• Tag results for ಮೋದಿ ಸರ್ಕಾರ

ಬಿಜೆಪಿ ಸಂಘಟನೆ, ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ: ಅಮಿತ್ ಶಾ ಗೆ ರಕ್ಷಣಾ ಖಾತೆ?

ಜಗತ್ ಪ್ರಕಾಶ್ ನಡ್ಡಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಮಹತ್ವದ ಸಂಘಟನಾತ್ಮಕ ಬದಲಾವಣೆಯಾಗುತ್ತಿದ್ದು, ಮತ್ತಷ್ಟು ಬದಲಾವಣೆಗೆ ಪಕ್ಷ ಅಣಿಯಾಗಿದೆ. 

published on : 29th June 2020

'ಓರ್ವ ಮಗನ ಹೆರಲು ಹೋಗಿ 5 ಹೆಣ್ಣು ಮಕ್ಕಳ ಹೆತ್ತ ಕೇಂದ್ರ ಸರ್ಕಾರ': ಕಾಂಗ್ರೆಸ್ ಮುಖಂಡನ ವಿವಾದಾತ್ಮಕ ಹೇಳಿಕೆ

ಕೇಂದ್ರದ ಮೋದಿ ಸರ್ಕಾರ ವಿಕಾಸ ಎಂಬ ಓರ್ವ ಮಗನನ್ನು ಹೆರಲು ಹೋಗಿ ಜಿಎಸ್ ಟಿ, ನೋಟು ರದ್ಧತಿಯಂತಹ ಐದು ಹೆಣ್ಣುಮಕ್ಕಳನ್ನು ಹೆತ್ತಿದೆ ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

published on : 25th June 2020

GeM ನೋಂದಣಿಗೆ ಉತ್ಪನ್ನದ ಮೂಲ ದೇಶದ ಮಾಹಿತಿ ಕಡ್ಡಾಯ: ಕೇಂದ್ರ ಸರ್ಕಾರ

ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ಇ-ಮಾರುಕಟ್ಟೆ (GeM-Government e-Marketplace)ಯಲ್ಲಿ ಉತ್ಪನ್ನಗಳ ನೋಂದಣಿಗೆ ಉತ್ಪನ್ನದ ಮೂಲ ದೇಶದ ಮಾಹಿತಿ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

published on : 23rd June 2020

ಚೀನಾ ದಾಳಿ ಪೂರ್ವನಿಯೋಜಿತ ಕೃತ್ಯ, ಮೋದಿ ಸರ್ಕಾರ ಗಾಢ ನಿದ್ರೆಯಲ್ಲಿದೆ: ರಾಹುಲ್ ಗಾಂಧಿ

ಲಡಾಖ್'ನ ಗಲ್ವಾನ್ ಕಣಿವೆಯಲ್ಲಿಚೀನಾದ ದಾಳಿ ಪೂರ್ವಯೋಜಿತವಾಗಿತ್ತು. ಹುತಾತ್ಮರಾದ ಯೋಧರ ಜೀವಕ್ಕೆ ಬೆಲೆ ಕಟ್ಟಲಾಗದು. ಆದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾತ್ರ ಗಾಢ ನಿದ್ರೆಯಲ್ಲಿತ್ತು ಎನ್ನುವುದು ಈಗ ಸ್ಪಷ್ಟವಾಗಿದೆದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

published on : 19th June 2020

"ಒನ್ ನೇಷನ್ ಒನ್ ರೇಷನ್ ಕಾರ್ಡ್" ಮುಂದಿನ ವರ್ಷ ದೇಶಾದ್ಯಂತ ಜಾರಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ "ಒಂದು ರಾಷ್ಟ್ರ ಒಂದು ಪಡಿತರ ಚೀಟಿ" ಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ 20 ರಾಜ್ಯಗಳಲ್ಲಿ ಜಾರಿಗೆ ತಂದಿದೆ. ಮುಂದಿನ ವರ್ಷ ಮಾರ್ಚ್‌ 31ರೊಳಗೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಈ ಯೋಜನೆಯನ್ನು ಜಾರಿಗೆ  ತರುವುದು ಕೇಂದ್ರ ಸರ್ಕಾರದ ಗುರಿಯಾಗಿದೆ.

published on : 2nd June 2020

ಮೋದಿ ಆಡಳಿತ ಭಾರತವನ್ನು ಶೂನ್ಯಸ್ಥಿತಿಗೆ ಕೊಂಡೊಯ್ದಿದೆ: ಡಿ.ಕೆ. ಶಿವಕುಮಾರ್ 

ಕಳೆದ 50 ವರ್ಷಗಳಲ್ಲಿ ನಿರ್ಮಾಣವಾಗಿದ್ದ ಹೊಸ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಆಡಳಿತಾವಧಿಯಲ್ಲಿ ಶೂನ್ಯಸ್ಥಿತಿಗೆ ಕೊಂಡೊಯ್ದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.  

published on : 30th May 2020

ಕೊರೋನಾ ವೈರಸ್ ಲಾಕ್ ಡೌನ್ 5.0: ಪ್ರವಾಸೋದ್ಯಮ, ಹೊಟೆಲ್ ಗಳಿಗೆ ವಿನಾಯಿತಿ ಸಾಧ್ಯತೆ!

ಕೊರೋನಾ ವೈರಸ್ ಲಾಕ್ ಡೌನ್ 4.0 ಭಾನುವಾರಕ್ಕೆ ಅಂತ್ಯವಾಗಲಿದ್ದು, ಜೂನ್ 1 ರಿಂದ 5ನೇ ಹಂತದ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಲಾಕ್ ಡೌನ್ ನಿಯಮಾವಳಿಗಳಿಂದ ಪ್ರವಾಸೋದ್ಯಮ ಮತ್ತು ಹೊಟೆಲ್  ಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ.

published on : 30th May 2020

ಮೋದಿ ನಾಯಕತ್ವದ ಭಾರತವನ್ನು ದಿಟ್ಟಿಸಿ ನೋಡುವ ಧೈರ್ಯ ಯಾರಿಗೂ ಇಲ್ಲ: ರವಿಶಂಕರ್ ಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಭಾರತವನ್ನು ದಿಟ್ಟಿಸಿ ನೋಡುವ ಧೈರ್ಯವನ್ನು ಯಾರೂ ಮಾಡಲಾರರು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಮಹತ್ವದ ಹೇಳಿಕೆ ನೀಡಿದ್ದಾರೆ. 

published on : 27th May 2020

ಕೇಂದ್ರದ 20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ: ಸಿದ್ದರಾಮಯ್ಯ ಲೇವಡಿ

.ಕೇಂದ್ರದ 20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ ಅಷ್ಟೇ, ಬಹುಪ್ರಚಾರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ರೂ.20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ 'ಕನ್ನಡಿಯೊಳಗಿನ ಗಂಟು' ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

published on : 17th May 2020

ಪ್ಯಾಕೇಜ್ ಘೋಷಣೆ ಸಂತಸದ ವಿಚಾರ; ಹಿಂದೆ ಘೋಷಿಸಿದ್ದ ಪ್ಯಾಕೇಜ್ ಏನಾಯಿತು?: ಡಿಕೆಶಿ

ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 20‌ ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿರುವುದು ಸಂತಸದ ವಿಚಾರವಾದರೂ ಹಿಂದೆ ಘೋಷಿಸಿದ್ದ 1610 ಕೋಟಿ ಪ್ಯಾಕೇಜ್ ಏನಾಯಿತು? ಇದು ಒಬ್ಬರಿಗಾದರೂ ತಲುಪಿದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

published on : 13th May 2020

ಲಾಕ್ ಡೌನ್ ವೇಳೆ ಬಡವರನ್ನು ನಿರ್ಲಕ್ಷಿಸಿದ ಮೋದಿ ಸರ್ಕಾರದ ವಿರುದ್ಧ ಚಿದಂಬರಂ ವಾಗ್ದಾಳಿ

ಕೇಂದ್ರ ಸರ್ಕಾರ ಲಾಕ್ ಡೌನ್ ಸಮಯದಲ್ಲಿ ಬಡವರ ಬಗ್ಗೆ ಕೆಟ್ಟ ಮತ್ತು ನಿರ್ಲಕ್ಷ್ಯದ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು, ಸರ್ಕಾರ ಬಡವರಿಗೆ ತಕ್ಷಣ ನಗದು ಸಹಾಯ ಮಾಡಬೇಕು ಎಂದು ಬುಧವಾರ ಒತ್ತಾಯಿಸಿದ್ದಾರೆ.

published on : 8th April 2020

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಗಳಿಗೆ ನೀಡಿದ್ದ ಸವಲತ್ತುಗಳನ್ನು ಹಿಂಪಡೆದ ಮೋದಿ ಸರ್ಕಾರ!

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಗಳಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಿಂಪಡೆದಿದೆ. 

published on : 1st April 2020

ಕೊರೋನಾ: ವೆಂಟಿಲೇಟರ್, ಮಾಸ್ಕ್ ಗಳ ರಫ್ತು ನಿಷೇಧಕ್ಕೆ ವಿಳಂಬ-ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

 ಕೊರೋನಾವೈರಸ್  ಏಕಾಏಕಿ  ಹಾವಳಿ ನಡುವೆ  ಜೀವ ಉಳಿಸುವ ಸಾಧನಗಳಾದ ವೆಂಟಿಲೇಟರ್ ಮತ್ತು ಸರ್ಜಿಕಲ್ ಮಾಸ್ಕ್ ರಫ್ತು ಮಾಡುವುದನ್ನು ನಿಷೇಧಿಸುವ ಸರ್ಕಾರದ ನಿರ್ಧಾರದಲ್ಲಿನ "ವಿಳಂಬ" ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

published on : 23rd March 2020

2014ರಿಂದ 15,000 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡಿದ ಮೋದಿ ಸರ್ಕಾರ

 2014 ರಿಂದೀಚೆಗೆ  15,036 ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐದು ನೆರೆರಾಷ್ಟ್ರಗಳ ಸುಮಾರು 19,000 ಜನರಿಗೆ ಭಾರತ ಪೌರತ್ವ ನೀಡಲಾಗಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.  

published on : 4th March 2020

ದೆಹಲಿ ಹಿಂಸಾಚಾರ ಕೇಂದ್ರ ಸರ್ಕಾರ ಪ್ರಾಯೋಜಿತ ನರಮೇಧ: ಮಮತಾ ಬ್ಯಾನರ್ಜಿ

ದೆಹಲಿಯಲ್ಲಿ ನಡೆದ ಹಿಂಸಾಚಾರ ಸಂಬಂಧ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ಕೇಂದ್ರ ಸರ್ಕಾರ ಪ್ರಾಯೋಜಿತ ನರಮೇಧ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

published on : 2nd March 2020
1 2 3 4 5 6 >