• Tag results for ಸಂಪುಟ ವಿಸ್ತರಣೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಕೊರೋನಾ, ಸಂಪುಟ ವಿಸ್ತರಣೆ ವಿಳಂಬ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದು, ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗಿದ್ದು, ಅನೇಕ ಬಿಜೆಪಿ ನಾಯಕರು ಇಟ್ಟುಕೊಂಡಿದ್ದ ಭರವಸೆಗಳಿಗೆ ತಣ್ಣೀರು ಎರಚಿದೆ.

published on : 4th August 2020

ಶೀಘ್ರ ಸಚಿವ ಸಂಪುಟ ವಿಸ್ತರಣೆ- ನಳೀನ್ ಕುಮಾರ್ ಕಟೀಲ್

ರಾಜ್ಯ ಸಚಿವ ಸಂಪುಟ ಶೀಘ್ರದಲ್ಲೇ ವಿಸ್ತರಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್  ಕಟೀಲ್ ಹೇಳಿದ್ದಾರೆ.

published on : 1st August 2020

ಸೋಮವಾರ ಎಂಎಲ್ಸಿಗಳ ಪ್ರಮಾಣ ವಚನ: ಸಚಿವರಾಗಲು ಇನ್ನೂ ಕಾಯಬೇಕು!

ವಿಧಾನಪರಿಷತ್ ಗೆ ನಾಮಾಂಕಿತಗೊಂಡಿರುವ ಐವರು ನಾಡಿದ್ದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ ಇಬ್ಬರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರು ಎಂಬುದನ್ನು ಮರೆಯುವಂತಿಲ್ಲ.

published on : 25th July 2020

ಬಿಎಸ್ ವೈ ಮುಂದೆ ಸಂಪುಟ ಪುನಾರಚನೆಯೆ ದೊಡ್ಡ ಸವಾಲು..!

ವಿಧಾನ ಪರಿಷತ್ತಿಗೆ ಸದಸ್ಯರ ನಾಮಕರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಮೇಲುಗೈ ಸಾಧಿಸಿದ್ದಾರೆ. ಮುಂದಿನದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸುಸೂತ್ರವಾಗಿ ನಡೆಯುತ್ತಾ?

published on : 23rd July 2020

ಮಧ್ಯಪ್ರದೇಶ ಸಂಪುಟ ವಿಸ್ತರಣೆ: ಜ್ಯೋತಿರಾದಿತ್ಯ ಸಿಂಧಿಯಾ 12 ಆಪ್ತರು ಸೇರಿ 28 ಮಂದಿಗೆ ಸಚಿವ ಸ್ಥಾನ

ತಮ್ಮ 2ನೇ ಸಂಪುಟ ವಿಸ್ತರಣೆಯಲ್ಲಿ 28 ಹೊಸ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ.  20 ಕ್ಯಾಬಿನೆಟ್ ಮಂತ್ರಿಗಳು ಮತ್ತು 8 ರಾಜ್ಯಖಾತೆ ಸಚಿವರಿಗೆ ರಾಜ್ಯಪಾಲ ಆನಂದಿಬೆನ್ ಪಟೇಲ್ ಪ್ರಮಾಣವಚನ ಬೋಧಿಸಿದರು.

published on : 2nd July 2020

ಶಾಸಕಾಂಗ ಸಭೆಯಲ್ಲಿ ಭಾವನೆ ಹಂಚಿಕೊಳ್ಳಲು ಅವಕಾಶ ನೀಡಬೇಕು, ಇಲ್ಲದಿದ್ದರೆ ಸಮಾನ ಮನಸ್ಕರ ಸಭೆ: ಯತ್ನಾಳ

ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಸಮಾನ ಮನಸ್ಕ ಶಾಸಕರು ಸಭೆ ಸೇರಿ ಚರ್ಚಿಸುತ್ತೇವೆ. ಎಷ್ಟು ಜನ ಶಾಸಕರು ಸೇರಿ ಚರ್ಚಿಸುತ್ತೇವೆ ಎಂದು ಈಗಲೇ ಹೇಳುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

published on : 14th February 2020

ಸಾಹುಕಾರ್ ಸಂತೃಪ್ತಿ: ಕೇಳಿದ್ದೊಂದು ಕೊಟ್ಟಿದ್ದೊಂದು ಸುಧಾಕರ್ ಅತೃಪ್ತಿ; ಲಕ್ಷ್ಮಣ ಸವದಿಗೆ ಹಿನ್ನಡೆ  

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟ ಸಹೋದ್ಯೋಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನಗಳ ನಂತರ 10 ಮಂದಿ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿದೆ.

published on : 11th February 2020

ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರಿಗೂ ಕೊಡದೆ ತಮ್ಮ ಬಳಿಯೇ ಇಟ್ಟುಕೊಂಡ ಸಿಎಂ ಯಡಿಯೂರಪ್ಪ

ಬೆಂಗಳೂರು ನಗರ ಪ್ರತಿನಿಧಿಸಲು ಈಗಾಗಲೇ ಸಂಪುಟದಲ್ಲಿ 7 ಸಚಿವರುಗಳಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತ್ರ ಬೆಂಗಳೂರು ನಗರಾಭಿವೃದ್ಧಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ರಾಜಕೀಯ ಚುರುಕತನವನ್ನು ಪ್ರದರ್ಶಿಸಿದ್ದಾರೆ. 

published on : 11th February 2020

ಸಂಪುಟ ವಿಸ್ತರಣೆ: ಹಲವು ಜಿಲ್ಲೆಗಳಿಗೆ ಇಲ್ಲವಾದ ಪ್ರತಿನಿಧಿ- ಯತ್ನಾಳ್ ತೀವ್ರ ಅಸಮಾಧಾನ

ಖಾತೆ ಹೆಂಚಿಕೆ ಬೆನ್ನಲ್ಲೇ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. 

published on : 11th February 2020

ಸಂಪುಟದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯ ಇಲ್ಲ: ಸಿದ್ದರಾಮಯ್ಯ

ರಾಜ್ಯದ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾಧಾನ್ಯತೆ ಸಿಕ್ಕಿಲ್ಲ. ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯವೂ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

published on : 8th February 2020

ಬಿಎಸ್ ವೈ ಸಂಪುಟದಲ್ಲಿ ಒಕ್ಕಲಿಗರ ಪಾರುಪತ್ಯ: ಹೆಚ್ಚಾಗುತ್ತಿದೆ ಬಿಜೆಪಿ ಪ್ರಾಬಲ್ಯ

 ಒಕ್ಕಲಿಗ ಪ್ರಬಲ ಕ್ಷೇತ್ರಗಳಾದ ಮಂಡ್ಯ, ಯಶವಂತಪುರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಮೇಲೆ, ಯಡಿಯೂರಪ್ಪ ಸಂಪುಟದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ.

published on : 8th February 2020

ಬಂಡಾಯ ದೂರಾಗಿಸಲು ಏಪ್ರಿಲ್'ನಲ್ಲಿ ಸಂಪುಟ ಪುನಾರಚನೆಗೆ ಯಡಿಯೂರಪ್ಪ ಚಿಂತನೆ 

ಸಂಪುಟ ವಿಸ್ತರಣೆಯಿಂದ ಕೇಸರಿ ಪಾಳಯದಲ್ಲಿ ಬಂಡಾಯದ ಹೊಗೆಯಾಡುವ ಎಲ್ಲಾ ಸೂಚನೆಗಳು ಎದುರಾಗುತ್ತಿರುವ ಬೆನ್ನಲ್ಲೇ. ಬಂಡಾಯ ದೂರಾಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಶೀಘ್ರದಲ್ಲಿಯೇ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

published on : 8th February 2020

ಸಚಿವ ಸ್ಥಾನದಲ್ಲೂ ಬೆಳಗಾವಿ ದಾಖಲೆ: ಇದೇ ಮೊದಲ ಬಾರಿ ಜಿಲ್ಲೆಗೆ ಬರೋಬ್ಬರೀ 4 ಮಂತ್ರಿಗಳು!

ರಾಜ್ಯದ 2ನೇ ಅನಧಿಕೃತ ರಾಜಧಾನಿ ಎಂದು ಹೆಸರು ಪಡೆದಿರುವ ಬೆಳಗಾವಿ  ಬಿಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅತಿ ಹೆಚ್ಚಿನ ಸಂಖ್ಯೆ ಸಚಿವರನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿಗೆ ಕಾರಣವಾಗಿದೆ.

published on : 7th February 2020

ಕತ್ತಿ ವರಸೆಗೆ ಯಡಿಯೂರಪ್ಪ ಸುಸ್ತು: ಮನವೊಲಿಕೆ ಜವಾಬ್ದಾರಿ ಸವದಿಗೆ ವಹಿಸಿದ ಸಿಎಂ

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಉಮೇಶ್ ಕತ್ತಿ ನಿನ್ನೆ ಸಂಜೆಯಿಂದ ಬಿಜೆಪಿ ನಾಯಕರ ಕೈಗೆ ಸಿಕ್ಕದೆ ದೂರ ಉಳಿದಿದ್ದು,ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ

published on : 7th February 2020

ಪಕ್ಷದ್ರೋಹಿಗಳು ಎಂದಿಗೂ ಅನರ್ಹರೇ-ಸಿದ್ದರಾಮಯ್ಯ

ಪಕ್ಷದ್ರೋಹಿಗಳು ಎಂದಿಗೂ ಅನರ್ಹರೇ. ಕಾಂಗ್ರೆಸ್ ಗೆ ದ್ರೋಹ ಬಗೆದವರಿಗೆ ಮಂತ್ರಿಸ್ಥಾನ ಸಿಕ್ಕ ಮಾತ್ರಕ್ಕೆ ಅವರ ಅನರ್ಹ ಹಣೆಪಟ್ಟಿ ಅಳಿಸಿಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ

published on : 6th February 2020
1 2 3 4 5 6 >