• Tag results for ಜೆಎನ್ ಯು

ಜೆಎನ್ ಯು, ಜಾಮಿಯಾ ವಿವಿಗಳಲ್ಲಿ ಪಶ್ಚಿಮ ಉತ್ತರ ಪ್ರದೇಶದವರಿಗೆ ಶೇ. 10 ರಷ್ಟು ಮೀಸಲಾತಿ ಬೇಕು-ಕೇಂದ್ರ ಸಚಿವ

ಪಶ್ಚಿಮ ಉತ್ತರ ಪ್ರದೇಶದ ಅಭ್ಯರ್ಥಿಗಳಿಗೆ ಜವಹರ್ ಲಾಲ್ ನೆಹರು ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಶೇಕಡಾ 10 ರಷ್ಟು ಮೀಸಲಾತಿ ನೀಡಿದರೆ ಯಾರೂ ಕೂಡಾ ರಾಷ್ಟ್ರ ವಿರೋಧಿ ಘೋಷಣೆ ಕೂಗುವುದಿಲ್ಲ ಎಂದು ಕೇಂದ್ರ ಸಚಿವ ಸಂಜೀವ್ ಬಾಲ್ಯನ್ ಹೇಳಿದ್ದಾರೆ.

published on : 23rd January 2020

ಜೆಎನ್ ಯು ಆಡಳಿತ ಮಂಡಳಿಯಿಂದ ತಾರತಮ್ಯ: ಎಸ್ ಸಿ, ಎಸ್ ಟಿ ಶಿಕ್ಷಕರ ಆರೋಪ

ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ದುರ್ಬಲ ವರ್ಗದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಿರುದ್ಧ ಆಡಳಿತ ಮಂಡಳಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿಶ್ವವಿದ್ಯಾಲಯದ ಅಧ್ಯಾಪಕರ ನಿಯೋಗವೊಂದು ಆರೋಪಿಸಿದೆ

published on : 18th January 2020

ನಾನಂತೂ ತುಕಡೆ ಗ್ಯಾಂಗ್ ಜೊತೆ ನಿಲ್ಲಲ್ಲ: ದೀಪಿಕಾ ಜೆಎನ್ ಯು ಭೇಟಿ ಬಗ್ಗೆ ಕಂಗನಾ ಪ್ರತಿಕ್ರಿಯೆ

ಜೆಎನ್​ಯು ಹಿಂಸಾಚಾರ ಘಟನೆ ಬೆನ್ನಲ್ಲೇ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಕರಣ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ಧಾರೆ.

published on : 17th January 2020

ಜೆಎನ್ ಯು ಹಿಂಸಾಚಾರ: ಡೇಟಾ ಸಂರಕ್ಷಿಸುವ ಬಗ್ಗೆ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದ ಕೋರ್ಟ್ 

ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಡೇಟಾ ಸಂರಕ್ಷಣೆ ಕುರಿತು ದೆಹಲಿ ಹೈಕೋರ್ಟ್ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ. 

published on : 13th January 2020

ಜೆಎನ್ ಯು ದಾಳಿ: ಮುಸುಕುದಾರಿ ಮಹಿಳೆಯನ್ನು ಗುರುತಿಸಿದ ಪೊಲೀಸರು

ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ನಡೆದ ಹಿಂಸಾಚಾರದ ವಿಡಿಯೋದಲ್ಲಿದ್ದ  ಮುಸುಕುದಾರಿ ಮಹಿಳೆಯನ್ನು ವಿಶೇಷ ತನಿಖಾ ತಂಡವೊಂದು ಗುರುತಿಸಿದೆ. ವಿಚಾರಣೆ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಆಕೆಗೆ ನೋಟಿಸ್ ಕಳುಹಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

published on : 13th January 2020

ಜೆಎನ್ ಯು ದಾಳಿ: ಉಪ ಕುಲಪತಿಯೇ ಮಾಸ್ಟರ್ ಮೈಂಡ್- ಕಾಂಗ್ರೆಸ್ ಸಮಿತಿ ವರದಿ

ದೆಹಲಿಯ ಜವಹರ್ ಲಾಲ್ ನೆಹರು ವಿವಿಯ ಆವರಣದಲ್ಲಿ ನಡೆದ ಹಿಂಸಾಚಾರದ ಹಿಂದೆ ಅದರ ಉಪಕುಲಪತಿಯ ಕೈವಾಡವಿದೆ ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅನುಮಾನ ವ್ಯಕ್ತಪಡಿಸಿದೆ

published on : 12th January 2020

ಜೆಎನ್ ಯು ಹಿಂಸಾಚಾರ:ಮತ್ತೆ ಏಳು ಮಂದಿ ಶಂಕಿತರನ್ನು ಗುರುತಿಸಿದ ಎಸ್ ಐಟಿ 

ಕಳೆದ ಜನವರಿ 5ರಂದು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಮತ್ತೆ ಏಳು ಮಂದಿಯನ್ನು ಗುರುತಿಸಿದೆ. 

published on : 12th January 2020

ಜೆಎನ್ ಯು ಭೇಟಿ ದೇಶ ಕಾಳಜಿಯೊ, ದೇಶ ಒಡೆಯಲೋ?: ದೀಪಿಕಾ ಪಡುಕೋಣೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶ್ನೆ 

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ನಿಲುವೇನು, ದೇಶದ ಹಿತಾಸಕ್ತಿಯೇ  ಅಥವಾ ದೇಶ ವಿಭಜನಯೇ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ.

published on : 12th January 2020

ಜೆಎನ್ ಯು ಹಿಂಸಾಚಾರ: 9 ವಿದ್ಯಾರ್ಥಿಗಳಿಗೆ ನೊಟೀಸ್ ಜಾರಿ ಮಾಡಿದ ದೆಹಲಿ ಪೊಲೀಸ್ ಎಸ್ಐಟಿ, ನಾಳೆ ವಿಚಾರಣೆ  

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ 5ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ 9 ವಿದ್ಯಾರ್ಥಿಗಳಿಗೆ ನೊಟೀಸ್ ಜಾರಿ ಮಾಡಿದೆ. ಶಂಕಿತರನ್ನು ನಾಳೆ ವಿಚಾರಣೆಗೆ ದೆಹಲಿ ಪೊಲೀಸರು ಕರೆದಿದ್ದಾರೆ.

published on : 12th January 2020

ಜೆಎನ್ ಯು ಹಿಂಸಾಚಾರ: ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತು ಬಹಿರಂಗ 

ಜೆಎನ್ ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿಯ ವಿಶೇಷ ತನಿಖಾ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತನ್ನು ಪತ್ತೆ ಹಚ್ಚಿದೆ. 

published on : 11th January 2020

ಜೆಎನ್ ಯು ಹಿಂಸಾಚಾರ: ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ರಘುರಾಮ್ ರಾಜನ್

ದೆಹಲಿಯ ಪ್ರತಿಷ್ಠಿತ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಕಳೆದ ಭಾನುವಾರ ನಡೆದ ಗೂಂಡಾ ದಾಳಿ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ...

published on : 10th January 2020

ಜೆಎನ್ ಯು ಹಿಂಸಾಚಾರ: ಡಾಟಾ, ಸಿಸಿಟಿವಿ ಫುಟೇಜ್, ಸಾಕ್ಷ್ಯಗಳ ಸಂರಕ್ಷಿಸಲು ಜೆಎನ್ ಯು ಪ್ರಾಧ್ಯಾಪಕರಿಂದ ಪಿಐಎಲ್ 

ಜ.೦5 ರಂದು ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿಗಳು, ಡಾಟಾ ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಿ ವಿವಿಯ 3 ಪ್ರಾಧ್ಯಾಪಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

published on : 10th January 2020

ವಿದ್ಯಾರ್ಥಿಗಳು-ಆಡಳಿತ ಮಂಡಳಿ ಭಿನ್ನಾಭಿಪ್ರಾಯ ಕೊನೆಗಾಣಿಸಲು ಜೆಎನ್ ಯು ಉಪಕುಲಪತಿಗಳಿಗೆ ಎಚ್ಚರಿಕೆ! 

ಜೆಎನ್ ಯು ವಿದ್ಯಾರ್ಥಿಗಳು ಹಾಗೂ ಆಡಳಿತಮಂಡಳಿ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಂತಿಮ ಎಚ್ಚರಿಕೆ ವಿಧಿಸಿದೆ. 

published on : 10th January 2020

'ಜೆಎನ್‌ಯು ದಾಳಿ ಪ್ರಾಯೋಜಿತ ಗೂಂಡಾಗಿರಿ: ಎಚ್ ಆರ್ ಡಿ, ಗೃಹ ಇಲಾಖೆ ನೇರ ಹೊಣೆ'

ಜೆಎನ್‌ಯು ನಡೆದ ದಾಳಿ ಪ್ರಾಯೋಜಿತ ಗೂಂಡಾಗಿರಿ. ಗೃಹ ಸಚಿವ ಅಮಿತ್‌ ಶಾ, ಎಚ್‌ಆರ್‌ಡಿ ಸಚಿವ ರಮೇಶ್‌ ಪೋಖ್ರಿಯಾಲ್‌ ಅವರು ದಾಳಿಯ ಹೊಣೆ ಹೊರಬೇಕು. ದಾಳಿಯಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

published on : 10th January 2020

ಜೆಎನ್ ಯು ಹಿಂಸಾಚಾರ ರಾಷ್ಟ್ರೀಯ ಸಮಸ್ಯೆಯಲ್ಲ, ಕಾಲೇಜುಗಳಲ್ಲಿ ಗ್ಯಾಂಗ್ ವಾರ್ ಗಳು ಸಾಮಾನ್ಯ: ಕಂಗನಾ ರಾನಾವತ್ 

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ರಾತ್ರಿ ವೇಳೆ ಮುಸುಕುಧಾರಿಗಳು ಬಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಕಂಗನಾ ರಾನಾವತ್, ಇದನ್ನು ಒಂದು ರಾಷ್ಟ್ರಮಟ್ಟದ ಸುದ್ದಿ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. 

published on : 10th January 2020
1 2 3 4 >