• Tag results for Asaduddin Owaisi

'ದೇಶದಲ್ಲಿ ಹಿಂದುತ್ವ ದ್ವೇಷದ ಸುನಾಮಿ ಎದ್ದಿದೆ': ಅಸದುದ್ದೀನ್ ಒವೈಸಿ 

ಇತ್ತೀಚಿನ ದೆಹಲಿ ಹಿಂಸಾಚಾರ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ, ಹಿಂದುತ್ವದ ದ್ವೇಷದ ಸುನಾಮಿ ಇದ್ದು ದೆಹಲಿ ಹಿಂಸಾಚಾರದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

published on : 12th March 2020

ಹೋಗಿ ದೆಹಲಿ ಪರಿಸ್ಥಿತಿ ನಿಯಂತ್ರಿಸಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿಗೆ ಓವೈಸಿ ಆಗ್ರಹ

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮದಲು ಹೋಗಿ ದೆಹಲಿ ಪರಿಸ್ಥಿತಿ ನಿಯಂತ್ರಿಸಿ ಎಂದು ಆಗ್ರಹಿಸಿದ್ದಾರೆ.

published on : 25th February 2020

ಓವೈಸಿ ಏನು ದೊಡ್ಡ ಮನುಷ್ಯನಾ? : ಸಚಿವ ಬಿ. ಶ್ರೀರಾಮುಲು ಪ್ರಶ್ನೆ

ರಾಜ್ಯದಲ್ಲಿ ಬೀದರ್, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಓವೈಸಿ ಸಮ್ಮು ಖದಲ್ಲಿ ಅಮೂಲ್ಯ ಲಿಯೋನ್​,ಇಂದು ವಿದ್ಯಾ ಪಾಕಿಸ್ತಾನ ಜಿಂದಾ ಬಾದ್ ಅಂದಿದ್ದಾರೆ, ಅವರೆಲ್ಲಾ ಭಾರತ್ ಮಾತಾ ಕೀ ಜೈ ಅನ್ನಬೇಕೇ ಹೊರತು, ಪಾಕಿಸ್ತಾನ್​ ಕೀ ಜೈ ಅನ್ನಬಾರದು ಎಂದು ಆರೋಗ್ಯ ಸಚಿವ ಬಿ.ಶ್ರೀರಾ ಮುಲು ಅವರು ಎಚ್ಚರಿಕೆ ನೀಡಿದ್ದಾರೆ.

published on : 22nd February 2020

ಪಾಕ್ ಪರ ಘೋಷಣೆ: ಪ್ರತಿಭಟನೆಯ ದಿಕ್ಕು ತಪ್ಪಿಸುವ ಹುನ್ನಾರ: ಒವೈಸಿ ಆರೋಪ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್ಆರ್_ಸಿ (National Register of Citizens) ವಿರೋಧಿ ಕಾರ್ಯಕ್ರಮದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಯುವತಿ ವಿರುದ್ಧ ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.

published on : 20th February 2020

ಶೂಟ್ ಮಾಡಿದ ವ್ಯಕ್ತಿಯನ್ನು ಆತನ ಬಟ್ಟೆಗಳಿಂದ ಗುರುತಿಸಿ: ಪ್ರಧಾನಿ ಮೋದಿಗೆ ಓವೈಸಿ ಟಾಂಗ್

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ(ಜೆಎಂಐ) ವಿಶ್ವವಿದ್ಯಾಲಯದಿಂದ ರಾಜ್‍ಘಾಟ್‍ಗೆ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ವಿಶ್ವವಿದ್ಯಾಲಯ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ....

published on : 30th January 2020

ಗಡ್ಡವಿರುವ ಮನುಷ್ಯನ ಜೊತೆ ಸಿಎಎ ಕುರಿತು ಚರ್ಚೆ ನಡೆಸಿ: ಅಮಿತ್ ಶಾಗೆ ಒವೈಸಿ ಪಂಥಾಹ್ವಾನ

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಅವರ ಜೊತೆಗೆ ಏಕೆ ಚರ್ಚಿಸಬೇಕು, ನನ್ನ ಜೊತೆ ಚರ್ಚೆ ಮಾಡಿ ಬನ್ನಿ ಎಂದು ಇಂಡಿಯಾ ಮಜ್ಲಿಸ್ ಇ ಇಟ್ಟೆಹದುಲ್ ಮುಸ್ಲಿಮೀನ್(ಎಎಂಐಎಂ) ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಆಹ್ವಾನ ನೀಡಿದ್ದಾರೆ.

published on : 22nd January 2020

ವಲಸಿಗರ ಬದಲು ಭಾರತೀಯ ಅಲ್ಪಸಂಖ್ಯಾತರ ರಕ್ಷಣೆ ಮಾಡಿ: ಪ್ರಧಾನಿ ಮೋದಿಗೆ ಓವೈಸಿ

ಪೌರತ್ವ ಕಾಯ್ದೆ ವಿರುದ್ಧ ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು, ನೆರೆ ರಾಷ್ಚ್ರದ ವಲಸಿಗರ ಬದಲಾಗಿ ದೇಶದಲ್ಲಿರುವ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಮೊದಲು ರಕ್ಷಣೆ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದಾರೆ. 

published on : 16th January 2020

ಅವರು ತಮ್ಮ ಭ್ರಮೆಯಲ್ಲಿಯೇ ಇರಲಿ ಬಿಡಿ: ಪೌರತ್ವ ಕಾಯ್ದೆಗೆ ಬೆಂಬಲ ನೀಡಿದ ಮುಸ್ಲಿಂ ಮೌಲ್ವಿಗಳ ವಿರುದ್ಧ ಓವೈಸಿ ಕಿಡಿ

ಪೌರತ್ವ ಕಾಯ್ದೆ ತಿದ್ದುಪಡಿಗೆ ಬೆಂಬಲ ನೀಡುತ್ತಿರುವ ಮುಸ್ಲಿಂ ಮೌಲ್ವಿಗಳ ವಿರದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. 

published on : 21st December 2019

ಪೌರತ್ವ(ತಿದ್ದುಪಡಿ)ಮಸೂದೆ ಪ್ರತಿಯನ್ನು ಹರಿದುಹಾಕಿದ ಅಸಾದುದ್ದೀನ್ ಓವೈಸಿ

ಪೌರತ್ವ(ತಿದ್ದುಪಡಿ)ಮಸೂದೆ ಮೇಲೆ ಲೋಕಸಭೆಯಲ್ಲಿ ಚರ್ಚೆ ಕಾವು ಏರಿದ್ದು, ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅನಾಕರಿಕ ವರ್ತನೆ ತೋರಿದ್ದಾರೆ. 

published on : 9th December 2019

ಎಐಎಂಐಎಂ ಬಿಜೆಪಿಯಿಂದ ಹಣಪಡೆದು ಉಗ್ರವಾದ ಹರಡುತ್ತಿದೆ: ಮಮತಾ  ಆರೋಪಕ್ಕೆ ಒವೈಸಿ ತಿರುಗೇಟು

 ಹೈದರಾಬಾದ್ ನಲ್ಲಿ ನೆಲೆಯೂರಿರುವ ಅಲ್ಪಸಂಖ್ಯಾತರಲ್ಲಿ ಉಗ್ರವಾದದ ಬೇರುಗಳು ಗಟ್ಟಿಯಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. 

published on : 19th November 2019

ಇಸಿಸ್ ಉಗ್ರ ನಾಯಕ ಬಗ್ದಾದಿ, ಓವೈಸಿ ನಡುವೆ ಯಾವ ವ್ಯತ್ಯಾಸವಿಲ್ಲ: ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ರಿಜ್ವಿ

ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂಐಎಂ) ನಾಯಕ ಅಸಾದುದ್ದೀನ್ ಒವೈಸಿ ಹಾಗೂ ಇಸೀಸ್ ನಾಯಕ ಅಬೂಬಕರ್-ಅಲ್ ಬಾಗ್ದಾದಿ ಅವರ ನಡುವೆ ಯಾವ ವ್ಯತ್ಯಾಸಗಳಿಲ್ಲ ಎಂದು ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸಿಮ್ ರಿಜ್ವಿ ಆರೋಪಿಸಿದ್ದಾರೆ. 

published on : 17th November 2019

ಅಯೋಧ್ಯೆಯ ತೀರ್ಪು ತೃಪ್ತಿ ತಂದಿಲ್ಲ: ಅಸಾದುದ್ದೀನ್ ಒವೈಸಿ

ವಿವಾದಿತ ಬಾಬರಿ ಮಸೀದಿ-ರಾಮ್ ದೇವಾಲಯದ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಸುಪ್ರೀಂ ಕೋರ್ಟ್‌ನ ತೀರ್ಪು ತೃಪ್ತಿ ನೀಡಿಲ್ಲ  ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಿಜಕ್ಕೂ "ಸರ್ವೋಚ್ಚ, ಆದರೆ ದೋಷಾತೀತ ಅಲ್ಲ" ಎಂದು ಅವರು ಹೇಳಿದರು. 

published on : 9th November 2019

ಮುಸ್ಲಿಂ ಪ್ರಾಬಲ್ಯದ ಕಣಿವೆಗೆ 'ನಾಜಿ ಲವರ್ಸ್: ಯುರೋಪಿಯನ್ ನಿಯೋಗ ಕಾಶ್ಮೀರ ಭೇಟಿಗೆ ಓವೈಸಿ ವಾಗ್ದಾಳಿ

ಯುರೋಪಿಯನ್ ನಿಯೋಗ ಕಾಶ್ಮೀರ ಭೇಟಿ  ಮಾಡಿದ್ದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

published on : 29th October 2019

ಪ್ರಧಾನಿ ಮೋದಿ ಸಂವಿಧಾನ ನೆನಪಿಸಿಕೊಳ್ಳುವ ವಿಶ್ವಾಸವಿದೆ: ಓವೈಸಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಂವಿಧಾನವನ್ನು ನೆನಪಿಸಿಕೊಳ್ಳುವ ವಿಶ್ವಾಸವಿದೆ ಎಂದು ಆಲ್ ಇಂಡಿಯಾ ಮಜಿಲಿಸ್ -ಇ-ಇತ್ತೆಹುದುಲ್ ಮುಸ್ಲೀಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಬುಧವಾರ ಹೇಳಿದ್ದಾರೆ.

published on : 11th September 2019

ಇದೊಂದು ಅಕ್ರಮ ವಲಸಿಗರ ಪುರಾಣ: ಎನ್‌ಆರ್‌ಸಿ ಬಗ್ಗೆ ಓವೈಸಿ ಹೇಳಿದ್ದಿಷ್ಟು

ಹಿಂದೂ ಹಾಗೂ ಮುಸ್ಲಿಮರೆಂಬ ವಿಚಾರದಲ್ಲಿ  ದೇಶಾದ್ಯಂತ ಎನ್‌ಆರ್‌ಸಿಯನ್ನು ಕೇಳುವುದನ್ನು ನಿಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ರಾಷ್ಟ್ರೀಯ ನಾಗರಿಕರ ನೋಂದಣಿ  (ಎನ್‌ಆರ್‌ಸಿ) ಬಗೆಗೆ ಬಿಜೆಪಿಯನ್ನು ದೂಷಿಸಿದ ಓವೈಸಿ ಅಲ್ಲದೆ ಇದೊಂದು "ಅಕ್ರಮ ವಲಸಿಗರ ಪುರಾಣ" ಎಂದು ಜರಿದಿದ್ದಾರೆ.  

published on : 31st August 2019
1 2 3 >