• Tag results for Apartment

ಕೊರೋನಾ ಆತಂಕ: ಅಪಾರ್ಟ್‌ಮೆಂಟ್‌ಗಳಲ್ಲಿನ ಜಿಮ್‌, ಈಜುಕೊಳ ಬಂದ್; ಬಿಬಿಎಂಪಿ ಹೊಸ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಅಪಾರ್ಟ್‌ಮೆಂಟ್‌ಗಳಿಗೆ ಬಿಬಿಎಂಪಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್‌ಗಳಲ್ಲಿ ಜಿಮ್‌ಗಳು, ಈಜುಕೊಳಗಳು ಮತ್ತು ಇತರ ಕ್ರೀಡಾ ಸೌಲಭ್ಯಗಳನ್ನು ಮತ್ತೊಮ್ಮೆ ಬಂದ್ ಮಾಡಿಸಲಾಗುತ್ತಿದೆ.

published on : 14th January 2022

ಭಾರಿ ಮಳೆ: ಜಲಾವೃತ ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಗೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM BS Bommai) ಅವರು ಇಂದು ಯಲಹಂಕದ ಜಲಾವೃತ್ತ ಕೇಂದ್ರೀಯ ವಿಹಾರ ವಸತಿ ಸಮುಚ್ಚಯ (Kendriya Vihar apartment)ಕ್ಕೆ  ಭೇಟಿ ನೀಡಿ ಮಳೆ(Flood Affected)ಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದರು. 

published on : 23rd November 2021

ಆಪಾರ್ಟ್ ಮೆಂಟ್ ಅಗ್ನಿ ದುರಂತ: ಬಾಲ್ಕನಿಗೆ ಗ್ರಿಲ್ ಅಥವಾ ಮುಚ್ಚುವಿಕೆ ಮಾಡಬಾರದು: ಬಿಬಿಎಂಪಿ ಆದೇಶ

ಬೆಂಗಳೂರು ಅಪಾರ್ಟ್​ಮೆಂಟ್​ ಅಗ್ನಿ ದುರಂತದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಗ್ನಿ ಅವಘಡಗಳನ್ನು ತಡೆಗಟ್ಟುವ ನಿಟ್ಟನಲ್ಲಿ ಬಿಬಿಎಂಪಿ ಹೊಸ ಆದೇಶ ಪ್ರಕಟಿಸಿದೆ.

published on : 23rd September 2021

ಬೆಂಗಳೂರು: ಅಪಾರ್ಟ್ ಮೆಂಟಿನಲ್ಲಿ ಸಿಲಿಂಡರ್ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿಲ್ಲ; ನಿಖರ ಕಾರಣ ಪತ್ತಗೆ ಎಫ್ ಎಸ್ ಎಲ್ ಪರಿಶೀಲನೆ

ನಗರದ ಬಿಟಿಎಂ ಲೇ ಔಟ್ ನ ದೇವರ ಚಿಕ್ಕನಹಳ್ಳಿಯಲ್ಲಿರುವ ಆಶ್ರಿತ್ ಅಪಾರ್ಟ್ ಮೆಂಟ್ ನ 210ನೇ ಫ್ಲ್ಯಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ತನ್ನ ಕೆನ್ನಾಲಿಗೆಯನ್ನು ಚಾಚಿ ತಾಯಿ ಮತ್ತು ಮಗಳು ಸಜೀವ ದಹನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಂಡ ಸ್ಥಳಕ್ಕೆ ಆಗಮಿಸಿದೆ.

published on : 22nd September 2021

ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ; ಇಬ್ಬರು ಸಜೀವದಹನ

ನಗರದ ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. 

published on : 21st September 2021

ಹೆಚ್ಚುತ್ತಿರುವ ಕೋವಿಡ್ ಸೋಂಕು: ಅಪಾರ್ಟ್'ಮೆಂಟ್'ಗಳ ಮೇಲೆ ಬಿಬಿಎಂಪಿ ತೀವ್ರ ನಿಗಾ

ನಗರದಲ್ಲಿ ಕ್ಲಸ್ಟರ್ ಹಾಗೂ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಹಾಗೂ ಹಾಸ್ಟೆಲ್ ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ ಎಂದು ತಿಳಿದುಬಂದಿದೆ. 

published on : 17th August 2021

ಅಪಾರ್ಟ್ ಮೆಂಟ್ ಗಳಿಗೆ ಅಧಿಭೋಗ ಪ್ರಮಾಣಪತ್ರ ಕಡ್ಡಾಯ ಕುರಿತು ರಾಜ್ಯ ಸರ್ಕಾರದ ನಿರ್ಧಾರ ಶೀಘ್ರದಲ್ಲೆ!

ಅಪಾರ್ಟ್ ಮೆಂಟ್ ಗಳಲ್ಲಿ ವಿದ್ಯುತ್ ಹಾಗೂ ನೀರು ಮುಂತಾದ ಪೂರೈಕೆಗಳಿಗೆ ಅಗತ್ಯ ಅನುಮತಿಗಳನ್ನು ಪಡೆಯುವುದಕ್ಕೆ ಈಗ ಅಧಿಭೋಗ ಪ್ರಮಾಣ ಪತ್ರ (ಒ.ಸಿ)ಯ ಕಡ್ಡಾಯ ನಿಯಮವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.

published on : 11th August 2021

ರಾಜ್ಯದಲ್ಲಿ 45 ಲಕ್ಷಕ್ಕಿಂತ ಕಡಿಮೆ ವೆಚ್ಚದ ಅಪಾರ್ಟ್ ಮೆಂಟ್ ಗಳಿಗೆ ಸ್ಟಾಂಪ್ ಸುಂಕ ಇಳಿಕೆ

ಸ್ಥಿರಾಸ್ಥಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 35-45 ಲಕ್ಷ ರೂಪಾಯಿಗಳ ಫ್ಲಾಟ್ ಗಳ ನೋಂದಣಿ ಮೇಲಿನ ಸ್ಟಾಂಪ್ ಸುಂಕವನ್ನು ಶೇ.5 ರಿಂದ ಶೇ.3 ಕ್ಕೆ ಇಳಿಕೆ ಮಾಡಿದೆ.

published on : 23rd July 2021

ಉಡುಪಿ: ದುಬೈನಿಂದ ಹಿಂತಿರುಗಿದ್ದ 35 ವರ್ಷದ ಮಹಿಳೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

ಆಘಾತಕಾರಿ ಘಟನೆಯಲ್ಲಿ, ಬ್ರಹ್ಮಾವರದ ಉಪ್ಪಿನಕೋಟೆಯ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

published on : 13th July 2021

ಬೆಳಗಾವಿ: ಕೋವಿಡ್ ಶಂಕಿತ ವೃದ್ಧ ದಂಪತಿಯನ್ನು ಬೀದಿಗೆ ತಳ್ಳಿದ ಅಪಾರ್ಟ್ ಮೆಂಟ್ ನಿವಾಸಿಗಳು 

ಕೋವಿಡ್ ಸೋಂಕಿತ ವೃದ್ಧ ದಂಪತಿಯನ್ನು ಅಪಾರ್ಟ್ ಮೆಂಟ್ ನಿಂದ ಹೊರದಬ್ಬಿದ ಅಮಾನುಷ ಕೃತ್ಯ ಬೆಳಗಾವಿಯಲ್ಲಿ ನಡೆದಿದೆ. ಆಹಾರ, ಆಶ್ರಯವಿಲ್ಲದೆ ಬೀದಿ ಬದಿಯಲ್ಲಿದ್ದ ವೃದ್ಧ ದಂಪತಿಯನ್ನು ಕೊನೆಗೆ ಕೆಲವು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದೆ.

published on : 29th May 2021

ಬೆಂಗಳೂರು ಐಟಿ ಕಾರಿಡಾರ್, ಅಪಾರ್ಟ್'ಮೆಂಟ್ ನಿವಾಸಿಗಳಿಂದ ಕೊರೋನಾ ಸೋಂಕು ವ್ಯಾಪಕ!

10 ದಿನಗಳ ಕೊರೋನಾ ಕರ್ಫ್ಯೂ ಜಾರಿಯಲ್ಲಿದ್ದರೂ, ಬೆಂಗಳೂರಿನ ಐಟಿ ಕಾರಿಡಾರ್ ಪ್ರಮುಖವಾಗಿ ಮಹದೇವಪುರ-ವೈಟ್'ಫೀಲ್ಟ್ ನಿಂದ ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ...

published on : 7th May 2021

ರಾಜ್ಯದ ಠಾಣೆಗಳನ್ನು ಹಿಂದಿಕ್ಕಿ ಅತ್ಯುತ್ತಮ ಸ್ಥಾನ ಪಡೆದ ಬೀದರ್ ಪೊಲೀಸ್ ಸ್ಟೇಷನ್!

ಬೀದರ್‌ನ ಮಾರುಕಟ್ಟೆ ಪೊಲೀಸ್ ಠಾಣೆ, ಸಬ್ ಇನ್ಸ್‌ಪೆಕ್ಟರ್ ಕುಮಾರಿ ಸಂಗೀತ ಎಸ್ ನೇತೃತ್ವದಲ್ಲಿ, ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಇತರ ಠಾಣೆಗಳು ಸೇರಿದಂತೆ ರಾಜ್ಯದಾದ್ಯಂತ ನೂರಾರು ಪೊಲೀಸ್ ಠಾಣೆಗಳ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

published on : 9th April 2021

ಅಪಾರ್ಟ್ ಮೆಂಟ್ ಗಳಲ್ಲಿನ ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ಬಳಕೆಗೆ ಪೊಲೀಸರ ನಿಷೇಧ

ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಸಮುಚ್ಚಯದಲ್ಲಿರುವ ಸ್ವಿಮ್ಮಿಂಗ್ ಪೂಲ್, ಜಿಮ್ ಹಾಗೂ ಪಾರ್ಟಿ ಹಾಲ್ ಗಳನ್ನು ಬಳಸದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

published on : 8th April 2021

ಬೆಂಗಳೂರಿನ ಅಪಾರ್ಟ್ ಮೆಂಟ್, ಎಂಎನ್ ಸಿ ಕಾಂಪ್ಲೆಕ್ಸ್ ಗಳಲ್ಲಿ ಸಹ ಕೊರೋನಾ ಲಸಿಕೆ ಹಾಕಲು ಚಿಂತನೆ!

45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಆರಂಭಗೊಂಡ ನಂತರ ಬಿಬಿಎಂಪಿ ಕೊರೋನಾ ಹೆಚ್ಚಾಗಿ ಹಬ್ಬುವ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಗಳು, ಕೈಗಾರಿಕಾ ಸಂಕೀರ್ಣಗಳು ಮತ್ತು ಸಾಫ್ಟ್ ವೇರ್ ಪಾರ್ಕ್ ಗಳಲ್ಲಿ ಕೊರೋನಾ ಲಸಿಕೆ ಉಪ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ ಎಂದು ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

published on : 3rd April 2021

ಮನೆ ಬಾಗಿಲಿಗೆ ಬರಲಿದೆ ಕೋವಿಡ್ ಲಸಿಕೆ: ಅಪಾರ್ಟ್ ಮೆಂಟ್ ಗಳಲ್ಲಿ ಲಸಿಕಾ ಕೇಂದ್ರ ಸ್ಥಾಪನೆ?

ರಾಜ್ಯದ ಏಳು ಜಿಲ್ಲೆಗಳ ದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಪರೀಕ್ಷಾ ಕೇಂದ್ರಗಳ ಮಾದರಿಯಲ್ಲಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲು  ರಾಜ್ಯ ಸರ್ಕಾರ ಯೋಜಿಸುತ್ತಿದೆ.

published on : 17th March 2021
1 2 > 

ರಾಶಿ ಭವಿಷ್ಯ