• Tag results for ವಂಚನೆ ಪ್ರಕರಣ

ಬೆಂಗಳೂರು: ಸರ್ಕಾರಿ ಉದ್ಯೋಗದ ಆಮಿಷ ತೋರಿ ಶಿಕ್ಷಕರಿಗೆ 98 ಲಕ್ಷ ರೂ. ದೋಖಾ, ದೂರು ದಾಖಲು

ಸರ್ಕಾರಿ ನೌಕರಿ ಸಿಗಲಿದೆ ಎಂಬ ಆಸೆಯಿಂದ ಲಕ್ಷ ಲಕ್ಷ ಹಣ ನೀಡಿದ್ದ 80 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು,ಈಗ ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ವಂಚನೆಗೆ ಒಳಗಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ. ಸದ್ಯ ಈ ಶಿಕ್ಷಕರು ವಂಚನೆ ಮಾಡಿದ್ದ ವ್ಯಕ್ತಿಯ ವಿರುದ್ಧ ದೊಡ್ಡಬಳ್ಳಾಪುರ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.  

published on : 19th June 2020

ಪಿಎನ್ಬಿ ವಂಚನೆ ಪ್ರಕರಣ: ಜುಲೈ 9ರವರೆಗೆ ನೀರವ್ ಮೋದಿ ಕಸ್ಟಡಿ ಅವಧಿ ವಿಸ್ತರಣೆ!

ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಬಹುಕೋಟಿ ವಂಚನೆ ನಂತರ ದೇಶ ಬಿಟ್ಟು ಪಲಾಯನ ಮಾಡಿ ಸದ್ಯ ಲಂಡನ್ ಜೈಲಿನಲ್ಲಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಕಸ್ಟಡಿ ಅವಧಿಯನ್ನು ಜುಲೈ 9ರವರೆಗೆ ವಿಸ್ತರಿಸಲಾಗಿದೆ. 

published on : 11th June 2020

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಮಹಿಳೆಯಿಂದ 5.6 ಲಕ್ಷ ದೋಚಿದ ಭೂಪ!

ಮ್ಯಾಟ್ರಿಮೋನಿ ವೆಬ್ ಸೈಟ್ ವೊಂದರಲ್ಲಿ ಪರಿಚಯವಾದ ಮಹಿಳೆಯೊಬ್ಬರನ್ನು ವಿವಾಹವಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ 5.6 ಲಕ್ಷ ರೂಗಳ ವಂಚಿಸಿರುವ ಘಟನೆ ಬೆಂಗಳೂರಿನ  ಜಯನಗರದಲ್ಲಿ ನಡೆದಿದೆ.

published on : 26th May 2020

ದೇವರ ಹೆಸರಲ್ಲಿ ವಿಧವೆಗೆ ಬೆದರಿಕೆ, 27 ಕೋಟಿ ರೂ ವಂಚಿಸಿ ಪರಾರಿಯಾದ 'ಕುಡುಕ ಸ್ವಾಮೀಜಿ'

ಸೊಲ್ಲಾಪುರದಮ್ಮ ಮೈ ಮೇಲೆ ಬರುತ್ತಾಳೆ ಎಂದು ಸುಳ್ಳು ಹೇಳಿ ವಿಧವೆ ಮಹಿಳೆಯನ್ನು ಬೆದರಿಸಿ ಆಕೆಗೆ ಬರೊಬ್ಬರಿ 27 ಕೋಟಿ ರೂ ವಂಚನೆ ಕುಡುಕ ಸ್ವಾಮೀಜಿಯೋರ್ವ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ.

published on : 29th February 2020

ತೆರಿಗೆ ವಂಚನೆ ಪ್ರಕರಣ: ಕಾರ್ತಿ ಚಿದಂಬರಂ ಗೆ ತಾತ್ಕಾಲಿಕ ರಿಲೀಫ್

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧದ ದೋಷಾರೋಪಣೆ ತಯಾರಿಸುವ ಪ್ರಕ್ರಿಯೆಗೆ ನೀಡಿರುವ ತಡೆಯಾಜ್ಞೆಯನ್ನು ಮದ್ರಾಸ್ ಹೈಕೋರ್ಟ್ ಫೆ. 12ರವರೆಗೆ ವಿಸ್ತರಿಸಿದೆ. 

published on : 27th January 2020

ಠೇವಣಿದಾರರು ಗೊಂದಲಕ್ಕೆ ಒಳಗಾಗಬೇಕಿಲ್ಲ: ಜನತಾ ಸೇವಾ ಕೋ-ಆಪರೇಟಿವ್‌ ಬ್ಯಾಂಕ್‌ ಆಡಳಿತ ಮಂಡಳಿ

ಬ್ಯಾಂಕಿನ ವಿರುದ್ದ ದ್ವೇಷ ಹಾಗೂ ತೇಜೋವಧೆ ಮಾಡುವ ಉದ್ದೇಶದಿಂದ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನು ಮಾಡಲಾಗುತ್ತಿದ್ದು, ಠೇವಣಿದಾರರು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜನತಾ ಸೇವಾ ಕೋ ಆಪರೇಟಿವ್‌ ಬ್ಯಾಂಕಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

published on : 26th January 2020

ಬೆಂಗಳೂರು: ಬ್ಯಾಂಕ್ ಗಳಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ

ಬ್ಯಾಂಕ್ ಗಳಿಂದ 20 ಕೋಟಿ ರೂ ಅಧಿಕ ಸಾಲ ಪಡೆದು, ವಂಚಿಸಿ, ತಲೆಮರೆಸಿಕೊಂಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.   

published on : 9th January 2020

ವಂಚನೆ ಆರೋಪ: ಸ್ಯಾಂಡಲ್ ವುಡ್ ನಿರ್ದೇಶಕನ ವಿರುದ್ಧ ಪೊಲೀಸ್ ಕೇಸ್!

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕನ ವಿರುದ್ಧ ಗಂಭೀರ ವಂಚನೆ ಮತ್ತು ಕೊಲೆ ಬೆದರಿಕೆ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

published on : 15th December 2019

ಬೆಂಗಳೂರು: ಮಾಜಿ ಸಚಿವ ಚಿಂಚನಸೂರ್ ವಿರುದ್ಧ ವಂಚನೆ ಕೇಸ್ ದಾಖಲಿಸಿದ ಮಹಿಳೆ ಆತ್ಮಹತ್ಯೆ!

ಮಾಜಿ ಸಚಿವ, ಗುರುಮಿಟ್ಕಲ್ ಶಾಸಕ ಬಾಬುರಾವ್ ಚಿಂಚನಸೂರ್ ವಿರುದ್ಧ ಹಣ ವಂಚನೆ ಪ್ರಕರಣ ದಾಖಲಿಸಿದ ಮಹಿಳೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಡಿಕೊಂಡಿದ್ದಾರೆ.

published on : 3rd November 2019

ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ?: ಕಣ್ವ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕನ ಬಂಧನ

ಐಎಂಎ ವಂಚನೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣದ ಸುಳಿವು ಪತ್ತೆಯಾಗಿದ್ದು, ಹೂಡಿಕೆದಾರರಿಗೆ ಬಹುಕೋಟಿ ವಂಚಿಸಿದ ಆರೋಪದ ಮೇರೆಗೆ ಕಣ್ವ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕನನ್ನು ಬಂಧಿಸಲಾಗಿದೆ ಎನ್ನಲಾಗಿದೆ.

published on : 1st November 2019

18 ಕೋಟಿ ರೂ. ವಂಚನೆ ಪ್ರಕರಣ: ಟಿವಿ 9 ಮಾಜಿ ಸಿಇಒ ರವಿ ಪ್ರಕಾಶ್ ಬಂಧನ

ಟಿವಿ 9 ವಾಹಿನಿ ಪ್ರವರ್ತಕ ಸಂಸ್ಥೆಯಾದ ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ (ಎಬಿಸಿಎಲ್)ಯ 18 ಕೋಟಿ ರೂ. ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಮೇಲೆ  ಬಹುಭಾಷಿಕ ಸುದ್ದಿವಾಹಿನಿ ಟಿವಿ 9 ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿ ಪ್ರಕಾಶ್‌ ಅವರನ್ನು ಇಲ್ಲಿನ ಬಂಜಾರ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ.

published on : 6th October 2019

ಬ್ರಿಟೀಷ್ ಏರ್‌ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: 54 ಮಂದಿಯಿಂದ ಲಕ್ಷಾಂತರ ರು. ಪಡೆದು ಪರಾರಿಯಾದ ಜೋಡಿ!

 ಬ್ರಿಟೀಷ್ ಏರ್‌ವೇಸಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವಜೋಡಿಯೊಂದು ಐವತ್ತಕ್ಕೂ ಹೆಚ್ಚು ಮಂದಿಗೆ ಲಕ್ಷಾಂತರ ರು. ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.

published on : 15th September 2019

ಬೆಂಗಳೂರು: ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ವಂಚಿಸಿದ್ದ ಆರೋಪಿ ಸೆರೆ

ಜಾಹೀರಾತು ಫೋಟೋ ಶೂಟ್, ಧಾರಾವಾಹಿ ಹಾಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ 9 ಸುಂದರ ಯುವತಿಯರನ್ನು ವಂಚಿಸಿದ ವ್ಯಕ್ತಿಯನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ

published on : 29th August 2019

ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಹೆಸರಲ್ಲಿ ವಂಚನೆ, ಕಾಶ್ಮೀರಿ ವ್ಯಕ್ತಿ ಸೇರಿ ಇಬ್ಬರು ಅರೆಸ್ಟ್

 ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳ ಸೋಗಿನಲ್ಲಿ ಮಂಗಳೂರು ಪ್ರವೇಸಿಸಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಕಾಶ್ಮೀರಿ ವ್ಯಕ್ತಿಯಾದರೆ ಇನ್ನೊಬ್ಬ ಪಂಜಾಬ್ ಮೂಲದವನೆನ್ನಲಾಗಿದೆ.  

published on : 24th August 2019

ರೋಷನ್ ಬೇಗ್ ಕುಟುಂಬದ ವಿರುದ್ಧ ಪೋಸ್ಟ್: 10 ಮಂದಿಗೆ ಸಮನ್ಸ್

ಐಎಂಎ ಹಗರಣಕ್ಕೆ ಸಂಬಂಧಿಸಿ ಶಿವಾಜಿನಗರ ಕ್ಷೇತ್ರದ ಅನರ್ಹ ಶಾಸಕ ರೋಷನ್ ಬೇಗ್ ಕುಟುಂಬದವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ 10 ಮಂದಿ ಪ್ರತಿವಾದಿಗಳಿಗೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ಇಂದು ಸಮನ್ಸ್ ಜಾರಿ ಮಾಡಿದೆ.

published on : 19th August 2019
1 2 3 4 >