್ತರಿಗೆ ಆದ್ಯತೆ ಬೇಕು.

ಕ್ಷೇತ್ರಕ್ಕೆ 15 ಶಾಸಕರ ತಂಡ

ಮೂರು ವಿಧಾನಸಭಾ ಕ್ಷೇತ್ರಗಳ ಮರುಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಿಎಂ, ಗೆಲವಿಗಾಗಿ ಕಾರ್ಯತಂತ್ರ ಹೆಣೆದಿದ್ದಾರೆ. ಶಾಸಕರ ನಿಯೋಗದೆದುರೇ ಈ ವಿಚಾರ ಪ್ರಸ್ತಾಪಿಸಿದ್ದು, ಪ್ರತಿ ಕ್ಷೇತ್ರಕ್ಕೆ 15 ಶಾಸಕರ ತಂಡ ರಚಿಸಲು ನಿರ್ಧರಿಸಿದ್ದಾರೆ.  ಶಿಕಾರಿಪುರ, ಚಿಕ್ಕೋಡಿ ಹಾಗೂ ಬಳ್ಳಾರಿ ಮರುಚುನಾವಣೆಯಲ್ಲಿ ಕಾಂಗ್ರೆಸ್‌ನ 45 ಶಾಸಕರು ಮತ್ತು ಉಸ್ತುವಾರಿ ಸಚಿವರು ಪಕ್ಷದ ಅಭ್ಯರ್ಥಿ ಗೆಲವಿಗೆ ಶ್ರಮಿಸಲಿದ್ದಾರೆ.

Posted by: Mainashree

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS