• Tag results for ಆರ್ ಬಿಐ

ನಿಮ್ಮ ಕೆಲಸ ನೀವು ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಸ್ಪಷ್ಟವಾಗಿ ಹೇಳಲಿ: ಪಿ ಚಿದಂಬರಂ

ಈ ವರ್ಷ ಜಿಡಿಪಿ ಪ್ರಮಾಣ ಕುಸಿಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಆರ್ಥಿಕತೆ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆರ್ ಬಿಐ  ಸರ್ಕಾರಕ್ಕೆಸೂಚನೆ ನೀಡಬೇಕು ಎಂದಿದ್ದಾರೆ.

published on : 23rd May 2020

ಸಾಲದ ಮೇಲಿನ ಇಎಂಐ ಪಾವತಿ ಆ.31ರವರೆಗೆ ವಿಸ್ತರಣೆ: ಆರ್ ಬಿಐ

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಹಲವು ಕ್ರಮಗಳನ್ನು ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಮತ್ತೆ ಸಾಲದ ಮೇಲೆ ಇಎಂಐ ಪಾವತಿದಾರರಿಗೆ ಕೊಂಚ ನಿಟ್ಟುಸಿರು ಬಿಡುವ ಸಿಹಿ ಸುದ್ದಿ ನೀಡಿದೆ.

published on : 22nd May 2020

ರೆಪೊ ದರ ಶೇಕಡಾ 4ಕ್ಕೆ, ರಿವರ್ಸ್ ರೆಪೊ ದರ ಶೇ.3.35ಕ್ಕೆ ಇಳಿಕೆ:ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಕೋವಿಡ್-19 ನಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವು ಕ್ರಮಗಳನ್ನು ಪ್ರಕಟಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

published on : 22nd May 2020

ಮ್ಯೂಚುವಲ್ ಫಂಡ್ ಗೆ 50 ಸಾವಿರ ಕೋಟಿ ರೂ. ಗಳ ವಿಶೇಷ ಲಿಕ್ವಿಡಿಟಿ ಸೌಲಭ್ಯ ಪ್ರಕಟಿಸಿದ ರಿಸರ್ವ್ ಬ್ಯಾಂಕ್

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಆತಂಕ ನಿವಾರಣೆಯಾಗುವ ನಿರ್ಧಾರ ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 50 ಸಾವಿರ ಕೋಟಿ ರೂಪಾಯಿಗಳ ವಿಶೇಷ ಲಿಕ್ವಿಡಿಟಿ ಸೌಲಭ್ಯ (ಎಸ್ ಎಲ್ಎಫ್-ಎಂಎಫ್)ನ್ನು ಸೋಮವಾರ ಪ್ರಕಟಿಸಿದೆ.

published on : 27th April 2020

ದೇಶದ ಅಭಿವೃದ್ಧಿ ದರ ಶೇ.1.9 ರಷ್ಟು ತಲುಪುವ ನಿರೀಕ್ಷೆ, 2021-22ರಲ್ಲಿ ಆರ್ಥಿಕತೆ ಹೆಚ್ಚು ಬೆಳವಣಿಗೆ ಕಾಣಲಿದೆ: ಆರ್‌ಬಿಐ ಗವರ್ನರ್‌

ಮಾರಕ ಕೊರೋನಾ ವೈರಸ್ ಹಾವಳಿಯಿಂದಾಗಿ ದೇಶದ ಆರ್ಥಿಕತೆಗೆ ಧಕ್ಕೆಯಾಗಿದ್ದು, 2021-22ರಲ್ಲಿ  ಆರ್ಥಿಕತೆ ಅತಿ ಹೆಚ್ಚು ಬೆಳವಣಿಗೆ ಕಾಣಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

published on : 17th April 2020

ಕೋವಿಡ್-19ನಿಂದ ಆರ್ಥಿಕ ಕುಸಿತ: ರಫ್ತಿಗೆ ಸಂಬಂಧಿಸಿ ನಿಯಮ ವಿಸ್ತರಿಸಿದ ಆರ್ ಬಿಐ

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಆಗಿರುವುದರಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಅದರಂತೆ ರಫ್ತು ವಸ್ತುಗಳ ಮೇಲಿನ ನೀತಿ, ನಿರ್ಬಂಧಗಳ ಅವಧಿಯನ್ನು ವಿಸ್ತರಿಸಲಾಗಿದೆ.

published on : 1st April 2020

ಸಾಲದ ಇಎಂಐ ಪಾವತಿ ವಿಸ್ತರಣೆಗೆ ಶಿಫಾರಸು: ಗ್ರಾಹಕರಲ್ಲಿ ಮೂಡಿರುವ ಸಂದೇಹಗಳೇನು, ಆರ್ ಬಿಐ ಸ್ಪಷ್ಟನೆಯೇನು?

ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿರುವುದು ಖಾಸಗಿ, ಸರ್ಕಾರಿ ವಲಯಗಳು ಸೇರಿದಂತೆ ಎಲ್ಲಾ ಉದ್ದಿಮೆಗಳು, ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.

published on : 28th March 2020

ಆರ್‌ಬಿಐ ಕ್ರಮಗಳಿಂದ ಬಹು ಅಪೇಕ್ಷಿತ ಪರಿಹಾರ: ನಿರ್ಮಲಾ ಸೀತಾರಾಮನ್‍

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಎದುರಿಸುವ ಕ್ರಮವಾಗಿ ರೆಪೊ ದರದಲ್ಲಿ 75 ಮೂಲಾಂಕ ಕಡಿತಗೊಳಿಸುವ ರಿಸರ್ವ್‍ ಬ್ಯಾಂಕ್‍ ಪ್ರಕಟಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾಗತಿಸಿದ್ದಾರೆ. 

published on : 27th March 2020

ಆರ್ ಬಿಐ ನಿರ್ಧಾರದಿಂದ ದೇಶದ ಆರ್ಥಿಕತೆಯ ರಕ್ಷಣೆ: ಪ್ರಧಾನಿ ಮೋದಿ

ಆರ್ಥಿಕತೆಯ ಮೇಲೆ ಕೊರೊನಾವೈರಸ್‌ನಿಂದಾಗಿರುವ ನಕಾರಾತ್ಮಕ ಪರಿಣಾಮ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

published on : 27th March 2020

ಆರ್‌ಬಿಐನಿಂದ ಬಡ್ಡಿ ದರಗಳ ಕಡಿತ: ಮೂರು ತಿಂಗಳು ಎಲ್ಲ ಸಾಲಗಳ ಇಎಂಐ ಮುಂದೂಡಿಕೆಗೆ ಅವಕಾಶ

ಕೊರೋನಾವೈರಸ್ ಕಾರಣ ಇಡೀ ದೇಶ ಲಾಕ್ ಡೌನ್ ಆಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ಜನಸಾಮಾನ್ಯರಿಗೆ ಸ್ವಲ್ಪ ಅನುಕೂಲವಾಗುವ  ನಿಟ್ಟಿನಲ್ಲಿ ಆರ್ ಬಿಐ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.

published on : 27th March 2020

ಯೆಸ್ ಬ್ಯಾಂಕ್ ಬಿಕ್ಕುಟ್ಟು: 24 ಗಂಟೆಗಳ ಬಳಿಕ ಮರಳಿ ಸೇವೆ ಆರಂಭಿಸಿದ ಫೋನ್ ಪೇ

ಖಾಸಗಿ ಕ್ಷೇತ್ರದ ಯೆಸ್​ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ ಬೆನ್ನಲ್ಲೇ ಸ್ಥಗಿತವಾಗಿದ್ದ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆ ಫೋನ್ ಪೇ ಸೇವೆ 24 ಗಂಟೆಗಳ ಬಳಿಕ ಮರಳಿ ಆರಂಭವಾಗಿದೆ.

published on : 8th March 2020

ಯೆಸ್ ಬ್ಯಾಂಕ್ ಸಂಕಷ್ಟಕ್ಕೆ ಕೇಂದ್ರ ಕಾರಣ: ಪಿ ಚಿದಂಬರಂ ಕಿಡಿ

ಆರ್ಥಿಕ ಮುಗ್ಗಟ್ಟಿನಲ್ಲಿರುವ ಯೆಸ್ ಬ್ಯಾಂಕ್ ರಕ್ಷಿಸಲು ಎಸ್ಬಿಐ ರೂಪಿಸಿರುವ ಯೋಜನೆಯು ವಿಚಿತ್ರ, ವಿಲಕ್ಷಣವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ದೂರಿದ್ದಾರೆ.

published on : 8th March 2020

ಸಾರ್ವಜನಿಕರ ಹಣ ಖಾಸಗಿ ವ್ಯಕ್ತಿಗಳಿಂದ ಲೂಟಿ, ಖಾಸಗಿ ಬ್ಯಾಂಕ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಿ: ಕೇಂದ್ರಕ್ಕೆ ಎಐಬಿಇಎ ಮನವಿ

ಸಾರ್ವಜನಿಕರ ಕಷ್ಟದ ಹಣವನ್ನು ಕೆಲ ಖಾಸಗಿ ವ್ಯಕ್ತಿಗಳು ಲೂಟಿ ಮಾಡುತ್ತಿದ್ದು, ಯೆಸ್ ಬ್ಯಾಂಕನ್ನು ಸಾರ್ವಜನಿಕ ವಲಯದಡಿ ತರಲು ಎಐಬಿಇಎ ಒತ್ತಾಯ ಖಾಸಗಿ ಬ್ಯಾಂಕ್‌ಗಳನ್ನು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಅಖಿಲ ಭಾರತ ಬ್ಯಾಂಕ್‌ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಆಗ್ರಹಿಸಿದೆ.

published on : 8th March 2020

ಅಕ್ರಮ ಹಣ ವರ್ಗಾವಣೆ ಪ್ರಕರಣ: ವಂಚನೆ ಆರೋಪದಡಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಬಂಧನ

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ ಗಂಭೀರ ಆರೋಪ ಎದುರಿಸುತ್ತಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

published on : 8th March 2020

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು: ಎಟಿಎಂಗಳಲ್ಲಿ ಹಣವಿಲ್ಲ, ಬ್ರಾಂಚ್ ಗಳ ಮುಂದೆ ಖಾತೆದಾರರ ಪರದಾಟ

ದೇಶದ ಐದನೇ ಅತೀ ದೊಡ್ಡ ಖಾಸಗಿ ಬಾಂಕಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್ ಬಿಐ ಸೂಪರ್ ಸೀಡ್ ಮಾಡುತ್ತಿದ್ದಂತೆಯೇ ಬ್ಯಾಂಕ್ ನ ಗ್ರಾಹಕರು ಬೇಸ್ತು ಬಿದ್ದಿದ್ದು, ತಮ್ಮ ಖಾತೆಗಳಲ್ಲಿರುವ ಹಣವನ್ನು ಹಿಂದಕ್ಕೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

published on : 7th March 2020
1 2 3 4 5 >