ಬಿಎಂಸಿ ಚುನಾವಣೆ ಫಲಿತಾಂಶ: ಶಿವಸೇನೆ, ಬಿಜೆಪಿ ಮೇಲುಗೈ, ಕಾಂಗ್ರೆಸ್ ಗೆ ಮುಖಭಂಗ

ತೀವ್ರ ಕುತೂಹಲ ಮೂಡಿಸಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ಚುನಾವಣಾ ಫಲಿತಾಂಶ ಗುರುವಾರ...
ಉದ್ಧವ್ ಠಾಕ್ರೆ, ದೇವೇಂದ್ರ ಫಡ್ನವಿಸ್
ಉದ್ಧವ್ ಠಾಕ್ರೆ, ದೇವೇಂದ್ರ ಫಡ್ನವಿಸ್
ಮುಂಬೈ: ತೀವ್ರ ಕುತೂಹಲ ಮೂಡಿಸಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಶಿವಸೇನೆ 84 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ 81 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮಿತ್ರ ಪಕ್ಷಕ್ಕೆ ತೀವ್ರ ಪೈಪೊಟಿ ನೀಡಿದೆ.
227 ಸದಸ್ಯ ಬಲ ಹೊಂದಿರುವ ಬಿಎಂಸಿ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಮಿತ್ರ ಪಕ್ಷ ಬಿಜೆಪಿ ವಿರುದ್ಧ ತಿರುಗಿಬಿದ್ದದ್ದ ಶಿವಸೇನೆ ಮೇಲುಗೈ ಸಾಧಿಸಿದೆ. ಆದರೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಕೇವಲ 31 ಸ್ಥಾನ, ಎಂಎನ್ ಎಸ್ 7 ಸ್ಥಾನ, ಎನ್ ಸಿಪಿ 9 ಸ್ಥಾನಗಳಲ್ಲಿ ಹಾಗೂ ಇತರರು 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ತೀವ್ರ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ನಾಯಕ, ಮುಂಬೈ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜಯ್ ನಿರೂಪಮ ಅವರು ಸೋಲಿನ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಬಿಜೆಪಿ ಜೊತೆ ಮೈತ್ರಿಯೊಂದಿಗೆ ಕಣಕ್ಕಿಳಿಯುವ ಮೂಲಕ ಶಿವಸೇನೆ ಕಳೆದ 20 ವರ್ಷಗಳಿಂದ ಮುಂಬೈ ಮಹಾನಗರ ಪಾಲಿಕೆಯನ್ನು ಆಳುತ್ತಿತ್ತು. ಆದರೆ ಈ ಬಾರಿ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಶಿವಸೇನೆ ಮೈತ್ರಿ ಬಿಟ್ಟು ಏಕಾಂಗಿಯಾಗಿ ಸ್ಪರ್ಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com