• Tag results for ಅಮೆರಿಕ ಅಧ್ಯಕ್ಷೀಯ ಚುನಾವಣೆ

ಅಮೆರಿಕ ಸಂಸತ್ ಕಟ್ಟಡದ ಮೇಲೆ ದಾಳಿ: ಸಂಘರ್ಷದಲ್ಲಿ 4 ಜನರ ಸಾವು, ವಾಷಿಂಗ್ಟನ್ ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕ ಸಂಸತ್ ಕಟ್ಟಡ ಅಮೆರಿಕ ಕ್ಯಾಪಿಟಲ್ ಮೇಲೆ ನಡೆಸಿದ ದಾಂಧಲೆ ಮತ್ತು ಗಲಭೆಯಲ್ಲಿ  ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಅಂತೆಯೇ ವಾಷಿಂಗ್ಟನ್ ನಲ್ಲಿ ಮುಂದಿನ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಗಿದೆ.

published on : 7th January 2021

ವಾಷಿಂಗ್ಟನ್ ಹಿಂಸಾಚಾರ: ಅಮೆರಿಕ ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ಕಾಣದ ರೀತಿಯ ಹಲ್ಲೆ- ಜೋ ಬೈಡನ್

ಅಮೆರಿಕ ಕ್ಯಾಪಿಟಲ್‌ ಕಟ್ಟಡಕ್ಕೆ ನುಗ್ಗಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಹಿಂಸಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡನ್, ಇದು ಅಮೆರಿಕ ಇತಿಹಾಸದಲ್ಲೇ 'ಅತ್ಯಂತ ಕರಾಳ ಕ್ಷಣ' ಎಂದು ಹೇಳಿದ್ದಾರೆ.

published on : 7th January 2021

ವಾಷಿಂಗ್ಟನ್ ನಲ್ಲಿ ಟ್ರಂಪ್ ಬೆಂಬಲಿಗರಿಂದ ದಾಂಧಲೆ, ಗಲಭೆ; ಪ್ರಧಾನಿ ಮೋದಿ ದಿಗ್ಭ್ರಾಂತಿ!

ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಕ್ಯಾಪಿಟಲ್ ಕಟ್ಟಡದ ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಾರೆ.

published on : 7th January 2021

ವಾಷಿಂಗ್ಟನ್ ನಲ್ಲಿ ಬೆಂಬಲಿಗರಿಂದ ದಾಂಧಲೆ: ಟ್ರಂಪ್ ಸಾಮಾಜಿಕ ಜಾಲತಾಣ ಖಾತೆಗಳು ಸ್ಥಗಿತ

ಅಮೆರಿಕ ರಾಜಧಾನಿ ವಾಷಿಂಗ್ಟನ್ ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರುವ ದಾಂಧಲೆ ನಡೆಸಿರುವ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನೀಡಿದ ಪ್ರಚೋಧನಾತ್ಮಕ ಭಾಷಣದ ಹಿನ್ನಲೆಯಲ್ಲಿ ಟ್ರಂಪ್ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

published on : 7th January 2021

ಸೋಲಿನ ಹತಾಶೆ; ಅಧ್ಯಕ್ಷಗಾದಿ ಉಳಿಸಿಕೊಳ್ಳಲು ಎಂತಹ ಹೋರಾಟಕ್ಕೂ ಸಿದ್ದ ಎಂದ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣಾ ಸೋಲಿನ ಹತಾಶೆಯಿಂದ ಹೊರಬರದ ಡೊನಾಲ್ಡ್ ಟ್ರಂಪ್ ಶತಾಯಗತಾಯ ತಾವು ಶ್ವೇತಭವನ ತೊರೆಯುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

published on : 5th January 2021

ಅಧ್ಯಕ್ಷೀಯ ಚುನಾವಣೆ ಫಲಿತಾಂಶ ವಿರೋಧ: ಜನವರಿ 6ರಂದು ಟ್ರಂಪ್ ಬೆಂಬಲಿಗರಿಂದ ವಾಷಿಂಗ್ಟನ್ ನಲ್ಲಿ ರ್ಯಾಲಿ

2020ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ವಿರೋಧಿಸಿ ಇದೇ 6ರಂದು ತಮ್ಮ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

published on : 2nd January 2021

ಕೊನೆಗೂ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಗೆ ಅಭಿನಂದಿಸಿದ ರಷ್ಯಾ ಅಧ್ಯಕ್ಷ ಪುಟಿನ್

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕೊನೆಗೆ ಅಭಿನಂದಿಸಿದ್ದಾರೆ. ಆದರೆ, ಬೈಡೆನ್ ಅವರನ್ನು ವಿಳಂಬವಾಗಿ ಅಭಿನಂದಿಸಿದ ನಾಯಕರಲ್ಲಿ ಪುಟಿನ್ ಸಹ ಒಬ್ಬರಾಗಿದ್ದಾರೆ.

published on : 15th December 2020

'ಅಮೆರಿಕ ಇತಿಹಾಸದಲ್ಲಿಯೇ ಇದು ಅತಿ ಭ್ರಷ್ಟ ಚುನಾವಣೆ, ನನ್ನ ಹೋರಾಟ ಮುಗಿದಿಲ್ಲ': ಡೊನಾಲ್ಡ್ ಟ್ರಂಪ್ 

ಕಳೆದ ನವೆಂಬರ್ 3ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ತಮ್ಮ ಹೋರಾಟ ಮುಗಿದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಅಧಿಕೃತ ಪ್ರಮಾಣ ಪತ್ರದಲ್ಲಿ ಚುನಾಯಿತ ಅಧ್ಯಕ್ಷ ಜೊ ಬೈಡನ್ ಅವರ ಪರವಾಗಿದ್ದರೂ ಕೂಡ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಇದ್ದಾರೆ.

published on : 14th December 2020

ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ವಿರುದ್ಧ ಟ್ರಂಪ್ ಹೂಡಿದ್ದ ಮೊಕದ್ದಮೆ ಯುಎಸ್ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತ

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೋ ಬೈಡನ್ ಅವರ ಗೆಲುವನ್ನು ಅಮಾನ್ಯ (ರದ್ದುಗೊಳಿಸುವುದು)ಗೊಳಿಸಲು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

published on : 12th December 2020

'ಚುನಾವಣೆ ಮುಗಿದಿದೆ': ವಾರಗಳ ವಿಳಂಬದ ನಂತರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭದ ಸುಳಿವು ನೀಡಿದ ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೋತ್ತರ ಪ್ರಹಸನಗಳಿಗೆ ತೆರೆ ಬೀಳುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗುತ್ತಿದ್ದು, ವಾರಗಳ ವಿಳಂಬದ ನಂತರ ಜೋ ಬೈಡನ್ ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗಿದೆ. 

published on : 25th November 2020

ಮೊದಲ ಬಾರಿಗೆ ಜೋ ಬೈಡನ್ ಗೆಲುವನ್ನು ಒಪ್ಪಿಕೊಂಡ ಟ್ರಂಪ್ 

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಜೋ ಬೈಡನ್ ಗೆಲುವನ್ನು ಒಪ್ಪಿಕೊಂಡಿದ್ದಾರೆ. 

published on : 16th November 2020

ಜೋ ಬೈಡನ್ ವಿರುದ್ಧ ಕೊನೆಗೂ ಸೋಲೊಪ್ಪಿಕೊಳ್ಳುವ ಸುಳಿವು ನೀಡಿದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸೋಲೊಪ್ಪಿಕೊಳ್ಳುವ ಸುಳಿವು ನೀಡಿದ್ದಾರೆ. 

published on : 14th November 2020

'ಫಲಿತಾಂಶ ಮುಂದಿನ ವಾರ ಬರಲು ಆರಂಭವಾಗುತ್ತದೆ, ನಾವು ಗೆದ್ದೇ ಗೆಲ್ಲುತ್ತೇವೆ': ಪಟ್ಟು ಬಿಡದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದು ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ಶ್ವೇತಭವನದ ಗದ್ದುಗೆ ಏರಲು ಸಿದ್ಧವಾಗಿರುವಾಗಲೇ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹಠ ಮುಂದುವರಿಸಿದ್ದಾರೆ.

published on : 11th November 2020

ಜೊ ಬೈಡನ್: ಅತ್ಯಂತ ಕಿರಿಯ ಸೆನೆಟರ್ ನಿಂದ ಅತಿ ಹಿರಿಯ ಅಮೆರಿಕ ಅಧ್ಯಕ್ಷನವರೆಗೆ ಸಾಗಿಬಂದ ಹಾದಿ

ಅಮೆರಿಕದ 46ನೇ ಅಧ್ಯಕ್ಷರಾಗಿ ಶ್ವೇತಭವನದ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲು ಹೊರಟಿದ್ದಾರೆ 77 ವರ್ಷದ ಹಿರಿಯ ರಾಜಕಾರಣಿ ಜೊ ಬೈಡನ್. 

published on : 8th November 2020

ಅಮೆರಿಕ ಚುನಾವಣೆಯಲ್ಲಿ ಗೆದ್ದ ಜೊ ಬೈಡನ್, ಕಮಲಾ ಹ್ಯಾರಿಸ್: ಪ್ರಧಾನಿ ಮೋದಿ, ಸೋನಿಯಾ, ರಾಹುಲ್ ಗಾಂಧಿ ಅಭಿನಂದನೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020ರಲ್ಲಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರ ಎದುರು ಗೆದ್ದು 46ನೇ ಅಧ್ಯಕ್ಷರಾಗಲು ಹೊರಟಿರುವ ಜೊ ಬೈಡನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಹಲವು ರಾಜಕೀಯ ನಾಯಕರು, ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

published on : 8th November 2020
1 2 >