Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Bhupesh Baghel

ಭೂಪೇಶ್ ಬಾಘೆಲ್ ಛತ್ತೀಸ್ ಗಡದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ

Virat Kohli-Sourav Ganguly

2008ರಲ್ಲಿ ಗಂಗೂಲಿಗೆ, 2018ರಲ್ಲಿ ಕೊಹ್ಲಿಗೆ ಮಹಾ ಮೋಸ;? ನೆಟಿಗರು ಆಕ್ರೋಶ, ವಿಡಿಯೋ ವೈರಲ್!

Chamarajanagar Temple prasad Tragedy: Death Toll Rises to 12

ವಿಷ ಪ್ರಸಾದ ದುರಂತ; ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆ ಸಾವು, ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಸಂಗ್ರಹ ಚಿತ್ರ

ಮಾವನಿಂದ ಅತ್ಯಾಚಾರ, ಸ್ವಲ್ಪ ಅಡ್ಜೇಸ್ಟ್ ಮಾಡ್ಕೋ ಎಂದ ಪತಿ; ನವವಿವಾಹಿತೆ ನೇಣಿಗೆ ಶರಣು!

PV Sindhu

ವರ್ಲ್ಡ್ ಟೂರ್ ಫೈನಲ್: ನೊಜೊಮಿ ಒಕುಹರಾ ಮಣಿಸಿದ ಸಿಂಧೂಗೆ ಚೊಚ್ಚಲ ಚಾಂಪಿಯನ್ ಪಟ್ಟ

RepresentatIonal image

ಬಾಗಲಕೋಟೆ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ: 6 ಸಾವು, ಐವರಿಗೆ ಗಾಯ

Poonam Pandey

ಮತ್ತೊಂದು ಅರೆ ನಗ್ನ ಸ್ನಾನದ ವಿಡಿಯೋ ಶೇರ್ ಮಾಡಿದ ಪೂನಂ ಪಾಂಡೆ, ವಿಡಿಯೋ ವೈರಲ್!

ಸಂಗ್ರಹ ಚಿತ್ರ

ಪ್ರಿಯಕರನಿಗೆ ಪೈಲಟ್ ಟ್ರೈನಿಂಗ್ ಕೊಡಿಸಲು ತನ್ನ ಮನೆಗೆ ಕನ್ನ ಹಾಕಿದ ಯುವತಿ, ಆಕೆ ಕದ್ದಿದ್ದು ಎಷ್ಟು ಕೋಟಿ ಗೊತ್ತ?

PM Modi

ಭಾರತೀಯ ಸೇನೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಎಲ್ಲಾ ಪ್ರಯತ್ನ ಮಾಡುತ್ತಿದೆ: ನರೇಂದ್ರ ಮೋದಿ

People have started showing gotra, janeyu to become prominent in politics: Yogi

ರಾಜಕೀಯದಲ್ಲಿ ಪ್ರಾಮುಖ್ಯ ಪಡೆಯಲು ಜನ ಗೋತ್ರ, ಜನಿವಾರ ತೋರಿಸಲು ಪ್ರಾರಂಭಿಸಿದ್ದಾರೆ: ಯೋಗಿ

Major Akshay Girish

ಬೆಂಗಳೂರಿನ ರಸ್ತೆಗೆ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಹೆಸರು, ಆ ರಸ್ತೆ ಎಲ್ಲಿದೆ ಗೊತ್ತೆ?

2nd test, day 3: India 283 all out in 105.5 overs, Australia lead by 43 runs

2ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 283 ರನ್ ಗಳಿಗೆ ಆಲೌಟ್, ಆಸ್ಟ್ರೇಲಿಯಾಗೆ 43 ರನ್ ಮುನ್ನಡೆ

Rocking Star Yash visited to the Kollur Mookambika temple

ಕೊಲ್ಲೂರು ದೇವಸ್ಥಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ, 'ಕೆಜಿಎಫ್' ಯಶಸ್ಸಿಗಾಗಿ ವಿಶೇಷ ಪೂಜೆ

ಮುಖಪುಟ >> ಪ್ರಧಾನ ಸುದ್ದಿ

55 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್

ಕೊಲೆ ಯತ್ನದಂತಹ ಗಂಭೀರ ಅಪರಾಧ ಮೊಕದ್ದಮೆ

ಬೆಂಗಳೂರು: ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಅಂತಿಮವಾಗಿ ಕಣದಲ್ಲಿರುವ 432 ಅಭ್ಯರ್ಥಿಗಳ ಪೈಕಿ 55 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿವೆ. ಇದರಲ್ಲಿಯೇ 30 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ ಯತ್ನ, ಕೊಲೆ ಬೆದರಿಕೆ ಹಾಗೂ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಿವೆ. 
ಇಷ್ಟೇ ಅಲ್ಲದೆ, ಈ ಎಲ್ಲ ಅಭ್ಯರ್ಥಿಗಳ ಆಸ್ತಿ, ಚಿರಾಸ್ತಿ, ಅಧಿಕಾರದ ಒಂದೇ ಒಂದು ಅವಧಿ ಕಳೆಯುವಷ್ಟರಲ್ಲಿಯೇ ಆಸ್ತಿ ದುಪ್ಪಟ್ಟಾದವರ ಸಂಗತಿ, ಇನ್ನು ತಮಗೆ ಆಸ್ತಿಯೇ ಇಲ್ಲ ಎಂದವರ ದೈನೇಸಿ 
ಪರಿಸ್ಥಿತಿಯಂತಹ ಕುತೂಹಲಕಾರಿ ಮಾಹಿತಿಗಳು ಅವರು ಚುನಾವಣಾ ಆಯೋಗದ ಮುಂದೆ ಸಲ್ಲಿಸಿರುವ ಘೋಷಣಾ ಪತ್ರದಲ್ಲಿ ಬಯಲಾಗಿವೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಮತ್ತು ಬಳ್ಳಾರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ತಾವು ಕೊಲೆ ಯತ್ನದ ಗಂಭೀರ ಅಪರಾಧಿತ ಮೊಕದ್ದಮೆ ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದರೆ, ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ರಾಜಗಿರಿ ಹಾಗೂ ಹಾಸನ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಡಾ. ಭಾನುಪ್ರಕಾಶ್ ತಮ್ಮ ವಿರುದ್ಧ ಮಹಿಳೆ ಮೇಲೆ ದೌರ್ಜನ್ಯ ತೋರಿದ ಪ್ರಕರಣಗಳಿರುವುದಾಗಿ ಘೋಷಿಸಿಕೊಂಡಿದ್ದಾರೆ.
2014 ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ರಾಜ್ಯದ ಎಲ್ಲ 28 ಲೋಕಸಭೆ ಕ್ಷೇತ್ರಗಳ 432 ಅಭ್ಯರ್ಥಿಗಳು ಚುನಾವಣಾ ಆಯೋಗದ ಮುಂದೆ ಘೋಷಿಸಿಕೊಂಡ ಸ್ವವಿವರಗಳನ್ನು ಕರ್ನಾಟಕ ಚುನಾವಣಾ ಕಾವಲು ಹಾಗೂ ಪ್ರಜಾಸತ್ತೀಯ ಸುಧಾರಣೆಗಾಗಿ ಸಂಘಟನೆಗಳು ವಿಶ್ಲೇಷಿಸಿ, ಈ ಅಚ್ಚರಿ ಮಾಹಿತಿಯನ್ನು ಕಲೆಹಾಕಿವೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಎಡಿಆರ್ ಹಾಗೂ ಎಲೆಕ್ಷನ್ ವಾಚ್ ಸಂಚಾಲಕರಾದ ಹರೀಶ್ ನರಸಪ್ಪ ಮತ್ತು ವಾಸುದೇವ್ ಶರ್ಮಾ ಇದರ ವಿವರ ಬಹಿರಂಗ ಪಡಿಸಿದರು.
ಕ್ರಿಮಿನಲ್ ಕೇಸ್: ಅಪರಾಧ ಮೊಕದ್ದಮೆ ಎದುರಿಸುತ್ತಿರುವ ಪಕ್ಷವಾರು ಅಭ್ಯರ್ಥಿಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಒಟ್ಟು 28 ಅಭ್ಯರ್ಥಿಗಳ ಪೈಕಿ 9 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿವೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ 6, ಜೆಡಿಎಸ್‌ನ ಒಟ್ಟು 25 ಅಭ್ಯರ್ಥಿಗಳಲ್ಲಿ 8 ಮತ್ತು 194 ಸ್ವತಂತ್ರ ಅಭ್ಯರ್ಥಿಗಳಲ್ಲಿ 14 ಮಂದಿ ವಿರುದ್ಧ ಅಪರಾಧ ಪ್ರಕರಣಗಳಿವೆ.
ಕ್ರಿಮಿನಲ್ ಅಭ್ಯರ್ಥಿಗಳ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎನ್. ಧರ್ಮಸಿಂಗ್ ಸೇರಿದಂತೆ ರಮೇಶ್ ಜಿಗಜಿಣಗಿ, ಸುರೇಶ್ ಅಂಗಡಿ, ವಿನಯ್‌ಕುಲಕರ್ಣಿ, ಎಸ್. ಎಸ್. ಮಲ್ಲಿಕಾರ್ಜುನ್, ನಂದಿನಿ ಆಳ್ವ ಹೆಸರುಗಳು ಮುಂಚೂಣಿಯಲ್ಲಿವೆ.

ರಾಜ್ಯದಲ್ಲಿ 118 ಮಂದಿ ಕೋಟ್ಯಧೀಶರು 
ಇನ್ನು ಅಭ್ಯರ್ಥಿಗಳ ಆಸ್ತಿ, ಚಿರಾಸ್ತಿ ವಿವರ ಅಷ್ಟೇ ಕುತೂಹಲಕಾರಿ ಆಗಿದೆ. 432 ಅಭ್ಯರ್ಥಿಗಳಲ್ಲಿ 118 ಮಂದಿ ಕೋಟ್ಯಧೀಶರು. ಶ್ರೀಮಂತರ ಪಟ್ಟಿಯಲ್ಲಿ ಕಾಂಗ್ರೆಸ್‌ನದ್ದೇ ಮೇಲುಗೈ. ಕಾಂಗ್ರೆಸ್ 27, ಬಿಜೆಪಿ 26, ಜೆಡಿಎಸ್ 21, ಎಎಪಿ 12, ಜೆಡಿಯು 3 ಹಾಗೂ ಸ್ವತಂತ್ರ 18 ಅಭ್ಯರ್ಥಿಗಳು ತಾವು ಕೋಟ್ಯಧಿಪತಿಗಳು ಎಂದು ಘೋಷಿಸಿಕೊಂಡಿದ್ದಾರೆ. ಅತ್ಯಂತ ಹೆಚ್ಚು ಆಸ್ತಿ ಹೊಂದಿರುವ ಅಭ್ಯರ್ಥಿಗಳ ಸಾಲಿನಲ್ಲಿ 15 ಜನರಿದ್ದು, ಈ ಪೈಕಿ ನಂದನ್ ನಿಲೇಕಣಿ, ಆರ್. ಪ್ರಭಾಕರ ರೆಡ್ಡಿ ಹಾಗೂ ವಿ. ಬಾಲಕೃಷ್ಣ ಕ್ರಮವಾಗಿ ಒಂದು, ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.
ಮರು ಆಯ್ಕೆ ಬಯಸಿರುವ ಅಭ್ಯರ್ಥಿಗಳಲ್ಲಿ ಎಚ್.ಡಿ. ಕುಮಾರಸ್ವಾಮಿ, ಪಿ.ಸಿ. ಮೋಹನ್, ಜಿ.ಎಸ್. ಬಸವರಾಜ್ ಹಾಗೂ ಸುರೇಶ್ ಅಂಗಡಿ ಅವರ ಆಸ್ತಿ ಗಳಿಕೆಯಲ್ಲಿ ದುಪ್ಪಟ್ಟಾಗಿದೆ. ಉಳಿದಂತೆ, ಬೀದರ್  ಸ್ವತಂತ್ರ ಅಭ್ಯರ್ಥಿ ಮಿರ್ಝಾ ಶಫೀ  ಬೇಗ್, ಬಳ್ಳಾರಿ ಬಿಎಸ್‌ಪಿ ಅಭ್ಯರ್ಥಿ ರಾಮುಡು, ಹಾವೇರಿ ಸರ್ವ ಜನತಾ ಪಾರ್ಟಿಯ ಬಸವಂತಪ್ಪ ಹೊನ್ನಪ್ಪ ಹಾಗೂ ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಮಂಜುನಾಥ್  ತಾವು ಯಾವುದೇ ಆಸ್ತಿ ಹೊಂದಿಲ್ಲ ಎಂದು  ಘೋಷಿಸಿಕೊಂಡರೆ, 215 ಮಂದಿ ತಮ್ಮ ಮೇಲೆ ಸಾಲದ ಹೊರೆ ಇರುವುದಾಗಿ ಹೇಳಿಕೊಂಡಿರುವುದು ಕಂಡು ಬಂದಿದೆ.
ಅಭ್ಯರ್ಥಿಗಳ ಶಿಕ್ಷಣದ ವಿವರಕ್ಕೆ ಬಂದರೆ, 432 ರಲ್ಲಿ 190 ಮಂದಿ ಪಿಯುಸಿ, 217 ಮಂದಿ ಪದವಿ ಹಾಗೂ ಅದಕ್ಕಿಂತಲೂ ಹೆಚ್ಚಿನ ಶಿಕ್ಷಣ ಮಗಿಸಿದ್ದರೆ, 6 ಅಭ್ಯರ್ಥಿಗಳು ತಾವು ಶಾಲಾ ಶಿಕ್ಷಣ ಪಡೆದುಕೊಂಡಿದ್ದಾಗಿ ಮಾತ್ರ ದಾಖಲಿಸಿದ್ದಾರೆ. 434 ಅಭ್ಯರ್ಥಿಗಳ ಪೈಕಿ ಬೆಂಗಳೂರು ದಕ್ಷಿಣದ ಸ್ವತಂತ್ರ ಅಭ್ಯರ್ಥಿ ಹನುಮೇಗೌಡ ಹಾಗೂ  ಗ್ರಾಮಾಂತರ ಸ್ವತಂತ್ರ ಅಭ್ಯರ್ಥಿ ಸುರೇಶ್ ಅವರ ವಿವರ ಲಭ್ಯವಾಗಿಲ್ಲ.
ಇಷ್ಟು ವಿವರಗಳನ್ನು ಬಹಿರಂಗಪಡಿಸಿದ ಕರ್ನಾಟಕ ಎಲೆಕ್ಷನ್ ವಾಚ್ ಸಂಚಾಲಕ ವಾಸುದೇವ್ ಶರ್ಮಾ, ಮತದಾರರಿಗೆ ಮಾಹಿತಿ ನೀಡುವ ಉದ್ದೇಶ ಇದಾಗಿದೆ ಎಂದರು. ಗೋಷ್ಠಿಯಲ್ಲಿ ಪ್ರೊ. ತ್ರಿಲೋಚನಾ ಶಾಸ್ತ್ರೀ, ನಂದನಾ ರೆಡ್ಡಿ ಹಾಜರಿದ್ದರು.

Posted by: Srinivasamurthy

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS