• Tag results for ಬಿ.ಎಸ್.ಯಡಿಯೂರಪ್ಪ

ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲೇ ಉಳಿಯಬೇಕು, ಯಾವುದೇ ಉದ್ದೇಶಕ್ಕೂ ಬೆಂಗಳೂರಿಗೆ ಬರಬಾರದು- ಮುಖ್ಯಮಂತ್ರಿ ಸೂಚನೆ

ಕೋವಿಡ್ -19 ಸೋಂಕು ಹರಡುವಿಕೆ ನಿಯಂತ್ರಿಸುವ ಪ್ರಯತ್ನವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಎಲ್ಲಾ ಸಚಿವ ಸಂಪು ಸಹೋದ್ಯೋಗಿಗಳಿಗೆ ಆಯಾ ಜಿಲ್ಲೆಗಳಲ್ಲೇ ಉಳಿಯುವಂತೆ ಸೂಚಿಸಿದ್ದರೆ.

published on : 26th March 2020

ರಾಜ್ಯದ ಕೊರೋನಾ ಸೋಂಕು ತಡೆ ಕ್ರಮಗಳ ಕುರಿತು ಪ್ರಧಾನಿ ಮೋದಿಗೆ ಯಡಿಯೂರಪ್ಪ ಮಾಹಿತಿ

ರಾಜ್ಯದಲ್ಲಿ ಕೊರೋನಾ ವೈರಸ್ ತಡೆಯುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದರು.

published on : 20th March 2020

ಖಾತೆ ಹಂಚಿಕೆ  ನಂತರ ಇದೀಗ ಜಿಲ್ಲಾ ಉಸ್ತುವಾರಿಗಾಗಿ ಲಾಬಿ, ಸಿಎಂ ಯಡಿಯೂರಪ್ಪಗೆ ನೂತನ ಸಚಿವರ ಮೊರೆ

ಬಿ ಎಸ್ ಯಡಿಯೂರಪ್ಪ ಅವರ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವವರು ತಮ್ಮ ಸಚಿವಾಲಯಗಳ ಉಸ್ತುವಾರಿಯನ್ನು ಕೆಲವೇ ವಾರಗಳ ಹಿಂದೆ ವಹಿಸಿಕೊಂಡಿದ್ದಾರೆ, ಆದರೆ ಈಗಾಗಲೇ ಜಿಲ್ಲಾ ಉಸ್ತುವಾರಿ ಜವಾಬ್ದಾರಿಗಳಿಗಾಗಿ ತೀವ್ರವಾದ ಲಾಬಿ ಮಾಡಲು ಪ್ರಾರಂಭಿಸಿದ್ದಾರೆ. ಹೆಚ್ಚಾಗಿ ತವರು ಜಿಲ್ಲೆ ಅಥವಾ ಹೆಚ್ಚು ಆದಾಯ ಗಳಿಸಬಹುದಾದ ಜಿಲ್ಲೆಗಳಿಗೆ ಬಹು ಬೇಡಿಕೆ ಇದೆ.

published on : 2nd March 2020

ಸಿಎಂ ಹುಟ್ಟುಹಬ್ಬ: ಮಾದಪ್ಪನಿಗೆ ಚಿನ್ನದ ತೇರಿನ ಸೇವೆ ಮಾಡಿಸಿದ ಸಚಿವ ಮಾಧುಸ್ವಾಮಿ!

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆ ಕಾನೂನು ಸಚಿವ ಮಾಧುಸ್ವಾಮಿ ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ತೇರಿನ ಸೇವೆ ಮಾಡಿಸಿದ್ದಾರೆ.

published on : 28th February 2020

ಶಿವಮೊಗ್ಗ-ಚೆನ್ನೈ ರೈಲುಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಿಂದ ಚೆನ್ನೈಗ ನೇರ ರೈಲು ಸೇವೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಶಿವಮೊಗ್ಗ-ಚೆನ್ನೈ ರೈಲು ಸೇವೆ ಪ್ರಾರಂಭಿಸಲು ರೈಲ್ವೆ ಇಲಾಖೆ ಮುಂದಾಗಿರುವುದು ಗಮನಾರ್ಹ. ವಾರದಲ್ಲಿ ಎರಡು ದಿನ ಈ ವಿಶೇಷ ರೈಲು ಎರಡೂ ನಗರಗಳ ನಡುವೆ ಸಂಚರಿಸಲಿದೆ.

published on : 27th February 2020

ಜಂಗಮವಾಡಿ ಗುರುಕುಲದ ಶತಮಾನೋತ್ಸವ ನಿಮಿತ್ತ ಕಾಶಿಗೆ ತೆರಳಿದ ಸಿಎಂ ಬಿಎಸ್ ವೈ

ಹಿಂದೂಗಳ ಪವಿತ್ರ ನಗರಿ ವಾರಣಾಸಿಯಲ್ಲಿರುವ ಪೂಜ್ಯ ಜಂಗಮಾವಾಡಿ ಮಠದ ಶ್ರೀ ಜಗದ್ಗುರು ವಿಶ್ವಾರಾದ್ಯ ಗುರುಕುಲ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಶಿಗೆ ತೆರಳಿದ್ದಾರೆ. ಭಾನುಇವಾರ ಗುರುಕುಲದಲ್ಲಿ ಬಸವಣ್ಣನ ಅನುಯಾಯಿಗಳ ಮಹಾಗ್ರಂಥವಾಗಿರುವ “ಸಿದ್ಧಾಂತ ಶಿಖಾಮಣಿ" 19 ಭಾರತೀಯ ಮತ್ತು ವಿದೇಶಿ ಭಾಷೆಗಳ ಅನುವಾದಿತ ಪ್

published on : 16th February 2020

ಬಂದ್ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡಬೇಡಿ, ಮಾತುಕತೆಗೆ ಬನ್ನಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

ಸರೋಜಿನಿ ಮಹಿಷಿ ವರದಿಯ ಬಗ್ಗೆ ತಮ್ಮ ಮನೆಗೆ ಬಂದು ಚರ್ಚಿಸಲಿ. ತಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ. ಆದರೆ ಬಂದ್ ಮಾಡಿ,  ಜನ ಸಾಮಾನ್ಯರಿಗೆ ತೊಂದರೆ ಕೊಡುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

published on : 12th February 2020

ಮುಗಿಯದ ಸಂಪುಟ ಗೊಂದಲ: 9 ಸಚಿವರ  ಖಾತೆಗಳನ್ನು ಮರು ಹಂಚಿಕೆ ಮಾಡಿದ ಯಡಿಯೂರಪ್ಪ

ನೂತನ ಸಚಿವರಿಗೆ ನಿನ್ನೆ ಮುಖ್ಯಮಂತ್ರಿ ಹಂಚಿಕೆ ಮಾಡಿದ್ದ ಖಾತೆಗಳ ವಿಷಯದಲ್ಲಿ ಕೆಲವು ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಖಾತೆಗಳನ್ನು ಮರು ಹಂಚಿಕೆ ಮಾಡಿದ್ದಾರೆ.

published on : 11th February 2020

ವಿಧಾನಸೌಧದಲ್ಲಿ ಬಜೆಟ್ ಪೂರ್ವ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಮಾರ್ಚ್ 5 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ‌ 2020  ಅವಧಿಯ ಮೊದಲ ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ ನಡೆಸಿ ಆಯವ್ಯಯ ಲೆಕ್ಕಾಚಾರ  ಹಾಕಿದರು.

published on : 10th February 2020

ಮಧ್ಯಮ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾಗೆ ರಾಜ್ಯ ಸರ್ಕಾರ ನಿರ್ಧಾರ: ಯಡಿಯೂರಪ್ಪ

ರಾಜ್ಯದ ಸಹಕಾರಿ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಪಡೆದ ಮಧ್ಯಂತರ ಮತ್ತು ದೀರ್ಘಾವಧಿಯ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

published on : 10th February 2020

ಯಡಿಯೂರಪ್ಪಗೆ ತೊಂದರೆ ಕೊಡಬೇಡ್ರಿ; ಕಾಂಗ್ರೆಸ್ಸಿನಿಂದ ಇನ್ನೂ 10 ಶಾಸಕರನ್ನ ತಗೋರೀ: ಆರ್.ಬಿ.ತಿಮ್ಮಾಪುರ

ಬಿಜೆಪಿಗೆ ಅಗತ್ಯವಿರುವುದಾದರೆ ಕಾಂಗ್ರೆಸ್‌ನಿಂದ ಇನ್ನು ಹತ್ತು ಜನ ಶಾಸಕರನ್ನು ಖರೀದಿಸಲ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾತ್ರ ಬಿಜೆಪಿ ವರಿಷ್ಠರು ತೊಂದರೆಕೊಡಬಾರದು ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.

published on : 8th February 2020

ರಾಜ್ಯಾದ್ಯಂತ ನಿರುದ್ಯೋಗಿಗಳಿಗೆ 450 ಟೂರಿಸ್ಟ್ ಟ್ಯಾಕ್ಸಿ ವಿತರಣೆ: ಯಡಿಯೂರಪ್ಪ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಯುವ ಸಮೂಹ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.

published on : 1st February 2020

ಅಕ್ರಮ ಸಕ್ರಮ: ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ– ಸಿ.ಎಂ ಎಚ್ಚರಿಕೆ

ಅಕ್ರಮ ಸಕ್ರಮ ಯೋಜನೆಯಡಿ ಹಕ್ಕು ಪತ್ರ ವಿತರಿಸಲು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು. 

published on : 28th January 2020

ಆನಂದರಾವ್ ವೃತ್ತದ ಮೇಲ್ಸೇತುವೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು: ಯಡಿಯೂರಪ್ಪ ಘೋಷಣೆ

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ನಗರದ ಆನಂದರಾವ್ ವೃತ್ತದ ಮೇಲ್ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

published on : 26th January 2020

ದಾವೋಸ್‌ ಶೃಂಗಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಜಗದೀಶ್ ಶೆಟ್ಟರ್, ಅಧಿಕಾರಿಗಳ ನಿಯೋಗ ಭಾಗಿ

ದಾವೋಸ್‌ನಲ್ಲಿ ಜ.21ರಿಂದ 24ರವರೆಗೆ ಹಮ್ಮಿಕೊಂಡಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆ.

published on : 17th January 2020
1 2 3 4 >