• Tag results for ಎಸ್ ಪಿ

ಲೋಕಸಭೆಯಲ್ಲಿ ಜಮ್ಮು ಕಾಶ್ಮೀರ ಮಸೂದೆ ಬೆಂಬಲಿಸಿದ ಬಿಎಸ್ ಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ(ತಿದ್ದುಪಡಿ) ಮಸೂದೆಯನ್ನು ಬೆಂಬಲಿಸಿದ ಬಹುಜನ ಸಮಾಜ ಪಕ್ಷ(ಬಿಎಸ್ ಪಿ), ಸರ್ಕಾರದ ಸುಧಾರಣಾ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದೆ.

published on : 13th February 2021

ದೇಶದಲ್ಲಿ ಹಸಿವಿನ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ: ಕೃಷಿ ಕಾಯ್ದೆ ಸಮರ್ಥಿಸಿಕೊಂಡ ಪ್ರಧಾನಿ ಮೋದಿಗೆ ರಾಕೇಶ್ ಟಿಕೈತ್ ಟಾಂಗ್

ದೇಶದಲ್ಲಿ ಹಸಿವಿನ ಮೇಲೆ ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದಿರುವ ರೈತ ಮುಖಂಡ ರಾಕೇಶ್ ಟಿಕೈತ್ ಅವರು, ಹೊಸ ವಿವಾದಾತ್ಮಕ ಕೃಷಿ-ಮಾರುಕಟ್ಟೆ ಕಾನೂನುಗಳನ್ನು ರದ್ದುಗೊಳಿಸುವುದರ ಜೊತೆಗೆ...

published on : 8th February 2021

ಇಂಡೋ -ಪಾಕ್ ಗಡಿಗಳಿಗಿಂತಲೂ ಕೇಂದ್ರ ಸರ್ಕಾರ ರೈತರ ವಿರುದ್ಧ ಹೆಚ್ಚಿನ ಬಲಪ್ರಯೋಗ ಮಾಡುತ್ತಿದೆ: ಬಿಎಸ್ ಪಿ

ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ಕೇಂದ್ರ ಸರ್ಕಾರ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಸಭಾ ಸಂಸದ ಸತೀಶ್ ಚಂದ್ರ ಮಿಶ್ರಾ ಶುಕ್ರವಾರ ಆರೋಪಿಸಿದ್ದಾರೆ. ಪ್ರತಿಷ್ಠೆ ಬಿಟ್ಟು ಕೃಷಿ ಕಾನೂನುಗಳನ್ನು ರದ್ದುಪಡಿಸಿ ಎಂದು ಅವರು ಒತ್ತಾಯಿಸಿದ್ದಾರೆ.

published on : 5th February 2021

ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಂದ ಕನಿಷ್ಠ ಬೆಂಬಲ ಬೆಲೆ ಮೇಲೆ ಪರಿಣಾಮ: ಶರದ್ ಪವಾರ್

ವಿವಾದಾತ್ಮಕ ಮೂರು ಹೊಸ ಕೃಷಿ ಕಾನೂನುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು, ಈ ಕಾನೂನುಗಳಿಂದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ...

published on : 30th January 2021

ರೈತರಿಗೆ ಸಿಹಿ ಸುದ್ದಿ: ಕೊಬ್ಬರಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿ 2021ನೇ ಹಂಗಾಮಿನ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ(ಎಂ.ಎಸ್.ಪಿ.)ಗೆ ತನ್ನ ಅನುಮೋದನೆ ನೀಡಿದೆ.

published on : 27th January 2021

ಕೃಷಿ ಕಾನೂನುಗಳ ತಿದ್ದುಪಡಿಗೆ ಸರ್ಕಾರದ ಆಫರ್: ಕಾನೂನುಗಳ ರದ್ಧತಿ, ಎಂಎಸ್ ಪಿ ಮೇಲಿನ ಚರ್ಚೆಗೆ ರೈತರ ಪಟ್ಟು!

ವಿವಾದಾತ್ಮಕ ಮೂರು ಕೃಷಿ ಕಾನೂನುಗಳಿಗೆ  ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು ಪ್ರತಿಭಟನಾನಿರತ ರೈತ ಸಂಘಟನೆಗಳೊಂದಿಗೆ ನಡೆದ 10ನೇ ಸುತ್ತಿನ ಮಾತುಕತೆಯಲ್ಲಿ ಹೇಳಿದೆ.

published on : 20th January 2021

ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುವಂತೆ ಕಾರ್ಯಕರ್ತರಿಗೆ ಮಾಯಾವತಿ ಸೂಚನೆ

ಬಡವರು ಮತ್ತು ದೀನ ದಲಿತರಿಗೆ ಸಹಾಯ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಸೂಚನೆ ನೀಡಿದ್ದಾರೆ.

published on : 14th January 2021

ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು 8 ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ ಭಾರತ

ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಭಾರತ ಎಂಟು ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿದೆ ಮತ್ತು ಈ ಕುರಿತು ಮಾತುಕತೆ ನಡೆಸಲು ವಿಶ್ವ ಸಮುದಾಯ ಮುಂದಾಗಬೇಕು ಮತ್ತು ಶೂನ್ಯ ಸಹಿಷ್ಣುತೆ ಹೊಂದಬೇಕು ಎಂದು  ಕರೆ ನೀಡಿದೆ.

published on : 13th January 2021

ಕಾಂಗ್ರೆಸ್ ನೊಂದಿಗೆ ಎಲ್ಲಾ 6 ಬಿಎಸ್‌ಪಿ ಶಾಸಕರ ವಿಲೀನ: ರಾಜಸ್ಥಾನ ಸ್ಪೀಕರ್ ಗೆ 'ಸುಪ್ರೀಂ' ನೋಟೀಸ್!

ಎಲ್ಲಾ ಆರು ಬಹುಜನ ಸಮಾಜವಾದಿ ಪಕ್ಷ(ಬಿಎಸ್ ಪಿ)ದ ಶಾಸಕರನ್ನು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ವಿಲೀನಗೊಳಿಸುವುದರ ವಿರುದ್ಧ ಎರಡು ಪ್ರತ್ಯೇಕ ಅರ್ಜಿಗಳು ದಾಖಲಾಗಿದ್ದು ಕುರಿತು ಪ್ರತಿಕ್ರಿಯಿಸುವಂತೆ ರಾಜಸ್ಥಾನ ವಿಧಾನಸಭಾ ಸ್ಪೀಕರ್ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

published on : 7th January 2021

ಕದಡಿದ ಮತ್ತು ಅತ್ಯಂತ ಅಪಾಯಕಾರಿ ಪರಿಸ್ಥಿತಿ: ನಾಗಾಲ್ಯಾಂಡ್ ನಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ಮುಂದುವರಿಕೆ

ಈಶಾನ್ಯಾ ಭಾರತದ ನಾಗಾಲ್ಯಾಂಡ್ ರಾಜ್ಯದಲ್ಲಿ ಈಗಲೂ ಪರಿಸ್ಥಿತಿ ಕದಡಿದಂತಿದ್ದು, ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ ಹೀಗಾಗಿ ಮುಂದಿನ ಆರು ತಿಂಗಳ ಕಾಲ ನಾಗಾಲ್ಯಾಂಡ್ ನಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.

published on : 30th December 2020

ಕೃಷಿ ಕಾಯ್ದೆಯಿಂದ ರೈತರ ಹಿತಾಸಕ್ತಿಗೆ ಧಕ್ಕೆಯಾದರೆ ತಿದ್ದುಪಡಿಗೆ ಸಿದ್ಧ: ರಾಜನಾಥ್ ಸಿಂಗ್

ರೈತರ ಕೃಷಿ ಸುಧಾರಣಾ ಕಾನೂನುಗಳನ್ನು ಒಂದು ವರ್ಷ ಜಾರಿಗೆ ತರಲಿ ನಂತರ ಅವುಗಳಿಂದ ರೈತರಿಗೆ ಏನೇನು ಲಾಭದಾಯಕವಲ್ಲ, ಪ್ರಯೋಜನವಲ್ಲ ಎಂದು ಸಾಭೀತಾದರೆ ಅಗತ್ಯ ತಿದ್ದುಪಡಿಗೆ ಸರ್ಕಾರ ಸಿದ್ಧ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 25th December 2020

ರೈತರೊಂದಿಗೆ ಮಾತುಕತೆ ಮುಂದುವರಿಸಲು ಸರ್ಕಾರ ಸಿದ್ಧ, ಎಂಎಸ್ ಪಿ ಮುಂದುವರಿಯುತ್ತದೆ: ಕೇಂದ್ರ ಸಚಿವ ತೋಮರ್

ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವೆ ಬಿಕ್ಕಟ್ಟು ಮುಂದುವರಿದಿದ್ದು,

published on : 15th December 2020

ಭತ್ತ-ಗೋಧಿಗೆ ಯುಪಿಎ ಸರ್ಕಾರಕ್ಕಿಂತ ದುಪ್ಪಟ್ಟು ಕನಿಷ್ಟ ಬೆಂಬಲ ಬೆಲೆ ನೀಡಿರುವ ಮೋದಿ ಸರ್ಕಾರ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭತ್ತ-ಗೋಧಿ ಬೆಳೆದಿರುವ ರೈತರಿಗೆ ಈ ಹಿಂದಿದ್ದ ಯುಪಿಎ ಸರ್ಕಾರಕ್ಕಿಂತಲೂ ದುಪ್ಪಟ್ಟು ಕನಿಷ್ಟ ಬೆಂಬಲ ಬೆಲೆ ನೀಡಿದೆ. 

published on : 10th December 2020

ಪ್ರತಿಭಟನೆಗೆ 'ಮಂಡಿ'ಯೂರಿತಾ ಕೇಂದ್ರ?: ರೈತರಿಗೆ ಕಳಿಸಿದ ಪ್ರಸ್ತಾವನೆ, ಭರವಸೆ ಅಂಶಗಳ ವಿವರ ಹೀಗಿದೆ...

ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ಪ್ರಸ್ತಾವನೆಗಳ ಕರಡನ್ನು ತಯಾರಿಸಿ ಕಳಿಸಿಕೊಟ್ಟಿದೆ. 

published on : 9th December 2020

ಕೆನಡಾದ ಡಬಲ್ ಗೇಮ್: ಒಂದೆಡೆ ರೈತರಿಗೆ ಬೆಂಬಲ; ಮತ್ತೊಂದೆಡೆ ಕನಿಷ್ಟ ಬೆಂಬಲ ಬೆಲೆಗೆ ಡಬ್ಲ್ಯೂಟಿಒದಲ್ಲಿ ವಿರೋಧ!

ಭಾರತದಲ್ಲಿ ರೈತರು ಪ್ರತಿಭಟನೆ ಮಾಡುತ್ತಿರುವುದನ್ನು ಬೆಂಬಲಿಸಿರುವ ಕೆನಡಾ, ಆ ರೈತರು ಯಾವುದಕ್ಕಾಗಿ ಬೇಡಿಕೆ ಇಡುತ್ತಿದ್ದಾರೋ ಅದನ್ನೇ ವಿರೋಧಿಸುವಂತಹ ನಿಲುವನ್ನು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ತಳೆದಿದೆ. 

published on : 6th December 2020
1 2 3 4 >