• Tag results for Assembly polls

ಕೊರೋನಾ ಹೆಚ್ಚಳ: ಕೈ ಮುಗಿದು ಕೇಳ್ತಿನಿ, ಒಂದೆರಡು ದಿನಗಳಲ್ಲಿ ಚುನಾವಣೆ ಮುಗಿಸಿ; ಆಯೋಗಕ್ಕೆ ಮಮತಾ ಒತ್ತಾಯ 

ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಈ ಹಿಂದೆ ಘೋಷಿಸಿದ್ದಂತೆ ಮೂರು ಹಂತದ ಬದಲಿಗೆ ಒಂದು ಅಥವಾ ಎರಡು ದಿನಗಳಲ್ಲಿ  ಚುನಾವಣೆಯನ್ನು ಮುಗಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

published on : 19th April 2021

'ನಾನು ಬೀದಿ ಹೋರಾಟಗಾರ್ತಿ, ಯುದ್ಧಭೂಮಿಯಿಂದ ಹೋರಾಟ ಮಾಡ್ತಿನಿ': ಮಮತಾ ಬ್ಯಾನರ್ಜಿ

ಚುನಾವಣಾ ಆಯೋಗ ಹೇರಿದ್ದ ನಿರ್ಬಂಧ ಮಂಗಳವಾರ ಸಂಜೆ ಅಂತ್ಯವಾದ ಬಳಿಕ ಎದುರಾಳಿ ಬಿಜೆಪಿ ವಿರುದ್ಧ ಚಾಲೆಂಜ್ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾನೊಬ್ಬಳು ಬೀದಿ ಹೋರಾಟಗಾರ್ತಿ, ಯುದ್ದಭೂಮಿಯಿಂದ ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.

published on : 13th April 2021

ಪಶ್ಚಿಮ ಬಂಗಾಳ ಚುನಾವಣೆ: ಏಪ್ರಿಲ್ 14ರಿಂದ ರಾಹುಲ್ ಗಾಂಧಿ ಪ್ರಚಾರ

 ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಏಪ್ರಿಲ್ 14ರಿಂದ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಗೋಲ್ಪೋಖರ್ ಮತ್ತು ಮತಿಗರ-ನಕ್ಸಲ್ಬಾರಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

published on : 11th April 2021

ಪಶ್ಚಿಮ ಬಂಗಾಳ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ 13 ತರಹೇವಾರಿ ಭಕ್ಷ್ಯ ಭೋಜನ!

ಪಶ್ಚಿಮ ಬಂಗಾಳದ ಬಾಬಾನಿಪುರದಲ್ಲಿ ಇಂದು ಮನೆ ಮನೆಗೆ ಹೋಗಿ ಮತ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಸಮರೇಂದ್ರ ಪ್ರಸಾದ್ ಬಿಸ್ವಾಸ್ ಅವರ ನಿವಾಸದಲ್ಲಿ ಮಧ್ಯಾಹ್ನ ಭೋಜನ ಸವಿದರು. ಪಕ್ಷದ ಮುಖಂಡರಾದ ಪಕ್ಷದ ಮುಖಂಡರಾದ ಸ್ವಪನ್ ದಾಸ್‌ಗುಪ್ತಾ ಮತ್ತು ದಿನೇಶ್ ತ್ರಿವೇದಿ ಕೂಡ ಪಾಲ್ಗೊಂಡಿದ್ದರು.

published on : 9th April 2021

ಚುನಾವಣಾ ಆಯೋಗದ ಶೋಕಾಸ್ ನೋಟಿಸ್ ಗೆ 'ಡೋಂಟ್ ಕೇರ್' ಎಂದ ಮಮತಾ!

ಕೇಂದ್ರಿಯ ಪಡೆಗಳಿಂದ ಮತದಾರರಿಗೆ ಬೆದರಿಕೆ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೀಡಲಾಗಿರುವ ನೋಟಿಸ್ ಕುರಿತಂತೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಆರ್ ಪಿಎಫ್ , ಬಿಜೆಪಿ ಪರ ಕೆಲಸ ಮಾಡುವುದನ್ನು ನಿಲ್ಲಿಸುವವರೆಗೂ ಅದರ ಬಗ್ಗೆ ಮಾತನಾಡುವುದನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.

published on : 9th April 2021

ಪಶ್ಚಿಮ ಬಂಗಾಳ: ನಾಳೆ 44 ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಮತದಾನ

ಪಶ್ಚಿಮ ಬಂಗಾಳ ವಿಧಾನಸಭೆಯ 44 ಕ್ಷೇತ್ರಗಳಲ್ಲಿ ನಾಳೆ ನಾಲ್ಕನೇ ಹಂತದ ಮತದಾನ ನಡೆಯಲಿದೆ. ಕೇಂದ್ರ ಸಚಿವ  ಬಾಬುಲ್ ಸುಪ್ರಿಯೋ ಮತ್ತು ಪಶ್ಚಿಮ ಬಂಗಾಳದ ಸಚಿವರಾದ ಪಾರ್ಥ ಚಟರ್ಜಿ, ಅನೂಪ್ ಬಿಸ್ವಾಸ್ ಸೇರಿದಂತೆ ಹಲವು ಮುಖಂಡರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

published on : 9th April 2021

ಮುಂದಿನ ವರ್ಷದ ಚುನಾವಣೆಗಾಗಿ ಪ್ರಶಾಂತ್ ಕಿಶೋರ್ ತಂಡ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯ ಸಾಧ್ಯತೆ

ಪಂಜಾಬ್ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಂತೆಯೇ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ  ಪ್ರಧಾನ ಸಲಹೆಗಾರರಾಗಿ ನೇಮಕವಾಗಿರುವ ಚುನಾವಣಾ ರಣತಂತ್ರ ಪರಿಣತ ಪ್ರಶಾಂತ್ ಕಿಶೋರ್ , ತನ್ನ ತಂಡದೊಂದಿಗೆ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯಹೂಡುವ ಸಾಧ್ಯತೆಯಿದೆ.

published on : 9th April 2021

ವಿಧಾನಸಭೆ ಚುನಾವಣೆ: ಕೇರಳ 73.58%, ತ.ನಾಡು 65.11%, ಅಸ್ಸಾಂ 82.29%, ಪುದುಚೇರಿ 78.13% ಮತ್ತು ಪ.ಬಂಗಾಳದಲ್ಲಿ 77.38% ಮತದಾನ

ಕೇರಳ, ಪುದುಚೇರಿ ತಮಿಳುನಾಡು ವಿಧಾನಸಭೆಗೆ ಇಂದು ಒಂದೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ. ಹಾಗೇಯೇ ಅಸ್ಸಾಂನಲ್ಲಿ ಮೂರನೇ ಹಾಗೂ ಕೊನೆ ಹಂತದ ಮತದಾನ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಸಹ ಯಶಸ್ವಿಯಾಗಿದೆ.

published on : 6th April 2021

ತಮಿಳುನಾಡು: ಹಣ ಹಂಚಿಕೆ ಆರೋಪ, ಐದು ಕ್ಷೇತ್ರಗಳಲ್ಲಿ ಚುನಾವಣೆ ರದ್ಧತಿಗೆ ಆಯೋಗಕ್ಕೆ ಎಐಎಡಿಎಂಕೆ ಒತ್ತಾಯ!

ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ, ಐದು ಕ್ಷೇತ್ರಗಳಲ್ಲಿ ಚುನಾವಣೆ ರದ್ದುಪಡಿಸುವಂತೆ ಆಯೋಗಕ್ಕೆ ಆಡಳಿತಾರೂಢ ಎಐಎಡಿಎಂಕೆ ಒತ್ತಾಯಿಸಿದೆ. 

published on : 5th April 2021

ಪ್ರಧಾನಿ ಮೋದಿಯ ಒತ್ತಡ ಸಹಿಸಿಕೊಳ್ಳಲಾಗದೆ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಸಾವು: ಉದಯನಿಧಿ ಸ್ಟಾಲಿನ್

ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡವನ್ನು ಸಹಿಸಿಕೊಳ್ಳಲಾಗದೆ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಮೃತಪಟ್ಟರು ಎಂಬ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆ ನಂತರ ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರ ಕಣ ಹೊಸ ಮಟ್ಟಕ್ಕೆ ಇಳಿದಿದೆ.

published on : 3rd April 2021

ನಂದಿಗ್ರಾಮದಲ್ಲಿ ಗೆಲುವು ಖಚಿತ, ಚಿಂತಿಸಬೇಕಾಗಿಲ್ಲ: ಮಮತಾ ಬ್ಯಾನರ್ಜಿ ಆತ್ಮವಿಶ್ವಾಸ

ನಂದಿಗ್ರಾಮ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ, ಜನರು ತನ್ನಗೆ ಮತ ಹಾಕಿರುವ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

published on : 2nd April 2021

ಆರ್ ಎಸ್ಎಸ್, ಬಿಜೆಪಿ ವಿಷವಿದ್ದಂತೆ: ಮಲ್ಲಿಕಾರ್ಜುನ ಖರ್ಗೆ

ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

published on : 2nd April 2021

ತಮಿಳುನಾಡು ಚುನಾವಣೆ: ಎ.ರಾಜಾಗೆ 48 ತಾಸುಗಳ ಚುನಾವಣಾ ಪ್ರಚಾರ ನಿಷೇಧ

ನೀತಿ ಸಂಹಿತೆ ಉಲ್ಲಂಘನೆಗಾಗಿ ಡಿಎಂಕೆ ಮುಖಂಡ ಎ ರಾಜಾಗೆ 48 ತಾಸು ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧಿಸಿದೆ.

published on : 1st April 2021

ಎ ರಾಜಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಎಐಎಡಿಎಂಕೆ

ಡಿಎಂಕೆ ಸಂಸದ ಎ ರಾಜಾ ವಿರುದ್ಧ ಎಐಎಡಿಎಂಕೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.  ಮುಖ್ಯಮಂತ್ರಿ ಇ.ಪಳನಿಸ್ವಾಮಿ ವಿರುದ್ಧ ಅಶ್ಲೀಲ ಮತ್ತು ಹಗರಣದ ಮಾತುಗಳನ್ನಾಡಿರುವ ಡಿಎಂಕೆ ಸಂಸದ ಎ ರಾಜಾ ಅವರನ್ನು ತಮಿಳುನಾಡು ವಿಧಾನಸಭಾ ಪ್ರಚಾರದಿಂದ ತಡೆಯುವಂತೆ ಎಐಎಡಿಎಂಕೆ ಚುನಾವಣಾ ಆಯೋಗವನ್ನು ಕೇಳಿಕೊಂಡಿದೆ.

published on : 28th March 2021

ಪಶ್ಚಿಮ ಬಂಗಾಳ ಚುನಾವಣೆ: ಮುಕುಲ್ ರಾಯ್ ಆಡಿಯೋದೊಂದಿಗೆ ಬಿಜೆಪಿಗೆ ತಿರುಗೇಟು ನೀಡಿದ ಟಿಎಂಸಿ!

ಪಶ್ಚಿಮ ಬಂಗಾಳದ 30 ವಿಧಾನಸಭಾ ಸ್ಥಾನಗಳಲ್ಲಿ ನಿನ್ನೆ ನಡೆದ ಚುನಾವಣೆ ಮಧ್ಯೆಯೇ ಮಮತಾ ಬ್ಯಾನರ್ಜಿ ನಂದಿಗ್ರಾಮದ ಬಿಜೆಪಿ ಮುಖಂಡರೊಬ್ಬರಿಗೆ ಕರೆ ಮಾಡಿ, ಮತ್ತೆ ಟಿಎಂಸಿ ಸೇರುವಂತೆ ಮತ್ತು ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡುವಂತೆ ಕೇಳುವ ಆಡಿಯೋವೊಂದನ್ನು ಬಿಜೆಪಿ ಬಿಡುಗಡೆ ಮಾಡುವ ಮೂಲಕ ಕಮಲ ಹಾಗೂ ಟಿಎಂಸಿ ಮುಖಂಡರ ನಡುವೆ ವಾಕ್ಸಮರ ಭುಗಿಲೆದಿದ್ದೆ.

published on : 28th March 2021
1 2 3 4 5 >