• Tag results for ಪಿಎಂ ಮೋದಿ

ಮೋದಿ ಮಾತು ಬಾಯಿಬಿಟ್ಟರೆ ಬಣ್ಣಗೇಡು; ಕೈಲಾಗದ ನಾಯಕನ ಗೋಳಾಟ; ಸಿದ್ದರಾಮಯ್ಯ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳು "ಬಾಯಿ ಬಿಟ್ಟರೆ ಬಣ್ಣಗೇಡು" ಎಂಬಂತಾಗಿದೆ ಎಂದು ಟೀಕಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಕ್ಕೀಡಾಗಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವುದೇ ನಿರ್ದಿಷ್ಟ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಕೈಲಾಗದ ನಾಯಕನ ಗೋಳಾಟದಂತೆ ಎಂದು ಅಪಹಾಸ್ಯ ಮಾಡಿದ್ದಾರೆ.

published on : 30th June 2020

ತುರ್ತು ಪರಿಸ್ಥಿತಿ ಸಮಯದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದವರ ತ್ಯಾಗವನ್ನು ದೇಶ ಮರೆಯುವುದಿಲ್ಲ: ಪ್ರಧಾನಿ ಮೋದಿ

ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಮಯದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ್ದ  ಜನರ ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 25th June 2020

ಮುಂದುವರಿದ ದ್ವೇಷ:ಚೀನಾದ ಸೋಷಿಯಲ್ ಮೀಡಿಯಾಗಳಿಂದ ಪ್ರಧಾನಿ ಮೋದಿ ಭಾಷಣ, ವಿದೇಶಾಂಗ ಇಲಾಖೆ ವಕ್ತಾರರ ಹೇಳಿಕೆ ಡಿಲೀಟ್!

ಕಳೆದ ಗುರುವಾರ ಪ್ರಧಾನಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಭಾಷಣ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರರು ನೀಡಿದ್ದ ಹೇಳಿಕೆಗಳನ್ನು ಚೀನಾದ ಎರಡು ಸಾಮಾಜಿಕ ಮಾಧ್ಯಮಗಳು ಅಳಿಸಿಹಾಕಿವೆ ಎಂದು ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

published on : 20th June 2020

ಕೋವಿಡ್ ವಿರುದ್ಧ ಹೋರಾಟ: ರಾಜ್ಯಗಳ ಪ್ರಯತ್ನಕ್ಕೆ ಪ್ರಧಾನಿ ಮೆಚ್ಚುಗೆ; 5 ಟಿ ತತ್ವ ವಿವರಿಸಿದ ಯಡಿಯೂರಪ್ಪ

ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಜತೆಗೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

published on : 17th June 2020

ಅಜ್ಞಾನಕ್ಕಿಂತ ಅಹಂಕಾರ ತುಂಬಾ ಅಪಾಯಕಾರಿ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

ಕೊರೋನಾ ವೈರಸ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಅಜ್ಞಾನಕ್ಕಿಂತ ಅಹಂಕಾರ ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ.

published on : 15th June 2020

ಹಲವು ಐತಿಹಾಸಿಕ ತಪ್ಪುಗಳನ್ನು ಪಿಎಂ ಮೋದಿ ಕಳೆದ ಆರು ವರ್ಷಗಳಲ್ಲಿ ಸರಿಪಡಿಸಿದ್ದಾರೆ: ಅಮಿತ್ ಶಾ

ಕಳೆದ ಆರು ವರ್ಷಗಳಲ್ಲಿ ಆಗಿರುವ ಹಲವು ಐತಿಹಾಸಿಕ ತಪ್ಪುಗಳನ್ನು ಪ್ರಧಾನಿ ಮೋದಿ ಸರಿಪಡಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ.

published on : 30th May 2020

ಮಾತ್ರೆ ಜಗಳದಿಂದ ಭಾರತ-ಅಮೆರಿಕ ಸ್ನೇಹಕ್ಕೆ ಹಿನ್ನಡೆ?; ಪಿಎಂ ಸೇರಿದಂತೆ ಭಾರತದ ಅಧಿಕೃತ ಟ್ವಿಟರ್ ಖಾತೆಗಳ ಅನ್ ಫಾಲೋ ಮಾಡಿದ ವೈಟ್ ಹೌಸ್

ಮಾರಕ ಕೊರೋನಾ ವೈರಸ್ ಗೆ ಇಡೀ ಜಗತ್ತು ತತ್ತರಿಸಿ ಹೋಗಿದ್ದು, ಇದರ ನಡುವೆ ಭಾರತದಲ್ಲಿ ತಯಾರಾಗುವ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಾಗಿ ಅಮೆರಿಕ ಭಾರತದೊಂದಿಗೆ ಮುನಿಸಿಕೊಂಡಿದೆಯೇ?

published on : 29th April 2020

ರೆಡ್ ಜೋನ್ ಗಳಲ್ಲಿ ಲಾಕ್ ಡೌನ್ ಮುಂದುವರಿಕೆ, ರಾಜ್ಯಗಳು ಮಾರ್ಗಸೂಚಿಗಳನ್ನು ಶಿಸ್ತಿನಿಂದ ಪಾಲಿಸಿ: ಪ್ರಧಾನಿ ಮೋದಿ

ಕೊರೋನಾ ವೈರಸ್ ಸೋಂಕು ತೀವ್ರವಾಗಿರುವ ಭಾಗಗಳಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 27th April 2020

ಇ–ಗ್ರಾಮ್ ಸ್ವರಾಜ್, ಸ್ವಾಮಿತ್ವ ಯೋಜನೆಗೆ ಪ್ರಧಾನಮಂತ್ರಿ ಚಾಲನ; ಚಿಕ್ಕಬಳ್ಳಾಪುರದ ಕ್ರಮಕ್ಕೆ ಪ್ರಧಾನಿ ಮೆಚ್ಚುಗೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಚಾಯತ್ ರಾಜ್ ದಿನದ ಅಂಗವಾಗಿ ಇ- ಗ್ರಾಮ್ ಸ್ವರಾಜ್ ಮತ್ತು ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿ ಶುಭಾಶಯ ಕೋರಿದರು.

published on : 24th April 2020

ದೀಪ ಬೆಳಗಲು ಕರೆ ನೀಡಿದ ಪ್ರಧಾನಿ: ಅದು ನನ್ನಿಷ್ಟ, ಬೇಕೆಂದರೆ ನಾನು ನಿದ್ರಿಸುತ್ತೇನೆ ಎಂದ ಮಮತಾ ಬ್ಯಾನರ್ಜಿ!

ಏಪ್ರಿಲ್ 5 ರಂದು ಪ್ರಧಾನಿ ನರೇಂದ್ರ ಮೋದಿ ಹಣತೆ, ಮೇಣದ ಬತ್ತಿಗಳನ್ನು ಹತ್ತಿಸುವ ಮೂಲಕ ಕೊರೋನಾ ವಿರುದ್ಧ ದೇಶದ ಒಗ್ಗಟ್ಟಿನ ಪ್ರದರ್ಶನಕ್ಕೆ ಕರೆ ಕೊಟ್ಟಿದ್ದಾರೆ. ಇದರ ಕುರಿತು ಪ್ರತಿಕ್ರಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ನಾನಿದನ್ನು ರಾಜಕೀಯಗೊಳಿಸುವುದಿಲ್ಲ, ನನ್ನ ವೈಯುಕ್ತಿಕ ಇಚ್ಚೆಯಂತಿರುತ್ತೇನೆ. ಇಷ್ಟವಾದರೆ ಆ ಸಮಯದಲ್ಲಿ ನಿದ್ರಿಸುತ್ತೇ

published on : 4th April 2020

  11 ಗಂಟೆಗೆ ಕಾಯುತ್ತಿರಿ: ಪ್ರಧಾನಿ ಮೋದಿ 'ಮನ್ ಕಿ ಬಾತ್'ನಲ್ಲಿ ಕೊರೋನಾ ವೈರಸ್ ಬಗ್ಗೆ ಏನು ಹೇಳುತ್ತಾರೆ ಕೇಳಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಂಗಳ ಕೊನೆಯ ಭಾನುವಾರ ರೇಡಿಯೊ ಮೂಲಕ ಮನ್ ಕಿ ಬಾತ್ ಎಂಬ ಕಾರ್ಯಕ್ರಮದ ಮೂಲಕ ಮಾತನಾಡುತ್ತಾರೆ.

published on : 29th March 2020

ರಾಜ್ಯದಲ್ಲಿ ಲಾಕ್ ಡೌನ್ ಸಡಿಲ: ಮೋದಿ ಅಸಮಾಧಾನ

ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಗೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ.  

published on : 27th March 2020

ಕೋವಿಡ್-19: ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ, ಭೀತಿಯನ್ನು ದೂರಮಾಡಿರಿ-ಮಾದ್ಯಮಗಳಿಗೆ ಪ್ರಧಾನಿ ಕರೆ

ಕೋವಿಡ್-19 ಒಂದು ತಲೆಮಾರಿನ ಸವಾಲು  ಇದನ್ನು ಹೊಸ ಮತ್ತು ನವೀನ ಪರಿಹಾರಗಳ ಮೂಲಕ ನಿಭಾಯಿಸುವ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ, ಮಾದ್ಯಮ ಪ್ರತಿನಿಧಿಗಳೊಡನೆ ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ "ವರದಿಗಾರರು, ಕ್ಯಾಮೆರಾಪರ್‌ಸನ್‌ಗಳು ಮತ್ತು ತಂತ್ರಜ್ಞರ ದಣಿವರಿಯದ ಪ್ರಯತ್ನಗಳು ರಾಷ್ಟ್ರಕ್ಕೆ ಒಂದು ದೊಡ್ಡ ಸೇವೆಯಾಗ

published on : 23rd March 2020

ಪ್ರಧಾನಿ ಭಾಷಣ ನಂತರ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ; ಲೋಕಸಭೆಯಲ್ಲಿ ಅಧೀರ್ ರಂಜನ್ ಆರೋಪ

ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ಸಂಬಂಧ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ನಂತರ ದೇಶದಲ್ಲಿ ಹಣದುಬ್ಬರ ಹೆಚ್ಚಳಗೊಂಡು ಮಾರುಕಟ್ಟೆಯಿಂದ ಹಲವು ಅಗತ್ಯವಸ್ತುಗಳು ಕಣ್ಮರೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಶುಕ್ರವಾರ ಲೋಕಸಭೆಯಲ್ಲಿ ದೂರಿದ್ದಾರೆ. 

published on : 20th March 2020

ಪ್ರಧಾನಿ ಮೋದಿಯವರ "ಜನತಾ ಕರ್ಫ್ಯು"ಗೆ ಮಾಜಿ ಪ್ರಧಾನಿ ದೇವೇಗೌಡ ಬೆಂಬಲ

ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂ ಕರೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬೆಂಬಲ ಸೂಚಿಸಿದ್ದಾರೆ. 

published on : 20th March 2020
1 2 3 4 5 6 >