• Tag results for ಕೃಷಿ ಕಾನೂನು

ಡಿಎಂಕೆ ಅಧಿಕಾರಕ್ಕೆ ಬಂದರೆ ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ಮೊದಲ ನಿರ್ಣಯ ಅಂಗೀಕಾರ: ಸ್ಟಾಲಿನ್

ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಬೆಂಬಲಿಸಿದ್ದಕ್ಕಾಗಿ ಎಐಎಡಿಎಂಕೆ ಮತ್ತು ಪಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ವಿಧಾನಸಭೆಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಮೊದಲು ನಿರ್ಣಯ ಅಂಗೀಕರಿಸಲಿದೆ ಎಂದು ಭರವಸೆ ನೀಡಿದರು.

published on : 29th March 2021

ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತರ ಹೋರಾಟ ಸದ್ದು: ಗ್ರಾಮಿ ವೇದಿಕೆಯಲ್ಲಿ 'ಐ ಸ್ಟ್ಯಾಂಡ್ ವಿತ್ ಫಾರ್ಮರ್ಸ್' ಕೂಗು

ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರೈತರ ಹೋರಾಟ ಸದ್ದು ಮಾಡುತ್ತಿದ್ದು, ಗ್ರಾಮಿ ವೇದಿಕೆಯಲ್ಲಿ ರೈತರ ಹೋರಾಟದ ಪರ ಕೂಗು ಕೇಳಿಬರುತ್ತಿದೆ.

published on : 15th March 2021

ದೆಹಲಿಗೆ ಟ್ರ್ಯಾಕ್ಟರ್ ಪ್ರವೇಶ, ಸಂಸತ್ತಿನಲ್ಲೇ ಮಂಡಿ ತೆರೆಯುತ್ತೇವೆ: ರಾಕೇಶ್ ಟಿಕಾಯತ್

ರಾಷ್ಟ್ರರಾಜಧಾನಿ ದೆಹಲಿಗೆ ಟ್ರಾಕ್ಟರ್ ಗಳನ್ನು ಕೊಂಡೊಯ್ದು ಸಂಸತ್ ಆವರಣದಲ್ಲೇ ಮಂಡಿ ತೆರೆಯುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

published on : 14th March 2021

ಕೃಷಿ ಕಾನೂನುಗಳ ವಿರುದ್ಧ ರಾಜ್ಯದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರೈತ ಮುಖಂಡ ಟಿಕಾಯತ್ ಭಾಗಿ

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳು ಮತ್ತು ವಿದ್ಯುತ್ ವಲಯ ಖಾಸಗೀಕರಣ  ವಿರುದ್ಧದ ಹೋರಾಟವನ್ನು ವಿಸ್ತರಿಸುವ ಭಾಗವಾಗಿ ರೈತ ಪಂಚಾಯತ್ ಸಹಯೋಗದೊಂದಿಗೆ ಬೆಳಗಾವಿ ಸೇರಿದಂತೆ ರಾಜ್ಯದ ಮೂರು ಕಡೆಗಳಲ್ಲಿ ರೈತ ಚಳುವಳಿ ನಡೆಸಲು ಯೋಜಿಸಲಾಗಿದ್ದು, ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ್ ಕಿಸಾನ್ ಮೋರ್ಚಾ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

published on : 13th March 2021

ಕೃಷಿ ಕಾನೂನು ಹಿಂಪಡೆಯುವವರೆಗೆ ಆಮರಣಾಂತ ಉಪವಾಸ: ಭಗತ್ ಸಿಂಗ್ ಸಂಬಂಧಿ

ಕೃಷಿ ಕಾನೂನು ಹಿಂಪಡೆಯುವವರೆಗೆ ಆಮರಣಾಂತ ಉಪವಾಸ ಮಾಡುವುದಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನ ಸಂಬಂಧಿ ಅಭಯ್ ಸಂಧು ಎಚ್ಚರಿಸಿದ್ದಾರೆ. 

published on : 24th February 2021

ದೆಹಲಿ ಕೆಂಪುಕೋಟೆ ಹಿಂಸಾಚಾರ: ಮತ್ತೆ ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಕಳೆದ ಜನವರಿ 26 ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

published on : 23rd February 2021

ಇದೇ ಕಾರಣಕ್ಕೆ ಮೋದಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತಿಲ್ಲ: ರಾಹುಲ್ ಗಾಂಧಿ

ಇಡೀ ವಿಶ್ವ ಭಾರತೀಯ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ನೋಡುತ್ತಿದೆ ಆದರೆ, ಕೇಂದ್ರ ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

published on : 22nd February 2021

ರೈಲ್ ರೋಕೋ: ಪಂಜಾಬ್, ಹರ್ಯಾಣದಲ್ಲಿ ಹಳಿಗಳ ಮೇಲೆ ಕುಳಿತ ರೈತರು, ನಿಲ್ದಾಣದಲ್ಲೇ ನಿಂತ ರೈಲುಗಳು!

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಿದ್ದು, ರೈತರು ಗುರುವಾರ ರೈಲು ತಡೆ ಆರಂಭಿಸಿದ್ದು, ಪರಿಣಾಮ ಪಂಜಾಬ್, ಹರ್ಯಾಣದಲ್ಲಿ ಹಳಿಗಳ ಮೇಲೆ ಕುಳಿತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

published on : 18th February 2021

ಪಂಜಾಬ್ ಸ್ಥಳೀಯ ಸಂಸ್ಧೆ ಚುನಾವಣೆ: ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, 4 ಜಯ, ಮೂರು ಕಡೆ ಮುನ್ನಡೆ

ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೊಸ ಇತಿಹಾಸ ಬರೆದಿದ್ದು, ಒಟ್ಟು 8 ಪುರಸಭೆಗಳ ಪೈಕಿ 4ರಲ್ಲಿ ಜಯಭೇರಿ ಸಾಧಿಸಿ, ಮೂರು ಕಡೆ ಮುನ್ನಡೆ ಕಾಯ್ದುಕೊಂಡಿದೆ.

published on : 17th February 2021

ಪ್ರತಿಭಟನಾ ನಿರತ ರೈತರ ವಿರುದ್ಧ ಎನ್ ಐಎ ಸಮನ್ಸ್ ಜಾರಿ ಮಾಡಿಲ್ಲ: ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ

ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸಮನ್ಸ್ ಜಾರಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದೆ.

published on : 10th February 2021

ಆಂದೋಲನ್ ಜೀವಿ ಹೇಳಿಕೆ: ಚರ್ಚೆಗೆ ನಾವು ಸಿದ್ಧ... ಆದರೆ..; ಪ್ರತಿಭಟನಾ ನಿರತ ರೈತ ಮುಖಂಡರ ಹೇಳಿಕೆ

ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಬನ್ನಿ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟಿರುವ ರೈತ ಸಂಘಟನೆಗಳು ತಾವು ಮಾತುಕತೆಗೆ ಸಿದ್ಧ.. ದಿನಾಂಕ ನಿಗದಿ ಪಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ಉತ್ತರ ನೀಡಿವೆ.

published on : 9th February 2021

ವಿದೇಶಿ ವಿನಾಶಕಾರಿ ಸಿದ್ಧಾಂತದಿಂದ ನಾವು ರಕ್ಷಿಸಿಕೊಳ್ಳಬೇಕಿದೆ; ಎಂಎಸ್‏ಪಿ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ: ಪ್ರಧಾನಿ ಮೋದಿ

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನಿನ ಕುರಿತಂತೆ ಭುಗಿಲೆದ್ದಿರುವ ಪ್ರತಿಭಟನೆ ಕುರಿತು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿದೇಶಿ ವಿನಾಶಕಾರಿ ಸಿದ್ಧಾಂತದಿಂದ ನಾವು ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ.

published on : 8th February 2021

ರಾಷ್ಟ್ರಪತಿಗಳಿಂದ ಅತ್ಯಂತ ಶಕ್ತಿಶಾಲಿ ಭಾಷಣ, ಕೆಲವರ ಅನುಪಸ್ಥಿತಿ ಬಳಿಕವೂ ಅದು ಪರಿಣಾಮ ಬೀರಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಡಿದ್ದ ಭಾಷಣ ಅತ್ಯಂತ ಶಕ್ತಿಶಾಲಿಯಾಗಿತ್ತು ಮತ್ತು ಕೆಲವರ ಅನುಪಸ್ಥಿತಿ ಬಳಿಕವೂ ಅದು ಪರಿಣಾಮ ಬೀರಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

published on : 8th February 2021

'ಚಕ್ಕಾ ಜಾಮ್' ಕುರಿತು ಟಿಕಾಯತ್ ರ ಆತುರ ನಿರ್ಧಾರ: ರೈತ ಮುಖಂಡ ದರ್ಶನ್ ಪಾಲ್

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 'ಚಕ್ಕಾ ಜಾಮ್' ನಡೆಸದಿರಲು ರಾಕೇಶ್ ಟಿಕಾಯತ್ ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.

published on : 7th February 2021

ಹೊಸ ಪ್ರಸ್ತಾಪದೊಂದಿಗೆ ಚರ್ಚೆಗೆ ಬನ್ನಿ: 'ಟ್ರ್ಯಾಕ್ಟರ್ ಕ್ರಾಂತಿ'ಗೆ ಕರೆ ನೀಡಿದ ರಾಕೇಶ್ ಟಿಕಾಯತ್

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಕೇಂದ್ರ ಸರ್ಕಾರ ಹೊಸ ಪ್ರಸ್ತಾಪದೊಂದಿಗೆ ಚರ್ಚೆಗೆ ಬಂದರೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.

published on : 7th February 2021
1 2 3 4 5 6 >