• Tag results for ಕೆಂಪು ಕೋಟೆ

ಕೆಂಪು ಕೋಟೆ ಹಿಂಸಾಚಾರ: ದೆಹಲಿ ಪೊಲೀಸರಿಂದ ಇಬ್ಬರ ಬಂಧನ 

ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಅಪರಾಧ ವಿಭಾಗ ಇಬ್ಬರನ್ನು ಬುಧವಾರ ಬಂಧಿಸಿದೆ.

published on : 10th March 2021

ಗಣರಾಜ್ಯೋತ್ಸವ ದಿನ ಕೆಂಪು ಕೋಟೆ ಗುಂಬಜ್ ಮೇಲೆರಿದ್ದ ವ್ಯಕ್ತಿಯ ಬಂಧನ 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಿಂದು ನಡೆದ ಹಿಂಸಾಚಾರ ಸಂದರ್ಭದಲ್ಲಿ ಐತಿಹಾಸಿಕ ಕೆಂಪು ಕೋಟೆಯ ಗುಂಬಜ್ ಏರಿದ್ದ 24 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

published on : 22nd February 2021

ಗಣರಾಜ್ಯ ದಿನದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 200 ಮಂದಿಯ ಫೋಟೋ ಬಿಡುಗಡೆ

ಗಣರಾಜ್ಯದಿನದಂದು ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ಪೈಕಿ 200 ಮಂದಿಯ ಫೋಟೊಗಳನ್ನು ದೆಹಲಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. 

published on : 20th February 2021

ದೆಹಲಿಯ ಕೆಂಪು ಕೋಟೆ ಹಿಂಸಾಚಾರ: ಕತ್ತಿ ಝಳಪಿಸಿ ಹಿಂಸೆಗೆ ಪ್ರೇರಣೆ ನೀಡಿದ್ದ ಆರೋಪಿ ಮನಿಂದರ್ ಸಿಂಗ್ ಬಂಧನ 

ಕಳೆದ ಜನವರಿ 26ರ ಗಣರಾಜ್ಯೋತ್ಸವ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕೆಂಪು ಕೋಟೆಯಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಖಡ್ಗವನ್ನು ಝಳಪಿಸುತ್ತಾ ಪ್ರತಿಭಟನಾ ನಿರತ ಗುಂಪನ್ನು ಪ್ರಚೋದಿಸಿದ್ದ 30 ವರ್ಷದ ಆರೋಪಿ ಮನಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

published on : 17th February 2021

ಕೆಂಪು ಕೋಟೆ ಹಿಂಸಾಚಾರ ಪ್ರಕರಣ: ನಟ ದೀಪ್ ಸಿಧು ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ

ನವದೆಹಲಿಯ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪಂಜಾಬಿ ನಟ ದೀಪ್ ಸಿಧು ಬಂಧನ ಅವಧಿ ಏಳು ದಿನಗಳವರೆಗೆ ವಿಸ್ತರಣೆಯಾಗಿದೆ.

published on : 16th February 2021

ದೆಹಲಿಯ ಕೆಂಪುಕೋಟೆ ಮೇಲೆ ದಾಂಧಲೆ: ಮುಖ್ಯ ಆರೋಪಿ ನಟ ದೀಪ್ ಸಿಧು ಬಂಧನ 

ದೆಹಲಿಯ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ರೈತರು ಹಿಂಸಾಚಾರ ನಡೆಸಲು ಪ್ರೇರಣೆ ನೀಡಿದ್ದ ಆರೋಪ ಎದುರಿಸುತ್ತಿದ್ದ ನಟ ದೀಪ್ ಸಿಧುವನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

published on : 9th February 2021

ದೆಹಲಿಯ ಕೆಂಪು ಕೋಟೆಗೆ ರೈತರ ಲಗ್ಗೆ ಘಟನೆಯನ್ನು ಅಮೆರಿಕದ ಕ್ಯಾಪಿಟಲ್ ಹಿಲ್ ಹಿಂಸಾಚಾರಕ್ಕೆ ಹೋಲಿಸಿದ ಭಾರತ!

ದೆಹಲಿಯ ಗಡಿಭಾಗದಲ್ಲಿ ಮುಂದುವರಿದಿರುವ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ನೂತನ ಕೃಷಿ ಕಾಯ್ದೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸುಧಾರಿಸಬಹುದು. ಆದರೆ, ಪ್ರತಿಭಟನಾ ಸ್ಥಳಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಿತ್ತುಹಾಕುವ ಮೂಲಕ ನರೇಂದ್ರ ಮೋದಿ ಸರ್ಕಾರ ಪ್ರತಿಭಟನಾಕಾರರ ವಿರುದ್ಧ ದಬ್ಬಾಳಿಕೆ ತೋರಿಸುತ್ತಿದೆ ಎಂದು ಆರೋಪಿಸಿದೆ.

published on : 5th February 2021

ಕೆಂಪು ಕೋಟೆ ಹಿಂಸಾಚಾರ: ನಟ ದೀಪ್ ಸಿಧು ವಿರುದ್ಧ ಎಫ್ಐಆರ್

ದೆಹಲಿ ಪೊಲೀಸರು ಕೆಂಪು ಕೋಟೆ ಬಳಿ ನಡೆದ ರೈತರ ಹಿಂಸಾಚಾರದಲ್ಲಿ ಸಾಮಾಜಿಕ ಕಾರ್ಯಕರ್ತ, ನಟ ದೀಪ್ ಸಿಧು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

published on : 28th January 2021

ರೈತರ ಟ್ರ್ಯಾಕ್ಟರ್ ಪರೇಡ್: ದೆಹಲಿ ಹಿಂಸಾಚಾರ ಬಗ್ಗೆ ಆಯೋಗ ಮಟ್ಟದ ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವನ್ನು ರಚಿಸಿ ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ವಿಧ್ವಂಸಕ ಹಿಂಸಾಚಾರ ಕೃತ್ಯಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಬುಧವಾರ ಅರ್ಜಿ ಸಲ್ಲಿಕೆಯಾಗಿದೆ.

published on : 27th January 2021

ಕೆಂಪು ಕೋಟೆ, ಸಿಂಘು ಗಡಿಭಾಗದಲ್ಲಿ ತೀವ್ರ ಭದ್ರತೆ: ಅಹಿತಕರ ಘಟನೆ ಪುನರಾವರ್ತಿಸದಂತೆ ಮುನ್ನೆಚ್ಚರಿಕೆ

ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರ ಟ್ರ್ಯಾಕ್ಟರ್ ರ್ಯಾಲಿ ರಣರಂಗವಾಗಿ ಮಾರ್ಪಟ್ಟು ರಾಷ್ಟ್ರ ರಾಜಧಾನಿ ದೆಹಲಿಯ ಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ದೆಹಲಿ-ಹರ್ಯಾಣ ಗಡಿಭಾಗದ ಸಿಂಘು ಗಡಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. 

published on : 27th January 2021

ಕೆಂಪು ಕೋಟೆ ಹಿಂಸಾಚಾರ ಆರೋಪ ಹೊತ್ತ ದೀಪ್ ಸಿದು ಬಿಜೆಪಿ ಸಂಸದ ಸನ್ನಿ ಡಿಯೊಲ್ ಪ್ರಚಾರ ಮ್ಯಾನೇಜರ್ ಆಗಿದ್ದ!

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೆರಳಿಸಿ ಯುವಕರನ್ನು ಉದ್ರೇಕಗೊಳಿಸಿ ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಿಖ್ ಧರ್ಮೀಯರ ಧ್ವಜವಾದ ನಿಶನ್ ಸಾಹಿಬ್ ನ್ನು ಹಾರಿಸಿದ್ದಾರೆ ಎಂದು ಪಂಜಾಬಿ ಗಾಯಕ ಹಾಗೂ ನಟ ದೀಪ್ ಸಿದುವನ್ನು ರೈತ ಸಂಘಟನೆಗಳು ಆರೋಪಿಸಿವೆ.

published on : 27th January 2021

ಕೆಂಪು ಕೋಟೆಗೆ ನುಗ್ಗಿದವರು ರೈತರಲ್ಲ, ಉಗ್ರರು: ಸಚಿವ ಬಿಸಿ ಪಾಟೀಲ್

ದೆಹಲಿಯ ಕೆಂಪು ಕೋಟೆಗೆ ನುಗ್ಗಿದವರು ರೈತರಲ್ಲ. ಭಯೋತ್ಪಾಕರು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಅವರು ಮಂಗಳವಾರ ಹೇಳಿದ್ದಾರೆ.

published on : 26th January 2021

ದೆಹಲಿ ರಣರಂಗ: ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ರೈತ ಧ್ವಜ ಹಾರಿಸಿದ ಅನ್ನದಾತರು, ಘರ್ಷಣೆಯಲ್ಲಿ ಓರ್ವ ರೈತ ಸಾವು

ಕೇಂದ್ರ ಸರ್ಕಾರದ ಮೂರು ವಿವಾವಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿಯ ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ಗಣರಾಜ್ಯೋತ್ಸವ ದಿನದಂದು ತಾಳ್ಮೆಗೆಟ್ಟು...

published on : 26th January 2021

ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಇಂದು ಹೇಗಿತ್ತು? 

ಮಾಸ್ಕ್ ಗಳನ್ನು ಹೊಂದಿದ್ದ ಕಿಟ್, ಹ್ಯಾಂಡ್ ಸ್ಯಾನಿಟೈಸರ್ ನ ಸಣ್ಣ ಬಾಟಲ್, ಗ್ಲೌಸ್ ಗಳನ್ನು ಎಲ್ಲಾ ಕುರ್ಚಿಗಳ ಮೇಲೆ ಇಡಲಾಗಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈ ಕಿಟ್ ಗಳ ಮೂಲಕ ಸ್ಪಷ್ಟ ಸೂಚನೆ ನೀಡಲಾಗಿತ್ತು. ಇಂದು ಕೋವಿಡ್-19 ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನವಾದ ಇಂದು ಕಂಡುಬಂದ ದೃಶ್ಯ.

published on : 15th August 2020

ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹೇಗಿರುತ್ತದೆ? 

74ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಎರಡೇ ದಿನ ಬಾಕಿ. ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಇಲ್ಲದಿರುವುದರಿಂದ ಸ್ವಾತಂತ್ರ್ಯ ದಿನಾಚರಣೆ ಕೂಡ ದೇಶಾದ್ಯಂತ ಸರಳವಾಗಿ ನಡೆಯಲಿದೆ.

published on : 13th August 2020
1 2 >