• Tag results for ಅರವಿಂದ್ ಕೇಜ್ರಿವಾಲ್

ಗುಜರಾತ್ ನಲ್ಲಿ ಎಎಪಿಗೆ ಜನರ ಮತ: ಬಿಜೆಪಿ, ಕಾಂಗ್ರೆಸ್ ಗೆ ಭಯ ಶುರುವಾಗಿದೆ ಎಂದ ಅರವಿಂದ್ ಕೇಜ್ರಿವಾಲ್

ಗುಜರಾತ್  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಎಪಿಗೆ ಮತ ಹಾಕುವ ಜನರಿಂದಾಗಿ ಬಿಜೆಪಿ, ಕಾಂಗ್ರೆಸ್ ಭಯಭೀತಿಗೊಂಡಿವೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಘಟಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

published on : 26th February 2021

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಗಳಿಗೆ ವಂಚಿಸಿದ್ದ ಮೂವರ ಬಂಧನ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳಿಗೆ ವಂಚಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

published on : 15th February 2021

ಇ-ಕಾಮರ್ಸ್ ನಲ್ಲಿ ಸೋಫಾ ಮಾರಲು ಹೋಗಿ 34 ಸಾವಿರ ಕಳೆದುಕೊಂಡ ಸಿಎಂ ಕೇಜ್ರಿವಾಲ್ ಪುತ್ರಿ ಹರ್ಷಿತಾ!

ಇ-ಕಾಮರ್ಸ್ ಪೋರ್ಟಲ್ ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಮೋಸ ಹೋಗಿದ್ದಾರೆ.

published on : 9th February 2021

ಗಣರಾಜ್ಯೋತ್ಸವ ಹಿಂಸಾಚಾರ: ದೆಹಲಿ ಸಿಎಂ ಕೇಜ್ರಿವಾಲ್ ಭೇಟಿ ಮಾಡಿದ ರೈತರ ನಿಯೋಗ, ನ್ಯಾಯಾಂಗ ತನಿಖೆಗೆ ಒತ್ತಾಯ

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ ರೈತರ ನಿಯೋಗ, ರೈತರ ವಿರುದ್ಧದ "ಪಿತೂರಿ"ಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

published on : 3rd February 2021

ಕೇಂದ್ರ ಸರ್ಕಾರಕ್ಕೆ ಆಗದಿದ್ದರೆ ನಾವು ದೆಹಲಿ ಜನತೆಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡುತ್ತೇವೆ: ಕೇಜ್ರಿವಾಲ್

ಕೇಂದ್ರ ಸರ್ಕಾರ ಕೈಯಲ್ಲಿ ಆಗದಿದ್ದರೆ ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರ ದೆಹಲಿ ಜನರಿಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

published on : 13th January 2021

ದಯಮಾಡಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ: ಅರವಿಂದ್ ಕೇಜ್ರಿವಾಲ್ ಮನವಿ

ರೈತರು ತಮ್ಮ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದು, ದಯಮಾಡಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

published on : 27th December 2020

ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಹಕ್ಕುಚ್ಯುತಿ ನೋಟೀಸ್ ದಾಖಲಿಸಿದ ಸಂಸದೆ ಸೋನಾಲ್ ಮಾನ್ಸಿಂಗ್

ವಿವಾದಾತ್ಮಕ ಕೃಷಿ ಮಸೂದೆಗಳ ಕುರಿತು ದೆಹಲಿ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯಸಭೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ರಾಜ್ಯಸಭಾ ಸಂಸದೆ ಸೋನಾಲ್ ಮಾನ್ಸಿಂಗ್ ಆರೋಪಿಸಿದ್ದು ಕೇಜ್ರಿವಾಲ್ ವಿರುದ್ಧ ಹಕ್ಕುಚ್ಯುತಿ ನೋಟೀಸ್ ದಾಖಲಿಸಿದ್ದಾರೆ.

published on : 24th December 2020

ದೆಹಲಿ ಸಿಎಂ ಮನೆ ಮುಂದೆ ಬಿಜೆಪಿ ಉಪವಾಸ: ಮಾಜಿ ಮೇಯರ್ ಸೇರಿ ಮೂವರು ಆಸ್ಪತ್ರೆಗೆ ದಾಖಲು

ಬಿಜೆಪಿ ಆಡಳಿತವಿರುವ ಮಹಾನಗರ ಪಾಲಿಕೆಗಳಿಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೇಸರಿ ಪಕ್ಷ ದೆಹಲಿ ಮುಖ್ಯಮಂತ್ರಿ ಮನೆ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಶುಕ್ರವಾರ ಅಸ್ವಸ್ಥಗೊಂಡಿದ್ದ ದಕ್ಷಿಣ ದೆಹಲಿಯ ಮಾಜಿ ಮೇಯರ್ ಸುನೀತಾ ಹಾಗೂ ಇತರೆ ಇಬ್ಬರು ಕೌನ್ಸಿಲರ್‌ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 18th December 2020

ರಾಜ್ಯಗಳ ಹಕ್ಕುಗಳ ಮೇಲೆ ಕೇಂದ್ರದ ಅತಿಕ್ರಮಣ: ಪ.ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕುರಿತು ಕೇಜ್ರಿವಾಲ್ ಟೀಕೆ

ಪಶ್ಚಿಮ ಬಂಗಾಳ ಆಡಳಿತದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಲ್ಲಿಂದ ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕ್ರಮ ಸಂಯುಕ್ತ ವ್ಯವಸ್ಥೆ ಮೇಲಿನ ಅಕ್ರಮಣವಾಗಿದೆ ಎಂದಿದ್ದಾರೆ.

published on : 18th December 2020

ದೆಹಲಿ: ಅಧಿವೇಶನದಲ್ಲಿ ಕೇಂದ್ರದ ವಿವಾದಿತ ಕೃಷಿ ಕಾನೂನಿನ ಪ್ರತಿ ಹರಿದು ಹಾಕಿದ ಕೇಜ್ರಿವಾಲ್​​

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನಿನ ಪ್ರತಿಗಳನ್ನು ಹರಿದು ಹಾಕುವ ಮೂಲಕ ಮೋದಿ...

published on : 17th December 2020

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಅರವಿಂದ ಕೇಜ್ರಿವಾಲ್

2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

published on : 15th December 2020

ಹೊಸ ಕೃಷಿ ಕಾನೂನುಗಳು 'ರೈತ ವಿರೋಧಿ', ಬಂಡವಾಳಶಾಹಿಗಳಿಗೆ ಲಾಭವಾಗುತ್ತದೆ: ಅರವಿಂದ್ ಕೇಜ್ರಿವಾಲ್

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳು 'ರೈತ ವಿರೋಧಿ'ಯಾಗಿದ್ದು, ಅಪಾರ ಪ್ರಮಾಣದ ಹಣದುಬ್ಬರಕ್ಕೆ ಕಾರಣವಾಗುತ್ತದೆ ಮತ್ತು ಬಂಡವಾಳಶಾಹಿಗಳಿಗೆ ಲಾಭವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

published on : 14th December 2020

ರೈತರ ಹೋರಾಟ ಬೆಂಬಲಿಸಿ ನಾಳೆ ದೆಹಲಿ ಸಿಎಂ ಕೇಜ್ರಿವಾಲ್ ರಿಂದ ಉಪವಾಸ ಸತ್ಯಾಗ್ರಹ

ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಅವರು ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

published on : 13th December 2020

ಇನ್ನೂ ಕೇಜ್ರಿವಾಲ್ ರ ಚಲನವಲನ 'ನಿರ್ಬಂಧಿಸಲಾಗಿದೆ': ಎಎಪಿ; ಆರೋಪ ತಳ್ಳಿಹಾಕಿದ ದೆಹಲಿ ಪೊಲೀಸರು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಚಲನವಲನವನ್ನು ಇನ್ನೂ "ನಿರ್ಬಂಧಿಸಲಾಗಿದೆ" ಎಂದು ಆಡಳಿತರೂಢ ಎಎಪಿ ಬುಧವಾರ ಆರೋಪಿಸಿದೆ. 

published on : 9th December 2020

ಭಾರತ್ ಬಂದ್: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಗೃಹ ಬಂಧನ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಂದ್ರ ಸರ್ಕಾರ ಗೃಹ ಬಂಧನದಲ್ಲಿರಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

published on : 8th December 2020
1 2 >