ರಮೇಶ್ ಚಂದಪ್ಪ ಜಿಗಜಿಣಗಿ
ರಮೇಶ್ ಚಂದಪ್ಪ ಜಿಗಜಿಣಗಿ

ಕರ್ನಾಟಕದ ಹಿರಿಯ ದಲಿತ ನಾಯಕ ರಮೇಶ್ ಜಿಗಜಿಣಗಿ; ಹಿರಿತನಕ್ಕೆ ಸಿಕ್ಕ ಪ್ರತಿಫಲ

64 ವರ್ಷದ ರಮೇಶ್ ಚಂದಪ್ಪ ಜಿಗಜಿಣಗಿ ಮಂಗಳವಾರ ನವದೆಹಲಿಯಲ್ಲಿ ನೂತನ ಕೇಂದ್ರ ಸಚಿವರಾಗಿ (ರಾಜ್ಯ) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜಾಪುರ ಲೋಕಸಭಾ ಕ್ಷೇತ್ರದಿಂದ
ನವದೆಹಲಿ: 64 ವರ್ಷದ ರಮೇಶ್ ಚಂದಪ್ಪ ಜಿಗಜಿಣಗಿ ಮಂಗಳವಾರ ನವದೆಹಲಿಯಲ್ಲಿ ನೂತನ ಕೇಂದ್ರ ಸಚಿವರಾಗಿ (ರಾಜ್ಯ) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಗೆದ್ದಿರುವ ಹಿರಿಯ ಸಂಸದನಿಗೆ ಮಂತ್ರಿ ಪದವಿ ನೀಡಿ ಪಕ್ಷ ಗೌರವಿಸಿದೆ. 
ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಜಾತಿಗೆ 28 ಕ್ಷೇತ್ರಗಳು ಮೀಸಲಾಗಿದ್ದು, ಈ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಬಿಜೆಪಿ ಪಕ್ಷದ ಓರ್ವ ದಲಿತ ನಾಯಕ ಜಿಗಜಿಣಗಿ. 
ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜಿಗಜಿಣಗಿ ಮೊದಲ ಬಾರಿಗೆ 12 ನೇ ಲೋಕಸಭಾ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಬಿ ಶಂಕರಾನಂದ್ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ನಂತರ 1999, 2004, 2009 ಮತ್ತು 2014 ರಲ್ಲಿ  ಗೆಲ್ಲುವ ಮೂಲಕ ತಮ್ಮ ಸ್ಥಾನವನ್ನು ಕಾಪಾಡಿಕೊಂಡು ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದಾರೆ. 
"ರಾಜ್ಯದ ದಲಿತ ಸಮುದಾಯದ ಪ್ರತಿನಿಧಿಯಾಗಿ ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ಜಿಗಜಿಣಗಿ ಹೆಸರನ್ನು ಪಕ್ಷದ ರಾಜ್ಯದ ಮುಖಂಡರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಅನುಮೋದನೆ ಮಾಡಿದ್ದರು " ಎಂದು ಪಕ್ಷದ ಮೂಲಗಳು ತಿಳಿಸಿವೆ. 
ರಾಷ್ಟ್ರೀಯ ರಾಜಕಾರಣಕ್ಕೆ ಜಿಗಿರುವ ಮುಂಚಿತವಾಗಿ ಜಿಗಜಿಣಗಿ ಬಿಜಾಪುರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದರು ಮತ್ತು ಜನತಾದಳ ಸರ್ಕಾರದಲ್ಲಿ 1983 ರಿಂದಲೂ ಗೃಹ ಖಾತೆ, ಅಬಕಾರಿ, ಸಾಮಾಜ ಕಲ್ಯಾಣ ಮತ್ತು ಕಂದಾಯ ಖಾತೆಗಳನ್ನು ನಿರ್ವಹಿಸಿದ ಅನುಭವವು ಇವರ ಜೊತೆಗಿದೆ. 
ಅಲ್ಲದೆ ವಿವಿಧ ಸಂಸದೀಯ ಸಮಿತಿಗಳಾದ, ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಭದ್ರತೆ, ವಾಣಿಜ್ಯ, ಮಾನವ ಸಂಪನ್ಮೂಲಗಳು ಹಾಗೂ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಮಿತಿಗಳಲ್ಲೂ ಸದಸ್ಯರಾಗಿ ದಶಕಗಳ ಕಾಲ ಸೇವೆ ನಿರ್ವಹಿಸಿದ್ದಾರೆ. 
ಕರ್ನಾಟಕದಿಂದ ಡಿ ವಿ ಸದಾನಂದ ಗೌಡ, ಅನಂತಕುಮಾರ್, ಜಿ ಎಂ ಸಿದ್ದೇಶ್ವರ ಈಗಾಗಲೇ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com