• Tag results for ಸುಪ್ರೀಂ ಕೋರ್ಟ್

ಇರಾನ್ ನಲ್ಲಿ ಸಿಲುಕಿರುವ 250 ಭಾರತೀಯರಿಗೆ ಕೊವಿಡ್-19 ಪಾಸಿಟಿವ್: ಸುಪ್ರೀಂಗೆ ಕೇಂದ್ರ ಮಾಹಿತಿ

ಇರಾನ್ ಕೋಮ್ ನಲ್ಲಿ ಸಿಲುಕಿರುವ 250 ಭಾರತೀಯ ಯಾತ್ರಿಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಮತ್ತು ಅವರನ್ನು ಇನ್ನೂ ಸ್ಥಳಾಂತರಿಸಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

published on : 1st April 2020

22 ಲಕ್ಷ ವಲಸಿಗರಿಗೆ ಊಟ ನೀಡಲಾಗುತ್ತಿದೆ: ಸುಪ್ರೀಂ ಕೋರ್ಟಿಗೆ ಕೇಂದ್ರ ಮಾಹಿತಿ

ಕೊರೋನಾವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ವಲಸೆ ಕಾರ್ಮಿಕರಿಗೆ ಆಹಾರ, ನೀರು ಮತ್ತು ಆಶ್ರಯದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ನಿರ್ದೇಶನಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಂಗಳವಾರ  ಸ್ಥಿತಿ ವರದಿ ಸಲ್ಲಿಸಿದೆ.

published on : 31st March 2020

ಕೊರೋನಾ ಎಫೆಕ್ಟ್: ಕಾರ್ಮಿಕರ ವಲಸೆ ತಡೆಗೆ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಕೊಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್

ಕೊರೋನಾವೈರಸ್ ಹಾವಳಿಯ ಕಾರಣ ದೇಶಾದ್ಯಂತ ಲಾಕ್ ಡೌನ್  ಮಧ್ಯೆ ನಗರಗಳಿಂದ ತಮ್ಮ  ಹಳ್ಳಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ವಲಸೆ ಹೊರಟಿದ್ದಾರೆ.ಈ ಬಗೆಗೆ ಸರ್ಕಾರ ಯಾವ ಬಗೆಯ ಕ್ರಮಗಳನ್ನು ಕೈಗೊಂಡಿದೆ ಎಂದು  ಸುಪ್ರೀಂ ಕೋರ್ಟ್ ಕೇಂದ್ರದಿಂದ ಸ್ಥಿತಿ ವರದಿಯನ್ನು ಕೇಳಿದೆ.

published on : 30th March 2020

ಮ.ಪ್ರದೇಶ ರಾಜಕೀಯ ಬಿಕ್ಕಟ್ಟು: ರೆಬೆಲ್ ಶಾಸಕರ ರಾಜಿನಾಮೆ ಅಂಗೀಕರಿಸಿದ ಸ್ಪೀಕರ್

ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟಿಗೆ ಸ್ಪೀಕರ್ ಪ್ರಜಾಪತಿ ಕೊನೆಗೂ ತಾರ್ಕಿಕ ಅಂತ್ಯ ಹಾಡಿದ್ದು, ರೆಬೆಲ್ ಶಾಸಕರ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. ಆ ಮೂಲಕ ಕಮಲ್ ನಾಥ್ ಸರ್ಕಾರ ಪತನ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.  

published on : 20th March 2020

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ರೆಬೆಲ್ ಶಾಸಕರೊಂದಿಗೆ ಚರ್ಚೆಗೆ 'ಸುಪ್ರೀಂ' ಸಲಹೆ, ಸ್ಪೀಕರ್ ನಕಾರ!

ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ರೆಬೆಲ್ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿ ಅಭಿಪ್ರಾಯ ತಿಳಿಯುವಂತೆ ವಿಧಾನಸಭೆ ಸ್ಪೀಕರ್ ಎನ್ ಪಿ ಪ್ರಜಾಪತಿ ಅವರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

published on : 19th March 2020

ಮಧ್ಯ ಪ್ರದೇಶ ಬಿಕ್ಕಟ್ಟು: ಬಂಡಾಯ ಶಾಸಕರ ಹಾಜರುಪಡಿಸುವ ಪ್ರಸ್ತಾಪ ತಿರಸ್ಕರಿಸಿದ ಸುಪ್ರೀಂ, ವಿಚಾರಣೆ ನಾಳೆಗೆ ಮುಂದೂಡಿಕೆ

ಮಧ್ಯ ಪ್ರದೇಶದ 16 ಬಂಡಾಯ ಕಾಂಗ್ರೆಸ್ ಶಾಸಕರನ್ನು ಕೋರ್ಟ್ ಗೆ ಹಾಜರುಪಡಿಸಬೇಕು ಎಂಬ ಕಾಂಗ್ರೆಸ್ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟವಾಗಿ ತಿರಸ್ಕರಿಸಿದ್ದು, ಅವರು ವಿಧಾನಸಭೆಗೆ ಹೋಗಬಹುದು...

published on : 18th March 2020

'ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡುವುದಾದರೆ ಮುಂದಿನ ವಾರದೊಳಗೆ ತಿಳಿಸಬೇಕು': ಕೇಂದ್ರಕ್ಕೆ ಸುಪ್ರೀಂ ತಾಕೀತು 

ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಗೃಹ ಬಂಧನದಲ್ಲಿಟ್ಟಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡಲಾಗುತ್ತದೆಯೇ,ಇಲ್ಲವೇ ಎಂದು ಮುಂದಿನ ವಾರದೊಳಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ ತಿಳಿಸಿದೆ.

published on : 18th March 2020

ಎಜಿಆರ್ ಶುಲ್ಕದ ಸ್ವಯಂ ಮೌಲ್ಯಮಾಪನ ಏಕೆ?: ಕೇಂದ್ರ ಸರ್ಕಾರ, ಟೆಲಿಕಾಂ ಕಂಪೆನಿಗಳಿಗೆ 'ಸುಪ್ರೀಂ' ತರಾಟೆ

ಕಳೆದ ವರ್ಷ ಅಕ್ಟೋಬರ್ 24ರಂದು ತನ್ನ ತೀರ್ಪಿನಲ್ಲಿ ನಿಗದಿಪಡಿಸಿದ್ದ ಎಜಿಆರ್ ಶುಲ್ಕ ಬಾಕಿ ಪಾವತಿ ಬಗ್ಗೆ ಸ್ವಯಂ ಮೌಲ್ಯಮಾಪನ ಅಥವಾ ಮರು ಮೌಲ್ಯಮಾಪನ ಮಾಡಿರುವ ಕೇಂದ್ರ ಸರ್ಕಾರ ಮತ್ತು ಟೆಲಿಕಾಂ ಕಂಪೆನಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆ ತೆಗೆದುಕೊಂಡಿದೆ.

published on : 18th March 2020

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ವಿವರಣೆ ನೀಡುವಂತೆ ಕಮಲ್ ನಾಥ್ ಸರ್ಕಾರಕ್ಕೆ 'ಸುಪ್ರೀಂ' ಸೂಚನೆ, ವಿಚಾರಣೆ ಮುಂದೂಡಿಕೆ

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ವಿಚಾರ ಸಂಬಂಧ ಬಿಜೆಪಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಮಲ್ ನಾಥ್ ಸರ್ಕಾರಕ್ಕೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

published on : 17th March 2020

ಭೀಮಾ ಕೋರೆಗಾಂವ್ ಪ್ರಕರಣ: 3 ವಾರದೊಳಗೆ ಶರಣಾಗುವಂತೆ ತೆಲ್ತುಂಬ್ಡೆ, ನವ್‍ಲಖಾಗೆ ಸುಪ್ರೀಂ ಸೂಚನೆ

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಆನಂದ್ ತೆಲ್ತುಂಬ್ಡೆ ಮತ್ತು ಗೌತಮ್ ನವ್‍ಲಖಾ ಅವರಿಗೆ ಶರಣಾಗಲು ಸುಪ್ರೀಂ ಕೋರ್ಟ್ 3 ವಾರಗಳ ಗಡುವು ನೀಡಿದೆ.

published on : 17th March 2020

ನಿರ್ಭಯಾ ಪ್ರಕರಣ: ಮುಕೇಶ್ ಸಿಂಗ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಕಾಮುಕರಿಗೆ ಗಲ್ಲೇ ಗತಿ

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ಹುಡುಕುತ್ತಿರುವ ಎಲ್ಲಾ ದಾರಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಬಂದ್ ಮಾಡಿದ್ದು, ಕಾಮುಕರು ಮಾರ್ಚ್ 20ಕ್ಕೆ ನೇಣಿಗೇರುವುದು ಬಹುತೇಕ ಖಚಿತವಾಗಿದೆ.

published on : 16th March 2020

ಮಧ್ಯಪ್ರದೇಶ: 48 ಗಂಟೆಯೊಳಗೆ ವಿಶ್ವಾಸ ಮತಯಾಚಿಸುವಂತೆ ಸೂಚಿಸಿ; 'ಸುಪ್ರೀಂ' ಮೆಟ್ಟಿಲೇರಿದ ಬಿಜೆಪಿ, ನಾಳೆ ವಿಚಾರಣೆ

ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು 48 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಬೇಕು ಎಂದು ಬಿಜೆಪಿ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

published on : 16th March 2020

ಸುಪ್ರೀಂ ಕೋರ್ಟ್ ಗೂ ತಟ್ಟಿದ ಕೊರೋನಾ ಬಿಸಿ, ತುರ್ತು ಪ್ರಕರಣಗಳು ಮಾತ್ರ ವಿಚಾರಣೆ

ಸುಪ್ರೀಂ ಕೋರ್ಟ್ ಗೂ ಕೊರೋನಾ ವೈರಸ್ ಬಿಸಿ ತಟ್ಟಿದ್ದು, ಮಾರಣಾಂತಿಕ ಸೋಂಕು ಹರಡದಂತೆ ತಡೆಯಲು ಸೋಮವಾರದಿಂದ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸುವುದಾಗಿ ಶುಕ್ರವಾರ ಸರ್ವೋಚ್ಛ ನ್ಯಾಯಾಲಯ ಹೇಳಿದೆ.

published on : 13th March 2020

ಭೂಸ್ವಾಧೀನ: ಕೃಷಿಕರ ಹಿತಾಸಕ್ತಿ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು

ಭೂ ಸ್ವಾಧೀನಪಡಿಸಿಕೊಂಡಾಗ ಸೂಕ್ತ ಪರಿಹಾರ ನೀಡದೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.

published on : 6th March 2020

ನಿರ್ಭಯಾ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಪರಾಧಿ ಮುಕೇಶ್

ಇದೇ 20 ರಂದು ನಿರ್ಭಯಾ ಅಪರಾಧಿಗಳಿಗೆ ಡೆತ್ ವಾರಂಟ್ ವಿಧಿಸಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಪ್ರಕರಣದ ಆರೋಪಿ ಮುಕೇಶ್ ಮತ್ತೊಮ್ಮೆ ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದಾನೆ.

published on : 6th March 2020
1 2 3 4 5 6 >