• Tag results for Athletes

ಮೈಸೂರು: ಮೋದಿ ಹೆಲಿಪ್ಯಾಡ್'ನಿಂದಾಗಿ ಕ್ರೀಡಾಪಟುಗಳ 'ಟ್ರ್ಯಾಕ್' ನಾಶ!

ಆರೋಗ್ಯ ಮತ್ತು ಫಿಟ್‌ನೆಸ್‌ನ ಮಹತ್ವವನ್ನು ಸಾರಿದ ಪ್ರಧಾನಿ ನರೇಂದ್ರ ಮೋದಿ ಅವರು, ಜೂನ್.21ರಂದು ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಆದರೆ ಓವಲ್ ಮೈದಾನದಲ್ಲಿ ಅವರಿಗಾಗಿ ಸಿದ್ಧಪಡಿಸಿದ ಹೆಲಿಪ್ಯಾಡ್ ಅಥ್ಲೀಟ್ ಗಳು ತರಬೇತಿ ಪಡೆಯುತ್ತಿದ್ದ...

published on : 25th June 2022

ಬೀಜಿಂಗ್ ಚಳಿಗಾಲ ಒಲಿಂಪಿಕ್ಸ್: ಭಾರತ ತಂಡದ ಮ್ಯಾನೇಜರ್ ಸೇರಿ 50ಕ್ಕೂ ಹೆಚ್ಚು ವಿದೇಶಿ ಅಥ್ಲೀಟ್ ಗಳಿಗೆ ಕೊರೋನಾ

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ 50ಕ್ಕೂ ಹೆಚ್ಚು ವಿದೇಶಿ ಅಥ್ಲೀಟ್ ಗಳಿಗೆ ಕೋವಿಡ್ ದೃಢಪಟ್ಟಿದೆ.

published on : 3rd February 2022

ಅತ್ಯುತ್ತಮ ಕೋಚ್ ಗಳ ಮೂಲಕ ಕ್ರೀಡಾಪಟುಗಳಿಗೆ ವೈಜ್ಞಾನಿಕ ತರಬೇತಿ ಅಗತ್ಯ: ಸಿಎಂ ಬೊಮ್ಮಾಯಿ

ಕ್ರೀಡಾಪಟುಗಳುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್ ಗಳು ಮಾಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

published on : 14th January 2022

ಉನ್ನತ ಕ್ರೀಡಾಪಟುತ್ವ ರೂಪಿಸಲು ಉತ್ತರ ಕನ್ನಡದ ಸಿದ್ದಿ ಸಮುದಾಯದ ಯುವಕರಿಗೆ ಕ್ರೀಡಾ ಇಲಾಖೆ ತರಬೇತಿ!

ಅತ್ಯುತ್ತಮ ಕ್ರೀಡಾಪಟುವಾಗಲು ಬೆಂಗಳೂರಿನಲ್ಲಿ ಉತ್ತರ ಕನ್ನಡದ ಸಿದ್ದಿ ಸಮುದಾಯದ 52 ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಮಂಗಳವಾರದಿಂದ ಆರಂಭವಾಗಲಿರುವ ತರಬೇತಿಯ ಹೊರತಾಗಿ ಅವರ ನಿತ್ಯದ ಶಿಕ್ಷಣವನ್ನು ಕ್ರೀಡಾ ಇಲಾಖೆ ನೋಡಿಕೊಳ್ಳಲಿದೆ.

published on : 10th January 2022

ಹಿನ್ನೋಟ 2021: ಒಲಂಪಿಕ್ಸ್, ಪ್ಯಾರಾಲಂಪಿಕ್ಸ್, ಟೆನಿಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಅಮೋಘ ಸಾಧನೆ

ಕೊರೋನಾದಿಂದ ಸ್ವಲ್ಪ ವಿರಾಮ ಸಿಕ್ಕಿದ್ದರಿಂದ 2021ರಲ್ಲಿ ಕ್ರೀಡಾ ಪ್ರಪಂಚದಲ್ಲಿ ಅನೇಕ ಪಂದ್ಯಾವಳಿಗಳು ನಡೆದಿದ್ದವು. ಇನ್ನು ಭಾರತ ಇದುವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ವರ್ಷ ಭಾರತಕ್ಕೆ ಕ್ರೀಡಾ ಜಗತ್ತಿನಲ್ಲಿ ಹಲವು ಸುವರ್ಣ ಕ್ಷಣಗಳನ್ನು ನೀಡಿದೆ.

published on : 29th December 2021

ಪ್ಯಾರಾಲಿಂಪಿಕ್ಸ್ ಸಾಧಕರಿಗೆ ಪ್ರಧಾನಿ ಮೋದಿ ಸನ್ಮಾನ: ಎಲ್ಲಾ ಅಥ್ಲೀಟ್ ಗಳು ಸಹಿ ಮಾಡಿದ ಶಾಲು ಉಡುಗೊರೆ!

ಪ್ಯಾರಾಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕಾಗಿ 19 ಪದಕಗಳನ್ನು ಗೆದ್ದ ಭಾರತೀಯ ಆಟಗಾರರನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಇಂದು ಬೆಳಗಿನ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಈ ವೇಳೆ ನಮೋ ಆಟಗಾರರನ್ನು ಸನ್ಮಾನಿಸಿದರು. 

published on : 9th September 2021

ಟೋಕಿಯೊ ಪ್ಯಾರಾಲಿಂಪಿಕ್ಸ್: 11 ಆವೃತ್ತಿಗಳಲ್ಲಿ ಭಾರತ ಇದೇ ಮೊದಲ ಬಾರಿಗೆ ಕ್ರೀಡಾಕೂಟವೊಂದರಲ್ಲಿ 12 ಪದಕ ಗೆದ್ದು ದಾಖಲೆ!

ಒಲಂಪಿಕ್ಸ್ ಅಥವಾ ಪ್ಯಾರಾಲಿಂಪಿಕ್ಸ್ ನ ಒಂದೇ ಆವೃತ್ತಿಯಲ್ಲಿ ಎರಡು ವೈಯಕ್ತಿಕ ಪದಕ ಗೆದ್ದಿರುವ ಸಾಧನೆಯನ್ನು ಭಾರತದ ಶೂಟರ್ ಅವನಿ ಲೇಖರಾ ಮಾಡಿದ್ದಾರೆ. 

published on : 3rd September 2021

ನಮ್ಮ ಅಥ್ಲೀಟ್ ಗಳಿಗೆ ಅಂತಾರಾಷ್ಟ್ರೀಯ ಅಭಿಮುಖತೆ ಹೆಚ್ಚು ಅಗತ್ಯ: ಅಂಜು ಬಾಬಿ ಜಾರ್ಜ್

ಭಾರತ ಈ ಬಾರಿಯ ಟೋಕಿಯೋ ಒಲಂಪಿಕ್ಸ್ ನಲ್ಲಿ 7 ಪದಕಗಳನ್ನು ಗೆದ್ದಿದ್ದು ಬಹುಕ್ರೀಡಾ ಉತ್ಸವದಲ್ಲಿನ ಉತ್ತಮ ಭವಿಷ್ಯದ ನಿರೀಕ್ಷೆ ಮೂಡಿಸಿದೆ.

published on : 22nd August 2021

ಐಸ್ ಕ್ರೀಮ್, ಚುರ್ಮಾದಿಂದ ಫಿಟ್ ನೆಸ್ ವರೆಗೆ: ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ!

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳೊಂದಿಗೆ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಮೂಲ್ಯವಾದ ಖುಷಿಯ ಸಮಯ ಕಳೆದಿದ್ದಾರೆ. 

published on : 18th August 2021

ಭಾರತಕ್ಕೆ ಮರಳಿದ ಟೋಕಿಯೋ ಒಲಿಂಪಿಕ್ಸ್ ಪದಕ ಸಾಧಕರಿಗೆ ಹೃದಯಸ್ಪರ್ಶಿ ಸ್ವಾಗತ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕೀರ್ತಿ ತಂದ ಪದಕ ಸಾಧಕರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಿಂದ ಖಾಸಗಿ ಹೊಟೇಲ್ ಗೆ ಸಾಧಕರನ್ನು ಕರೆದುಕೊಂಡು ಹೋಗಲಾಯಿತು. ಅಲ್ಲಿ ಪದಕ ವಿಜೇತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

published on : 9th August 2021

ಒಲಂಪಿಕ್ಸ್ ಕ್ರೀಡಾಕೂಟ: ಕ್ರೀಡಾಗ್ರಾಮದಲ್ಲಿ ಅಥ್ಲೀಟ್ ಗಳಿಂದ ಸಾಮೂಹಿಕ ಮದ್ಯ ಪಾರ್ಟಿ, ತನಿಖೆಗೆ ಆದೇಶ

ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಕೆಲವು ಅಥ್ಲೀಟ್‌ಗಳು ಸಾಮೂಹಿಕ ಮದ್ಯ ಪಾರ್ಟಿ ಮಾಡಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ಇತ್ತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಟೋಕಿಯೊ ಒಲಿಂಪಿಕ್ಸ್ ಆಯೋಜಕರು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

published on : 1st August 2021

ಟೋಕಿಯೋ ಒಲಿಂಪಿಕ್ಸ್: ಮತ್ತೆ 4 ಮಂದಿಗೆ ಕೋವಿಡ್ ಸೋಂಕು, ಕ್ರೀಡಾಗ್ರಾಮದಲ್ಲಿ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ 4 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದ್ದು, ಆ ಮೂಲಕ ಕ್ರೀಡಾಕೂಟದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.

published on : 27th July 2021

ಟೋಕಿಯೋ ಒಲಿಂಪಿಕ್ಸ್: 3 ಜನ ಅಥ್ಲೀಟ್ ಗಳು ಸೇರಿ ಮತ್ತೆ 16 ಮಂದಿಗೆ ಕೋವಿಡ್ ಸೋಂಕು, ಸೋಂಕಿತರ ಸಂಖ್ಯೆ 148ಕ್ಕೆ ಏರಿಕೆ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ 3 ಜನ ಅಥ್ಲೀಟ್ ಗಳು ಸೇರಿ ಮತ್ತೆ 16 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದೆ.

published on : 26th July 2021

ಟೋಕಿಯೊ ಒಲಂಪಿಕ್ಸ್‌ 2020: 10 ಮೀ. ಪಿಸ್ತೂಲ್ ಫೈನಲ್‌ ನಲ್ಲಿ ಎಡವಿದ ಸೌರಭ್; ಅಪೂರ್ವ, ಇಲವೆನಿಲ್ ಔಟ್

ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದ ಸೌರಭ್ ಚೌಧರಿ ಟೋಕಿಯೊ ಒಲಿಂಪಿಕ್ಸ್‌ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಏಳನೇ ಸ್ಥಾನ ಗಳಿಸಿದ್ದಾರೆ.

published on : 24th July 2021

ಟೋಕಿಯೊ ಒಲಿಂಪಿಕ್ಸ್‌: ಇಬ್ಬರು ಅಥ್ಲೀಟ್‌ಗಳಿಗೆ ಕೊರೋನಾ ಪಾಸಿಟಿವ್!

ಒಲಿಂಪಿಕ್ಸ್‌ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಕ್ರೀಡಾಗ್ರಾಮದಲ್ಲಿ ಇಬ್ಬರು ಅಥ್ಲೀಟ್‌ಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

published on : 18th July 2021
1 2 > 

ರಾಶಿ ಭವಿಷ್ಯ