• Tag results for ಕೋವಿಡ್ 19

ಏಷ್ಯಾ ದೇಶಗಳು ದೀರ್ಘಕಾಲದವರೆಗೆ ಕೊರೋನಾ ಮಹಾಮಾರಿ‌ ವಿರುದ್ಧ ಹೋರಾಡಬೇಕು; ಡಬ್ಲ್ಯುಎಚ್‌ಒ ಎಚ್ಚರಿಕೆ

ಕಳೆದ ಕೆಲ ದಿನಗಳಿಂದ ಕೋವಿಡ್‌ ಪ್ರಕರಣಗಳ ಏರಿಕೆ ಗಮನಿಸಿದರೆ ಅತಿ ಹೆಚ್ಚು ಜನಸಂಖ್ಯೆಯಿರುವ ವಿಶೇಷವಾಗಿ ಏಷಿಯಾ ದೇಶಗಳಲ್ಲಿ ಸಾಂಕ್ರಮಿಕದ ಹೋರಾಟ ದೀರ್ಘಕಾಲಿಕವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಭಿಪ್ರಾಯಪಟ್ಟಿದೆ.

published on : 2nd August 2020

ನಿಲ್ಲದ ಕೊರೋನಾರ್ಭಟ: ರಾಜ್ಯದಲ್ಲಿ ಇಂದು 5,532 ಸೋಂಕು ದೃಢ, ಬೆಂಗಳೂರಿನಲ್ಲಿ 2,105 ಸೋಂಕು, 4077 ಡಿಸ್ಚಾರ್ಜ್!

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, ಭಾನುವಾರ 5,532 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿಕೆಯಾಗಿದೆ.

published on : 2nd August 2020

ಪ್ರತಿ ಗಂಟೆಗೆ 30 ಸಾವಿರ ಸೀಸೆ ಕೊರೋನಾ ಲಸಿಕೆ ಉತ್ಪಾದಿಸುತ್ತೇವೆ: ಸೀರಮ್ ಸಿಇಓ ಪೂನಾವಾಲಾ

ಮಹಾಮಾರಿ ಕೊರೋನಾಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಜಗತ್ತಿನಾ ಹಲವು ಫಾರ್ಮಾ ಸಂಸ್ಥೆಗಳು ಲಸಿಕೆ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಇದೇ ವೇಳೆ ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನೆಕಾ ಲಸಿಕೆ ಕಂಡು ಹಿಡಿಯುವಲ್ಲಿ ಒಂದು ಹೆಜ್ಜೆ ಮುಂದಿದೆ. 

published on : 2nd August 2020

ಕೊರೋನಾ ಆರ್ಭಟಕ್ಕೆ ಕರ್ನಾಟಕ ತತ್ತರ: ಇಂದು 98 ಬಲಿ, ಬೆಂಗಳೂರಿನಲ್ಲಿ 1,852 ಸೇರಿ 5,172 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, ಶನಿವಾರ 5,172 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ.

published on : 1st August 2020

ದಕ್ಷಿಣ ಕನ್ನಡದಲ್ಲಿ ಕೋವಿಡ್ ಹೆಚ್ಚಳ: ಗ್ರಾಮ ಪಂಚಾಯತಿ ಮಟ್ಟದ ತಂಡಗಳಿಗೆ ತರಬೇತಿ ನೀಡಲು ವೈದ್ಯರ ಕಾರ್ಯಪಡೆ ರಚನೆ

 ದಕ್ಷಿಣ ಕನ್ನಡದಲ್ಲಿ ಕೋವಿಡ್ ಸಾವಿನ ಪ್ರಮಾಣ ದಿನದಿನಕ್ಕೆ ಹೆಚ್ಚಾಗಿತ್ತಿದ್ದು ಇದಕ್ಕೆ  ಸಂಬಂಧಿಸಿದಂತೆ, ವಾರ್ಡ್ ಮತ್ತು ಗ್ರಾಮ ಪಂಚಾಯತ್ ಕಾರ್ಯಪಡೆ ಸದಸ್ಯರಿಗೆ ಆನ್‌ಲೈನ್ ತರಬೇತಿ ನೀಡಲು ವೈದ್ಯರನ್ನು ಒಳಗೊಂಡ ಕಾರ್ಯಪಡೆ ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

published on : 1st August 2020

ಐಪಿಎಲ್ ಪಂದ್ಯಗಳಿಗೆ ಶೇ. 30-50ರಷ್ಟು ಕ್ರೀಡಾಂಗಣ ಭರ್ತಿಗೆ ಚಿಂತನೆ: ಎಮಿರೇಟ್ಸ್ ಕ್ರಿಕೆಟ್ ಮಂಡಳಿ

ಕೊರೋನಾ ಮಹಾಮಾರಿ ಕಾಲದಲ್ಲೇ ಯುನೈಟೆಡ್ ಅರಬ್ ಎಮಿರೆಟ್ಸ್(ಯುಎಇ)ನಲ್ಲಿ ಐಪಿಎಲ್ 2020 ಪಂದ್ಯಾವಳಿ ನಡೆಯಲಿದ್ದು ಶೇ. 30-50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ. 

published on : 31st July 2020

ಕೊರೋನಾ ಸೋಂಕಿತ ವಕೀಲರಿಗೆ 50 ಸಾವಿರ ರೂ. ಆರ್ಥಿಕ ನೆರವು, 1 ಲಕ್ಷ ರೂ. ವಿಮಾ ಸೌಲಭ್ಯ

ಕೊರೋನಾ ಸೋಂಕು ನಿಯಂತ್ರಣದ ಜತೆಗೆ ಸಕಾರಾತ್ಮಕ ರೀತಿಯಲ್ಲಿ ಆತ್ಮ ಸ್ಥೈರ್ಯ ತುಂಬುವ ಉದ್ದೇಶದಿಂದ ಮುಂದಡಿ ಇಟ್ಟಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೋವಿಡ್ ಸೊಂಕಿಗೆ ಒಳಗಾಗಿರುವ ವಕೀಲರಿಗೆ 50 ಸಾವಿರ ರೂ ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ. 

published on : 31st July 2020

ಕೋವಿಡ್ ಸೋಂಕಿಗೆ ತುತ್ತಾದ ಜಗತ್ತಿನ ಮೊದಲ ನಾಯಿ ಮೃತ್ಯು

  ಅಮೆರಿಕಾದಲ್ಲಿನ ಕೋವಿಡ್ 19 ಸೋಂಕು ದೃಢ ಪಟ್ಟಿದ್ದ ಜರ್ಮನ್ ಷಫರ್ಡ್ ನಾಯಿಯೊಂದು ನ್ಯೂಯಾರ್ಕ್ ನಲ್ಲಿ ಮೃತಪಟ್ಟಿದೆ.

published on : 31st July 2020

ಮಹಾಮಾರಿ ಕೋವಿಡ್ ಸೋಂಕು ಮುಕ್ತವಾಗಿಯೇ ಉಳಿದಿರುವ ಉತ್ತರ ಕೊರಿಯಾ

ಉತ್ತರಕೊರಿಯದಲ್ಲಿ ಯಾವುದೇ ಕೋವಿಡ್‌ ಪ್ರಕರಣಗಳು  ವರದಿಯಾಗಿಲ್ಲ ಎಂದು ಆಡಳಿತಾರೂಢ ಪಕ್ಷದ ಅಧಿಕೃತ ಪತ್ರಿಕೆಯಾದ ರೋಡೋಂಗ್‌ ಸಿನ್ಮುನ್‌  ವರದಿ ಮಾಡಿದೆ.

published on : 30th July 2020

ಏಪ್ರಿಲ್ ನಲ್ಲಿ 82 ಲಕ್ಷ ಚಂದಾದಾರರನ್ನು ಕಳೆದುಕೊಂಡ ಟೆಲಿಕಾಂ ಸಂಸ್ಥೆಗಳು!

ಏಪ್ರಿಲ್ ನಲ್ಲಿ ಸಂಪೂರ್ಣ ಲಾಕ್ ಡೌನ್ ಸಮಯದಲ್ಲಿ ಟೆಲಿಕಾಂ ಉದ್ಯಮವು 82 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.

published on : 29th July 2020

ಕೋವಿಡ್ ಸಂಕಟ ಕಾಲದಲ್ಲಿ ಮಾದರಿ ಕಾರ್ಯ: ದೆಹಲಿಯ ಮೊದಲ ಪ್ಲಾಸ್ಮಾದಾನಿಯಿಂದ ಏಳನೇ ಬಾರಿ ಪ್ಲಾಸ್ಮಾ ದೇಣಿಗೆ

ಇತರರೂ ತಾವು ಮುಂದೆ ಬಂದು ಜೀವಗಳನ್ನು ಉಳಿಸಲು ನಾನು ಆದರ್ಶಪ್ರಾಯನಾಗಿರಲು ಬಯಸುತ್ತೇನೆ ... ನಾನು ಇದನ್ನು ಮಾಡಬೇಕೆಂದು ಬಯಸಿರುವುದ್ ದೇವರ ಚಿತ್ತವಾಗಿರಬಹುದು" ಎಂದು 36 ವರ್ಷದ ತಬ್ರೇಜ್ ಖಾನ್ ಹೇಳಿದ್ದಾರೆ. ತಬ್ರೇಜ್ ತಮ್ಮ ಪ್ಲಾಸ್ಮಾಗಳನ್ನು ಏಳನೇ ಬಾರ್ಗೆ ದಾನ ಮಾಡಲು ನಿರ್ಧರಿಸಿದ್ದಾರೆ

published on : 29th July 2020

ಕರ್ನಾಟಕದಲ್ಲಿ ಕೊರೋನಾರ್ಭಟ: ಇಂದು ಬೆಂಗಳೂರಿನಲ್ಲಿ 1898, ರಾಜ್ಯದಲ್ಲಿ 5536 ಕೇಸ್ ಪತ್ತೆ, 2,819 ಮಂದಿ ಡಿಸ್ಚಾರ್ಜ್!

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಕಳೆದ ಐದು ದಿನಗಳಿಂದ ದಿನವೊಂದರಲ್ಲಿ ಐದು ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆಯಾಗಿದೆ.  

published on : 28th July 2020

ಕೆ.ಆರ್ ಪೇಟೆಯಲ್ಲಿ ಕೊರೋನಾ ಮಹಾಮಾರಿಗೆ ವೈದ್ಯನ ಸಾವು

ಕೆ.ಆರ್. ಪೇಟೆ ಪಟ್ಟಣದ ಪ್ರಸಿದ್ದ ದುರ್ಗಾಭವನ್ ವೃತ್ತದ ವಾತ್ಸಲ್ಯ ಕ್ಲಿನಿಕ್ ವೈದ್ಯರಾದ ಡಾ. ಎ.ಎಸ್. ಪ್ರಕಾಶ್ ಅವರು ಕೊರೋನಾ ಸೋಂಕಿನಿಂದಾಗಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. 

published on : 28th July 2020

ಆಪ್ತ ಸಿಬ್ಬಂದಿಗೆ ಕೊರೋನಾ: ಸಹಕಾರ ಸಚಿವ ಸೋಮಶೇಖರ್ ಹೋಮ್ ಕ್ವಾರಂಟೈನ್

ತಮ್ಮ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಆಪ್ತ ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಸಹಕಾರ ಸಚಿವ, ಮೈಸೂರು ಜಿಲ್ಲಾ ಉಸ್ತುವಾರಿ  ಸಚಿವ ಎಸ್.ಟಿ. ಸೋಮಶೇಖರ್ ಹೋಮ್ ಕ್ವಾರೆಂಟೀನ್​​ಗೆ ಒಳಗಾಗಿದ್ದಾರೆ.

published on : 28th July 2020

ಜುಲೈ 2021ರವರೆಗೂ ಮನೆಯಿಂದಲೇ ಕೆಲಸ ಮಾಡಿ: ಉದ್ಯೋಗಿಗಳಿಗೆ ಗೂಗಲ್ ನಿರ್ದೇಶನ

ವಿಶ್ವದ ಅತ್ಯಂತ ವಿಶ್ವಾಸಾರ್ಹ ಇಂಟರ್ನೆಟ್ ಸರ್ಚ್ ಎಂಜಿನ್ ಸಂಸ್ಥೆ  ಗೂಗಲ್ ತನ್ನ 200,000 ಉದ್ಯೋಗಿಗಳು ಮತ್ತು ಗುತ್ತಿಗೆದಾರರು 2021 ಜೂನ್ ವರೆವಿಗೂ  ಮನೆಯಿಂದ ಕೆಲಸ ಮಾಡಬೇಕೆಂದು ನಿರ್ದೇಶಿಸಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ತಮ್ಮ ಸಂಸ್ಥೆಯ ಉದ್ಯೋಗಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಸ್ಥೆ ಈ ಮಹತ್ವದ ತೀರ್ಮಾನಕ್ಕೆ ಬಂದಿದೆ.  

published on : 28th July 2020
1 2 3 4 5 6 >