• Tag results for ವಿಶ್ವ ಆರೋಗ್ಯ ಸಂಸ್ಥೆ

ಕೊರೋನಾ ವೈರಸ್ ನ ಡೆಲ್ಟಾ ರೂಪಾಂತರದಿಂದ ಅಪಾಯ: ಚೀನಾದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕೊರೋನಾ ವೈರಸ್ ಮೂಲ ಚೀನಾದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ ಆರಂಭವಾಗಿದ್ದು, ಚೀನಾದ ಫ್ಯೂಜಿಯನ್ ಪ್ರಾಂತ್ಯ ಮತ್ತು ಚೊಂಗ್ಕಿಂಗ್ ನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

published on : 31st July 2021

ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಅಡಿಯಲ್ಲಿ ಭಾರತಕ್ಕೆ 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆ ಅನುದಾನ!

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಾಥ್ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ತನ್ನ ಮಹತ್ವಾಕಾಂಕ್ಷಿ 'ಕೋವ್ಯಾಕ್ಸ್' ಲಸಿಕೆ ಅಭಿಯಾನದ ಅಡಿ 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆ ಅನುದಾನವಾಗಿ ನೀಡಲಿದೆ.

published on : 20th July 2021

ಮತ್ತಷ್ಟು ಕೋವಿಡ್-19 ರೂಪಾಂತರಗಳು ಸೃಷ್ಟಿಯಾಗಿ ಪ್ರಬಲವಾಗುವ ಆತಂಕವಿದೆ: ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್-19 ವೈರಸ್ ನ ಹೊಸ ರೂಪಾಂತರ ತಳಿಗಳು ಪ್ರಪಂಚದಾದ್ಯಂತ ಹರಡುವ ಅಪಾಯವಿದ್ದು, ಮುಂದಿನ ದಿನಗಳಲ್ಲಿ ಪ್ರಬಲವಾಗಿ ಪೀಡಿಸುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಎಚ್ಚರಿಕೆ ನೀಡಿದೆ.

published on : 16th July 2021

ತುರ್ತು ಬಳಕೆಯ ಅನುಮೋದನೆಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಕೋವ್ಯಾಕ್ಸಿನ್ ಲಸಿಕೆ ದಾಖಲೆಗಳ ಸಲ್ಲಿಕೆ: ಭಾರತ್ ಬಯೋಟೆಕ್

ಕೋವಿಡ್ ರೋಗಿಗಳಿಗೆ ತುರ್ತು ಬಳಕೆಯ ಅನುಮೋದನೆಗಾಗಿ ಕೋವ್ಯಾಕ್ಸಿನ್ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆ ಮಾಡಲಾಗಿದೆ ಎಂದು ಭಾರತ್ ಬಯೋಟೆಕ್ ಮಾಹಿತಿ ನೀಡಿದೆ.

published on : 13th July 2021

ಕೊರೋನಾ ವೈರಸ್ ಮೂಲದ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯ ವಿಶ್ವಾಸಾರ್ಹತೆ ಮೇಲೆ ತಜ್ಞರ ಶಂಕೆ!

ಇಡೀ ಜಗತ್ತನ್ನೇ ಮಾರಣಾಂತಿಕವಾಗಿ ಪೀಡಿಸುತ್ತಿರುವ ಮಾರಕ ಕೊರೋನಾ ವೈರಸ್ ಮೂಲದ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯ ವಿಶ್ವಾಸಾರ್ಹತೆಯನ್ನು ಜಾಗತಿಕ ತಜ್ಞರ ತಂಡ ಪ್ರಶ್ನೆ ಮಾಡುತ್ತಿದೆ.

published on : 2nd July 2021

96 ದೇಶಗಳಲ್ಲಿ ಕೋವಿಡ್ ಡೆಲ್ಟಾ ರೂಪಾಂತರಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ 2ನೇ ಅಲೆಯ ಆರ್ಭಟಕ್ಕೆ ಕಾರಣವಾಗಿದ್ದ ಕೊರೋನಾ ವೈರಸ್ ಡೆಲ್ಟಾ ರೂಪಾಂತರಿ ಆರ್ಭಟ ಇದೀಗ 96 ದೇಶಗಳಿಗೆ ವ್ಯಾಪಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

published on : 1st July 2021

ಜಗತ್ತಿನ 85 ದೇಶಗಳಲ್ಲಿ ಡೆಲ್ಟಾ ವೈರಸ್ ಸೋಂಕು ಪತ್ತೆ; ಪ್ರಬಲ ವಂಶಾವಳಿಯಾಗುವ ಆತಂಕವಿದೆ: ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ 2ನೇ ಅಲೆಯ ಆರ್ಭಟಕ್ಕೆ ಕಾರಣವಾಗಿದ್ದ ಕೊರೋನಾ ವೈರಸ್ ಡೆಲ್ಟಾ ರೂಪಾಂತರಿ ಇದೀಗ ಜಗತ್ತಿನ 85 ದೇಶಗಳಲ್ಲಿ ವ್ಯಾಪಿಸಿದ್ದು, ಪ್ರಬಲ ವಂಶಾವಳಿಯಾಗುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

published on : 24th June 2021

ಕೋವಿಡ್-19 ವೈರಸ್ ನ ಮತ್ತೊಂದು ರೂಪಾಂತರ; 29 ದೇಶಗಳಲ್ಲಿ ಅಟ್ಟಹಾಸ; 'ಲಾಂಬ್ಡಾ' ಅಪಾಯಕಾರಿ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿನಾದ್ಯಂತ ಮಾರಣಾಂತಿಕ ವೈರಸ್ ಕೋವಿಡ್-19 ಅಟ್ಟಹಾಸ ಮುಂದುವರೆದಿರುವಂತೆಯೇ ಇದೀಗ ಇದೇ ಡೆಡ್ಲಿ ವೈರಸ್ ನ ಮತ್ತೊಂದು ರೂಪಾಂತರ ಕೂಡ ತನ್ನ ಆರ್ಭಟ ಆರಂಭಿಸಿದೆ.

published on : 18th June 2021

ವಿಶ್ವ ಆರೋಗ್ಯ ಸಂಸ್ಥೆಗೆ 3ನೇ ಹಂತದ ಲಸಿಕಾ ಪ್ರಯೋಗದ ದತ್ತಾಂಶ ಸಲ್ಲಿಸಿದ ಭಾರತ್ ಬಯೋಟೆಕ್; ಇಒಐಗೆ ಒಪ್ಪಿಗೆ

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವ್ಯಾಕ್ಸಿನ್ ಲಸಿಕೆಯ ತುರ್ತುಬಳಕೆಯ ಅನುಮತಿಗೆ ಕಾಯುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ದತ್ತಾಂಶ ಮತ್ತು ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆ ಮಾಡಿದೆ.

published on : 17th June 2021

ಭಾರತದಲ್ಲಿ ಪತ್ತೆಯಾದ ಕೊರೋನಾ ವೈರಸ್ ತಳಿಗಳ ಪೈಕಿ ಡೆಲ್ಟಾ ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 B.1.617 'ಡೆಲ್ಟಾ' ರೂಪಾಂತರಿ ವೈರಸ್ ತಳಿಯೊಂದೇ ಪ್ರಸ್ತುತ ಅಪಾಯಕಾರಿಯಾಗಿ ಉಳಿದಿರುವ ಕೊರೊನಾ ವೈರಸ್‌ನ ಏಕೈಕ ರೂಪಾಂತರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

published on : 2nd June 2021

ಭಾರತದಲ್ಲಿ ಪತ್ತೆಯಾದ ಕೊರೋನಾ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ 'ಕಪ್ಪಾ' ಮತ್ತು 'ಡೆಲ್ಟಾ' ಎಂದು ನಾಮಕರಣ!

ಭಾರತದಲ್ಲಿ ಮೊದಲು ಪತ್ತೆಯಾಗಿ ಬಳಿಕ ಜಗತ್ತಿನ 51ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ 2 ರೂಪಾಂತರಿ ಕೊರೋನಾ ವೈರಸ್ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ 'ಕಪ್ಪಾ'(kappa) ಮತ್ತು 'ಡೆಲ್ಟಾ' (delta) ಎಂದು ಹೆಸರಿಸಿದೆ.

published on : 1st June 2021

ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್-19 B.1.617 ರೂಪಾಂತರಿ ವೈರಸ್ ಈಗ 53 ದೇಶಗಳಲ್ಲಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಕೋವಿಡ್-19 B.1.617 ರೂಪಾಂತರಿ ವೈರಸ್ ಇದೀಗ 53 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

published on : 27th May 2021

ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಕುರಿತು ಭಾರತ್ ಬಯೋಟೆಕ್ ನಿಂದ ಇನ್ನಷ್ಟು ಮಾಹಿತಿ ಬೇಕು: ವಿಶ್ವ ಆರೋಗ್ಯ ಸಂಸ್ಥೆ

ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವ ಕುರಿತು ಮತ್ತಷ್ಟು ದಾಖಲೆ ಮತ್ತು ಮಾಹಿತಿ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

published on : 25th May 2021

ಭಾರತದಲ್ಲಿ ಕಳೆದ ವಾರದಲ್ಲಿ ಶೇ.13ರಷ್ಟು ಹೊಸ ಕೋವಿಡ್ ಸೋಂಕು ಪ್ರಕರಣಗಳ ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ

ಕಳೆದೊಂದು ವಾರದ ಅವಧಿಯಲ್ಲಿ ಭಾರತದ ಕೋವಿಡ್ ಸೋಂಕು ಪ್ರಕರಣಗಳ ಪ್ರಮಾಣದಲ್ಲಿ ಶೇ.13ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

published on : 19th May 2021

'ಕೊರೋನಾ ವೈರಸ್ ಮೂಲದ ಶೋಧ ಪೂರ್ಣಗೊಂಡಿಲ್ಲ'; ಚೀನಾ ಬೆಂಬಿಡದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ

ಇಡೀ ಜಗತ್ತೀಗೇ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮೂಲದ ಕುರಿತ ತನಿಖೆ ಮತ್ತು ಶೋಧ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳುವ ಮೂಲಕ ಚೀನಾದಲ್ಲಿ ಮತ್ತಷ್ಟು ತನಿಖೆ ಮಾಡಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಮುಂದಾಗಿದೆ.

published on : 16th May 2021
1 2 3 >