• Tag results for ಪ್ರಕಾಶ್ ಜಾವಡೇಕರ್

ಅವಶ್ಯಕ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಸಂಪುಟ ಅನುಮೋದನೆ, ರೈತರಿಗೆ ಲಾಭ!

ಅವಶ್ಯಕ ವಸ್ತುಗಳ ಕಾಯ್ದೆಗೆ ಐತಿಹಾಸಿಕ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

published on : 4th June 2020

ಮತ್ತೊಮ್ಮೆ ಟಿವಿಯಲ್ಲಿ ರಮಾನಂದ ಸಾಗರ್ 'ರಾಮಾಯಣ'! ದಿನಕ್ಕೆರಡು ಎಪಿಸೋಡ್ ಪ್ರಸಾರ

"ರಾಮಾಯಣ" ಧಾರಾವಾಹಿ ಮರುಪ್ರಸಾರ ಮಾಡುವಂತೆ ಜನರಿಂದ ಸಾಕಷ್ಟು ಒತ್ತಡಗಳು ಬರುತ್ತಿರುವ ಕಾರಣ ಇದೀಗ ದೂರದರ್ಶನದಲ್ಲಿ  ಧಾರಾವಾಗಿ ಮರುಪ್ರಸಾರ ಆಗುವುದು ನಿಶ್ಚಿತವಾಗಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌  ಟ್ವೀಟ್ ಮಾಡಿ ಟಿವಿಯಲ್ಲಿ ಧಾರಾವಾಹಿ ಮರುಪ್ರಸಾರವಾಗುವ ಬಗೆಗೆ ತಿಳಿಸಿದ್ದಾರೆ.

published on : 27th March 2020

ಕೊರೋನಾ ವೈರಸ್: 21 ದಿನಗಳ ಲಾಕ್ ಡೌನ್ ಹಿನ್ನಲೆ, ಹೊಸ ಪಡಿತರ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ

ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಈ ಅವಧಿಯಲ್ಲಿ ಜನರ ಸಂಕಷ್ಟ ನಿವಾರಣೆಗೆ ಕೇಂದ್ರ ಸರ್ಕಾರ ಹೊಸ ಪಡಿತರ ಯೋಜನೆ ಘೋಷಣೆ ಮಾಡಿದೆ.

published on : 25th March 2020

ಕೊರೋನಾ ವೈರಸ್: ಗಡಿ, ವಿಮಾನ ನಿಲ್ದಾಣಗಳಲ್ಲಿ 16 ಲಕ್ಷ ಜನರಿಗೆ ವೈದ್ಯಕೀಯ ಪರೀಕ್ಷೆ- ಜಾವಡೇಕರ್

ಇಡೀ ಜಗತ್ತನ್ನು ವ್ಯಾಪಿಸುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಬುಧವಾರ ಹೇಳಿದ್ದಾರೆ.

published on : 4th March 2020

ಏರ್ ಇಂಡಿಯಾದಲ್ಲಿ ಶೇ 100 ಪಾಲು ಹೊಂದಲು ಅನಿವಾಸಿ ಭಾರತೀಯರಿಗೆ ಸರ್ಕಾರ ಅನುಮತಿ

ಏರ್ ಇಂಡಿಯಾದಲ್ಲಿ ಶೇ 100 ರಷ್ಟು ಪಾಲನ್ನು ಹೊಂದಲು ಅನಿವಾಸಿ ಭಾರತೀಯರಿಗೆ ಸರ್ಕಾರ ಬುಧವಾರ ಅನುಮತಿ ನೀಡಿದೆ. ವಾಯುಯಾನ ಸಂಸ್ಥೆಯ ಶೇ 100 ರಷ್ಟು ಪಾಲನ್ನು ಸರ್ಕಾರ ಮಾರಾಟ ಮಾಡಲು ಯೋಜಿಸುತ್ತಿರುವ ಸಮಯದಲ್ಲೇ ಈ ನಿರ್ಧಾರ ಹೊರಬಿದ್ದಿದೆ.

published on : 4th March 2020

ದೆಹಲಿ ಹಿಂಸಾಚಾರ: ಕಾಂಗ್ರೆಸ್ ನಿಂದ ಕೊಳಕು ರಾಜಕೀಯ – ಪ್ರಕಾಶ್ ಜಾವೇಡೆಕರ್

ದೆಹಲಿ ಗಲಭೆ ಮತ್ತು ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ಕಾಂಗ್ರೆಸ್ ಇಲ್ಲ, ಸಲ್ಲದ ಆರೋಪ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ತಿರುಗೇಟು ನೀಡಿದ್ದಾರೆ.

published on : 26th February 2020

ಅರವಿಂದ್ ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎಂದು ಸಾಬೀತುಪಡಿಸಲು ಸಾಕಷ್ಟು ಆಧಾರಗಳಿವೆ: ಜಾವಡೇಕರ್

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎಂದು ಸಾಬೀತುಪಡಿಸಲು ಸಾಕಷ್ಟು ಆಧಾರಗಳಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕಿಡಿಕಾರಿದ್ದಾರೆ.

published on : 3rd February 2020

ಗರ್ಭಪಾತಕ್ಕೆ ಕಾಲಮಿತಿ ವಿಸ್ತರಣೆಗೆ ಕೇಂದ್ರ ಸಂಪುಟ ಅಸ್ತು

ಗರ್ಭಪಾತಕ್ಕೆ ಅನುಮತಿ ನಿಡುವ ಸಮಯದ ಮಿತಿಯನ್ನು ವಿಸ್ತರಿಸಿ ಕೇಂದ್ರ ಸಚಿವ ಸಂಪುಟ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಪ್ರಸ್ತುತ  20 ವಾರಗಳ ಗಡುವನ್ನು  24 ವಾರಗಳವರೆಗೆ ವಿಸ್ತರಿಸಿ ಕೇಂದ್ರ ಸಚಿವ ಸಂಪುಟ ನಿರ್ಣಯ ಅಂಗೀಕರಿಸಿದೆ.  

published on : 29th January 2020

ನಿರ್ಭಯಾ ಅಪರಾಧಿಗಳ ಗಲ್ಲು ವಿಳಂಬಕ್ಕೆ ಅರವಿಂದ್ ಕೇಜ್ರಿವಾಲ್ ಸರ್ಕಾರದ ನಿರ್ಲಕ್ಷ್ಯ ಕಾರಣ: ಪ್ರಕಾಶ್ ಜಾವಡೇಕರ್

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ  ವಿಳಂಬಕ್ಕೆ  ದೆಹಲಿಯ ಆಮ್ ಆದ್ಮಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ  ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ.

published on : 16th January 2020

ಶೀಘ್ರದಲ್ಲೇ ಜೆಎನ್‌ಯುನಲ್ಲಿ ಹಿಂಸಾಚಾರ ನಡೆಸಿದ ಮುಸುಕುಧಾರಿಗಳ ಮುಸುಕು ಅನಾವರಣ: ಪ್ರಕಾಶ್ ಜಾವಡೇಕರ್

ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ನಲ್ಲಿ ಹಿಂಸಾಚಾರವನ್ನು ಖಂಡಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು, ಹಿಂಸಾಚಾರ ನಡೆಸಿದ ಮುಸುಕುಧಾರಿಗಳ ಮುಸುಕು ಕಳಚಲಾಗುವುದು ಎಂದು ಹೇಳಿದ್ದಾರೆ.

published on : 8th January 2020

30 ಮಾಧ್ಯಮಗಳಿಗೆ ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ ಪ್ರಶಸ್ತಿ

ನಾಗರಿಕರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ 30 ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್....

published on : 7th January 2020

ದೆಹಲಿಯಲ್ಲಿ ಸಿಎಎ ವಿರೋಧಿ ಹಿಂಸಾಚಾರಕ್ಕೆ ಎಎಪಿ, ಕಾಂಗ್ರೆಸ್ ಕಾರಣ: ಪ್ರಕಾಶ್ ಜಾವಡೇಕರ್

ದೆಹಲಿಯಂತಹ ಶಾಂತಿಯುತ ನಗರದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿ ಹರಡುವ ಮೂಲಕ ಸೃಷ್ಟಿಯಾದ ವಾತಾವರಣ ಮತ್ತು ಆಸ್ತಿಗೆ ಆದ ಹಾನಿ, ಕಾಂಗ್ರೆಸ್ ಮತ್ತು ಎಎಪಿ ಇದಕ್ಕೆ ಕಾರಣವಾಗಿವೆ. ಅವರು ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಜಾವಡೇಕರ್ ಹೇಳಿದ್ದಾರೆ. 

published on : 1st January 2020

ದೇಶದ ಅರಣ್ಯ ವರದಿ ಬಿಡುಗಡೆ ಮಾಡಿದ ಜಾವಡೇಕರ್‌; ಅರಣ್ಯ ವೃದ್ಧಿಯಲ್ಲಿ ಕರ್ನಾಟಕ ಪ್ರಥಮ

ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಸೋಮವಾರ 'ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್'- 2019 ಅನ್ನು ಬಿಡುಗಡೆ ಮಾಡಿದರು.

published on : 31st December 2019

ಒಳ್ಳೆ ಸುದ್ದಿ: ಭಾರತದ ಒಟ್ಟಾರೆ ಅರಣ್ಯ ಭೂಮಿಯಲ್ಲಿ ಗಣನೀಯ ಹೆಚ್ಚಳ

ಜಾಗತಿಕ ತಾಪಮಾನ ಏರಿಕೆ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಒತ್ತುವರಿಯಂತಹ ಗಂಭೀರ ಸಮಸ್ಯೆಗಳ ನಡುವೆಯೂ ಭಾರತದ ಒಟ್ಟಾರೆ ಅರಣ್ಯ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ.

published on : 30th December 2019

ರಾಷ್ಟ್ರೀಯ ಜನಸಂಖ್ಯೆ ನೋಂದಣಿಗೆ ಯಾವುದೇ ದಾಖಲೆ ಇಲ್ಲವೇ ಬಯೋಮೆಟ್ರಿಕ್ ಅಗತ್ಯವಿಲ್ಲ: ಪ್ರಕಾಶ್ ಜಾವಡೇಕರ್

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿವಾದ ಮತ್ತು ಪ್ರತಿಭಟನೆಗಳು ಮುಂದುವರೆದ ನಡುವೆಯೇ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪ್ರಕ್ರಿಯೆಗೆ ಯಾವುದೇ ದಾಖಲೆ ಇಲ್ಲವೇ ಬಯೋಮೆಟ್ರಿಕ್ ಅಗತ್ಯವಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. 

published on : 24th December 2019
1 2 >