• Tag results for ಕರ್ನಾಟಕ ಸರ್ಕಾರ

ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ, ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ: ಮುಖ್ಯಮಂತ್ರಿ, ಸಚಿವರಿಂದ ಗೌರವ ನಮನ

ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ.

published on : 6th July 2020

ಮಂಗಳೂರು ಗುಡ್ಡ ಕುಸಿತ ಪ್ರಕರಣ; ಇಬ್ಬರು ಮಕ್ಕಳ ಸಾವು, 5 ಲಕ್ಷ ರೂ. ಪರಿಹಾರ

ಮಂಗಳೂರಿನ ಗುರುಪುರದ ಬಳಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

published on : 6th July 2020

ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತು ತನಿಖೆ: ಡಾ. ಕೆ.ಸುಧಾಕರ್

ಕೋವಿಡ್ -19 ಸೋಂಕು ನಿಯಂತ್ರಣದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಮೂಹಕ್ಕೆ ದೋಷಪೂರಿತ ಪಿಪಿಇ ಕಿಟ್ ಹಾಗೂ ಎನ್ -95 ಮಾಸ್ಕ್ ವಿತರಣೆ ಮಾಡಿರುವ ಕುರಿತ ದೂರಿನ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

published on : 4th July 2020

ಕೊರೋನಾ ಮೇಲುಸ್ತುವಾರಿ ಅಧಿಕಾರಿಗಳ ಸಮಿತಿ ರಚನೆ

ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಜಿಲ್ಲಾ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಮೇಲುಸ್ತುವಾರಿ ನೋಡಿಕೊಳ್ಳಲು ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳ ಸಮಿತಿ ರಚಿಸಿದೆ.

published on : 4th July 2020

ವಿವಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಉನ್ನತ ಶಿಕ್ಷಣ ಇಲಾಖೆಯಡಿಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

published on : 3rd July 2020

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ದರಪಟ್ಟಿ ಇಂತಿದೆ

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಚಿಕಿತ್ಸೆಗೆ ಅನುಮತಿ ನೀಡಿತ್ತು. ಇದೀಗ ಅದರ ಅಧಿಕೃತ ದರಪಟ್ಟಿಯನ್ನೂ ಕೂಡ ಬಿಡುಗಡೆ ಮಾಡಿದೆ.

published on : 3rd July 2020

ಅವಧಿ ಮುಗಿದ ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ ಆದೇಶ ಎತ್ತಿ ಹಿಡಿದ ಹೈಕೋರ್ಟ್

ರಾಜ್ಯದಲ್ಲಿ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

published on : 3rd July 2020

ಗುತ್ತಿಗೆ ವೈದ್ಯರ ವೇತನ ಪರಿಷ್ಕರಣೆ, 45 ಸಾವಿರದಿಂದ 60 ಸಾವಿರ ರೂ. ಗಳಿಗೆ ಹೆಚ್ಚಳ

ರಾಜ್ಯದ ಜಿಲ್ಲಾ, ತಾಲೂಕು ಮತ್ತು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರ ವೇತನವನ್ನು 45 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. 

published on : 2nd July 2020

ದೃಢಮನಸ್ಸಿನಿಂದ ಎಸ್ ಸಿ/ ಎಸ್ ಟಿ ಕಾಯ್ದೆ ಅನುಷ್ಠಾನಗೊಳಿಸಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ  1995 ರ  (ದೌರ್ಜನ್ಯ ತಡೆ ಕಾಯ್ದೆ) ನಿಯಮವನ್ನು ಅನುಷ್ಠಾನಗೊಳಿಸುವಂತೆ  ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ

published on : 30th June 2020

ಖಾಸಗಿ ಆಸ್ಪತ್ರೆಗಳ ಶೇ.50 ರಷ್ಟು ಬೆಡ್ ಕೋವಿಡ್-19 ಸೋಂಕಿತರಿಗೆ ಮೀಸಲಿಡಲು ಸರ್ಕಾರ ಆದೇಶ

ರಾಜ್ಯದಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಎಲ್ಲರಿಗೂ ಚಿಕಿತ್ಸೆ ನೀಡುವ ಅಗತ್ಯವಿದೆ.

published on : 24th June 2020

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಹೊಟ್ಟೆ ತುಂಬಿದವರಿಗೇ ಉಣಿಸಹೊರಟಿದೆಯೇ ಸರ್ಕಾರ? 

ಭಾರತ ಕೃಷಿ ಕ್ಷೇತ್ರದಲ್ಲಿ ಸಾಧನೆಗೈಯಲು ಕರ್ನಾಟಕದ ಯೋಗದಾನವೂ ಬಹಳಷ್ಟಿದೆ. ಆದರೆ ಇಂದು ಒಂದೆಡೆ ಬಹುತೇಕ ಜನರು ಕೃಷಿ ಕ್ಷೇತ್ರದಿಂದ ಸೇವಾ ಕ್ಷೇತ್ರಗಳತ್ತ ಹೊರಳಿ ನಗರಕ್ಕೆ ಸೇರಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಲಾಭಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸರ್ಕಾರ ಕೃಷಿಯನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಭೂಸುಧಾರಣಾ

published on : 23rd June 2020

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ: ಇಂದು ಮುಖ್ಯಮಂತ್ರಿ ಅಂಕಿತ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಸರ್ಕಾರ ರಾಜ್ಯದಲ್ಲಿ 518 ಖಾಸಗಿ ಆಸ್ಪತ್ರೆಗಳನ್ನು ಗರುತಿಸಿದ್ದು, ಈ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ​ ದರ ನಿಗದಿಯಾಗಲಿದ್ದು ಈ ದರಕ್ಕೆ ಇಂದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂಕಿತ ಹಾಕುವ ಸಾಧ್ಯತೆಯಿದೆ.

published on : 23rd June 2020

ಕಿತ್ತಗಾನಹಳ್ಳಿ ಕೆರೆಗೆ ಮಾಲಿನ್ಯ: ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಹಸಿರು ನ್ಯಾಯಾಧೀಕರಣ

ಬೆಂಗಳೂರಿನ ಬೊಮ್ಮಸಂದ್ರ ವ್ಯಾಪ್ತಿಯ ಕಿತ್ತಗಾನಹಳ್ಳಿ ಕೆರೆಯ ಮಾಲಿನ್ಯ ತಡೆಗಟ್ಟಲು ವಿಫಲವಾದ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ ಜಿಟಿ) ದಂಡ ವಿಧಿಸಿದೆ. 

published on : 22nd June 2020

ಕೊರೋನಾ ಭಯದ ನಡುವೆಯೇ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆ ಪಾರ್ಕ್ ತೆರೆಯಲು ಸರ್ಕಾರ ಸಮ್ಮತಿ

ಲಾಕ್‌ಡೌನ್‌ ನಿರ್ಬಂಧವನ್ನು ಮತ್ತಷ್ಟು ಸಡಿಲಿಸಿರುವ ರಾಜ್ಯ ಸರ್ಕಾರ, ರಾಜ್ಯಾದ್ಯಂತ ಕಂಟೈನ್‌ಮೆಂಟ್‌ ಪ್ರದೇಶ ಹೊರತುಪಡಿಸಿ ಇತರೆಡೆ ಬೆಳಿಗ್ಗೆ 5ರಿಂದ ರಾತ್ರಿ 9 ಗಂಟೆವರೆಗೆ ಉದ್ಯಾನವನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.

published on : 20th June 2020

ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಿಗೆ ಅಧಿಕಾರ ಹಂಚಿಕೆ: ಮಾರ್ಗಸೂಚಿ ಪ್ರಕಟ

ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶಿಸಿರುವ ಸರ್ಕಾರ ಆಡಳಿತಾಧಿಕಾರಿಗಳಿಗೆ ಅಧಿಕಾರ ಹಂಚಿ ಮಾರ್ಗಸೂಚಿ ಬಿಡುಗಡೆ ಮಾಡಿದೆ‌.

published on : 20th June 2020
1 2 3 4 5 6 >