• Tag results for ರಾಹುಲ್ ಗಾಂಧಿ

ಉದ್ಯೋಗಾವಕಾಶವಿಲ್ಲದೆ ಯುವಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ಉದ್ಯೋಗಾವಕಾಶವಿಲ್ಲದೆ ದೇಶದ ಯುವಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ದೇಶದ ಯುವಕರು ನಿರುದ್ಯೋಗದಿಂದ ಬಳಲುತ್ತಿರುವ ಇಂತಹ ಸ್ಥಿತಿಯಲ್ಲಿ ಗಣರಾಜ್ಯ ಪ್ರಬಲವಾಗುವುದಾದರೂ ಹೇಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

published on : 27th January 2020

ದೇಶವನ್ನು ವಿಭಜಿಸುವ ಯತ್ನದ ನಡುವೆ ಸಮಯ ಸಿಕ್ಕರೆ ಇದನ್ನು ಓದಿ: ಮೋದಿಗೆ ಸಂವಿಧಾನ ಪುಸ್ತಕ ಕಳುಹಿಸಿದ ಕಾಂಗ್ರೆಸ್

ಗಣರಾಜ್ಯೋತ್ಸವ ದಿನಾಚರಣೆಯಂದೇ ಪ್ರಧಾನಮಂತ್ರ ನರೇಂದ್ರ ಮೋದಿಗೆ ಕಾಂಗ್ರೆಸ್ ಸಂವಿಧಾನದ ಪ್ರತಿಯನ್ನು ಕಳುಹಿಸಿದ್ದು, ದೇಶವನ್ನು ವಿಭಜಿಸುವ ನಿಮ್ಮ ಪ್ರಯತ್ನದ ನಡುವೆ ಕಾಲಾವಕಾಶ ಸಿಕ್ಕರೆ ಇದನ್ನು ಓದಿ ಎಂದು ಟಾಂಗ್ ನೀಡಿದೆ. 

published on : 27th January 2020

ಭೀಮಾ-ಕೋರೆಗಾಂವ್ ಪ್ರಕರಣ ಎನ್‌ಐಎಗೆ ವರ್ಗಾವಣೆ:  ಮೋದಿ, ಶಾ ವಿರುದ್ಧ ರಾಹುಲ್ ವಾಗ್ದಾಳಿ

ಭೀಮಾ-ಕೊರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ವರ್ಗಾಯಿಸಿದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಶನಿವಾರ ಭೀಮಾ-ಕೋರೆಗಾಂವ್ ಪ್ರತಿರೋಧದ ಸಂಕೇತವಾಗಿದೆ ಮತ್ತು ಸರ್ಕಾರದ ಪಾತ್ರವನ್ನು ಎಂದಿಗೂ ಅಳಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

published on : 25th January 2020

ಮೋದಿ ಕಳ್ಳ ಹೇಳಿಕೆ ವಿವಾದ: ರಾಹುಲ್ ಗೆ ರಾಂಚಿ ಕೋರ್ಟ್ ನಿಂದ ಸಮನ್ಸ್ 

ಪ್ರಧಾನಿ ನರೇಂದ್ರ ಮೋದಿ ಕಳ್ಳ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಂಚಿ ಸಿವಿಲ್ ನ್ಯಾಯಾಲಯವೊಂದು ಸಮನ್ಸ್ ನೀಡಿದೆ. ಫೆಬ್ರವರಿ 22ಕ್ಕೂ ಮುಂಚಿತವಾಗಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ

published on : 19th January 2020

ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬನ್ನಿ: ರಾಹುಲ್ ಗೆ ಅಮಿತ್ ಶಾ ಸವಾಲು

 ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾರದೇ ನಾಗರೀಕತೆ ಕಿತ್ತುಕೊಳ್ಳುವ ಪ್ರಸ್ತಾಪವಿಲ್ಲ ಎಂದು ಮತ್ತೊಮ್ಮೆ ಪ್ರತಿಪಾದಿಸಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿ ಒಮ್ಮೆ ಕಾಯ್ದೆಯನ್ನು ಪೂರ್ತಿಯಾಗಿ ಓದಲಿ ಎಂದು ಸವಾಲು ಹಾಕಿದ್ದಾರೆ. 

published on : 18th January 2020

ರಾಹುಲ್ ಗಾಂಧಿ ರಾಜಕೀಯದಲ್ಲಿರುವುದೇ ನರೇಂದ್ರ ಮೋದಿಗೆ ದೊಡ್ಡ ಲಾಭ: ರಾಮಚಂದ್ರ ಗುಹಾ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಆರಿಸಿ ಸಂಸತ್ತಿಗೆ ಕಳುಹಿಸಿ ಕೇರಳ ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.

published on : 18th January 2020

ರಾಹುಲ್'ಗೆ ಒಳ್ಳೆಯ ಹೃದಯವಿದೆ ಆದರೆ, ತಮ್ಮ ಕಚೇರಿಯಲ್ಲಿ ಕನಿಷ್ಟ 15 ಗಂಟೆಯಾದರೂ ಕಾಲ ಕಳೆಯಬೇಕು: ಶಿವಸೇನೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಒಳ್ಳೆಯ ಹೃದಯವಿದೆ. ಆದರೆ, ತಮ್ಮ ಕಚೇರಿಯಲ್ಲಿ ಕನಿಷ್ಠ 15 ಗಂಟೆಯಾದರೂ ಕಳೆಯಬೇಕು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಹೇಳಿದ್ದಾರೆ. 

published on : 16th January 2020

ಸಿದ್ದರಾಮಯ್ಯ-ರಾಹುಲ್ ಗಾಂಧಿ ಭೇಟಿ: ಪಕ್ಷದ ಪುನಶ್ಚೇತನದ ಬಗ್ಗೆ ಚರ್ಚೆ

: ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಾದ ಜಮೀರ್‌ ಅಹಮದ್‌, ರಾಘವೇಂದ್ರ ಇಟ್ನಾಳ, ಭೀಮಾ ನಾಯ್ಕ, ಭೈರತಿ ಸುರೇಶ್‌, ತರೀಕೆರೆಯ ಮಾಜಿ ಶಾಸಕ ಶ್ರೀನಿವಾಸ್‌ ಮತ್ತಿತರರನ್ನೊಳಗೊಂಡ ತಂಡದೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

published on : 16th January 2020

ಸಿಎಎ ವಿರೋಧಿ ಸಭೆಗೆ ಶಿವಸೇನೆ ಗೈರು: ರಾಹುಲ್, ಅಹ್ಮದ್ ಪಟೇಲ್ ಭೇಟಿ ಮಾಡಿದ ಆದಿತ್ಯ ಠಾಕ್ರೆ! 

ಪೌರತ್ವ ತಿದ್ದುಪಡಿ ವಿರೋಧಿಸುವ ಪ್ರತಿಪಕ್ಷಗಳ ಸಭೆಗೆ ಶಿವಸೇನೆ ಗೈರಾಗಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ರಾಹುಲ್ ಗಾಂಧಿ, ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿದ್ದಾರೆ. 

published on : 15th January 2020

ಆರ್ಥಿಕ ವಿಚಾರಗಳಲ್ಲಿ ವಿಫಲವಾಗಿರುವ ಮೋದಿ ಇದೀಗ ದೇಶವನ್ನು ವಿಚಲಿತಗೊಳಿಸುತ್ತಿದ್ದಾರೆ- ರಾಹುಲ್  

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಥಿಕ ವಿಚಾರಗಳಲ್ಲಿ ವಿಫಲವಾಗಿದ್ದು, ಇದೀಗ ಸಿಎಎ, ಎನ್ ಆರ್ ಸಿ, ಮತ್ತು ಎನ್ಪಿಆರ್ ಮೂಲಕ ದೇಶವನ್ನು ವಿಚಲಿತಗೊಳಿಸಲಾಗುತ್ತಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ

published on : 14th January 2020

ಸಿಎಎಯಲ್ಲಿ ಭಾರತೀಯರಿಂದ ಪೌರತ್ವ ಕಸಿದುಕೊಳ್ಳುವ ಒಂದೇ ಒಂದು ನಿಬಂಧನೆ ತೋರಿಸಿ: ಪ್ರತಿಪಕ್ಷಗಳಿಗೆ ಶಾ ಸವಾಲ್ 

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಭಾರತೀಯರಿಂದ ಪೌರತ್ವ ಕಸಿದುಕೊಳ್ಳುವ ನಿಬಂಧನೆಯನ್ನು ತೋರಿಸಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲ್ ಹಾಕಿದ್ದಾರೆ.

published on : 12th January 2020

ಕ್ರೋನಿ ಕ್ಯಾಪಿಟಲಿಸ್ಟ್‌ಗಳ ಜೊತೆ  ಪ್ರಧಾನಿ  ಮೋದಿ ಸಭೆ: ರಾಹುಲ್ ಗಾಂಧಿ  ಲೇವಡಿ

ಪ್ರಧಾನಿ ಮೋದಿ ಅವರು ಕೇವಲ ಕ್ರೋನಿ ಕ್ಯಾಪಿಟಲಿಸ್ಟ್ ಗಳು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳೊಂದಿಗೆ ಮಾತ್ರ ಬಜೆಟ್ ಕುರಿತು ಸಮಾಲೋಚನೆ ನಡೆಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

published on : 10th January 2020

ಪ್ರಧಾನಿ ಮೋದಿಯವರ ಬಜೆಟ್ ಪೂರ್ವ ಸಮಾಲೋಚನೆ ಬಂಡವಾಳಶಾಹಿ ಸ್ನೇಹಿತರಿಗೆ ಸೀಮಿತವಾಗಿತ್ತು: ರಾಹುಲ್ ಗಾಂಧಿ 

ಪ್ರಧಾನಿ ನರೇಂದ್ರ ಮೋದಿಯವರ ಬಜೆಟ್ ಪೂರ್ವಭಾವಿ ಸಮಾಲೋಚನೆ ಅವರ ಆಪ್ತವಲಯದ ಉದ್ಯಮಿ ಸ್ನೇಹಿತರು ಮತ್ತು ಅತಿ ಶ್ರೀಮಂತರ ಜೊತೆ ನಡೆಸಿದ್ದಾರೆಯೇ ಹೊರತು ರೈತರು, ವಿದ್ಯಾರ್ಥಿಗಳು,ಯುವಕರು, ಮಹಿಳೆಯರು ಮತ್ತು ಮಧ್ಯಮ ವರ್ಗದವರ ಜೊತೆ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

published on : 10th January 2020

ಭಾರತ ಬಂದ್ ನಲ್ಲಿ ಭಾಗಿಯಾಗಿರುವ 25 ಕೋಟಿ ಕಾರ್ಮಿಕರಿಗೆ ನನ್ನ ವಂದನೆಗಳು:ರಾಹುಲ್ ಗಾಂಧಿ 

ಹತ್ತು ಕಾರ್ಮಿಕ ಮತ್ತು ವ್ಯಾಪಾರ ಸಂಘಟನೆಗಳು ಬುಧವಾರ ಕರೆ ನೀಡಿರುವ ಭಾರತ ಬಂದ್ ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ.  

published on : 8th January 2020

ದೆಹಲಿ ಮತದಾರರನ್ನು ಸೆಳೆಯಲು ರಾಮಮಂದಿರ, ಸಿಎಎ ಮತ್ತು 370ನೇ ವಿಧಿ ಪ್ರಸ್ತಾಪಿಸಿದ ಅಮಿತ್ ಶಾ

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಜನರನ್ನು ಹಾದಿ ತಪ್ಪಿಸುತ್ತಿದ್ದು, ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.

published on : 5th January 2020
1 2 3 4 5 6 >