• Tag results for ರಾಮ ಮಂದಿರ

ರಾಮ ಮಂದಿರ ನಿರ್ಮಾಣ ಟ್ರಸ್ಟ್ ಗೆ ಅಧ್ಯಕ್ಷ-ಕಾರ್ಯದರ್ಶಿಗಳ ನೇಮಕ

ರಾಮ ಮಂದಿರ ನಿರ್ಮಾಣ ಟ್ರಸ್ಟ್ ಗೆ ಅಧ್ಯಕ್ಷ-ಕಾರ್ಯದರ್ಶಿಗಳ ನೇಮಕ ಮಾಡಲಾಗಿದ್ದು, ಪ್ರಧಾನಿ ಮೋದಿ ಆಪ್ತರೆಂದು ಹೇಳಲಾಗುತ್ತಿರುವ ನೃಪೇಂದ್ರ ಮಿಶ್ರಾ ಅವರಿಗೆ ದೇಗುಲ ನಿರ್ಮಾಣ ಸಮಿತಿಯಲ್ಲಿ ಪ್ರಮುಖ ಪಾತ್ರ ನೀಡಲಾಗಿದೆ ಎನ್ನಲಾಗಿದೆ.

published on : 20th February 2020

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಯಲ್ಲಿ 15 ಮಂದಿ ಟ್ರಸ್ಟಿಗಳಿರಲಿದ್ದು, ಓರ್ವ ದಲಿತರಿಗೆ ಅವಕಾಶ ಕಲ್ಪಿಸಲಾಗಿದೆ: ಅಮಿತ್ ಶಾ

ಕೇಂದ್ರ ಸರ್ಕಾರ ರಚಿಸಲಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಯಲ್ಲಿ 15 ಮಂದಿ ಟ್ರಸ್ಟಿಗಳಿರಲಿದ್ದು, ಓರ್ವ ದಲಿತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ನೀಡಿದ್ದಾರೆ. 

published on : 5th February 2020

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಸಮಿತಿ ರಚನೆ: ಪ್ರಧಾನಿ ಮೋದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಕುರಿತು ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ. ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ತಿಳಿಸಿದ್ದಾರೆ. 

published on : 5th February 2020

ಮಾ.25 ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಾರಂಭ: ವಿನ್ಯಾಸ ಅಂತಿಮಗೊಳಿಸಲಿದ್ದಾರೆ ಪ್ರಧಾನಿ ಮೋದಿ! 

ಮಕರ ಸಂಕ್ರಾಂತಿ ಮುಕ್ತಾಯಗೊಂಡು ಹಿಂದೂಗಳಿಗೆ ಶುಭ ಮುಹೂರ್ತಗಳನ್ನಿಡುವ ದಿನಗಳು ಪ್ರಾರಂಭವಾಗಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಗಾಗಿ ಅಧಿಸೂಚನೆ ಯಾವುದೇ ಕ್ಷಣದಲ್ಲಿಯೂ ಬರಬಹುದಾಗಿದೆ. 

published on : 20th January 2020

ರಾಮ ಮಂದಿರ ನಿರ್ಮಾಣ ವಿಳಂಬ ಮಾಡಬಾರದು-ಇಕ್ಬಾಲ್ ಅನ್ಸಾರಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಬಾಬರಿ ಮಸೀದಿ ಪ್ರಕರಣದಲ್ಲಿ ಪ್ರಮುಖ ಮುಸ್ಲಿಂ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಪ್ರಧಾನಿ ನರೇಂದ್ರಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

published on : 30th December 2019

ಅಯೋಧ್ಯೆ ವಿಚಾರದಲ್ಲಿ ನಿರಂತರ ಹೋರಾಟ ನಡೆಸಿದ್ದ ಶ್ರೀಗಳು ಮಂದಿರ ನೋಡದೆಯೇ ಹೊರಟು ಹೋದರು..!

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪಣತೊಟ್ಟು ನಿರಂತರ ಹೋರಾಟ  ನಡೆಸಿಕೊಂಡು ಬಂದಿದ್ದ ಪೇಜಾವರ ಶ್ರೀಗಳು, ಮಂದಿರ ನೋಡದೆಯೇ ಇಹಲೋಕ ತ್ಯಜಿಸಿದ್ದಾರೆ. 

published on : 30th December 2019

ಮಂಗಳೂರಿನಲ್ಲಿ ವಿಹೆಚ್ ಪಿ ಸಭೆ, ಸಿಎಎ, ರಾಮ ಮಂದಿರ ನಿರ್ಮಾಣದ ಕುರಿತು ಚರ್ಚೆ

ಬಂದರು ನಗರಿ  ಮಂಗಳೂರಿನಲ್ಲಿ ಶುಕ್ರವಾರ ದಿಂದ ಮೂರು ದಿನಗಳ ಕಾಲ ವಿಶ್ವ ಹಿಂದೂ ಪರಿಷತ್(ವಿಹೆಚ್ ಪಿ)  ಸಭೆ ಆರಂಭಗೊಂಡಿದೆ. ಪೌರತ್ವ ತಿದ್ದುಪಡಿ ವಿಧೇಯಕ(ಸಿಎಎ) ಹಾಗೂ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದೆ.

published on : 27th December 2019

ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇ ನಾವು, ಕ್ರೆಡಿಟ್ ಯಾವುದೇ ಒಂದು ಪಕ್ಷಕ್ಕೆ ಹೋಗಬಾರದು- ಶಿವಸೇನೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇ ಶಿವಸೇನೆ.  ಹಾಗಾಗೀ ಮಂದಿರ ನಿರ್ಮಾಣದ ಕ್ರೆಡಿಟ್ ಯಾವುದೇ ಒಂದು ಪಕ್ಷಕ್ಕೆ ಹೋಗಬಾರದು ಎಂದು ಶಿವಸೇನಾ ಮುಖಂಡ ಸಂಜಯ್ ರವಾತ್ ಹೇಳಿದ್ದಾರೆ.

published on : 17th December 2019

ರಾಮ ಮಂದಿರಕ್ಕಾಗಿ ಪ್ರತೀ ಮನೆಯಿಂದ ರೂ.11, 1 ಇಟ್ಟಿಗೆ ನೀಡಬೇಕು: ಯೋಗಿ ಆದಿತ್ಯಾನಾಥ್

ಅಯೋಧ್ಯೆ ರಾಮ ಮಂದಿರಕ್ಕಾಗಿ ಪ್ರತೀ ಮನೆಯಿಂದ ರೂ.11 ಹಾಗೂ 1 ಇಟ್ಟಿಗೆಯನ್ನು ನೀಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯಾನಾಥ್ ಅವರು ಹೇಳಿದ್ದಾರೆ. 

published on : 14th December 2019

ಅಯೋಧ್ಯೆ ರಾಮ ದೇವಾಲಯ ಟ್ರಸ್ಟ್ ಗೆ ಉಡುಪಿಯ ಪೇಜಾವರ ಶ್ರೀಗಳು  

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಟ್ರಸ್ಟ್ ನಿರ್ಮಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ  ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ನ ಮೂಲಗಳು ತಿಳಿಸಿವೆ.

published on : 14th November 2019

ಯೋಗಿಗೆ ಅಯೋಧ್ಯೆ ಟ್ರಸ್ಟ್ ಸಾರಥ್ಯ: ಮಹಾಂತ ಗೋಪಾಲ ದಾಸ್ ಆಗ್ರಹ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಉದ್ದೇಶಕ್ಕಾಗಿ ರಚನೆಯಾಗಲಿರುವ ಟ್ರಸ್ಟ್ ನೇತೃತ್ವವನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಹಿಸಿಕೊಳ್ಳಬೇಕೆಂದು ರಾಮಜನ್ಮ ಭೂಮಿ ನ್ಯಾಸ್ (ಆರ್ಜೆಎನ್) ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್ ಒತ್ತಾಯ ಮಾಡಿದ್ದಾರೆ.

published on : 12th November 2019

ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ ವಿನ್ಯಾಸದಂತೆ ರಾಮಮಂದಿರ ನಿರ್ಮಿಸಬೇಕು: ಕೇಂದ್ರ ಸರ್ಕಾರಕ್ಕೆ ವಿಹೆಚ್ ಪಿ ಒತ್ತಾಯ

ಸುಪ್ರೀಂಕೋರ್ಟ್ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ  ಕೇಂದ್ರ ಸರ್ಕಾರ ಕ್ಷಿಪ್ರಗತಿಯಲ್ಲಿ ಮುಂದಾಗಬೇಕು ಹಾಗೂ  ಖ್ಯಾತ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ ಅವರ ವಿನ್ಯಾಸದಂತೆ ದೇವಾಲಯವನ್ನು ನಿರ್ಮಿಸಬೇಕೆಂಬ ಬೇಡಿಕೆಯನ್ನು ವಿಶ್ವ ಹಿಂದೂ ಪರಿಷತ್ ಮುಂದಿಟ್ಟಿದೆ.

published on : 11th November 2019

ಅಯೋಧ್ಯೆ: ಸುಪ್ರೀಂ ತೀರ್ಪನ್ನು ಶಾಂತಿಯುತವಾಗಿ ಸ್ವೀಕರಿಸೋಣ- ಪೇಜಾವರ ಶ್ರೀ ಮನವಿ

ಅಯೋಧ್ಯೆ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಂಡು, ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಸಂಭ್ರಮಾಚರಣೆಯ ಮೆರವಣಿಗೆಗಳನ್ನು ನಡೆಸದಂತೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಜೀ ಜನರಿಗೆ ಮನವಿ ಮಾಡಿದ್ದಾರೆ.

published on : 8th November 2019

ಅಯೋಧ್ಯೆಗೆ ಬಾಬರ್ ಹೋಗಿರಲಿಲ್ಲ, ಮಸೀದಿ ನಿರ್ಮಾಣವಾಗೇ ಇಲ್ಲ: ಸ್ವಾಮಿ ಗೋವಿಂದಾನಂದ ಸರಸ್ವತಿ

ಅಯೋಧ್ಯೆಗೆ ಬಾಬರ್ ಎಂದಿಗೂ ಹೋಗಿರಲಿಲ್ಲ, ಆತ ಅಥವಾ ಆತನ ಅಧಿಕಾರಿಗಳು ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದರು ಎಂಬುಸು ಸುಳ್ಳು ಇತಿಹಾಸಕಾರರಿಂದ ಸೃಷ್ಟಿಯಾದ ಮಾಹಿತಿ, ಅಯೋಧ್ಯೆ ರಾಮಮಂದಿರವಿದ್ದ ಜಾಗದಲ್ಲಿ ಮಸೀದಿ ನಿರ್ಮಾಣವಾಗೇ ಇಲ್ಲ

published on : 26th September 2019

ರಾಮಮಂದಿರ, ಏಕರೂಪ ನಾಗರೀಕ ಸಂಹಿತೆ ಜಾರಿ ಬಿಜೆಪಿಯ ಗುರಿ: ಡಿಸಿಎಂ ಅಶ್ವಥ್ ನಾರಾಯಣ್ 

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದು, ನಮ್ಮ ಮುಂದಿನ ಗುರಿ ರಾಮಮಂದಿರ ನಿರ್ಮಾಣ ಹಾಗೂ ಏಕರೂಪ ನಾಗರೀಕ ಸಂಹಿತೆ ಜಾರಿ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರು..

published on : 20th September 2019
1 2 3 >