• Tag results for Accident

ಮುಂಬೈ: ನಾಲ್ಕು ಕಾರುಗಳು- ಆಂಬ್ಯುಲೆನ್ಸ್‌ ನಡುವಣ ವಿಚಿತ್ರ ರೀತಿಯ ಅಪಘಾತ, ಐವರು ಸಾವು

ಮುಂಬೈನ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ರಸ್ತೆಯಲ್ಲಿ ಇಂದು ಮುಂಜಾನೆ ನಾಲ್ಕು ಕಾರುಗಳು ಮತ್ತು ಆಂಬ್ಯುಲೆನ್ಸ್ ನಡುವೆ ಸಂಭವಿಸಿದ ವಿಲಕ್ಷಣ ಅಪಘಾತದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

published on : 5th October 2022

ಗುಜರಾತ್‌ ನಲ್ಲಿ ಭೀಕರ ರಸ್ತೆ ಅಪಘಾತ: ತ್ರಿಚಕ್ರ ವಾಹನಕ್ಕೆ ಕಂಟೈನರ್‌ ಡಿಕ್ಕಿ ಹೊಡೆದು 10 ಸಾವು, 7 ಮಂದಿಗೆ ಗಾಯ

ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ತ್ರಿಚಕ್ರ ವಾಹನವೊಂದಕ್ಕೆ ಕಂಟೈನರ್‌ ಟ್ರಕ್‌ ಡಿಕ್ಕಿ ಹೊಡೆದಿದೆ. ದುರಂತದಲ್ಲಿ ಗಾಯಗೊಂಡಿರುವ ಏಳು ಮಂದಿಯನ್ನು ವಡೋದರ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ

published on : 5th October 2022

ಉತ್ತರಾಖಂಡ್: ಬಸ್ ಕಂದಕಕ್ಕೆ ಉರುಳಿ 25 ಜನರ ದುರ್ಮರಣ, ಹಲವರಿಗೆ ಗಾಯ

ಬಸ್ ಕಂದಕಕ್ಕೆ ಉರುಳಿ 25 ಜನರು ದುರ್ಮರಣ ಹೊಂದಿರುವ ಘಟನೆ ಉತ್ತರಾಖಂಡ್ ರಾಜ್ಯದ ಬಿರೊಖಾಲ್ ಪ್ರದೇಶದಲ್ಲಿ ಗುರುವಾರ ತಡ ರಾತ್ರಿ ಸಂಭವಿಸಿದೆ.

published on : 5th October 2022

ಹೊಸಕೋಟೆ ಬಳಿ ಲಾರಿಗೆ ಡಿಕ್ಕಿ ಹೊಡೆದ ಬಸ್ಸು, ಆಂಧ್ರ ಮೂಲದ ದಂಪತಿ ಸಾವು, 18 ಪ್ರಯಾಣಿಕರಿಗೆ ಗಾಯ

ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದು ದಂಪತಿ ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಮೈಲಾಪುರ ಗೇಟ್​ ಬಳಿ ಕಳೆದ ಮಧ್ಯರಾತ್ರಿ ನಡೆದಿದೆ. 

published on : 3rd October 2022

ಮಧ್ಯ ಪ್ರದೇಶ: ಕಾರಿಗೆ ಟ್ರಕ್ ಡಿಕ್ಕಿ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಧಾರುಣ ಸಾವು

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಭಾನುವಾರ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಮತ್ತು ಅವರ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 2nd October 2022

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ; ಹಳ್ಳಕ್ಕೆ ಉರುಳಿದ ಟ್ರಾಕ್ಟರ್, ಕನಿಷ್ಠ 26 ಮಂದಿ ಸಾವು

ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ತುಂಬಿದ್ದ ಟ್ರಾಕ್ಟರ್ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಟ 26 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.

published on : 1st October 2022

Video: ಅಪಘಾತದ ವಿಡಿಯೋ ಹಂಚಿಕೊಂಡ ಬೆಂಗಳೂರು ಪೊಲೀಸ್ ಅಧಿಕಾರಿ, ಅಸಡ್ಡೆ ತೋರುವ ಚಾಲಕರಿಗೆ ಸಂದೇಶ

ನಿರ್ಲಕ್ಷ್ಯದಿಂದ ಚಾಲಕ ಕಾರಿನ ಬಾಗಿಲು ತೆರೆದಿದ್ದರಿಂದ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರಿಗೆ ತಗುಲಿ ಎದುರಿನಿಂದ ಬರುತ್ತಿದ್ದ ಟ್ರಕ್‌ನ ಹಿಂಬದಿ ಚಕ್ರಕ್ಕೆ ಸಿಲುಕಿರುವ ಭಯಾನಕ ವಿಡಿಯೊವನ್ನು ಪೊಲೀಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.

published on : 29th September 2022

'ದೀಪಕ್ ಇನ್ನು ಜೀವಂತ': ಸತ್ತ ಮೇಲೂ ಜೀವಿಸಲು ಸಾಧ್ಯವಾಗಿಸುವ ಅಂಗಾಂಗ ದಾನ ಅತ್ಯಂತ ಶ್ರೇಷ್ಠ!

ದೀಪಕ್ ಇನ್ನು ಜೀವಂತವಾಗಿದ್ದು, ಸತ್ತ ಮೇಲೂ ಜೀವಿಸಲು ಸಾಧ್ಯವಾಗಿಸುವ ಅಂಗಾಂಗ ದಾನ ಅತ್ಯಂತ ಶ್ರೇಷ್ಠವಾದುದು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.

published on : 28th September 2022

ಉತ್ತರ ಪ್ರದೇಶದಲ್ಲಿ ಬಸ್ ಮತ್ತು ಮಿನಿ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ: ಎಂಟು ಸಾವು, 14 ಮಂದಿಗೆ ಗಾಯ

ಖಾಸಗಿ ಬಸ್ ಮತ್ತು ಮಿನಿ ಟ್ರಕ್ ನಡುವೆ ಬುಧವಾರ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 28th September 2022

ಉತ್ತರ ಪ್ರದೇಶ: ಟ್ರಾಕ್ಟರ್ ಪಲ್ಟಿಯಾಗಿ 10 ಮಂದಿ ದುರ್ಮರಣ, 4 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಯೋಗಿ

ಸೀತಾಪುರದಿಂದ 47 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ - ಟ್ರಾಲಿ ಪಲ್ಟಿಯಾಗಿ ಕೊಳಕ್ಕೆ ಬಿದ್ದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ ಘಟನೆ ಸೋಮವಾರ ಉತ್ತರ ಪ್ರದೇಶದ ಲಖನೌ ಸಮೀಪ ನಡೆದಿದೆ.

published on : 26th September 2022

ದೊಡ್ಡಬಳ್ಳಾಪುರ: ಕಾರ್ಖಾನೆಯಲ್ಲಿ ಕೆಮಿಕಲ್ ಸ್ಫೋಟ; ಹೊತ್ತಿ ಉರಿದ ಕಾರ್ಖಾನೆ

ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಇಡೀ ಕಾರ್ಖಾನೆ ಬೆಂಕಿಗಾಹುತಿಯಾದ ಘಟನೆ ಸೋಮವಾರ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

published on : 26th September 2022

ಹಿಮಾಚಲ ಪ್ರದೇಶ: ಪ್ರವಾಸಿ ಬಸ್ಸು ಕಂದಕಕ್ಕೆ ಉರುಳಿ ಬಿದ್ದು 7 ಮಂದಿ ಸಾವು, 10 ಮಂದಿಗೆ ಗಾಯ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದ ಪರಿಣಾಮ ಏಳು ಮಂದಿ ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. 

published on : 26th September 2022

ಬೆಳಗಾವಿ ಬಳಿ ಭೀಕರ ಅಪಘಾತ: ಎಎಸ್ ಐ ಕುಟುಂಬ ಸೇರಿ ನಾಲ್ವರು ದುರ್ಮರಣ

ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಂದು  ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಕುಟುಂಬದ ಇಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

published on : 25th September 2022

ಆಂಧ್ರ ಪ್ರದೇಶ: ಖಾಸಗಿ ಕ್ಲಿನಿಕ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ವೈದ್ಯರು ಸೇರಿದಂತೆ ಇಬ್ಬರು ಮಕ್ಕಳು ಸಾವು

ರೇಣಿಗುಂಟದ ವಸುಂಧರಾನಗರದಲ್ಲಿರುವ ವೈದ್ಯರ ಖಾಸಗಿ ಕ್ಲಿನಿಕ್‌ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ವೈದ್ಯರು ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳು ಮೃತಪಟ್ಟಿದ್ದಾರೆ.

published on : 25th September 2022

ಭಾರಿ ಅಗ್ನಿ ಅವಘಡ: ಹುಟ್ಟುಹಬ್ಬಕ್ಕೆಂದು ಬೆಂಗಳೂರಿನಿಂದ ಆಂಧ್ರ ಪ್ರದೇಶಕ್ಕೆ ತೆರಳಿದ್ದ ಟೆಕ್ಕಿ ಸೇರಿ ಮೂವರು ಸಾವು

ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಪೇಪರ್ ಪ್ಲೇಟ್ ಕಾರ್ಖಾನೆಯ ತಯಾರಿಕಾ ಘಟಕದಲ್ಲಿ ಬುಧವಾರ ನಸುಕಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಕಾರ್ಖಾನೆಯ ಉತ್ಪಾದನಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

published on : 21st September 2022
1 2 3 4 5 6 > 

ರಾಶಿ ಭವಿಷ್ಯ