• Tag results for ಕೇಂದ್ರ ಸಚಿವ

ಭಾರತದ ಜಾಗವನ್ನು ಚೀನಾಗೆ ಕೊಟ್ಟಿದ್ದು ಯಾರು ಅಂತ ನಿಮ್ಮ ಅಜ್ಜನನ್ನು ಕೇಳಿ: ರಾಹುಲ್ ಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ

ಭಾರತ-ಚೀನಾ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಭಾರತದ ಪ್ರದೇಶವನ್ನು ಚೀನಾಗೆ ಕೊಟ್ಟವರು ಯಾರು ಎಂಬುದನ್ನು ರಾಹುಲ್ ಗಾಂಧಿ ಅವರ ಅಜ್ಜ (ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು ಕೇಳಬೇಕೆಂದು ಹೇಳಿದ್ದಾರೆ. 

published on : 12th February 2021

ತಿರಸ್ಕೃತ ರಾಜಕಾರಣಿಗಳು, ಬೋಗಸ್ ಬ್ರಿಗೇಡ್ ನಿಂದ ಭಾರತದ ಮಾನಹಾನಿ: ಕೇಂದ್ರ ಸಚಿವ ನಖ್ವಿ

ತಿರಸ್ಕೃತ ರಾಜಕಾರಣಿಗಳು, ಬೋಗಸ್ ಬ್ರಿಗೇಡ್ ನಿಂದ ಭಾರತದ ಮಾನಹಾನಿ ಮಾಡುವ ಕ್ರಿಮಿನಲ್ ಪಿತೂರಿಯಲ್ಲಿ ಶಾಮೀಲಾಗಿದ್ದಾರೆ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. 

published on : 6th February 2021

ಕೆಂಪುಕೋಟೆಗೆ ರೈತರ ಪ್ರವೇಶ ಖಂಡನೀಯ- ಕೇಂದ್ರ ಪ್ರವಾಸೋದ್ಯಮ ಸಚಿವ 

ಐತಿಹಾಸಿಕ ಕೆಂಪು ಕೋಟೆಗೆ ಪ್ರವೇಶಿಸಿ ರೈತರು  ಧ್ವಜ ಹಾರಿಸಿರುವುದನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಲ್ಹಾದ್ ಪಟೇಲ್  ಖಂಡಿಸಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವದ ಘನತೆಗೆ ಮಾಡಿದ ಅಗೌರವ ಎಂದು ಅವರು ಹೇಳಿದ್ದಾರೆ.

published on : 26th January 2021

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ರೈತ ಸಂಘಟನೆಗಳೊಂದಿಗೆ 11ನೇ ಸುತ್ತಿನ ಮಾತುಕತೆ ಆರಂಭ

ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಕೇಂದ್ರ ಸಚಿವರು ರೈತ ಸಂಘಟನೆಗಳೊಂದಿಗೆ ಶುಕ್ರವಾರ 11ನೇ ಸುತ್ತಿನ...

published on : 22nd January 2021

ಗೋವಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್ ನಾಯಕ್: ಉಪ ರಾಷ್ಟ್ರಪತಿ ಭೇಟಿ, ಆರೋಗ್ಯ ವಿಚಾರಿಸಿದ ಪ್ರಧಾನಿ 

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಗೋವಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುರ್ವೇದ, ಯೋಗ, ಯುನಾನಿ, ನ್ಯಾಚುರೋಪಥಿ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರನ್ನು ಶುಕ್ರವಾರ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

published on : 15th January 2021

ಕಾರು ಅಪಘಾತದಲ್ಲಿ ಕೇಂದ್ರ ಸಚಿವರ ಪತ್ನಿ ವಿಜಯಾ ನಾಯಕ್ ನಿಧನ: ಸಿಎಂ ಯಡಿಯೂರಪ್ಪ ಸಂತಾಪ

ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಪಘಾತವಾಗಿ ಸಚಿವರ ಪತ್ನಿ ವಿಜಯಾ ನಾಯಕ್ ಸ್ಥಳದಲ್ಲೇ ಸಾವನ್ನಪ್ಪಿರುವ ಹಿನ್ನೆಲೆ ಸಿಎಂ ಬಿ,ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

published on : 11th January 2021

ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಪಘಾತ, ಸಚಿವರ ಪತ್ನಿ, ಪಿಎ ದುರ್ಮರಣ

ಕೇಂದ್ರ ಸಚಿವ ಶ್ರೀಪಾದ ನಾಯಕ್ ಕಾರು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಸಚಿವರ ಪತ್ನಿಮತ್ತು ಆಪ್ತ ಕಾರ್ಯದರ್ಶಿ ದುರ್ಮರಣಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

published on : 11th January 2021

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ರೈತರನ್ನು ಭೇಟಿ ಮಾಡಿದ ಕೇಂದ್ರ ಸಚಿವರು, ಮಾತುಕತೆಯತ್ತ ಎಲ್ಲರ ಚಿತ್ತ

ಕೇಂದ್ರ ಸರ್ಕಾರ ಜಾರಿಗೊಳಸಿರುವ ಕೃಷಿ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರ 40ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಜತೆಗಿನ 7ನೇ ಸುತ್ತಿನ ಮಾತುಕತೆ ಆರಂಭವಾಗಿದೆ.

published on : 4th January 2021

ಕಬ್ಬಿನ ರಸ ಮತ್ತು ಭತ್ತದಿಂದ ಎಥನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ- ಕೇಂದ್ರ ಸಚಿವ ನಿತಿನ್ ಗಡ್ಕರಿ

ಕೇಂದ್ರ ಸರ್ಕಾರವು ರೈತರಿಗೆ ಅದರಲ್ಲೂ ಕಬ್ಬು ಮತ್ತು ಭತ್ತ ಬೆಳೆಯುವವರ ಹಿತಾಸಕ್ತಿಯನ್ನು ಕಾಪಾಡಲು ಎಥನಾಲ್ ನೀತಿಯನ್ನು ರೂಪಿಸುವುದಾಗಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ, ರಸ್ತೆ ಸಾರಿಗೆ, ಎಂಎಸ್‍ಎಂಇ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

published on : 19th December 2020

'ಆತ್ಮ ನಿರ್ಭರ ಭಾರತ್ ರೊಜ್ ಗಾರ್ ಯೋಜನೆ'ಗೆ 22,810 ಕೋಟಿ ರೂ. ಹಂಚಿಕೆ: ಕೇಂದ್ರ ಸಂಪುಟ ಒಪ್ಪಿಗೆ

ಕೋವಿಡ್ ಹಿನ್ನೆಲೆಯಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಇತ್ತೀಚೆಗೆ ಘೋಷಿಸಲಾಗಿದ್ದ 'ಆತ್ಮ ನಿರ್ಭರ ಭಾರತ್ ರೊಜ್ ಗಾರ್ ಯೋಜನೆ'ಗೆ ಕೇಂದ್ರ ಸರ್ಕಾರ ಹಣವನ್ನು ಹಂಚಿಕೆ ಮಾಡಿದೆ. 

published on : 9th December 2020

'ದೆಹಲಿ ಚಲೋ' ಪ್ರತಿಭಟನೆ ತೀವ್ರ ಸ್ವರೂಪಕ್ಕೆ: 5ನೇ ಸುತ್ತಿನ ಮಾತುಕತೆ ಹಿನ್ನೆಲೆ ಕೇಂದ್ರ ಸಚಿವರಿಂದ ಪ್ರಧಾನಿ ಮೋದಿ ಭೇಟಿ

ಕೃಷಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿದರೂ, ತಮ್ಮ ಪಟ್ಟು ಬಿಡದೆ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರೈತರೊಂದಿಗೆ 5ನೇ ಸುತ್ತಿನ ಮಾತುಕತೆ ನಡೆಯಲಿದೆ. 

published on : 5th December 2020

ಮಹಾರಾಷ್ಟ್ರ: ಮಾಜಿ ಕೇಂದ್ರ ಸಚಿವ ಜಯಸಿಂಗ್ ರಾವ್ ಗಾಯಕ್ವಾಡ್ ಬಿಜೆಪಿಗೆ ರಾಜೀನಾಮೆ

ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ಜಯಸಿಂಗ್ ರಾವ್ ಗಾಯಕ್ ವಾಡ್ ಪಾಟೀಲ್  ಮಂಗಳವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

published on : 17th November 2020

‘ಗೋ ಕೊರೋನಾ ಗೋ’ ಎಂದಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆಗೆ ಕೋವಿಡ್-19 ಪಾಸಿಟಿವ್

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರಿಗೆ ಮಂಗಳವಾರ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಬಾಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

published on : 27th October 2020

ಮಾಜಿ ಕೇಂದ್ರ ಸಚಿವ ರಶೀದ್ ಮಸೂದ್ ನಿಧನ

ಹಿರಿಯ ರಾಜಕಾರಣಿ, ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ  ಖಾಜಿ ರಶೀದ್ ಮಸೂದ್(73) ನಿಧನ ಹೊಂದಿದ್ದಾರೆ.

published on : 5th October 2020

ಕೃಷಿ ಮಸೂದೆ ವಿರೋಧಿಸಿ ಮೋದಿ ಸಂಪುಟದಿಂದ ಹೊರಬಂದ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ 

ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದ್ದ ಹೊಸ ಕೃಷಿ ಮಸೂದೆಗೆ ಪಂಜಾಬ್ ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪರಿಣಾಮ ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ. 

published on : 17th September 2020
1 2 >