• Tag results for ಕಮಲ್ ನಾಥ್

ಯಾವ ಟೈಗರ್, ಪೇಪರ್ ಟೈಗರ್ ಅಥವಾ ಸರ್ಕಸ್ ಟೈಗರ್?: ಸಿಂಧಿಯಾಗೆ ಕಮಲ್ ನಾಥ್ ಟಾಂಗ್

'ಟೈಗರ್ ಅಭಿ ಝಿಂದಾ ಹೇ' ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು, ಯಾವ ಟೈಗರ್, ಕಾಗದ ಅಥವಾ ಸರ್ಕಸ್ ನಲ್ಲಿರೋದಾ? ಎಂದು ವ್ಯಂಗ್ಯವಾಡಿದ್ದಾರೆ.

published on : 3rd July 2020

ಕಮಲ್‌ನಾಥ್‌ಗೆ ಹಿನ್ನಡೆ: ಬಹುಮತ ಸಾಬೀತು ಪಡಿಸುವಂತೆ ಆದೇಶಿಸುವ 'ಅಧಿಕಾರ' ರಾಜ್ಯಪಾಲರಿಗಿದೆ- ಸುಪ್ರೀಂ ಕೋರ್ಟ್

ಮಧ್ಯಪ್ರದೇಶ ರಾಜ್ಯಪಾಲ ಲಾಲ್ಜಿ ಟಂಡನ್ ಅವರು ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಸಮರ್ಥಿಸಿದೆ.

published on : 13th April 2020

ಕಮಲ್ ನಾಥ್ ರಾಜೀನಾಮೆ: ತವರಿನತ್ತ ಮುಖ ಮಾಡಿದ ಮ.ಪ್ರದೇಶದ ಬಂಡಾಯ ಶಾಸಕರು

ಕಮಲ್ ನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ರೆಸಾರ್ಟ್ ನಲ್ಲಿದ್ದ ಮಧ್ಯಪ್ರದೇಶದ ಬಂಡಾಯ ಶಾಸಕರು ಇದೀಗ ತವರಿಗೆ ತೆರಳಲು ಮುಂದಾಗಿದ್ದಾರೆಂದು ವರದಿಗಳು ತಿಳಿಸಿವೆ. 

published on : 21st March 2020

ಮಧ್ಯ ಪ್ರದೇಶ: ಕಮಲ್ ನಾಥ್ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು, ಇದು ಜನರ ಗೆಲುವು ಎಂದ ಸಿಂಧಿಯಾ

ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ರಾಜ್ಯಪಾಲ ಲಾಲ್ ಜಿ ಟಂಡನ್ ಅವರು ಶುಕ್ರವಾರ ಅಂಗೀಕರಿಸಿದ್ದಾರೆ.

published on : 20th March 2020

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ರಾಜ್ಯಪಾಲರಿಗೆ ರಾಜಿನಾಮೆ ಸಲ್ಲಿಸುತ್ತೇನೆ: ಸಿಎಂ ಕಮಲ್ ನಾಥ್

ಮಧ್ಯಪ್ರದೇಶದ ರೆಬೆಲ್ ಶಾಸಕರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಬೆನ್ನಲ್ಲೇ ಸಿಎಂ ಕಮಲ್ ನಾಥ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ.

published on : 20th March 2020

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ವಿಶ್ವಾಸಮತಕ್ಕೂ ಮುನ್ನವೇ ಕಮಲನಾಥ್ ರಾಜೀನಾಮೆ?

ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ ಅಂತಿಮ ಹಂತಕ್ಕೆ ತಲುಪಿದೆ ಎಂದು ಹೇಳುತ್ತಿರುವ ನಡುವಲ್ಲೇ, ವಿಶ್ವಾಸಮತಯಾಚನೆಗೂ ಮುನ್ನವೇ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರು ರಾಜೀನಾಮೆ ನೀಡಲಿದ್ದಾರೆಂದು ಹೇಳಲಾಗುತ್ತಿದೆ. 

published on : 20th March 2020

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ವಿವರಣೆ ನೀಡುವಂತೆ ಕಮಲ್ ನಾಥ್ ಸರ್ಕಾರಕ್ಕೆ 'ಸುಪ್ರೀಂ' ಸೂಚನೆ, ವಿಚಾರಣೆ ಮುಂದೂಡಿಕೆ

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ವಿಚಾರ ಸಂಬಂಧ ಬಿಜೆಪಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಮಲ್ ನಾಥ್ ಸರ್ಕಾರಕ್ಕೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

published on : 17th March 2020

ಮಧ್ಯಪ್ರದೇಶ: ನಾಳೆ ವಿಶ್ವಾಸಮತ ಯಾಚನೆ ಹಿನ್ನೆಲೆ, ರಾಜ್ಯಪಾಲ ಲಾಲ್ ಜೀ ಟಂಡನ್ ಭೇಟಿಯಾದ ಕಮಲ್ ನಾಥ್ 

ಮಧ್ಯಪ್ರದೇಶ ರಾಜಕೀಯ ಹೈಡ್ರಾಮದ ನಡುವೆ ಮುಖ್ಯಮಂತ್ರಿ ಕಮಲ್ ನಾಥ್ ಇಂದು ರಾಜಭವನದಲ್ಲಿ ರಾಜ್ಯಪಾಲ ಲಾಲ್ ಜೀ ಟಂಡನ್ ಅವರನ್ನು ಭೇಟಿಯಾಗಿದ್ದಾರೆ.

published on : 16th March 2020

ನಾಳೆಯೇ ಬಹುಮತ ಸಾಬೀತುಪಡಿಸಿ: ಕಮಲ್ ನಾಥ್ ಗೆ ರಾಜ್ಯಪಾಲರ ಶಾಕಿಂಗ್ ಡೆಡ್ ಲೈನ್!

ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಾಳೆಯೇ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಲಾಲ್ ಜಿ ಟಂಡನ್ ಅವರು ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಶಾಕಿಂಗ್ ಡೆಡ್ ಲೈನ್ ನೀಡಿದ್ದಾರೆ.

published on : 16th March 2020

ಮಧ್ಯಪ್ರದೇಶ: 48 ಗಂಟೆಯೊಳಗೆ ವಿಶ್ವಾಸ ಮತಯಾಚಿಸುವಂತೆ ಸೂಚಿಸಿ; 'ಸುಪ್ರೀಂ' ಮೆಟ್ಟಿಲೇರಿದ ಬಿಜೆಪಿ, ನಾಳೆ ವಿಚಾರಣೆ

ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು 48 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಬೇಕು ಎಂದು ಬಿಜೆಪಿ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

published on : 16th March 2020

ಮಧ್ಯ ಪ್ರದೇಶ ಕಮಲ್ ನಾಥ್ ಸರ್ಕಾರ ಸದ್ಯಕ್ಕೆ ಸೇಫ್: ವಿಧಾನಸಭೆಯಲ್ಲಿ ಕೋಲಾಹಲ, ಕಲಾಪ ಮಾರ್ಚ್ 26ಕ್ಕೆ ಮುಂದೂಡಿಕೆ

ಬಿಜೆಪಿಗೆ ಸದ್ಯದ ಮಟ್ಟಿಗೆ ಹಿನ್ನಡೆಯಾಗುವ ರೀತಿಯಲ್ಲಿ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಎನ್ ಪಿ ಪ್ರಜಾಪತಿ ಸೋಮವಾರ ಕಮಲ್ ನಾಥ್ ಸರ್ಕಾರದ ಬಹುಮತ ಪರೀಕ್ಷೆ ನಡೆಸದೆ ಕಲಾಪವನ್ನು ಮಾರ್ಚ್ 26ಕ್ಕೆ ಮುಂದೂಡಿದರು.

published on : 16th March 2020

ಮಧ್ಯಪ್ರದೇಶ: ಸದನದ ಅಜೆಂಡಾದಲ್ಲಿ ವಿಶ್ವಾಸಮತ ಉಲ್ಲೇಖವಿಲ್ಲ, ರಾಜ್ಯಪಾಲರನ್ನು ಭೇಟಿಯಾದ ಪ್ರತಿಪಕ್ಷ ನಾಯಕ

ಸೋಮವಾರ ವಿಶ್ವಾಸಮತ ಯಾಚಿಸಲು ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜೀ ಟಂಡನ್ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ನಿರ್ದೇಶಿಸಿದ್ದಾರೆ.  ಆದರೆ, ವಿಧಾನಸಭೆ ಸಚಿವಾಲಯ ಭಾನುವಾರ ರಾತ್ರಿ ಹೊರಡಿಸಿರುವ ವಿಧಾನಸಭೆ ಕಾರ್ಯಕಲಾಪ ಪಟ್ಟಿಯಲ್ಲಿ ವಿಶ್ವಾಸಮತ ಯಾಚನೆ ವಿಚಾರದ  ಬಗ್ಗೆ ಉಲ್ಲೇಖವಿಲ್ಲ.

published on : 16th March 2020

'ಬಂಡಾಯ ಕಾಂಗ್ರೆಸ್ ಶಾಸಕರನ್ನು ಬಿಟ್ಟುಬಿಡಿ, ನಾಳೆ ಕಲಾಪದಲ್ಲಿ ಅವರು ಭಾಗವಹಿಸಲಿ':ಅಮಿತ್ ಶಾಗೆ ಪತ್ರ ಬರೆದ ಕಮಲ್ ನಾಥ್ 

ಬೆಂಗಳೂರಿನಲ್ಲಿ ಬಿಜೆಪಿ ವಶದಲ್ಲಿಟ್ಟುಕೊಂಡಿರುವ 22 ಮಂದಿ ಕಾಂಗ್ರೆಸ್ ಶಾಸಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಪತ್ರ ಬರೆದಿದ್ದಾರೆ.

published on : 15th March 2020

ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು: ನಾಳೆ ಸದನದಲ್ಲಿ ಕಮಲ್ ನಾಥ್ ಗೆ ಅಗ್ನಿ ಪರೀಕ್ಷೆ, ಬಹುಮತ ಸಾಬೀತಿಗೆ ಆದೇಶ 

ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಾಳೆ ನಡೆಯಲಿದೆ ಎಂದು ರಾಜ್ಯಪಾಲ ಲಾಲ್ಜಿ ಟಂಡನ್ ತಿಳಿಸಿದ್ದಾರೆ.

published on : 15th March 2020

ಮಧ್ಯ ಪ್ರದೇಶ ಬಿಕ್ಕಟ್ಟು: ರಾಜ್ಯಪಾಲರ ಭೇಟಿ ಬಳಿಕ ವಿಶ್ವಾಸಮತ ಯಾಚಿಸಲು ಸಿದ್ಧ ಎಂದ ಕಮಲ್ ನಾಥ್

ಮೂರು ದಿನಗಳ ಹಿಂದೆ 22 ಕಾಂಗ್ರೆಸ್ ಬಂಡಾಯ ಶಾಸಕರು ರಾಜೀನಾಮೆ ನೀಡಿರುವುದರಿಂದ ಮಧ್ಯ ಪ್ರದೇಶ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿರುವಂತೆ ಮುಖ್ಯಮಂತ್ರಿ ಕಮಲ್ ನಾಥ್ ಅವರು ಶುಕ್ರವಾರ ರಾಜ್ಯಪಾಲ ಲಾಲ್ ಜಿ ಟಂಡನ್ ಅವರನ್ನು ಭೇಟಿ ಮಾಡಿದ್ದಾರೆ.

published on : 13th March 2020
1 2 3 >