• Tag results for ಕರ್ನಾಟಕ ಉಪಚುನಾವಣೆ

ಮಮತಾ ಬ್ಯಾನರ್ಜಿ ಗಟ್ಟಿತನ ನಮಗೆ ಮಾದರಿ, ಜೆಡಿಎಸ್ ಸಿಡಿದೆದ್ದು ಬರಲಿದೆ: ಮಾಜಿ ಸಿಎಂ ಕುಮಾರಸ್ವಾಮಿ

ಇಂದು ಹೊರಹೊಮ್ಮಿದ ಕರ್ನಾಟಕ ವಿಧಾನಸಭೆ, ಲೋಕಸಭೆ ಉಪಚುನಾವಣೆ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಯಿಸಿರುವ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ "ಮಮತಾ ಬ್ಯಾನರ್ಜಿ ಗಟ್ಟಿತನ ನಮಗೆ ಮಾದರಿ, ರಾಜ್ಯದಲ್ಲಿ ಸದ್ಯ ಸಂಕಷ್ಟದಲ್ಲಿರುವ ಜೆಡಿಎಸ್‌ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಟೆದು ನಿಲ್ಲಲಿದೆ, ಸಿಡಿದೆದ್ದು ಬರ

published on : 2nd May 2021

ಕರ್ನಾಟಕ ಉಪಚುನಾವಣೆ ಫಲಿತಾಂಶ: ಬಸವಕಲ್ಯಾಣ ವಿಧಾನಸಭೆ, ಬೆಳಗಾವಿ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

ಕರ್ನಾಟಕದ ಎರಡು ವಿಧಾನಸಭೆ, ಒಂದು ಲೋಕಸಭೆಗೆ ನಡೆದ ಉಪಚುನಾವಣೆಯ ಪೈಕಿ ಬಿಜೆಪಿಗೆ ಒಂದು ಕ್ಷೇತ್ರದಲ್ಲಿ ಮುಖಭಂಗ ಉಂಟಾಗಿದ್ದರೆ, ಉಳಿದ ಎರಡರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

published on : 2nd May 2021

ಕೊರೋನಾ ಉಲ್ಬಣ: ಮತ ಎಣಿಕೆ ನಂತರ ವಿಜಯೋತ್ಸವ ನಡೆಸುವಂತಿಲ್ಲ; ಚುನಾವಣಾ ಆಯೋಗ ಖಡಕ್ ಆದೇಶ!

ವಿಧಾನಸಭಾ ಚುನಾವಣೆ, ವಿವಿಧ ಲೋಕಸಭೆ ಉಪಚುನಾವಣೆ ನಡೆದ ರಾಜ್ಯಗಳಲ್ಲಿ ಮತ ಎಣಿಕೆ ದಿನದಂದು ಮತ ಎಣಿಕೆಗೆ ಮೊದಲು ಅಥವಾ ನಂತರ ಎಲ್ಲಾ ಬಗೆಯ ವಿಜಯೋತ್ಸವಗಳನ್ನು ನಿಷೇಧಿಸಿ ಚುನಾವಣಾ ಆಯೋಗ ಮಂಗಳವಾರ ಆದೇಶಿಸಿದೆ.

published on : 27th April 2021

ಉಪಚುನಾವಣೆ: ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ

ಭಾರತೀಯ ಜನತಾ ಪಕ್ಷದ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರ ಹಿರಿಯ ಮುಖಂಡರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದೆ.

published on : 18th March 2021

ಕರ್ನಾಟಕದ 1 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟ

ರಾಜ್ಯದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಬೆ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಪ್ರಕಟವಾಗಿದೆ.

published on : 16th March 2021

ಜ್ಯೋತಿಷಿಗಳ ಮಾತು ನಂಬಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ: ಡಾ.ಕೆ. ಸುಧಾಕರ್ ವ್ಯಂಗ್ಯ

ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಹಾಗೂ ಮುನಿರತ್ನ ಅವರಿಗೆ ಮತ್ತು ಅಭೂತಪೂರ್ವ ವಿಜಯ ಸಾಧಿಸಲು ಶ್ರಮಿಸಿದ ಪಕ್ಷದ ಎಲ್ಲಾ ನಾಯಕರಿಗೂ ಮತ್ತು ಕಾರ್ಯಕರ್ತರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.

published on : 10th November 2020

ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು: ಸಿದ್ದರಾಮಯ್ಯ

ಬೆಂಗಳೂರಿನ ರಾಜರಾಜೇಶ್ವರಿ ಹಾಗೂ ತುಮಕೂರಿನ ಶಿರಾ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಆದರೆ ಬಿಜೆಪಿಯ ಈ ಗೆಲುವು "ಪ್ರಜಾಪ್ರಭುತ್ವದ ಸೋಲು. ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

published on : 10th November 2020

ನನಗೆ 'ರೀಬ್ರ್ಯಾಂಡಿಂಗ್' ಅಗತ್ಯವಿಲ್ಲ, ಅಧಿಕಾರ ಕೇವಲ ಕೆಲವರ ಆಸ್ತಿಯಲ್ಲ: ಡಿ.ಕೆ.ಶಿವಕುಮಾರ್

ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಲಿದೆ ಎನ್ನುವ ಎಕ್ಸಿಟ್ ಪೋಲ್ಸ್ ಮುನ್ಸೂಚನೆ ನೀಡಿದ್ದರೂ ಸಹ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಬೇರೆಯದೇ ಮಾತುಗಳನ್ನಾಡಿದ್ದಾರೆ.

published on : 9th November 2020

ಕರ್ನಾಟಕ ಉಪ ಚುನಾವಣೆ: ಅನುಕಂಪದ ಅಲೆ, ಅಭ್ಯರ್ಥಿಗಳಿಗೆ ವಿಜಯದ ಸರಮಾಲೆ!

ರಾಜ್ಯದ ಚುನಾವಣಾ ಇತಿಹಾಸ ಬಗೆದು ನೋಡಿದರೆ ಶಾಸಕರಾಗಿ, ಸಚಿವರಾಗಿ ಕೆಲ ಕಾಲ ಕೆಲಸ ಮಾಡಿ, ಪತಿಯ ಅಕಾಲಿಕ ನಿಧನದ ನಂತರ ವಿಶೇಷವಾಗಿ ಪತ್ನಿಯರೇ ನಿಂತು ನಡೆದಿರುವ ಇದುವರೆಗಿನ ಎಲ್ಲ ಚುನಾವಣಾ ಇತಿಹಾಸ ಒಳ ಹೊಕ್ಕು ನೋಡಿದರೆ ಅನುಕಂಪದ ಅಲೆಯಲ್ಲಿ ವಿಜಯದ ನಗೆ ಬೀರಿದವರೇ ಹೆಚ್ಚು.

published on : 27th October 2020

ಉಪ ಚುನಾವಣೆ: ಆರ್ ಆರ್ ನಗರ ಕ್ಷೇತ್ರದಿಂದ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ.

published on : 14th October 2020

ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ: ಆರ್ ಆರ್ ನಗರಕ್ಕೆ ಮುನಿರತ್ನ, ಶಿರಾಗೆ ರಾಜೇಶ್ ಗೌಡ ಗೆ ಟಿಕೆಟ್

ವಿಧಾನ ಸಭೆ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು  ಘೋಷಣೆ ಮಾಡಿದೆ.ಆರ್ ಆರ್ ನಗರಕ್ಕೆ ಮುನಿರತ್ನಾ ಹಾಗೂ ಶಿರಾ ಕ್ಷೇತ್ರಕ್ಕೆ ರಾಜೇಶ್ ಗೌಡನಿಗೆ ಟಿಕೆಟ್ ಘೋಷಣೆ ಮಾಡಿದೆ.

published on : 13th October 2020

ಹೀಗೆ ಬಂದು ಹಾಗೆ ಹೋಗಿರುವವರನ್ನು ನೋಡಿದ್ದೇನೆ, ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿದೆ: ಎಚ್.ಡಿ. ದೇವೇಗೌಡ

ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ.ಅವರು ಹೀಗೆ ಬಂದು ಹಾಗೆ ಪಕ್ಷವನ್ನು ತೊರೆದು ಹೋಗಿರುವುದನ್ನು ನೋಡಿದ್ದೇನೆ.ಅದೊಂದು ರೀತಿಯ ಹಿಂಸೆಯಾಗಿದೆ.ನಮಗೆ ಆಯಾ ರಾಮ್ ಗಯಾ ರಾಮ್ ರೀತಿಯ ನಾಯಕರು ಬೇಕಾಗಿ ಲ್ಲವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

published on : 11th October 2020

ಕರ್ನಾಟಕ ಉಪ ಚುನಾವಣೆ: ಕೊರೋನಾ ಸೋಂಕಿತರಿಗೂ ಮತದಾನದ ಅವಕಾಶ, ಅಂಚೆ ಮತದ ಮೂಲಕ ಹಕ್ಕು ಚಲಾವಣೆಗೆ ಸಿದ್ಧತೆ!

ಕರ್ನಾಟಕ ಉಪ ಚುನಾವಣೆಯಲ್ಲಿ ಕೊರೋನಾ ಸೋಂಕಿತರಿಗೂ ಮತದಾನದ ಅವಕಾಶ ನೀಡಿರುವ ರಾಜ್ಯ ಚುನಾವಣಾ ಆಯೋಗ ಈ ಸಂಬಂಧ ಸೋಂಕಿತ ಮತದಾರರಿಗಾಗಿ ಅಂಚೆ ಮತದ ಮೂಲಕ ಹಕ್ಕು ಚಲಾವಣೆಗೆ ಸಿದ್ಧತೆ ನಡೆಸಿದೆ.

published on : 10th October 2020

ಉಪ ಚುನಾವಣೆಯಲ್ಲಿ ನಿಮ್ಮ ಪ್ರಶ್ನೆಗಳಿಗೆ ತಕ್ಕ ಉತ್ತರ ಸಿಗಲಿದೆ: ಸಿದ್ದರಾಮಯ್ಯಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು

 ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಟು ಶಬ್ದಗಳಲ್ಲಿ ಖಂಡಿಸಿದ್ದಲ್ಲದೆ ಕಾಂಗ್ರೆಸ್ ಪಕ್ಷ ದ ನಾಯಕರನ್ನು ಗುರಿ ಮಾಡಿಕೊಂಡು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

published on : 5th October 2020