- Tag results for ಪಿಎಂ ನರೇಂದ್ರ ಮೋದಿ
![]() | ರಾಷ್ಟ್ರೀಯ ಸೇನಾ ದಿನ: ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಪ್ರಮುಖ ನಾಯಕರಿಂದ ಸ್ಮರಣೆ, ಗೌರವ ಸಲ್ಲಿಕೆಜನವರಿ 15, ರಾಷ್ಟ್ರೀಯ ಸೇನಾ ದಿನ. ಇದರ ಅಂಗವಾಗಿ ಪ್ರಮುಖ ನಾಯಕರು ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಧೀರ ಯೋಧರನ್ನು ಸ್ಮರಿಸಿದ್ದಾರೆ. ನಮ್ಮ ಹೆಮ್ಮೆಯ ಸೈನಿಕರಿಗೆ ಭಾರತೀಯ ಸೇನಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಅವರ ತ್ಯಾಗ, ಬಲಿದಾನಗಳನ್ನು ಕೊಂಡಾಡಿದ್ದಾರೆ. |
![]() | ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ 5 ವರ್ಷ: ಫಲಾನುಭವಿ ರೈತರಿಗೆ ಪಿಎಂ ಮೋದಿ ಅಭಿನಂದನೆರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 5 ವರ್ಷ ಪೂರೈಸಿದೆ. ಕಷ್ಟಪಟ್ಟು ದುಡಿಯುವ ರೈತರ ಉದ್ಧಾರಕ್ಕಾಗಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಇಂದಿಗೆ 5 ವರ್ಷಗಳನ್ನು ಪೂರೈಸಿದೆ. |
![]() | ಸ್ವಾಮಿ ಹರ್ಷಾನಂದ ನಿಧನಕ್ಕೆ ಕನ್ನಡದಲ್ಲಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ಸಂತಾಪಸ್ವಾಮಿ ವಿವೇಕಾನಂದರ ಜನ್ಮದಿನದಂದೆ ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ನಿಧನವಾಗಿದ್ದು ಸ್ವಾಮೀಜಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ. |
![]() | ದೇಶದ ನಾಗರಿಕರಿಗೆ ಅಗ್ಗದ ದರದಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಮನೆ ನಿರ್ಮಿಸಿಕೊಡುವುದು ಸರ್ಕಾರದ ಆದ್ಯತೆ: ಪ್ರಧಾನಿ ಮೋದಿ2022ರ ಹೊತ್ತಿಗೆ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸೂರು ಒದಗಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ದಿನ ಪುನರುಚ್ಚರಿಸಿದ್ದಾರೆ. |
![]() | ಕೊರೋನಾದಿಂದ ಬೇಸತ್ತ ಜನರಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಸಿಹಿಸುದ್ದಿ!2021ನೇ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ, ಕಾಳಜಿಯನ್ನು ಮರೆಯದೆ ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕೊರೋನಾ ಲಸಿಕೆ ಬಂದ ನಂತರವೂ ಇದನ್ನು ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕಿವಿಮಾತು ಹೇಳಿದ್ದಾರೆ. |
![]() | 2020 ವರ್ಷದ ಕೊನೆಯ ದಿನವಾದ ಇಂದು ದೇಶದ ವೈದ್ಯರು, ಆರೋಗ್ಯ ಸಿಬ್ಬಂದಿ, ಕೊರೋನಾ ವಾರಿಯರ್ಸ್ ಗಳನ್ನು ನೆನೆಯಬೇಕು: ಪ್ರಧಾನಿ ಮೋದಿ2020 ಕಳೆದು ನಾಳೆ 2021ನೇ ಇಸವಿಗೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತು ಗತಿಸಿದ ವರ್ಷದಲ್ಲಿ ವೈದ್ಯರು, ಆರೋಗ್ಯ ವಲಯದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿದ ಕೊರೋವಾ ವಾರಿಯರ್ಸ್ ಗಳ ಬಗ್ಗೆ ನೆನೆಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. |
![]() | ರೈತರು ಅನ್ನದಾತರು, ಸರ್ಕಾರ ಅವರಿಗೆ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ: ರಾಜನಾಥ್ ಸಿಂಗ್ರೈತರು ನಮ್ಮ ಅನ್ನದಾತರು, ಈ ದೇಶದ ಆರ್ಥಿಕತೆಯ ಬೆನ್ನೆಲುಬು ಹೀಗಿರುವಾಗ ಯಾರೂ ಕೂಡ ಪ್ರತಿಭಟನಾ ನಿರತರ ರೈತರನ್ನು ನಕ್ಸಲೀಯರು ಅಥವಾ ಖಲಿಸ್ತಾನಿಯರು ಎಂದು ಕೆಟ್ಟದಾಗಿ ಉಲ್ಲೇಖಿಸಬಾರದು, ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. |
![]() | ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಪ್ರಸಾರವಾಗುತ್ತಿದ್ದ ವೇಳೆ ರೈತರಿಂದ 'ತಾಲಿ ಬಜಾವೊ'ಪ್ರತಿಭಟನೆಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ವೇಳೆ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಾತ್ರೆಗಳನ್ನು ಬಡಿದು ತಾಲಿ ಬಜಾವೊ(ಚಪ್ಪಾಳೆ ತಟ್ಟಿ) ಪ್ರತಿಭಟನೆ ನಡೆಸಿದ್ದಾರೆ. |
![]() | ಜಯಲಲಿತಾ,ಕರುಣಾನಿಧಿಯವರ ನಿಧನದಿಂದ ಉಂಟಾಗಿರುವ ಶೂನ್ಯವನ್ನು ತಮಿಳು ನಾಡಿನಲ್ಲಿ ಮೋದಿಯವರು ತುಂಬಲಿದ್ದಾರೆ: ಕೆ.ಅಣ್ಣಾಮಲೈತಮಿಳು ನಾಡು ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ ಮತ್ತು ಕರುಣಾನಿಧಿಯವರ ನಿಧನ ನಂತರ ಉಂಟಾಗಿರುವ ಶೂನ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಮೂಲಕ ತುಂಬಲಿದ್ದಾರೆ ಎಂದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಪೊಲೀಸ್ ಅಧಿಕಾರಿ ಕೆ ಅಣ್ಣಾಮಲೈ ತಿಳಿಸಿದ್ದಾರೆ. |
![]() | 'ಪ್ರಧಾನಿ ಮೋದಿ ಬಂಡವಾಳಶಾಹಿಗಳ ಪರ, ಅವರ ವಿರುದ್ಧ ಮಾತನಾಡುವವರನ್ನು ಉಗ್ರರಂತೆ ಬಿಂಬಿಸುತ್ತಾರೆ': ರಾಹುಲ್ ಗಾಂಧಿ; ಕಾಂಗ್ರೆಸ್ ನಿಯೋಗದಿಂದ ರಾಷ್ಟ್ರಪತಿ ಭೇಟಿನಿಷೇಧಾಜ್ಞೆ ಉಲ್ಲಂಘನೆ ಆರೋಪದ ಮೇಲೆ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ಹೊರಟಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದ ಘಟನೆ ಗುರುವಾರ ನಡೆದಿದೆ. |
![]() | 'ಭಾರತದ ಸ್ವಾತಂತ್ರ್ಯ ಸಂಗ್ರಾಮ ಭಕ್ತಿ ಚಳವಳಿಯ ಬೇರುಗಳನ್ನು ಹೊಂದಿದೆ': ವಿಶ್ವ ಭಾರತಿ ಶತಮಾನೋತ್ಸವದಲ್ಲಿ ಪ್ರಧಾನಿ ಮೋದಿಭಾರತದ ಸ್ವಾತಂತ್ರ್ಯ ಸಂಗ್ರಾಮದ ಬೇರು ಭಕ್ತಿ ಚಳವಳಿಯಲ್ಲಿದೆ. ನೂರಾರು ವರ್ಷಗಳ ಭಕ್ತಿ ಚಳವಳಿಯ ಜೊತೆಗೆ ಕರ್ಮ ಚಳವಳಿ ಕೂಡ ಈ ದೇಶದಲ್ಲಿ ನಡೆಯಿತು. ಭಾರತೀಯರು ಹಲವಾರು ವರ್ಷಗಳವರೆಗೆ ಗುಲಾಮಗಿರಿ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. |
![]() | ರೈತ ದಿನಾಚರಣೆಗೆ ಜನ ನಾಯಕರ ಶುಭಾಶಯ: ರೈತರು ಸಂಧಾನಕ್ಕೆ ಮಣಿಯುವ ಭರವಸೆಯಲ್ಲಿ ಸರ್ಕಾರ, ಪ್ರತಿಭಟನೆ 26ನೇ ದಿನಕ್ಕೆರಾಷ್ಟ್ರೀಯ ರೈತ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ರೈತಾಪಿ ವರ್ಗವನ್ನು ಸ್ಮರಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ಬಗ್ಗೆ ಮಾತನಾಡಿದ್ದಾರೆ. |
![]() | ಆಲಿಗಢ ಮುಸ್ಲಿಂ ವಿ.ವಿ. ಒಂದು 'ಮಿನಿ ಭಾರತ'; ಶತಮಾನೋತ್ಸವ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿಪ್ರಧಾನ ಮಂತ್ರಿ ನರೇಂದ್ರ ಮೋದಿ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮವನ್ನು ಅಂಚೆಚೀಟಿ ಬಿಡುಗಡೆ ಮಾಡುವ ಮಾಡಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಉದ್ದೇಶಿಸಿ ಮಾತನಾಡಿದರು. |
![]() | ಅಭಿವೃದ್ಧಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬೇಡಿ, ಸರ್ಕಾರ ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತದೆ: ಪ್ರಧಾನಿ ಮೋದಿಧರ್ಮ, ಜಾತಿ, ವರ್ಗಗಳನ್ನು ಮೀರಿ ದೇಶದ ಪ್ರತಿಯೊಬ್ಬರೂ ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿರುವ ಮಾರ್ಗದಲ್ಲಿ ಹೆಜ್ಜೆಯಿಡಲು ಇಂದು ಸಾಧ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. |
![]() | ಜಗತ್ತು ಮತ್ತೊಂದು ಕೈಗಾರಿಕಾ ಕ್ರಾಂತಿಯತ್ತ ಮುಖಮಾಡುತ್ತಿದೆ, ನಮ್ಮ ರಾಷ್ಟ್ರ ನಿರ್ಮಾಣದ ಗುರಿಗಳನ್ನು ಸಾಧಿಸಲು ಕಾರ್ಯಪ್ರವೃತ್ತರಾಗಬೇಕು: ಪ್ರಧಾನಿ ಮೋದಿನಮ್ಮ ಮುಂದೆ ಇರುವ ಸವಾಲು ಸ್ವಾವಲಂಬಿಗಳಾಗುವುದು ಮಾತ್ರವಲ್ಲ, ಎಷ್ಟು ಬೇಗನೆ ನಮ್ಮ ಗುರಿಯನ್ನು ತಲುಪುವುದು ಎಂಬುದು ಸಹ ಅಷ್ಟೇ ಮುಖ್ಯವಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. |