• Tag results for Andra Pradesh

ವಿಶಾಖಪಟ್ಟಣಂನಲ್ಲಿ ಎನ್ಕೌಂಟರ್: ಡಿಸಿಎಂ ಕಮಾಂಡರ್ ಸೇರಿ 6 ನಕ್ಸಲರ ಹತ್ಯೆ

ನಕ್ಸರು ಮತ್ತು ನಕ್ಸಲ್ ನಿಗ್ರಹ ಪಡೆ ನಡುವಿನ ಎನ್ಕೌಂಟರ್ ವೇಳೆ ಆರು ಮಂದಿ ನಕ್ಸಲರು ಹತರಾಗಿದ್ದಾರೆ.

published on : 16th June 2021

ಆಂಧ್ರದಲ್ಲಿ ಲಾರಿಗೆ ಕಾರು ಡಿಕ್ಕಿ: 5 ತಿಂಗಳ ಮಗು ಸೇರಿ ನಾಲ್ವರು ದುರ್ಮರಣ

ಜಿಲ್ಲೆಯ ಪೆದ್ದಾಪುರಂ ಹೊರವಲಯದಲ್ಲಿ ಜಲ್ಲಿ ಕಲ್ಲು ತುಂಬಿದ್ದ ಲಾರಿಗೆ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಐದು ತಿಂಗಳ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಐವರು ಗಾಯಗೊಂಡಿರುವ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ. 

published on : 13th May 2021

ಆಂಧ್ರಪ್ರದೇಶ: ಹೊಂಡಕ್ಕೆ ಟ್ರಾಕ್ಟರ್ ಟ್ರೈಲರ್ ಉರುಳಿ ಗ್ರಾಮದ ಸರಪಂಚ್ ಸೇರಿ ಐವರ ಸಾವು

ನೆಲ್ಲೂರು ಗ್ರಾಮೀಣ ಮಂಡಲದ ಗೊಲ್ಲಕಂದುಕೂರ್ ಗ್ರಾಮದಲ್ಲಿ ಟ್ರಾಕ್ಟರ್ ಟ್ರೈಲರ್ ಹೊಂಡಕ್ಕೆ ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಕೃಷಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

published on : 4th May 2021

ದುರಂತ ಸಂಭವಿಸಿದರೂ ಪಾಠ ಕಲಿಯದ ಅಧಿಕಾರಿಗಳು: ಆಸ್ಪತ್ರೆಗಳಲ್ಲಿ ಮುಂದುವರೆದ ಆಕ್ಸಿಜನ್ ಕೊರತೆ, ಸಂಕಷ್ಟದಲ್ಲಿ ಸೋಂಕಿತರು

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ ದುರಂತ ಸಂಭವಿಸಿದರೂ ಇನ್ನೂ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೋಂಕಿಗೊಳಗಾಗಿರುವ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 

published on : 4th May 2021

ಬೇಡವೇ ಬೇಡ ರಾಜಕೀಯ ಸಹವಾಸ: ಆಂಧ್ರದ ಮಾಜಿ ಶಾಸಕ ಡಾ. ಶಿವರಾಮಕೃಷ್ಣರಾವ್ ಸನ್ಯಾಸ ಸ್ವೀಕಾರ!

'ರಾಜಕೀಯ ಸನ್ಯಾಸ' ರಾಜಕೀಯ ನಾಯಕರು ಹೆಚ್ಚು ಬಳಸುವ ಪದವಾಗಿದೆ. ಐದು ದಶಕಗಳ ಕಾಲ ಸಕ್ರೀಯ ರಾಜಕಾರಣದಲ್ಲಿ ಮುಳುಗೆದ್ದ ನಾಯಕನೊಬ್ಬ ಏಕಾಏಕಿ ಸನ್ಯಾಸ ಸ್ವೀಕರಿಸಿರುವುದು ಆಂಧ್ರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.

published on : 3rd April 2021

ನಿರ್ಗತಿಕನ ಶವಕ್ಕೆ ಹೆಗಲು ಕೊಟ್ಟು 2 ಕಿ.ಮೀ ಹೊತ್ತು ಸಾಗಿದ ಮಹಿಳಾ ಎಸ್ಐ: ವೈರಲ್ ವಿಡಿಯೋ!

ಹೊಲದಲ್ಲಿ ಸತ್ತು ಬಿದ್ದಿದ್ದ ನಿರ್ಗತಿಕನ ಶವವನ್ನು ಹೊರಲು ಗ್ರಾಮಸ್ಥರು ಮುಂದೆ ಬರದ ಹಿನ್ನೆಲೆಯಲ್ಲಿ ಸ್ವತಃ ಮಹಿಳಾ ಎಸ್ಐ ಹೆಗಲ ಮೇಲೆ ಹೊತ್ತು 2 ಕಿ.ಮೀ ನಡೆದಿದ್ದು ಐಎಸ್ ಸಿರಿಶಾರ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

published on : 2nd February 2021

ರಾಮತೀರ್ಥಂನಲ್ಲಿ ಬೃಹತ್ ಪ್ರತಿಭಟನೆಗೆ ಬಿಜೆಪಿ, ಜನಸೇನಾ ಪ್ಲಾನ್: ಸರ್ಕಾರ, ಟಿಡಿಪಿ ವಿರುದ್ಧ ವಾಗ್ದಾಳಿ

 ರಾಮತೀರ್ಥಂನಲ್ಲಿ 400 ವರ್ಷ ಹಳೆಯದಾದ ಕೋದಂಡರಾಮ ವಿಗ್ರಹ ಶಿರಚ್ಛೇದ ಪ್ರಕರಣದ ವಿರುದ್ಧ ಜನಸೇನಾ ಜೊತೆಗೆ ಸಮಾಲೋಚನೆ ನಡೆಸಿ ಸೋಮವಾರ ಬೃಹತ್ ಪ್ರತಿಭಟನೆ, ಮಂಗಳವಾರ ಧರಣಿ  ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸೋಮು ವೀರ್ ರಾಜ್ ಹೇಳಿದ್ದಾರೆ. 

published on : 3rd January 2021

ಕಾಲ್ ಗರ್ಲ್ ಅಂತಾ ಪತ್ನಿಯ ಖಾಸಗಿ ಫೋಟೋ ಹಾಕಿ, ರೇಟ್ ಫಿಕ್ಸ್ ಮಾಡಿದ 'ವಿಕೃತ' ಗಂಡ!

ವಿಕೃತ ಮನಸ್ಥಿತಿಯ ಗಂಡನೊಬ್ಬ ತನ್ನ ಪತ್ನಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಗಂಟೆಗೆ ಇಷ್ಟು ಅಂತಾ ರೇಟ್ ಫಿಕ್ಸ್ ಮಾಡಿದ್ದಾನೆ.

published on : 1st January 2021

ಗರ್ಭಿಣಿ ಅತ್ತಿಗೆ ಅಂತಲೂ ನೋಡದೆ ಪತಿಯ ತಮ್ಮಂದಿರಿಂದ ಕಿರುಕುಳ, ಮನನೊಂದು ಗೃಹಿಣಿ ಆತ್ಮಹತ್ಯೆ!

ಮದುವೆಯಾಗಿ ಒಂದು ವರ್ಷದಲ್ಲೇ ತಾನು ತಾಯಿಯಾಗುತ್ತಿರುವ ಖುಷಿ ಅನುಭವಿಸಬೇಕಿದ್ದ ಗೃಹಿಣಿಯೊಬ್ಬರು ಗಂಡ ಮತ್ತು ಆತನ ಸಹೋದರರ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

published on : 28th November 2020