• Tag results for Aadhaar

ಸ್ವಾಮಿತ್ವ ಯೋಜನೆಯಡಿಯಲ್ಲಿ ಆಧಾರ್ ರೀತಿ ಶೀಘ್ರದಲ್ಲೇ ಗ್ರಾಮಸ್ಥರಿಗೆ ಪ್ರಾಪರ್ಟಿ ಕಾರ್ಡ್ ವಿತರಣೆ!

ಗ್ರಾಮೀಣ ಭಾಗದಲ್ಲಿ ತಲೆ ತಲಾಂತರಗಳಿಂದ ವಾಸಿಸುತ್ತಿದ್ದರೂ ತಮ್ಮ ಜಾಗದ ದಾಖಲೆಗಳನ್ನು ಹೊಂದಿರದವರಿಗೆ ಹಕ್ಕುಪತ್ರ ನೀಡುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಾಮಿತ್ವ ಯೋಜನೆ ರಾಜ್ಯದಲ್ಲಿಯೂ ಆರಂಭವಾಗಲಿದ್ದು, ಯೋಜನೆ ಅಡಿಯಲ್ಲಿ ಆಧಾರ್ ರೀತಿ ಸರ್ಕಾರ ಪ್ರಾಪರ್ಟಿ ಕಾರ್ಡ್ ವಿತರಿಸಲಿದೆ ಎಂದು ತಿಳಿದುಬಂದಿದೆ. 

published on : 30th September 2020

ಆಧಾರ್, ಪ್ಯಾನ್ ಕಾರ್ಡ್ ಜೋಡಣೆ ಗಡುವು 2021 ಮಾರ್ಚ್ 31ಕ್ಕೆ ವಿಸ್ತರಣೆ

ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಜೋಡಣೆ ಮಾಡುವ ಗಡುವನ್ನು  ಕೊನೆಯ ದಿನವನ್ನು ಮುಂದಿನ ವರ್ಷದ ಮಾರ್ಚ್ 31ರವರೆಗೂ ಸರ್ಕಾರ ವಿಸ್ತರಿಸಿದೆ.

published on : 6th July 2020

ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ  ಆಧಾರ್ ಕಾರ್ಡ್ ಕಡ್ಡಾಯ: ಕೋಟ ಶ್ರೀನಿವಾಸ ಪೂಜಾರಿ

ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ ಆಧಾರ್ ಕಾರ್ಡ್‍ಗಳನ್ನು ಕಡ್ಡಾಯಗೊಳಿಸುವ ನಿರ್ಣಯ ಕೈಗೊಂಡಿದ್ದು ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಹೇಳಿದ್ದಾರೆ.

published on : 30th June 2020

ಜನಸೇವಕ ವ್ಯಾಪ್ತಿಗೆ ಆಧಾರ್, ಎಪಿಎಲ್, ವೋಟರ್ ಐಡಿ ನೋಂದಣಿ: ಸುರೇಶ್ ಕುಮಾರ್

ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು, ನೋಂದಣಿ ಸೇವೆಗಳನ್ನು ಸಕಾಲ ಸ್ಕೀಂನ ಜನಸೇವಕ ಯೋಜನೆಯಡಿ ಒದಗಿಸಲು ಸಂಬಂಧಿಸಿದ ಇಲಾಖೆಗಳು ಸಹಮತ ವ್ಯಕ್ತಪಡಿಸಿದ್ದು, ಇಷ್ಟರಲ್ಲಿಯೇ ಈ ಸೇವೆಗಳನ್ನು ಜನಸೇವಕ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

published on : 8th June 2020

ಆಧಾರ್ ಪೌರತ್ವ ದಾಖಲೆಯಲ್ಲ: ಯುಐಡಿಎಐ ಸ್ಪಷ್ಟೀಕರಣ

ಆಧಾರ್ ಪೌರತ್ವ ದೃಢಪಡಿಸುವ ದಾಖಲೆಯಲ್ಲ ಮತ್ತು ಈ ವಿಷಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸ್ಪಷ್ಟಪಡಿಸಿದೆ.

published on : 19th February 2020

ಆಧಾರ್ ಪೌರತ್ವ ದಾಖಲೆಯಲ್ಲ: ಯುಐಡಿಎಐ ಸ್ಪಷ್ಟನೆ

ಆಧಾರ್ ಪೌರತ್ವ ದೃಢಪಡಿಸುವ ದಾಖಲೆಯಲ್ಲ ಮತ್ತು ಈ ವಿಷಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ) ಸ್ಪಷ್ಟಪಡಿಸಿದೆ.

published on : 19th February 2020

ಶವಸಂಸ್ಕಾರದ ವೇಳೆ ಮೃತ ವ್ಯಕ್ತಿಯ ಆಧಾರ್ ಕಡ್ಡಾಯವಲ್ಲ: ಸಿಬ್ಬಂದಿಗೆ ಬಿಬಿಎಂಪಿ ಸೂಚನೆ

ಬಿಬಿಎಂಪಿಯ ವಿದ್ಯುತ್ ಚಿತಾಗಾರ ಹಾಗೂ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್ ಗುರುತಿನ ಚೀಟಿ  ಕಡ್ಡಾಯವಲ್ಲ ಎಂಬು ಬಿಬಿಎಂಪಿ ಸ್ಪಷ್ಟಪಡಿಸಿದೆ. 

published on : 12th February 2020

ಆಧಾರ್ ಆಧಾರಿತ ಇ- ಪ್ಯಾನ್ ತ್ವರಿತವಾಗಿ ಹಂಚಿಕೆ: ಈ ತಿಂಗಳಲ್ಲಿ ಆರಂಭ 

ಆಧಾರ್ ಆಧಾರಿತ  ಆನ್‌ಲೈನ್ ಪ್ಯಾನ್ ಕಾರ್ಡ್‌ಗಳನ್ನು ತ್ವರಿತವಾಗಿ ನೀಡುವ ಸೌಲಭ್ಯವನ್ನು ಈ ತಿಂಗಳು ಸರ್ಕಾರ ರೂಪಿಸಲಿದೆ ಎಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

published on : 6th February 2020

ಆಕ್ಸ್‌ ಫರ್ಡ್ ನಿಘಂಟು ಸೇರಿದ ಆಧಾರ್, ಚಾವಲ್, ಶಾದಿ

ಆಧಾರ್, ಚಾವಲ್, ಡಬ್ಬಾ, ಹರತಾಲ್, ಶಾದಿ ಸೇರಿದಂತೆ 26 ಹೊಸ ಭಾರತೀಯ ಮೂಲದ ಪದಗಳು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನ ಹೊಸ ಆವೃತ್ತಿಯಲ್ಲಿ ಸ್ಥಾನ ಪಡೆದಿವೆ.

published on : 24th January 2020

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆಗೆ ಹೊಸ ಕಾನೂನು?

ಮತದಾರರ ಪಟ್ಟಿಯಲ್ಲಿ ಅನೇಕ ನಮೂದುಗಳನ್ನು ಪರಿಶೀಲಿಸಲು ಮತ್ತು  ಹೊಸ ಅರ್ಜಿದಾರರ ಆಧಾರ್  ಸಂಖ್ಯೆಯನ್ನು ಸಂಗ್ರಹಿಸಲು ಶಾಸನ ಬೆಂಬಲ ನೀಡುವ ಚುನಾವಣಾ ಆಯೋಗದ ಪ್ರಸ್ತಾಪವನ್ನು ಪರಿಗಣಿಸಿ ಹೊಸ ಕಾನೂನನ್ನು ರಚಿಸುವ ನಿಟ್ಟಿನಲ್ಲಿ ಕೇಂದ್ರ ಕಾನೂನು ಸಚಿವಾಲಯ ಕಾರ್ಯೋನ್ಮುಖವಾಗಿದೆ.

published on : 24th January 2020

ಆಧಾರ್-ಪ್ಯಾನ್ ಲಿಂಕ್: ಮಾರ್ಚ್ ಗೆ ಅಂತಿಮ ಗಡುವು ವಿಸ್ತರಣೆ

ಆಧಾರ್‌ ಸಂಖ್ಯೆ ಜೊತೆ ಪ್ಯಾನ್‌ ಕಾರ್ಡ್ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಣೆ ಮಾಡಿದ್ದು, ಈಗ ಗಡುವನ್ನು ಡಿಸೆಂಬರ್‌ 31ರಿಂದ ಮಾರ್ಚ್ ತಿಂಗಳಿಗೆ ವಿಸ್ತರಣೆ ಮಾಡಿದೆ.

published on : 30th December 2019

ಭಾರತದಲ್ಲಿ 125 ಕೋಟಿ ಜನರು ಆಧಾರ್ ಹೊಂದಿದ್ದಾರೆ-ವಿಶಿಷ್ಟ ಗುರುತು ಪ್ರಾಧಿಕಾರ

ಸದ್ಯ, ದೇಶದ 125 ಕೋಟಿ ವಾಸಿಗಳು ಆಧಾರ್ ಹೊಂದಿದ್ದು, ಈ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ತಿಳಿಸಿದೆ.

published on : 27th December 2019

ಆಧಾರ್ ಕಾರ್ಡುದಾರರಿಗೆ ಹೊಸ ಸೇವೆ ಆರಂಭಿಸಿದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ

ಆಧಾರ್ ಕಾರ್ಡುದಾರರಿಗೆ ಭಾರತೀಯ ವಿಶಿಷ್ಟ ಗುರುತು ಸಂಖ್ಯೆಗಳ ಪ್ರಾಧಿಕಾರ (ಯುಐಎಐ)  “ಆಸ್ಕ್  ಆಧಾರ್” ಹೆಸರಿನಲ್ಲಿ ಮತ್ತೊಂದು ಹೊಸ ಸೇವೆಯನ್ನು ಪ್ರಾರಂಭಿಸಿದೆ.

published on : 27th December 2019

ಹಿರಿಯ ನಾಗರಿಕರ ಪಿಂಚಣಿ ಯೋಜನೆ ಪಿಎಂವಿವಿವೈಗೆ ಆಧಾರ್ ಕಡ್ಡಾಯ: ಕೇಂದ್ರ

 ಹಿರಿಯ ನಾಗರಿಕರ ಪಿಂಚಣಿ ಯೋಜನೆಯಾದ ಪ್ರಧಾನ್ ಮಂತ್ರಿ ವಾಯ ವಂದನ ಯೋಜನೆಗೆ ಇನ್ನು ಮುಂದೆ ಆಧಾರ್ ಕಡ್ಡಾಯವಾಗಲಿದೆ. ಪಿಎಂವಿವಿವೈ ಯೋಜನೆಗೆ ಆಧಾರ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.  

published on : 26th December 2019

ಎಂ-ಆಧಾರ್ ಹೊಸ ಆ್ಯಪ್ ಲಾಂಚ್: ಇದರಲ್ಲಿನ ಪ್ರಯೋಜನಗಳು ಏನು?

ಆಧಾರ್ ಹೊಸ ಆ್ಯಪ್ ಲಾಂಚ್ ಮಾಡಲಾಗಿದ್ದು ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ಕುರಿತ ಮಾಹಿತಿಗಳನ್ನು ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ. 

published on : 13th December 2019
1 2 3 >