• Tag results for America

ಫೀಫಾ ವಿಶ್ವಕಪ್ 2022: ಅಮೆರಿಕಾ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೆದರ್ಲ್ಯಾಂಡ್

ಕತಾರ್ ನ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಡೆನ್ಜೆಲ್ ಡಮ್‌ಫ್ರೈಸ್ ಅದ್ಭುತ ಪ್ರದರ್ಶನದಿಂದಾಗಿ ನೆದರ್ಲ್ಯಾಂಡ್ ತಂಡ ಅಮೆರಿಕಾ ತಂಡವನ್ನು ಸೋಲಿಸಿ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. 

published on : 4th December 2022

'ಕಳಪೆ ಕಾರ್ಯಕ್ಷಮತೆ' 10,000 ಉದ್ಯೋಗಿಗಳ ವಜಾಕ್ಕೆ Google ಮಾತೃಸಂಸ್ಧೆ ಆಲ್ಫಾಬೆಟ್ ಮುಂದು: ವರದಿ

ಮೆಟಾ, ಅಮೆಜಾನ್, ಟ್ವಿಟರ್ ಹಾಗೂ ಇನ್ನಷ್ಟು ಸಂಸ್ಥೆಗಳು ಜಾಗತಿಕ ಆರ್ಥಿಕ ಸಂಕಷ್ಟ ಪರಿಸ್ಥಿತಿಗಳ ನಡುವೆ ದೊಡ್ಡ ಸಂಖ್ಯೆಯಲ್ಲಿ ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದು ಇದೀಗ ಈ ಸಾಲಿಗೆ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಸೇರಿದೆ.

published on : 22nd November 2022

ತಮ್ಮ 124 ಬಿಲಿಯನ್ ಡಾಲರ್ ಸಂಪತ್ತಲ್ಲಿ ಬಹಳಷ್ಟನ್ನು ದಾನ ಮಾಡುವುದಾಗಿ ಅಮೆಜಾನ್‌ನ ಬೆಜೋಸ್ ಘೋಷಣೆ!

ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಲು ಹೊರಟಿರುವ ಸಮಯದಲ್ಲಿ ಅದರ ಸಂಸ್ಥಾಪಕ ಜೆಫ್ ಬೆಜೋಸ್ ತಮ್ಮ ಜೀವಮಾನದ ಬಹುಪಾಲು 124 ಬಿಲಿಯನ್ ಡಾಲರ್ ಸಂಪತ್ತನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.

published on : 15th November 2022

ಸ್ಫೂರ್ತಿದಾಯಕ ಪ್ರಯಾಣ: ಗಡ್ಚಿರೋಲಿಯ ಬುಡಕಟ್ಟು ಜನಾಂಗದ ಬಾಲಕ ಈಗ ಅಮೆರಿಕದಲ್ಲಿ ವಿಜ್ಞಾನಿ

ಮಹಾರಾಷ್ಟ್ರದ ಗಡ್ಚಿರೋಲಿಯ ದೂರದ ಹಳ್ಳಿಯೊಂದರಲ್ಲಿ ಬಾಲ್ಯದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರಡಾಡುತ್ತಿದ್ದ ಬಾಲಕನೊಬ್ಬ ಈಗ ಅಮೆರಿಕದಲ್ಲಿ ಹಿರಿಯ ವಿಜ್ಞಾನಿ. ಹೌದು, ಭಾಸ್ಕರ್ ಹಲಾಮಿ ಅವರು ಸಂಪೂರ್ಣ ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.

published on : 13th November 2022

ಯುಸ್ ಹೌಸ್ ಗೆ ಐವರು ಭಾರತೀಯ-ಅಮೆರಿಕನ್ ಚುನಾಯಿತ ಪ್ರತಿನಿಧಿಗಳು ಆಯ್ಕೆ; ರಾಜ್ಯ ಶಾಸಕಾಂಗದಿಂದಲೂ ಹಲವರ ಗೆಲುವು

ರಾಜಾ ಕೃಷ್ಣಮೂರ್ತಿ, ರೊ ಖಾನ್ಹಾ, ಪ್ರಮೀಳಾ ಜಯಪಾಲ್, ಆಮಿ ಬೇರಾ ಸೇರಿದಂತೆ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಐವರು ಭಾರತೀಯ ಜನಪ್ರತಿನಿಧಿಗಳು ಯುಸ್ ಹೌಸ್ ಗೆ ಆಯ್ಕೆಯಾಗಿದ್ದಾರೆ. ದೇಶದ ಅತ್ಯಂತ ಧ್ರುವೀಕೃತ ಮಧ್ಯಂತರ ಚುನಾವಣೆಗಳಲ್ಲಿ ಒಂದಾದ ರಾಜ್ಯ ಶಾಸಕಾಂಗಗಳಲ್ಲಿಯೂ ಇತರ ಹಲವು ಮಂದಿ ಆಯ್ಕೆಯಾಗಿದ್ದಾರೆ.

published on : 10th November 2022

ನವೆಂಬರ್ 15ರಂದು ಬಹುದೊಡ್ಡ ಘೋಷಣೆ ಮಾಡುತ್ತೇನೆ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಮುಂದಿನ ವಾರ ನವೆಂಬರ್ 15ರಂದು ಬಹುದೊಡ್ಡ ಘೋಷಣೆಯನ್ನು ಮಾಡಲಿದ್ದೇನೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಕುತೂಹಲ ಮೂಡಿಸಿದ್ದಾರೆ.

published on : 8th November 2022

ಅಮೆರಿಕ: ಪಾಪ್ ತಾರೆ ಆರನ್ ಕಾರ್ಟರ್ ಶವವಾಗಿ ಪತ್ತೆ

ಅಮೆರಿಕದ ಪಾಪ್ ತಾರೆ ಆರನ್ ಕಾರ್ಟರ್ ಶನಿವಾರ ಲಾಸ್ ಏಂಜಲೀಸ್ ಬಳಿಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

published on : 6th November 2022

ಗಂಟೆಗಳ ಕಾಲ Instagram ಸ್ಥಗಿತ: ದೋಷವನ್ನು ಸರಿಪಡಿಸಿದ ನಂತರ ಕ್ಷಮೆಯಾಚಿಸಿದ ಸಂಸ್ಥೆ!

ತಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಬಳಕೆದಾರರು ದೂರಿದ ನಂತರ ಎಚ್ಚೆತ್ತ ಇನ್ ಸ್ಟಾಗ್ರಾಂ ಇದೀಗ ದೋಷವನ್ನು ಸರಿಪಡಿಸಿದೆ. ಇನ್ನು ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ ಕ್ಷಮೆಯಾಚಿಸಿದೆ.

published on : 1st November 2022

ಸತತ ಕುಸಿತದ ಬಳಿಕ ಡಾಲರ್ ಎದುರು ರೂಪಾಯಿ ಚೇತರಿಕೆ: 26 ಪೈಸೆ ವೃದ್ಧಿ!

ಡಾಲರ್ ಎದುರು ಸತತ ಕುಸಿತ ಕಾಣುತ್ತಿದ್ದ ರೂಪಾಯಿ ಮೌಲ್ಯ ಇಂದು ತುಸು ವೃದ್ಧಿಯಾಗಿದೆ. ದೇಶೀಯ ಷೇರು ಮಾರುಕಟ್ಟೆಯಲ್ಲಿ ಭರವಸೆಯ ವಹಿವಾಟು ದಾಖಲಾಗಿರುವುದು ರೂಪಾಯಿ ಮೌಲ್ಯ ವೃದ್ಧಿಗೆ ಕಾರಣವಾಗಿದೆ. 

published on : 25th October 2022

30 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಖ್ಯಾತ ಮಹಿಳಾ ರೆಸ್ಲರ್ ಸಾರಾ ಲೀ!

ಮಾಜಿ WWE (ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ರೆಸ್ಲರ್ ಸಾರಾ ಲೀ ಮೃತಪಟ್ಟಿದ್ದಾರೆ. ಸಾರಾ ತನ್ನ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಾವಿನ ಸುದ್ದಿಯನ್ನು ತಾಯಿ ಟೆರ್ರಿ ಲೀ ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. 

published on : 7th October 2022

ಮಗನಿಗೆ ವಿಚ್ಛೇದನ ನೀಡಲು ಮುಂದಾದ ಸೊಸೆಯ ಹತ್ಯೆ: 74 ವರ್ಷದ ಭಾರತೀಯ ಅಮೇರಿಕನ್ ವೃದ್ಧನ ಬಂಧನ

ಮಗನಿಗೆ ವಿಚ್ಛೇದನ ನೀಡಲು ಮುಂದಾದ ಸೊಸೆಯನ್ನು ಹತ್ಯೆ ಮಾಡಿದ ಆರೋಪದಡಿ 74 ವರ್ಷದ ಭಾರತೀಯ ಅಮೇರಿಕನ್ ವೃದ್ಧನನ್ನು ಕ್ಯಾಲಿಫೋರ್ನಿಯಾ ಪೊಲೀಸರು ಬಂಧಿಸಿದ್ದಾರೆ.

published on : 7th October 2022

ಅಮೆರಿಕಾದಲ್ಲಿ ಪಂಜಾಬ್ ಮೂಲದ ಕುಟುಂಬ ಅಪಹರಣ: ಆಘಾತದಲ್ಲಿ ಕುಟುಂಬ!

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಎಂಟು ತಿಂಗಳ ಮಗು ಸೇರಿದಂತೆ ನಾಲ್ವರ ಭಾರತೀಯ ಮೂಲದ ಕುಟುಂಬವನ್ನು ಅಪಹರಿಸಿದ ಸುದ್ದಿ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿರುವ ಅವರ ಸಂಬಂಧಿಕರನ್ನು ಆಘಾತಕ್ಕೆ ತಳ್ಳಿದೆ.

published on : 5th October 2022

ಇಯಾನ್‌ ಚಂಡಮಾರುತದ ಹೊಡೆತಕ್ಕೆ ಸಿಲುಕಿದ ಅಮೆರಿಕ; ಫ್ಲೋರಿಡಾದಲ್ಲಿ ಮೃತರ ಸಂಖ್ಯೆ 47ಕ್ಕೆ ಏರಿಕೆ

ದೈತ್ಯಾಕಾರದ ಇಯಾನ್ ಚಂಡಮಾರುತದ ಆರ್ಭಟಕ್ಕೆ ಅಮೆರಿಕದ ಅನೇಕ ರಾಜ್ಯಗಳು ಅಕ್ಷರಶಃ ನಲುಗಿ ಹೋಗಿವೆ. ನೈಋತ್ಯ ಕರಾವಳಿಯಿಂದ ಕೆರೊಲಿನಾದವರೆಗೆ ತೀವ್ರ ಅನಾಹುತ ಸೃಷ್ಟಿಸಿದ್ದು, ಸಾವಿರಾರು ಜನರು ಇನ್ನೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ.

published on : 2nd October 2022

ತೈಲ ಬೆಲೆ ಏರಿಕೆ ಭಾರತದ ಆರ್ಥಿಕತೆಗೆ ಹಾನಿಕಾರಿ: ವಿದೇಶಾಂಗ ಸಚಿವ ಎಸ್ ಜೈಶಂಕರ್

ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ 2,000 ಅಮೆರಿಕಾ ಡಾಲರ್ ತಲಾ ಆರ್ಥಿಕತೆಯನ್ನು ಹೊಂದಿರುವ ಭಾರತವು ತೈಲ ಬೆಲೆ ಏರಿಕೆಯ ಬಗ್ಗೆ ಚಿಂತಿತವಾಗಿದೆ. ಅದು 'ನಮ್ಮ ಬೆನ್ನು ಮುರಿಯುತ್ತಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

published on : 28th September 2022

ಪ್ರವಾಹ ಬಾಧಿತ ಪಾಕಿಸ್ತಾನಕ್ಕೆ ಅಮೆರಿಕದಿಂದ 56.5 ಮಿಲಿಯನ್ ಡಾಲರ್ ನೆರವು

ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕೆನ್ ಸೋಮವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಬೊಟ್ಟೊ ಜರ್ದಾರಿ ಅವರನ್ನು ಭೇಟಿಯಾಗಿದ್ದಾರೆ.

published on : 27th September 2022
1 2 3 4 5 6 > 

ರಾಶಿ ಭವಿಷ್ಯ