ಇತಿಹಾಸ ಬರೆದ ಭಾರತ; ಏಕಕಾಲಕ್ಕೆ 20 ಉಪಗ್ರಹಗಳ ಉಡಾವಣೆ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಗೂಗಲ್ ನಿರ್ಮಿತ ಉಪಗ್ರಹ ಸೇರಿದಂತೆ ಏಕಕಾಲಕ್ಕೆ ಬರೊಬ್ಬರಿ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದೆ.

Published: 22nd June 2016 02:00 AM  |   Last Updated: 22nd June 2016 11:00 AM   |  A+A-


In Record Lauch ISRO's PSLV-C34 carries 20 Satellite into Space

ಪಿಎಸ್ ಎಲ್ ವಿ-ಸಿ34 ಯಶಸ್ವಿ ಉಡಾವಣೆ (ಚಿತ್ರಕೃಪೆ-ಇಸ್ರೋ)

Posted By : SVN
Source : Online Desk
ಶ್ರೀಹರಿಕೋಟಾ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಗೂಗಲ್ ನಿರ್ಮಿತ ಉಪಗ್ರಹ ಸೇರಿದಂತೆ ಏಕಕಾಲಕ್ಕೆ ಬರೊಬ್ಬರಿ  20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದೆ.

ಆಂಧ್ರ ಪ್ರದೇಶದಶ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ-ಸಿ34 ಉಡಾವಣಾ ವಾಹಕವವನ್ನು ಇಂದು ಬೆಳಗ್ಗೆ 9.26ರಲ್ಲಿ ಉಡಾವಣೆ  ಮಾಡಲಾಗಿದ್ದು, ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಪಿಎಸ್ ಎಲ್ ವಿ ಸಿ-34 ಉಡಾವಣಾ ವಾಹಕ ಎಲ್ಲ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಆ ಮೂಲಕ ಏಕಕಾಲಕ್ಕೆ  ಬರೊಬ್ಬರಿ 20 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ವಿಶ್ವದ 2ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ.
ಅಂತೆಯೇ ಏಕಕಾಲಕ್ಕೆ ಅತೀ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೇರಿದ್ದು, 2008ರಲ್ಲಿ ಇಸ್ರೋ ಒಂದೇ ರಾಕೆಟ್ ಮೂಲಕ 10 ಉಪಗ್ರಹಗಳ  ಉಡಾವಣೆ ಮಾಡಿತ್ತು.

ಈ ಹಿಂದೆ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿದ ದಾಖಲೆ ರಷ್ಯಾ ಹೆಸರಲ್ಲಿದ್ದು, ರಷ್ಯಾದ ಡ್ನೆಪರ್ ಸಿಲೋ ರಾಕೆಟ್ ಮೂಲಕ 2014ರ ಜೂನ್ 19  ರಂದು 33 ಉಪಗ್ರಹಗಳನ್ನು ಒಂದೇ ಬಾರಿ ಉಡಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು 2013ರ ನವೆಂಬರ್‌ನಲ್ಲಿ 32 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಇದರಲ್ಲಿ 5 ಕಿಲೋದಿಂದ  ಹಿಡಿದು 100 ಕಿಲೋಗ್ರಾಂವರೆಗೆ ತೂಕವಿರುವ ಉಪಗ್ರಹಗಳಿದ್ದವು.
Stay up to date on all the latest ಪ್ರಧಾನ ಸುದ್ದಿ news with The Kannadaprabha App. Download now
facebook twitter whatsapp