• Tag results for ರೈತರ ಪ್ರತಿಭಟನೆ

ಮಾನವೀಯತೆ ಆಧಾರದ ಮೇಲೆ ಪ್ರತಿಭಟನೆ ಹಿಂಪಡೆಯಿರಿ: ರೈತರರಿಗೆ ಹರಿಯಾಣ ಮುಖ್ಯಮಂತ್ರಿ ಕೋರಿಕೆ

ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ, ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಮಾನವೀಯತೆ ಆಧಾರದಲ್ಲಿ ಪ್ರತಿಭಟನೆ ಹಿಂಪಡೆಯುವಂತೆ  ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮನವಿ ಮಾಡಿದ್ದಾರೆ.

published on : 15th April 2021

ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ ಬೆಂಬಲಿಸಿ ಉತ್ತರ ಪ್ರದೇಶ ಬಿಜೆಪಿ ನಾಯಕಿ ರಾಜೀನಾಮೆ

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ನಡೆಸುತ್ತಿರುವ ಆಂದೋಲನ ಬೆಂಬಲಿಸಿ ಉತ್ತರ ಪ್ರದೇಶ ಬಿಜೆಪಿ ನಾಯಕಿ ಪ್ರಿಯಮ್‌ವಾಡ  ಅವರು ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

published on : 7th April 2021

ಐದಾರು ತಿಂಗಳುಗಳಲ್ಲಿ ಸರ್ಕಾರ ನಮ್ಮ ಬೇಡಿಕೆ ಒಪ್ಪಿಕೊಳ್ಳುವ ಭರವಸೆಯಿದೆ-ರಾಕೇಶ್ ಟಿಕಾಯತ್

ಮುಂದಿನ ಐದಾರು ತಿಂಗಳುಗಳಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ಭಾನುವಾರ ಹೇಳಿದ್ದಾರೆ.

published on : 4th April 2021

ಕೃಷಿ ಕಾಯ್ದೆ ಸಂಬಂಧ 'ಸುಪ್ರೀಂ' ನೇಮಿತ ಸಮಿತಿಯಿಂದ ವರದಿ ಸಲ್ಲಿಕೆ: ಮುಂದಿನ ಕ್ರಮ ನಿರ್ಧರಿಸಲಿದೆ ಕೋರ್ಟ್

ಮೂರು ಹೊಸ ಕೃಷಿ ಕಾನೂನುಗಳನ್ನು ಅಧ್ಯಯನ ಮಾಡಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ತನ್ನ ವರದಿಯನ್ನು ಮಾರ್ಚ್ 19ರಂದೇ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಿದೆ ಎಂದು ಅದರ ಸದಸ್ಯರೊಬ್ಬರು ತಿಳಿಸಿದ್ದಾರೆ.

published on : 31st March 2021

ದೆಹಲಿ ರೀತಿಯಲ್ಲಿ ಬೆಂಗಳೂರನ್ನೂ ಸುತ್ತುವರೆಯಿರಿ: ರೈತರಿಗೆ ಟಿಕಾಯತ್‌ ಕರೆ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸಲು ಎಲ್ಲರೂ ದೆಹಲಿಗೆ ಬರುವ ಅಗತ್ಯವಿಲ್ಲ..ಬೆಂಗಳೂರನ್ನೇ ದೆಹಲಿ ರೀತಿಯಲ್ಲಿ ರೈತರ ರೀತಿ ಸುತ್ತುವರಿಯಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

published on : 21st March 2021

ಎಫ್ಐ ಆರ್ ಪ್ರಶ್ನಿಸಿ ಕಂಗನಾ ಅರ್ಜಿ: ತುಮಕೂರು ಪೊಲೀಸರಿಗೆ ಹೈಕೋರ್ಟ್ ನೊಟೀಸ್

ರೈತರ ಪ್ರತಿಭಟನೆ ವಿಷಯವಾಗಿ ಟ್ವೀಟ್ ಮಾಡಿದ್ದಕ್ಕೆ ಕಂಗನಾ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಹೈಕೋರ್ಟ್ ಕರ್ನಾಟಕ ಪೊಲೀಸರಿಗೆ ನೊಟೀಸ್ ಜಾರಿಗೊಳಿಸಿದೆ.

published on : 19th March 2021

ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತರ ಹೋರಾಟ ಸದ್ದು: ಗ್ರಾಮಿ ವೇದಿಕೆಯಲ್ಲಿ 'ಐ ಸ್ಟ್ಯಾಂಡ್ ವಿತ್ ಫಾರ್ಮರ್ಸ್' ಕೂಗು

ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರೈತರ ಹೋರಾಟ ಸದ್ದು ಮಾಡುತ್ತಿದ್ದು, ಗ್ರಾಮಿ ವೇದಿಕೆಯಲ್ಲಿ ರೈತರ ಹೋರಾಟದ ಪರ ಕೂಗು ಕೇಳಿಬರುತ್ತಿದೆ.

published on : 15th March 2021

ದೆಹಲಿಗೆ ಟ್ರ್ಯಾಕ್ಟರ್ ಪ್ರವೇಶ, ಸಂಸತ್ತಿನಲ್ಲೇ ಮಂಡಿ ತೆರೆಯುತ್ತೇವೆ: ರಾಕೇಶ್ ಟಿಕಾಯತ್

ರಾಷ್ಟ್ರರಾಜಧಾನಿ ದೆಹಲಿಗೆ ಟ್ರಾಕ್ಟರ್ ಗಳನ್ನು ಕೊಂಡೊಯ್ದು ಸಂಸತ್ ಆವರಣದಲ್ಲೇ ಮಂಡಿ ತೆರೆಯುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

published on : 14th March 2021

ಕೃಷಿ ಕಾನೂನುಗಳ ವಿರುದ್ಧ ರಾಜ್ಯದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರೈತ ಮುಖಂಡ ಟಿಕಾಯತ್ ಭಾಗಿ

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳು ಮತ್ತು ವಿದ್ಯುತ್ ವಲಯ ಖಾಸಗೀಕರಣ  ವಿರುದ್ಧದ ಹೋರಾಟವನ್ನು ವಿಸ್ತರಿಸುವ ಭಾಗವಾಗಿ ರೈತ ಪಂಚಾಯತ್ ಸಹಯೋಗದೊಂದಿಗೆ ಬೆಳಗಾವಿ ಸೇರಿದಂತೆ ರಾಜ್ಯದ ಮೂರು ಕಡೆಗಳಲ್ಲಿ ರೈತ ಚಳುವಳಿ ನಡೆಸಲು ಯೋಜಿಸಲಾಗಿದ್ದು, ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ್ ಕಿಸಾನ್ ಮೋರ್ಚಾ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

published on : 13th March 2021

ರೈತರ ಪ್ರತಿಭಟನೆ: ಟಿಕ್ರಿ ಗಡಿಯಲ್ಲಿ ಕಿಸಾನ್ ಸೋಷಿಯಲ್ ಆರ್ಮಿಯಿಂದ ಶಾಶ್ವತ ಆಶ್ರಯ ಮನೆಗಳನ್ನು ನಿರ್ಮಾಣ!

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಟಿಕ್ರಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗಾಗಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೆಲವು ಶಾಶ್ವತ ಆಶ್ರಯತಾಣಗಳನ್ನು ಕಿಸಾನ್ ಸೋಷಿಯಲ್ ಆರ್ಮಿ ನಿರ್ಮಿಸಿದೆ.

published on : 13th March 2021

ಮೋದಿ ಸರ್ಕಾರ ಕೊನೆಯಾಗುವವವರೆಗೂ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ರೈತರು ಸಿದ್ಧರಾಗಿದ್ದಾರೆ: ನರೇಂದ್ರ ಟಿಕಾಯತ್

ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಬಾಕಿ ಉಳಿದಿರುವ ಮೂರೂವರೆ ವರ್ಷದ ಅಂತಿಮ ದಿನದವರೆಗೂ ದೆಹಲಿ ಗಡಿಗಳಲ್ಲಿ ರೈತರು ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ ಎಂದು ರೈತ ಮುಖಂಡ ಹಾಗೂ ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ಪುತ್ರ ನರೇಂದ್ರ ಟಿಕಾಯತ್ ಹೇಳಿದ್ದಾರೆ.

published on : 10th March 2021

ಸಂಸತ್ತಿನ ಉಭಯ ಮನೆಗಳಲ್ಲಿ ಇಂದೂ ಗದ್ದಲ, ಕೋಲಾಹಲ: ಕಲಾಪ ಎರಡು ಬಾರಿ ಮುಂದೂಡಿಕೆ

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ಬಗ್ಗೆ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಏರ್ಪಡಿಸಿದ ಕಾರಣ ಮಧ್ಯಾಹ್ನ ಭೋಜನ ಅವಧಿಗೆ ಮುನ್ನ ಸತತ ಎರಡನೇ ಬಾರಿ ಕಲಾಪವನ್ನು ಮುಂದೂಡಲಾಗಿದೆ.

published on : 10th March 2021

ಯುಕೆ ಸಂಸತ್ತಿನಲ್ಲಿ ರೈತರ ಪ್ರತಿಭಟನೆ ಕುರಿತು ಚರ್ಚೆ: ಬ್ರಿಟಿಷ್ ರಾಯಭಾರಿಗೆ ಸಮನ್ಸ್ ನೀಡಿದ ಭಾರತ

ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಂಬಂಧ ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ ನಡೆಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಬ್ರಿಟನ್ ರಾಯಭಾರಿಗೆ ಸಮನ್ಸ್ ನೀಡಿದೆ.

published on : 9th March 2021

ಏಕಪಕ್ಷೀಯ, ಸುಳ್ಳು ಪ್ರತಿಪಾದನೆಗಳು: ರೈತರ ಪ್ರತಿಭಟನೆ ಬಗ್ಗೆ ಯುಕೆ ಸಂಸದರ ಚರ್ಚೆಗೆ ಭಾರತ ತೀವ್ರ ಖಂಡನೆ

ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮಧ್ಯೆ ಭಾರತದಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ವಿಷಯ ಕುರಿತು ಬ್ರಿಟಿಷ್ ಸಂಸತ್ ಸದಸ್ಯರ ಗುಂಪಿನಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ಏಕಪಕ್ಷೀಯ ಮತ್ತು ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗಿದೆ ಎಂದು ಲಂಡನ್ ನಲ್ಲಿರುವ ಭಾರತೀಯ ಹೈಕಮೀಷನ್ ಖಂಡಿಸಿದೆ. 

published on : 9th March 2021

ಚುನಾವಣಾ ರ್ಯಾಲಿ ಮಾಡೋದಕ್ಕೆ ಸಮಯವಿದೆ, ರೈತರನ್ನು ಭೇಟಿ ಮಾಡಲು ಸಮಯವಿಲ್ಲ: ಮೋದಿ ವಿರುದ್ಧ ಪವಾರ್ ಟೀಕೆ

ರೈತರು ಕಳೆದ 3 ತಿಂಗಳಿನಿಂದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು ಅವರನ್ನು ಭೇಟಿ ಮಾಡಲು ಪ್ರಧಾನಿ ಮೋದಿಗೆ ಸಮಯವಿಲ್ಲ. ಆದರೆ ಚುನಾವಣಾ ರ್ಯಾಲಿಗಳನ್ನು ನಡೆಸುವುದಕ್ಕೆ ಸಮಯವಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಲೇವಡಿ ಮಾಡಿದ್ದಾರೆ.

published on : 8th March 2021
1 2 3 4 5 6 >