• Tag results for ಭಯೋತ್ಪಾದಕ ದಾಳಿ

ಕೊರೋನಾ ಸಂಕಷ್ಟದ ಸಮಯದಲ್ಲೂ ಭಾರತೀಯ ಯೋಧರ ಮೇಲೆ ಉಗ್ರರ ದಾಳಿ, 3 ಯೋಧರು ಹುತಾತ್ಮ!

ಕೊರೋನಾ ಸಂಕಷ್ಟದ ಸಮಯದಲ್ಲೂ ಉಗ್ರರು ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗಿದ್ದಾರೆ. ಸಿಆರ್ಪಿಎಫ್ ಯೋಧರಿದ್ದ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.

published on : 18th April 2020

ಜಮ್ಮು-ಕಾಶ್ಮೀರ: ಕಿಶ್ತವರ್‌ನಲ್ಲಿ ಶಂಕಿತ ಉಗ್ರರಿಂದ ದಾಳಿ; ವಿಶೇಷ ಪೊಲೀಸ್ ಅಧಿಕಾರಿ ಹುತಾತ್ಮ

ಉಗ್ರರ ಗುಂಪೊಂದು ಅವರ ಶಸ್ತ್ರಾಸ್ತ್ರಗಳನ್ನು ಕಿತ್ತು ದಾಳಿ ನಡೆಸಿದ ಪರಿಣಾಮ ಓರ್ವ ವಿಶೇಷ ಪೊಲೀಸ್ ಅಧಿಕಾರಿ ಸಾವನ್ನಪ್ಪಿ, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತವರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

published on : 13th April 2020

ಅಮೆರಿಕನ್ನರಿಗೆ 9/11ರ ದಾಳಿಗಿಂತಲೂ ಭೀಕರ ಕೊರೋನಾ ವೈರಸ್!

ಅಮೆರಿಕಾದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 4 ಸಾವಿರಕ್ಕೇರಿದೆ. ಈ ಮೃತರ ಸಂಖ್ಯೆ ಅಮೆರಿಕಾದಲ್ಲಿ 9/11ರ ಭಯೋತ್ಪಾದಕ ದಾಳಿಗಿಂತಲೂ ಅಧಿಕವಾಗಿದೆ.

published on : 1st April 2020

ಚಾರ್ಜ್ ಶೀಟ್ ಸಲ್ಲಿಸುವಲ್ಲಿ ಎನ್ಐಎ ವಿಫಲ: ಪುಲ್ವಾಮಾ ದಾಳಿಯ ಆರೋಪಿಗೆ ಜಾಮೀನು!

ಪುಲ್ವಾಮಾದಲ್ಲಿ ನಡೆದ ಭಾರತೀಯ ಯೋಧರ ಹತ್ಯಾಕಾಂಡಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ದೇಶವಾಸಿಗಳು ವೀರ ಯೋಧರನ್ನು ನೆನೆದು ಕಣ್ಣೀರು ಹಾಕಿದ್ದರು. ಇದೀಗ ಅಂತಹ ಪುಲ್ವಾಮಾ ದಾಳಿಯ ಆರೋಪಿಗೆ ಕೋರ್ಟ್ ಜಾಮೀನು ನೀಡಿದೆ. 

published on : 27th February 2020

ಪುಲ್ವಾಮಾ ದಾಳಿಗೆ ಒಂದು ವರ್ಷ: ಅಂದು ಏನು ನಡೆಯಿತು? ಭಾರತ ಹೇಗೆ ಪ್ರತಿಕ್ರಿಯಿಸಿತು? 

ಸರಿಯಾಗಿ ವರ್ಷದ ಹಿಂದೆ, ಫೆಬ್ರವರಿ 14ರ ಅಪರಾಹ್ನ 3 ಗಂಟೆ ಸಮಯ. ಜೈಶ್ ಇ ಮೊಹಮ್ಮದ್(ಜೆಇಎಂ) ಸಂಘಟನೆಯ ಉಗ್ರಗಾಮಿಗಳನ್ನು ಮತ್ತು ಸ್ಫೋಟಕಗಳನ್ನು ಹೊತ್ತ ವಾಹನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು.

published on : 14th February 2020

ಜೆಎನ್‌ಯು ಹಿಂಸಾಚಾರವನ್ನು 26/11ರ ಮುಂಬೈ ಉಗ್ರ ದಾಳಿಗೆ ಹೋಲಿಸಿದ ಸಿಎಂ ಉದ್ಧವ್ ಠಾಕ್ರೆ!

ಜಾಮಿಯಾ ವಿವಿ ಕ್ಯಾಂಪ್ ನಲ್ಲಿನ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಚ್ ಅನ್ನು ಬ್ರಿಟಿಷ್ ಆಡಳಿತದ ಜಲಿಯನ್ ವಾಲಾಬಾಗ್ ಗೆ ಹೋಲಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೀಗ ಜೆಎನ್ ಯು ಕಾಲೇಜಿನಲ್ಲಿನ ಹಿಂಸಾಚಾರವನ್ನು 26/11ರ ಮುಂಬೈ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ.

published on : 6th January 2020

ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿ; 2 ಸಾವು, ಶಸ್ತ್ರಧಾರಿ ಉಗ್ರನ ಹೊಡೆದುರುಳಿಸಿದ ಪೊಲೀಸರು!

ಲಂಡನ್ ನಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದು, ಶಸ್ತ್ರಧಾರಿ ಉಗ್ರನೋರ್ವ ಮನಸೋ ಇಚ್ಛೆ ಚಾಕು ಇರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

published on : 30th November 2019

ಉಗ್ರರಿಗೆ ಬೆಂಬಲ ಕೊಡುವುದನ್ನು ಮುಂದುವರಿಸಿದರೆ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವುದು ಖಂಡಿತ: ರಾಜನಾಥ್ ಸಿಂಗ್ 

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸದಿದ್ದರೆ ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್ಎಟಿಎಫ್)ಯಿಂದ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವುದು ಖಂಡಿತ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

published on : 27th November 2019

ಸಮುದ್ರ ಮಾರ್ಗದಲ್ಲಿ ಉಗ್ರ ದಾಳಿ ಸಾಧ್ಯತೆ ಕುರಿತು ಮಾಹಿತಿ: ರಾಜನಾಥ್ ಸಿಂಗ್

ಭಾರತದ ಸಮುದ್ರ ಗಡಿಯಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 29th September 2019

ಜೈಶ್ ಭಯೋತ್ಪಾದಕ ದಾಳಿ ಎಚ್ಚರಿಕೆ: ಜಮ್ಮು-ಕಾಶ್ಮೀರದ ವಾಯುನೆಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ 

ಜಮ್ಮು-ಕಾಶ್ಮೀರದ ಸುತ್ತಮುತ್ತ ಸಂಭಾವ್ಯ ಆತ್ಮಹತ್ಯಾ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆ ಇಲ್ಲಿನ ವಾಯುನೆಲೆಗಳಿಗೆ ಗುಪ್ತಚರ ಇಲಾಖೆಯ ಮಾರ್ಗದರ್ಶನದಂತೆ ಆರೆಂಜ್ ಅಲರ್ಟ್ ಘೋಷಿಸಿದೆ.  

published on : 25th September 2019

ಕಾಶ್ಮೀರ ಭೀಕರ ಉಗ್ರ ದಾಳಿಯ ಯೋಜನೆ ವಿಫಲಗೊಳಿಸಿದ ಸೇನೆ! 

ಕಾಶ್ಮೀರದಲ್ಲಿ ಸಂಭಾವ್ಯ ಭೀಕರ ಉಗ್ರ ದಾಳಿಯ ಯೋಜನೆಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. 

published on : 23rd September 2019

ಉಗ್ರ ದಾಳಿ ಭೀತಿ, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ಲಂಕಾದಿಂದ ಪಾಕ್ ಪ್ರವಾಸ!

ಉಗ್ರರ ದಾಳಿ ಭೀತಿ, ಹಿರಿಯ ಆಟಗಾರರೇ ಟೂರ್ನಿಯಿಂದ ಹಿಂದೆ ಸರಿದಿರುವ ಈ ಪರಿಸ್ಥಿತಿಯಲ್ಲೂ ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸಕ್ಕೆ ತೆರಳುವುದಾಗಿ ಘೋಷಣೆ ಮಾಡಿದೆ.

published on : 20th September 2019

ಪುಲ್ವಾಮಾ ದಾಳಿ ರೂವಾರಿಯ ಸಹಚರ ದೇಶಾದ್ಯಂತ ದಾಳಿ ಮಾಡಲು ಸಂಚು ರೂಪಿಸಿದ್ದ; ಎನ್ಐಎ ಸ್ಫೋಟಕ ವರದಿ 

ಪುಲ್ವಾಮಾ ಭಯೋತ್ಪಾದಕ ದಾಳಿಯ ರೂವಾರಿ ಮುದಸ್ಸಿರ್ ಅಹ್ಮದ್ ಖಾನ್ ನ ನಿಕಟವರ್ತಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಸಜ್ಜಿದ್ ಅಹ್ಮದ್ ಖಾನ್ ದೆಹಲಿ-ಎನ್ ಸಿಆರ್ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ) ತಿಳಿಸಿದೆ.  

published on : 17th September 2019

ನೌಕೆ ಮೂಲಕ ಭಾರತದ ಮೇಲೆ ಭಯೋತ್ಪಾದಕ ದಾಳಿ; ತೀವ್ರ ಎಚ್ಚರಿಕೆ ಘೋಷಣೆ 

ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳಿಸಬೇಕೆಂಬ ಪಾಕಿಸ್ತಾನದ ಕುತಂತ್ರ ವಿಫಲವಾಗಿದೆ. ಆದರೂ ಅದು ತನ್ನ ಕೊಂಕು ಬುದ್ದಿಯನ್ನು ಬಿಟ್ಟಂತೆ ಕಾಣುತ್ತಿಲ್ಲ. ಇದೀಗ ಭಾರತದ ಇತರೆಡೆಗಳಲ್ಲಿ ಹಿಂಸಾಚಾರವನ್ನು ಉಂಟುಮಾಡುವ ತಂತ್ರವನ್ನು ಮಾಡುತ್ತಿದೆ.   

published on : 10th September 2019

ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿಗೆ ಪಾಕಿಸ್ತಾನದ 4 ಉಗ್ರರಿಂದ ಸಂಚು: ಗುಪ್ತಚರ ವರದಿ

ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ನಾಲ್ಕು ಉಗ್ರರು ಗಡಿಯಲ್ಲಿ ಹೊಂಚು ಹಾಕಿ ಕುಳಿತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

published on : 9th September 2019
1 2 3 4 5 >