• Tag results for ಡಿಜೆ ಹಳ್ಳಿ

ಡಿಜೆ ಹಳ್ಳಿ ಗಲಭೆ ಪ್ರಕರಣ: ಸಂಘ ಪರಿವಾರದ ಒತ್ತಡಕ್ಕೆ ಮಣಿದು ಎನ್ಐಎ ಚಾರ್ಜ್'ಶೀಟ್ ಸಲ್ಲಿಸಿದೆ-ಎಸ್'ಡಿಪಿಐ ಆರೋಪ

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಂಘ ಪರಿವಾರದ ಒತ್ತಡಕ್ಕೆ ಮಣಿದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಚಾರ್ಜ್'ಶೀಟ್ ಸಲ್ಲಿಸಿದೆ ಎಂದು ಎಸ್'ಡಿಪಿಐ ಆರೋಪಿಸಿದೆ.

published on : 27th February 2021

ಡಿಜೆ ಹಳ್ಳಿ ಗಲಭೆ ಪ್ರಕರಣ: ಆಸ್ತಿ ನಷ್ಟ ಕುರಿತು ಮೂವರಿಂದ ಮಾತ್ರ ಅರ್ಜಿ ಸಲ್ಲಿಕೆ

ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಪಾಸ್ತಿ ನಷ್ಟ ಆದ ಮೂವರು ಮಾತ್ರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆಂದು ಪ್ರಕರಣ ಸಂಬಂಧ ನೇಮಕವಾಗಿರುವ ಕ್ಲೈಮ್ ಕಮಿಷನರ್ ನ್ಯಾಯಮೂರ್ತಿ ಹೆಚ್.ಎಸ್.ಕೆಂಪಣ್ಣ ಅವರು ಹೇಳಿದ್ದಾರೆ.

published on : 20th February 2021

ಡಿಜೆ ಹಳ್ಳಿ ಹಿಂಸಾಚಾರ: ಹಾನಿಗೆ ಸಂಬಂಧಿಸಿದ ವಿಡಿಯೋ ನೀಡುವಂತೆ ಸಾರ್ವಜನಿಕರಿಗೆ ಸರ್ಕಾರ ಮನವಿ

2020 ರ ಆಗಸ್ಟ್ 11 ರಂದು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರ ಘಟನೆಯಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ ಎಂದು ತೋರಿಸುವ ಆಡಿಯೋ, ವಿಡಿಯೋ ಅಥವಾ ಇತರೆ ಧ್ವನಿಮುದ್ರಣಗಳನ್ನು ನೀಡುವಂತೆ ಸಾರ್ವಜನಿಕರಿಗೆ ಸರ್ಕಾರ ಮನವಿ ಮಾಡಿಕೊಂಡಿದೆ.

published on : 30th January 2021

ಡಿಜೆ ಹಳ್ಳಿ ಗಲಭೆ ಪ್ರಕರಣ: ಎಸ್'ಡಿಪಿಐ ವಿರುದ್ಧ ಸರ್ಚ್ ವಾರೆಂಟ್ ನಿರ್ಧಾರ ಎತ್ತಿಹಿಡಿದ ಹೈಕೋರ್ಟ್

ಡಿಜೆ.ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಎಸ್'ಡಿಪಿಐಗೆ ಜಾರಿ ಮಾಡಲಾಗಿರುವ ಸರ್ಚ್ ವಾರೆಂಟ್ ನಿರ್ಧಾರವನ್ನು ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ. 

published on : 21st January 2021

ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಗಲಭೆ ಪ್ರಕರಣ: ಕ್ಲೇಮ್ ಕಮಿಷನ್'ಗೆ ಸೌಲಭ್ಯ ನೀಡದ ಸರ್ಕಾರದ ವಿರುದ್ಧ ಹೈಕೋರ್ಟ್ ಬೇಸರ

ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಗಲಭೆ ವೇಳೆ ಸಂಭವಿಸಿದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡಿ ತಪ್ಪಿತಸ್ಥರ ಹೊಣೆಗಾರಿಕೆ ನಿರ್ಧರಿಸಲು ನೇಮಕಗೊಂಡಿರುವ ಕ್ಲೇಮ್ ಕಮಿಷನ್'ಗೆ ಆಗತ್ಯ ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಒದಗಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

published on : 12th January 2021

ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್ ಸಂಪತ್ ರಾಜ್ ಜಾಮೀನು ಅರ್ಜಿ ವಿಚಾರಣೆ ಜನವರಿಗೆ ಮುಂದೂಡಿಕೆ

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಮೇಯರ್ ಸಂಪತ್ ರಾಜ್ ಅವರ ಜಾಮೀನು ಅರ್ಜಿ ವಿಚಾರಣೆ 2021ರ ಜನವರಿ ತಿಂಗಳಿಗೆ ಮುಂದೂಡಿಕೆ ಆಗಿದೆ.  

published on : 21st December 2020

ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಜಾಕಿರ್ ಗೆ ಡಿಸೆಂಬರ್ 16ರವರೆಗೆ ನ್ಯಾಯಾಂಗ ಬಂಧನ

ಡಿಜೆ ಹಳ್ಳಿ ಬೆಂಕಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬಂಧಿಸಿರುವ ಮಾಜಿ ಕಾರ್ಪೊರೇಟರ್ ರಾಕಿಬ್ ಜಾಕೀರ್ ಅವರಿಗೆ ಡಿಸೆಂಬರ್ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಅದೇಶಿಸಿದೆ. 

published on : 3rd December 2020

ಸಂಪತ್ ರಾಜ್ ಬಂಧನದ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆ: ಅಖಂಡ ಶ್ರೀನಿವಾಸ ಮೂರ್ತಿ

ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ ಶಿಕ್ಷೆಯಾಗಬೇಕು. ಸಂಪತ್ ರಾಜ್'ರನ್ನು ಬಂಧನಕ್ಕೊಳಪಡಿಸುವ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಹೇಳಿದ್ದಾರೆ. 

published on : 17th November 2020

ಸಂಪತ್ ರಾಜ್ ನಾಪತ್ತೆ ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು

ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಸಿಬಿ ಪೊಲೀಸರು ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

published on : 2nd November 2020

ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ವಿಶೇಷ ತಂಡ ರಚನೆ, ಆಸ್ಪತ್ರೆಗೆ ಸಿಸಿಬಿ ನೋಟಿಸ್

ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಬಿಗಿಗೊಳಿಸಿದ್ದು, ಈ ಸಂಬಂಧ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ.

published on : 31st October 2020

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ: ನವೀನ್ ಗೆ ಕೊನೆಗೂ ಜಾಮೀನು

ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಬಂಧನಕ್ಕೀಡಾಗಿದ್ದ ನವೀನ್ ಗೆ ಕೊನೆಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

published on : 22nd October 2020

ಡಿಜೆ ಹಳ್ಳಿ ಗಲಭೆ ಪ್ರಕರಣ: ಆಟೋ ಚಾಲಕನ ಬಂಧಿಸಿದ ಎನ್ಐಎ

ಡಿಜೆ ಹಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದೆ.

published on : 22nd October 2020

ಡಿಜೆ ಹಳ್ಳಿ ಗಲಭೆ ಪ್ರಕರಣ: ಪೊಲೀಸರಿಗೆ ಸಹಾಯ ಮಾಡುವ ಸಲುವಾಗಿ ನಮ್ಮನ್ನು ಸ್ಥಳಕ್ಕೆ ಕರೆಯಲಾಗಿತ್ತು- ಎನ್ಐಎಗೆ ಶಾಸಕರ ಹೇಳಿಕೆ

ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ನನ್ನನ್ನು ಕರೆದಿದ್ದು ಅಚ್ಚರಿ ಮೂಡಿಸಿದೆ. ಡಿಜೆ ಹಳ್ಳಿ ಗಲಭೆ ಸ್ಥಳಕ್ಕೆ ಭೇಟಿ ನೀಡಿದ್ದೆವು ಎಂಬ ಕಾರಣಕ್ಕೆ ಕರೆದಿದ್ದರು.

published on : 16th October 2020

ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಲ್ಲಿಸಲಾಗಿರುವ ಚಾರ್ಜ್'ಶೀಟ್ ಹಿಂದೆ ರಾಜಕೀಯ ಪಿತೂರಿ: ಡಿ.ಕೆ. ಶಿವಕುಮಾರ್

ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ರಾಜಕೀಯ ಪಿತೂರಿಯಾಗಿದ್ದು, ಕಾಂಗ್ರೆಸ್ ಪಕ್ಷ ಯಾವುದೇ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ. 

published on : 16th October 2020

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ 2 ಪ್ರಕರಣ ತನಿಖೆ ಎನ್ಐಎ ಸುಪರ್ದಿಗೆ

ನಗರದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಐಜಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ದಳದ ವಿಶೇಷ ತಂಡವು ಮಂಗಳವಾರದಿಂದ ಅಧಿಕೃತವಾಗಿ ತನಿಖೆ ಆರಂಭಿಸಿದೆ. 

published on : 23rd September 2020
1 2 3 >