• Tag results for Award

ಆಸ್ಕರ್ ಪ್ರಶಸ್ತಿಗೆ ತಮಿಳಿನ 'ಜೈ ಭೀಮ್', ಮಲಯಾಳಂನ 'ಮರಕ್ಕರ್' ಸೇರಿ 276 ಚಿತ್ರಗಳು ಆಯ್ಕೆ

ತಮಿಳು ನಟ ಸೂರ್ಯ ಅಭಿನಯದ ಜೈ ಭೀಮ್ ಹಾಗೂ ಮಲಯಾಳಂ ನಟ ಮೋಹನ್‌ಲಾಲ್‌ ನಟನೆಯ ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ 2022 ರ ಆಸ್ಕರ್‌ ಅತ್ಯುತ್ತಮ ಚಲನಚಿತ್ರಕ್ಕೆ ಆಯ್ಕೆಯಾಗಿದೆ.

published on : 21st January 2022

ಆಟಗಳ ಮೂಲಕ ಪಾಠ: ಕೊಯಮತ್ತೂರು ಸರ್ಕಾರಿ ಶಾಲಾ ಶಿಕ್ಷಕಿಗೆ ಸಾರಾಭಾಯಿ ರಾಷ್ಟ್ರೀಯ ಪುರಸ್ಕಾರ

ಯುವರಾಣಿ ಅವರು ಪಠ್ಯವನ್ನು ಅನಿಮೇಟೆಡ್ ವಿಡಿಯೋಗಳನ್ನಾಗಿ ಪರಿವರ್ತಿಸಿ ಅವುಗಳ ಮೂಲಕ ಮಕ್ಕಳಿಗೆ ಆಸಕ್ತಿದಾಯಕವಾಗಿ ಪಾಠ ಮಾಡುತ್ತಾ ಬಂದಿದ್ದಾರೆ. 

published on : 20th January 2022

ರಾಷ್ಟ್ರೀಯ ಸ್ಟಾರ್ಟ್'ಅಪ್ ಅವಾರ್ಡ್ಸ್ 2021: 'ಸ್ಟಾರ್ಟ್‌ ಅಪ್‌ ಹಬ್' ಸ್ಥಾನ ಉಳಿಸಿಕೊಂಡ ಬೆಂಗಳೂರು!

ಅಖಿಲ ಭಾರತ ಮಟ್ಟದಲ್ಲಿ ಮೊದಲ ಬಾರಿಗೆ ನಡೆದ `ರಾಷ್ಟ್ರೀಯ ಸ್ಟಾರ್ಟ್'ಅಪ್ ಅವಾರ್ಡ್ಸ್ 2021’ ರಲ್ಲಿ ವಿವಿಧ ವಲಯಗಳಲ್ಲಿ ರಾಜ್ಯದ 14 ನವೋದ್ಯಮಗಳು ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಈ ಮೂಲಕ ರಾಜ್ಯ ರಾಜಧಾನಿ ಬೆಂಗಳೂರು 'ಸ್ಟಾರ್ಟ್‌ ಅಪ್‌'ಗಳ ಹಬ್' ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.

published on : 17th January 2022

ಆಸ್ಟರ್'ಗೆ 'ಅತ್ಯುತ್ತಮ ಹೋಮ್ ಕೇರ್' ಪ್ರಶಸ್ತಿ!

ಆಸ್ಟರ್ ಡಿಎಂ ಹೆಲ್ತ್‌ಕೇರ್‌ನ ಆಸ್ಟರ್ @ ಹೋಮ್'ಗೆ ಇಂಟಿಗ್ರೇಟೆಡ್ ಹೆಲ್ತ್ ಅಂಡ್ ವೆಲ್‌ಬೀಯಿಂಗ್ (ಐಎಚ್‌ಡಬ್ಲ್ಯು) ಕೌನ್ಸಿಲ್‌ ‘ಭಾರತದ ಅತ್ಯುತ್ತಮ ಹೋಮ್ ಹೆಲ್ತ್ ಕೇರ್ ಬ್ರಾಂಡ್’ ಪ್ರಶಸ್ತಿಯನ್ನು ನೀಡಿದೆ.

published on : 12th January 2022

ಸಿನಿಮಾ ಹಂಚಿಕೆ ಕ್ಷೇತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಡಿ. ಎಂಟ್ರಿ: ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಬ್ಯಾನರ್ ಗೆ ಚಾಲನೆ

ತಾವು ನಿರ್ದೇಶಿಸಿ, ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯ ಸಹಯೋಗದಲ್ಲಿ ಮೂಡಿಬಂದಿರುವ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಬಿಡುಗಡೆಗಾಗಿ ನಿರ್ದೇಶಕ ಸತ್ಯಪ್ರಕಾಶ್ ಎದುರು ನೋಡುತ್ತಿದ್ದಾರೆ.

published on : 10th January 2022

ರಾಜ್ಯದ ಕೋವಿಡ್ ವಾರ್ ರೂಮ್‌ಗೆ ರಾಷ್ಟ್ರ ಪ್ರಶಸ್ತಿ!

ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಕೋವಿಡ್-19 ವಾರ್ ರೂಮ್'ಗೆ ಕೋವಿಡ್ ನಿರ್ವಹಣೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಬಳಸುವ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

published on : 8th January 2022

ಪ್ರಶಸ್ತಿಯೊಂದಿಗೆ ಬಂದ 1 ಲಕ್ಷಕ್ಕೆ ಮತ್ತೆ ಒಂದು ಲಕ್ಷ ರು. ಹಣ ಸೇರಿಸಿ ಮಠಕ್ಕೆ ವಾಪಸ್‌ ನೀಡಿದ ಸಿದ್ದರಾಮಯ್ಯ

ಮಡಿವಾಳ ಗುರುಪೀಠದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಅವರ ನಾಲ್ಕನೇ ಪೀಠಾರೋಹಣ ಹಾಗೂ 38ನೇ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಚಿದೇವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

published on : 7th January 2022

ಕನ್ನಡದ ಡಿಎಸ್ ನಾಗಭೂಷಣ್, ನಮಿತಾ ಗೋಖಲೆ ಸೇರಿದಂತೆ 20 ಮಂದಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕನ್ನಡದ ಡಿಎಸ್ ನಾಗಭೂಷಣ್, ಖ್ಯಾತ ಲೇಖಕಿ ನಮಿತಾ ಗೋಖಲೆ, ಟಿಎಂಸಿ ಶಾಸಕ ಬ್ರಾತ್ಯಾ ಬಸು ಮತ್ತು ಖ್ಯಾತ ಪಂಜಾಬಿ ಬರಹಗಾರ ಖಾಲಿದ್ ಹುಸೇನ್ ಸೇರಿದಂತೆ 20 ಮಂದಿಯ ಹೆಸರನ್ನು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಘೋಷಿಸಲಾಗಿದೆ.  

published on : 31st December 2021

ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಾಡಾಗ್ ಪೆಲ್ ಗಿ ಖೋರ್ಲೊಗೆ ಭಾಜನಾರಾಗಿದ್ದು ಶುಕ್ರವಾರ ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಪ್ರದಾನ ಮಾಡಿದ್ದಾರೆ.

published on : 17th December 2021

ಅಸ್ಸಾಂ ಸರ್ಕಾರದಿಂದ ಉದ್ಯಮಿ ರತನ್ ಟಾಟಾಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ

ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲು ನೀಡಿದ ಕೊಡುಗೆಯನ್ನು ಗಮನಿಸಿ ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ ಅವರಿಗೆ ರಾಜ್ಯ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಅಸ್ಸಾಂ ಬೈಭವ್'ವನ್ನು ಪ್ರದಾನ ಮಾಡಲಿದೆ...

published on : 2nd December 2021

ಭಾರತದ ಅಥ್ಲೀಟ್ ಅಂಜು ಬಾಬಿ ಜಾರ್ಜ್‍ಗೆ 'ವರ್ಷದ ಮಹಿಳೆ' ಪ್ರಶಸ್ತಿ

ವರ್ಲ್ಡ್ ಅಥ್ಲೆಟಿಕ್ಸ್  ಭಾರತದ ಲೆಜೆಂಡರಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು 'ವರ್ಷದ ಮಹಿಳೆ'ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.

published on : 2nd December 2021

'ಕುಂಬಾರ ವೀರಭದ್ರಪ್ಪ'ಗೆ ಬಿಎಂಆರ್ ಸಿಎಲ್ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ; ಸಮಾರಂಭದಲ್ಲಿ ಮಾಸ್ಕ್ ಮರೆತ ಗಣ್ಯರು!

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಬಿಎಂಆರ್ ಸಿಎಲ್ ಕನ್ನಡ ಸಂಘದ  ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ 'ನಮ್ಮ ಮೆಟ್ರೋ  ವರ್ಷದ ಕನ್ನಡಿಗ ಪ್ರಶಸ್ತಿಯನ್ನು ಕನ್ನಡದ ಖ್ಯಾತ ಕಾದಂಬರಿಕಾರ ಕುಂಬಾರ ವೀರಭದ್ರಪ್ಪ ಅವರಿಗೆ ನೀಡಲಾಗಿದೆ. 

published on : 30th November 2021

7 ನೇ ಬಾರಿಗೆ ಬ್ಯಾಲನ್ ಡಿ'ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದ ಲಿಯೋನೆಲ್ ಮೆಸ್ಸಿ

ಫುಟ್ ಬಾಲ್ ನ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ 7 ನೇ ಬಾರಿಗೆ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ.

published on : 30th November 2021

ಅಂತಾರಾಷ್ಟ್ರೀಯ ಎಮ್ಮೀ ಅವಾರ್ಡ್ 2021: ಮೂರೂ ವಿಭಾಗಗಳಲ್ಲಿ ಅವಾರ್ಡ್ ಮಿಸ್ ಆದರೂ ಬೀಗಿದ ಭಾರತ

ಟಿವಿ ಸರಣಿಗಳು, ಧಾರಾವಾಹಿಗಳಿಗೆ ನೀಡಲಾಗುವ ಜಗತ್ತಿನಲ್ಲೇ ಪ್ರತಿಷ್ಟಿತ ಅವಾರ್ಡ್ ಎಮ್ಮೀಸ್ ನಲ್ಲಿ ಈ ಬಾರಿ ಭಾರತ ಪ್ರಶಸ್ತಿ ಗೆಲ್ಲುವ ಮೂರು ಅವಕಾಶಗಳಿದ್ದವು.

published on : 23rd November 2021

ನವೋದ್ಯಮ ಸಾಧಕ ಕಂಪನಿಗಳಿಗೆ 'ಬೆಂಗಳೂರು ಇಂಪ್ಯಾಕ್ಟ್' ಪುರಸ್ಕಾರ

ಅತ್ಯುತ್ತಮ ಸಾಧನೆ ಮಾಡಿರುವ 15 ನವೋದ್ಯಮಗಳಿಗೆ `ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರವನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನವಾದ  ಪ್ರದಾನ ಮಾಡಲಾಯಿತು.

published on : 19th November 2021
1 2 3 4 5 6 > 

ರಾಶಿ ಭವಿಷ್ಯ