ಸಿಲಿಂಡರ್ ಸಬ್ಸಿಡಿಗೆ ಆಧಾರದ ಆತುರವೇನಿಲ್ಲ

ಆಧಾರ್ ಕಾರ್ಡ್ ಮೂಲಕ ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ನಗದು (ಡಿಬಿಟಿಎಲ್) ವರ್ಗಾವಣೆ ಜಾರಿಗೆ ತತ್ಕಾಲಕ್ಕೆ ಬ್ರೇಕ್. ಹೀಗಾಗಿ...
ಸಿಲಿಂಡರ್ ಸಬ್ಸಿಡಿಗೆ ಆಧಾರದ ಆತುರವೇನಿಲ್ಲ

ಪಿಟಿಐ  ನವದೆಹಲಿ/ಮುಂಬೈ  ಜ.30
ಆಧಾರ್ ಕಾರ್ಡ್ ಮೂಲಕ ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ನಗದು (ಡಿಬಿಟಿಎಲ್) ವರ್ಗಾವಣೆ ಜಾರಿಗೆ ತತ್ಕಾಲಕ್ಕೆ ಬ್ರೇಕ್. ಹೀಗಾಗಿ, ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದರೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಮತ್ತು ಸಬ್ಸಿಡಿ ಸಿಗದು ಎಂಬ ಆತಂಕಕ್ಕೆ ತೆರೆ ಬಿದ್ದಿದೆ. ಜತೆಗೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಮಿತಿಯನ್ನು ಹಾಲಿ 9ರಿಂದ 12ಕ್ಕೆ ಏರಿಕೆ ಮಾಡಲಾಗಿದೆ.
ಪ್ರಧಾನಿ ಡಾ.ಮನಮೋಹನ ಸಿಂಗ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಚಿಂತೆ ಬಿಡಿ, ಸಿಲಿಂಡರ್ ಸಿಗುತ್ತದೆ: 'ಸಬ್ಸಿಡಿ ಸಹಿತ ಸಿಲಿಂಡರ್ ಬೇಕಾದರೆ ಆಧಾರ್ ಸಂಖ್ಯೆ ಲಿಂಕ್ ಮಾಡಿ. ಇಲ್ಲದಿದ್ದರೆ ನಿಮಗೆ ಸಿಲಿಂಡರ್ ಸಿಗುವುದೇ ಇಲ್ಲ' ಹೀಗೆಲ್ಲ ಬೆದರಿಕೆಗಳಿಗೆ ಕೇಂದ್ರ ಸಂಪುಟವೇ ತೆರೆ ಎಳೆದಿದೆ. ಸಬ್ಸಿಡಿಗಾಗಿ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆ ಲಿಂಕ್ ಮಾಡುವ ಬಗ್ಗೆ ದೇಶಾದ್ಯಂತ ಎದ್ದಿರುವ ಸಹಸ್ರಾರು ದೂರು, ಆಕ್ಷೇಪಗಳ ಹಿನ್ನೆಲೆಯಲ್ಲಿ ಕರ್ನಾಟಕದ 28 ಜಿಲ್ಲೆಗಳು ಸೇರಿದಂತೆ ದೇಶದ 289 ಜಿಲ್ಲೆಗಳಲ್ಲಿ ಜಾರಿಯಾಗಿರುವ ನೇರ ನಗದು ವರ್ಗಾವಣೆ ಯೋಜನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಇದರಿಂದಾಗಿ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದರೂ ಸಬ್ಸಿಡಿ ಸಹಿತ ಸಿಲಿಂಡರ್ ಯಾವುದೇ ಆತಂಕವಿಲ್ಲದೆ ಸಿಗಲಿದೆ.
ಸಭೆಯ ವಿವರ ನೀಡಿದ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಸಂಸದೀಯ ಸಮಿತಿ ಈ ಬಗ್ಗೆ ಪರಾಮರ್ಶಿಸಲಿದೆ. ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಯೋಜನೆ ಎಂದು ಹೇಳಿಕೊಳ್ಳುತ್ತಿತ್ತು. ಇದರಿಂದ ಭಾರಿ ಬದಲಾವಣೆ ಆಗಲಿದೆ ಎಂದು ಅದು ಹೇಳಿಕೊಂಡಿತ್ತು.   
ಒಂಬತ್ತು ಅಲ್ಲ ಹನ್ನೆರಡು
ಇನ್ನು ಮುಂದೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ 9 ಅಲ್ಲ 12. ಹೀಗಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ ಮುಂದಿನ ತಿಂಗಳು ಮತ್ತು ಮಾರ್ಚ್ನಲ್ಲಿ ಹೆಚ್ಚುವರಿಯಾಗಿ ಒಂದು ಸಿಲಿಂಡರ್ ಗ್ರಾಹಕರಿಗೆ ಲಭ್ಯವಾಗಲಿದೆ.

ನೆ ನ ಪಿ ಡಿ
ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ಸಿಲಿಂಡರ್ ಹೆಚ್ಚುವರಿಯಾಗಿ ಸಿಗಲಿದೆ
ಸಬ್ಸಿಡಿ ಸಿಲಿಂಡರ್ಗೆಆಧಾರ್ ಸಂಖ್ಯೆ  ಬ್ಯಾಂಕ್ಗೆ ಲಿಂಕ್ ಮಾಡಬೇಕಾಗಿಲ್ಲ
ನೇರ ನಗದು ವರ್ಗಾವಣೆ ಯೋಜನೆಗೆ ಕೇಂದ್ರ ಸರ್ಕಾರ ಸದ್ಯ ತಡೆ ಹಾಕಿದೆ
ನೇರ ನಗದು ವರ್ಗಾವಣೆ ಯೋಜನೆ ಅನುಷ್ಠಾನದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ಅದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
- ವೀರಪ್ಪ ಮೊಯ್ಲಿ,  ತೈಲ ಸಚಿವ

- ದುರುಪಯೋಗವಾಗುತ್ತದೆ
ಕೇಂದ್ರದ ನಿರ್ಧಾರಕ್ಕೆ ಆರ್ಬಿಐ ಗವರ್ನರ್ ಡಾ.ರಘುರಾಮ್ ರಾಜನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ಗಳ ಸಂಖ್ಯೆಯನ್ನು ಹಾಲಿ 9ರಿಂದ12ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಜನರಿಗೆ ಉಪಯೋಗವಾಗುವ ಬದಲು ದುರುಪಯೋಗವೇ ಆಗಲಿದೆ ಎಂದು ಹೇಳಿದ್ದಾರೆ.

- ಆಧಾರ ಜಾರಿಗೆ ಅವಕಾಶ ಕೊಡಿ
ಆಧಾರ ಜಾರಿಗೆ ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಅರಿಕೆ ಮಾಡಿಕೊಂಡಿದೆ. 53 ಕೋಟಿ ಭಾರತೀಯರ ನೋಂದಣಿಗಾಗಿ ಈಗಾಗಲೇ 3,494 ಕೋಟಿ ವೆಚ್ಚ ಮಾಡಲಾಗಿದೆ. ಅದನ್ನು ಅಪವ್ಯಯ ಮಾಡಲಾಗದು ಎಂದು ಬುಧವಾರ ಸುಪ್ರೀಂಕೋರ್ಟ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com