• Tag results for ಪೂರ್ವ ಲಡಾಕ್

ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಅಗತ್ಯ: ಚೀನಾಗೆ ಭಾರತ

ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ಗಡಿಭಾಗದಲ್ಲಿ ಶಾಂತಿ ಮತ್ತು ಭಾತೃತ್ವ ಅಗತ್ಯ ಎಂದು ಪ್ರತಿಪಾದಿಸಿರುವ ಭಾರತ, ಸೇನಾಪಡೆಗಳು ಮತ್ತೆ ಘರ್ಷಣಾ ಪ್ರದೇಶದಲ್ಲಿ ಸಕ್ರಿಯವಾಗದಂತೆ ನೋಡಿಕೊಳ್ಳಲು ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಅಗತ್ಯ ಎಂದು ಹೇಳಿದೆ.

published on : 26th February 2021

ಪಾಂಗೊಂಗ್‌ ತ್ಸೊ ತೀರದಿಂದ ಸೇನಾಪಡೆ ಸಂಪೂರ್ಣ ಹಿಂತೆಗೆತ: ನಾಳೆ ಭಾರತ-ಚೀನಾ ಮಧ್ಯೆ 10ನೇ ಸುತ್ತಿನ ಮಾತುಕತೆ 

ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ 10ನೇ ಸುತ್ತಿನ ಮಾತುಕತೆ ನಾಳೆ ಏರ್ಪಡಲಿದೆ. ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಾಳೆ ನಡೆಯಲಿದೆ.

published on : 19th February 2021

ಪೂರ್ವ ಲಡಾಕ್ ನ ಪಾಂಗೊಂಗ್ ಪ್ರದೇಶದಿಂದ ಸೇನಾಪಡೆ ಹಿಂತೆಗೆತಕ್ಕೆ ಭಾರತ-ಚೀನಾ ಒಪ್ಪಂದ: ರಾಜ್ಯಸಭೆಗೆ ರಕ್ಷಣಾ ಸಚಿವ ವಿವರಣೆ

ಭಾರತಕ್ಕೆ ಸೇರಿದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ, ದೇಶದ ಭದ್ರತೆ ವಿಚಾರ ಬಂದಾಗ ನೆರೆ ದೇಶಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಛರಿಸಿದ್ದಾರೆ.

published on : 11th February 2021

ಭಾರತೀಯ ಸೇನೆಯ ಸಶಸ್ತ್ರ ಪಡೆಗಳನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ಜ.ಬಿಪಿನ್ ರಾವತ್ 

ಭಾರತೀಯ ಸೇನೆಯ ಯೋಧರ ಕರ್ತವ್ಯದಿಂದ ವಿಮುಖವಾಗಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಭಾರತದ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

published on : 3rd January 2021

ಪೂರ್ವ ಲಡಾಕ್ ಗಡಿಭಾಗದ ಸಂಘರ್ಷ ವಿಚಾರದಲ್ಲಿ ಭಾರತ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್ 

ಚೀನಾ ಗಡಿಭಾಗ ಪೂರ್ವ ಲಡಾಕ್ ನಲ್ಲಿ ಭಾರತ ಮತ್ತು ಚೀನಾ ದೇಶಗಳ ಸೇನಾಪಡೆ ನಿಯೋಜನೆಗೊಂಡು ಏಳು ತಿಂಗಳಿಗೂ ಅಧಿಕ ಸಮಯ ಕಳೆದಿದೆ. ಇದುವರೆಗೆ ಯಾವುದೇ ಪರಿಹಾರ ಸಿಕ್ಕಿದಂತೆ ಕಾಣುತ್ತಿಲ್ಲ.

published on : 31st December 2020

ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ: ರಕ್ಷಣಾ ಪಡೆ ಮುಖ್ಯಸ್ಥ ಜ. ಬಿಪಿನ್ ರಾವತ್

ಗಡಿ ವಾಸ್ತವ ರೇಖೆ(ಎಲ್ಎಸಿ)ರ ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ.

published on : 6th November 2020

ಪೂರ್ವ ಲಡಾಖ್ ಮೇಲೆ ಭಾರತದ ಬಿಗಿ ಹಿಡಿತ; ರಕ್ತವನ್ನೇ ಹೆಪ್ಪುಗಟ್ಟಿಸುವ ಚಳಿಯಲ್ಲೂ ರೊಟೇಷನ್ ಪದ್ಧತಿಯಲ್ಲಿ ಸೈನಿಕರ ಪಹರೆ

ಪೂರ್ವ ಲಡಾಖ್‌ನಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಸೇನಾ ಸೈನಿಕರು ಕಾರ್ಯಾಚರಣೆಯ ನಿಯೋಜನೆಯನ್ನು ಅತ್ಯುತ್ತಮವಾಗಿಸಲು ರಕ್ತವನ್ನೇ ಹೆಪ್ಪುಗಟ್ಟಿಸುವ ಚಳಿಯಲ್ಲೂ ರೊಟೇಷನ್ ಪದ್ಧತಿಯಲ್ಲಿ ಗಡಿ ಕಾಯುತ್ತಿದ್ದಾರೆ.

published on : 3rd November 2020

ಭಾರತ ಯಾವತ್ತಿಗೂ ನೆರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತದೆ: ರಾಜನಾಥ್ ಸಿಂಗ್

ಭಾರತ ಯಾವತ್ತಿಗೂ ತನ್ನ ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ, ಆದರೆ ಕಾಲ ಕಾಲಕ್ಕೆ ತನ್ನ ದೇಶದ ಸಾರ್ವಭೌಮತ್ಯ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಸರ್ವಶ್ರೇಷ್ಟ ತ್ಯಾಗಗಳನ್ನು ಸೇನೆಯ ಯೋಧರು ಮಾಡುವ ಪರಿಸ್ಥಿತಿ ಬರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 25th October 2020

'ಲಡಾಕ್ ಲಡಾಯಿ': ಇಂದು ಭಾರತ-ಚೀನಾ ಮಧ್ಯೆ 7ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ನಲ್ಲಿ ಸೇನೆ ನಿಯೋಜನೆ, ಗಡಿ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಸೋಮವಾರ ಕಾರ್ಪ್ಸ್ ಕಮಾಂಡರ್ ಮಟ್ಟದ ಮತ್ತೊಂದು ಸುತ್ತಿನ ಮಹತ್ವತ ಮಾತುಕತೆ ನಡೆಯಲಿದೆ.

published on : 12th October 2020

ಪೂರ್ವ ಲಡಾಕ್ ಸ್ಥಿತಿ ಅಹಿತಕರ; ಅಲ್ಲಿ ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ: ವಾಯುಪಡೆ ಮುಖ್ಯಸ್ಥ ಬದೌರಿಯಾ

ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ,ಅಹಿತಕರ ವಾತಾವರಣವಿದ್ದು, ಗಡಿ ವಾಸ್ತವ ರೇಖೆ(ಎಲ್ ಎಸಿ) ಬಳಿ ಯುದ್ಧವಿಲ್ಲ ಹಾಗೆಂದು ಶಾಂತಿಯೂ ಇಲ್ಲ ಎಂಬ ಪರಿಸ್ಥಿತಿಯಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ ತಿಳಿಸಿದ್ದಾರೆ.

published on : 29th September 2020

ಚೀನಾದ ಮುಂದುವರಿದ ಉದ್ಧಟತನ: ಪೂರ್ವ ಲಡಾಕ್ ಗಡಿಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಆಕ್ರಮಣಕ್ಕೆ ಮುಂದಾದ ಪಿಎಲ್ಎ

ಪೂರ್ವ ಲಡಾಕ್ ನಲ್ಲಿ ತನ್ನ ಸ್ಥಾನವನ್ನು ಗಡಿಯಿಂದಾಚೆಗೆ ಸ್ಥಾಪಿಸಲು ಚೀನಾ ಸೇನಾಪಡೆ ಪ್ರಯತ್ನ ನಡೆಸುತ್ತಿದ್ದು ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ತಿಳಿದುಬಂದಿದೆ. 45 ವರ್ಷಗಳ ನಂತರ ಗಡಿ ವಾಸ್ತವ ರೇಖೆ ಬಳಿ ಚೀನಾ ಸೇನಾಪಡೆ ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸಿ ಗಡಿಯನ್ನು ಆಕ್ರಮಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

published on : 9th September 2020

ಪೂರ್ವ ಲಡಾಕ್ ಭದ್ರತಾ ಸ್ಥಿತಿಗತಿ ಕುರಿತು ಪರಾಮರ್ಶೆ:ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ(ಎಲ್ ಎಸಿ) ಭಾರತ ಮತ್ತು ಚೀನಾ ದೇಶಗಳು ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಳ್ಳುವ ಸಂಬಂಧ ಮಾತುಕತೆಗಳು ನಡೆಯುತ್ತಿರುವಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಲ್ಲಿನ ಒಟ್ಟಾರೆ ಭದ್ರತಾ ಸ್ಥಿತಿಗತಿಗಳ ಪರಾಮರ್ಶೆ ನಡೆಸಿದ್ದಾರೆ.

published on : 23rd August 2020

ಪೂರ್ವ ಲಡಾಕ್ ನಲ್ಲಿ ಚೀನಾವನ್ನು ಎದುರಿಸಲು ಭಾರತ ಭಯಪಡುತ್ತಿದೆ, ಇದಕ್ಕೆ ದೇಶ ಬೆಲೆ ತೆರಬೇಕಾಗುತ್ತದೆ:ರಾಹುಲ್ ಗಾಂಧಿ

ಪೂರ್ವ ಲಡಾಕ್ ನ ಸ್ಥಿತಿಗತಿಗೆ ಕೇಂದ್ರ ಸರ್ಕಾರದ ನಿಲುವುಗಳೇ ಕಾರಣ ಎಂದು ಮತ್ತೊಮ್ಮೆ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದಕ್ಕೆ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

published on : 15th August 2020

ಪೂರ್ವ ಲಡಾಕ್ ನಲ್ಲಿ ದೀರ್ಘಕಾಲದ ಸಂಘರ್ಷಕ್ಕೆ ಭಾರತೀಯ ಸೇನೆ ಸಿದ್ದವಾಗಿದೆ: ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಜೀವಂತವಾಗಿಡಲು ಚೀನಾ ಯತ್ನಿಸುತ್ತಿದೆ ಎಂದು ಹೇಳಿರುವ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ದೀರ್ಘಾವಧಿಯ ಯುದ್ಧ ಸ್ಥಿತಿಯ ವಾತಾವರಣವನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ಅರೆಸೇನಾಪಡೆ ತಂಡಕ್ಕೆ ಹೇಳಿದ್ದಾರೆ.

published on : 12th August 2020

ಪೂರ್ವ ಲಡಾಕ್ ನಿಂದ ಸೇನೆ ಹಿಂತೆಗೆತಕ್ಕೆ ಒಪ್ಪಿಗೆ: ಮತ್ತೊಂದು ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಗೆ ಸಿದ್ದ

ಸರಿಸುಮಾರು ಎರಡೂವರೆ ತಿಂಗಳ ಬಳಿಕ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ(ಎಲ್ ಎಸಿ)ಯಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನಾ ದೇಶಗಳು ಒಪ್ಪಿಗೆ ಸೂಚಿಸಿವೆ.

published on : 25th July 2020
1 2 >