• Tag results for Ayodhya

ಅಯೋಧ್ಯೆ ರಾಮಜನ್ಮಭೂಮಿ ಭವ್ಯ ಮಂದಿರ ನಿರ್ಮಾಣಕ್ಕೆ ಅಧಿಕೃತ ಚಾಲನೆ, ರಾಮಲಲ್ಲಾಗೆ ವಿಶೇಷ ಪೂಜೆ

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಭವ್ಯ ದೇವಾಲಯದ ನಿರ್ಮಾಣವು ಇಂದಿನಿಂದ (ಮೇ 26) ಅಧಿಕೃತವಾಗಿ ಪ್ರಾರಂಭವಾಗಿದೆ ಎಂದುರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಘೋಷಿಸಿದ್ದಾರೆ.

published on : 26th May 2020

ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭ ಮುಂದೂಡಿಕೆ..?

ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ದಿಗ್ಬಂಧನವನ್ನು ಒಂದೊಮ್ಮೆ ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಿದರೆ, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಿಸುವ ಏಪ್ರಿಲ್ 26(ಅಕ್ಷಯ ತೃತೀಯ) ದಿನವನ್ನು ಮುಂದೂಡುವ ಸಾಧ್ಯತೆಗಳಿವೆ ಇದೆ ಎಂದು ಮೂಲಗಳು ಹೇಳಿವೆ.

published on : 12th April 2020

ಶ್ರೀರಾಮ ನವಮಿ ಹಬ್ಬದ ಮಹತ್ವವೇನು? ಆಚರಣೆ ಹೇಗೆ ಮಾಡಬೇಕು?

ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ರಾಮನವಮಿ ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ.

published on : 1st April 2020

ಅಯೋಧ್ಯೆಯಲ್ಲಿ ಮೂರ್ತಿಗಳ ಸ್ಥಳಾಂತರ!

ಗರ್ಭ ಗೃಹದಿಂದ 'ರಾಮ್ ಲಲ್ಲಾ'  ಮತ್ತು ಇತರ ವಿಗ್ರಹಗಳನ್ನು ಬುಧವಾರ ರಾಮ ಜನ್ಮಭೂಮಿಯ ಮನಸ್ ಭವನದ ಬಳಿ ತಾತ್ಕಾಲಿಕ ಕಟ್ಟಡದ ಆವರಣಕ್ಕೆ ಸ್ಥಳಾಂತರಿಸಲಾಯಿತು. 

published on : 25th March 2020

ಕಾಶ್ಮೀರದಲಿ ಕೊರೋನಾ ತಡೆಗೆ ಫಾರೂಕ್ ಅಬ್ದುಲ್ಲಾರಿಂದ ಕೋಟಿ ರು. ಬಿಡುಗಡೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ಹಾವಳಿ ಎದುರಿಸಲು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸತ್ ಸದಸ್ಯ ಫಾರೂಕ್ ಅಬ್ದುಲ್ಲಾ ಶನಿವಾರ ತಮ್ಮ ಎಂಪಿಎಲ್‌ಎಡಿ ನಿಧಿಯಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.ಇನ್ನೊಂದೆಡೆ ಶ್ರೀರಾಮನವಮಿಯನ್ನು ಭಕ್ತರು ಮನೆಗಳಲ್ಲೇ ಆಚರಿಸಿ ಎಂದು ಅಯೋಧ್ಯೆ ಶ್ರೀರಾಮತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.

published on : 21st March 2020

ಕೊರೋನಾ ಭೀತಿ ಲೆಕ್ಕಿಸದೆ, ರಾಮನವಮಿ ಮೇಳಕ್ಕೆ ಅನುಮತಿ ನೀಡಿದ ಯೋಗಿ

ಕೊರೋನಾ ಸೋಂಕು ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಸಮಯದಲ್ಲೇ ಉತ್ತರಪ್ರದೇಶ  ಸರ್ಕಾರ  ರಾಮನವವಿಯ ಸಂದರ್ಭದಲ್ಲಿ, ತಜ್ಞರ ಅಭಿಪ್ರಾಯ ಧಿಕ್ಕರಿಸಿ ಅಯೋಧ್ಯೆಯಲ್ಲಿ ಬೃಹತ್ ರಾಮನವಮಿ ಧಾರ್ಮಿಕ ಮೇಳ ನಡೆಸಲು  ಅನುಮತಿ  ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ

published on : 18th March 2020

ಅಯೋಧ್ಯೆ, ಆರ್ಟಿಕಲ್ 370, ಸಿಎಎ: 'ಸುಪ್ರೀಂ' ಕೇಂದ್ರ ಸರ್ಕಾರವನ್ನು ಪ್ರಶಂಸಿಸಿದ ಆರ್‌ಎಸ್ಎಸ್ ಸರಸಂಚಾಲಕ ಭೈಯಾಜಿ ಜೋಶಿ

ಅಯೋಧ್ಯೆ ರಾಮಜನ್ಮಭೂಮಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆರವು ಮತ್ತು ಸಿಎಎ ಜಾರಿ ಕುರಿತಂತೆ ಕೇಂದ್ರ ಸರ್ಕಾರದ ದಿಟ್ಟ ಕ್ರಮಗಳನ್ನು ಆರ್‌ಎಸ್ಎಸ್ ಪ್ರಶಂಸಿಸಿದೆ. 

published on : 16th March 2020

ರಾಮಜನ್ಮಭೂಮಿ: ರಾಮ ಲಲ್ಲಾಗೆ ಗುಂಡುನಿರೋಧಕ, ಇನ್ನಷ್ಟು ಸಮೀಪದಿಂದ ದರ್ಶನ

ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ಗುಂಡು ನಿರೋಧಕ ಆವರಣ ಸೇರಲಿದ್ದಾನೆ! ಹೌದು ಇದೇ ಮಾರ್ಚ್ 25ಕ್ಕೆ ರಾಮ ಲಲ್ಲಾ ವಿಗ್ರಹವನ್ನು ಈಗಿರುವ ತಾತ್ಕಾಲಿಕ ದೇವಾಲಯದ ಸಮೀಪ ಗುಂಡು ನಿರೋಧಕ ಆವರಣದ  ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕ ವಿನೋದ್ ಕುಮಾರ್ ಬನ್ಸಾಲ್ ಭಾನುವಾರ ಹೇಳಿದ್ದಾರೆ.

published on : 8th March 2020

ಬಿಜೆಪಿಯಿಂದ ಬೇರ್ಪಟ್ಟಿದ್ದು, ಹಿಂದುತ್ವದಿಂದಲ್ಲ: ರಾಮಮಂದಿರ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ಘೋಷಿಸಿದ ಉದ್ಧವ್ ಠಾಕ್ರೆ

ತಾವು ಬಿಜೆಪಿಯಿಂದ ಮಾತ್ರ ಬೇರ್ಪಟ್ಟಿದ್ದು, ಹಿಂದುತ್ವದಿಂದಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.

published on : 7th March 2020

ಅಯೋಧ್ಯೆ ತೀರ್ಪು: ಸುಪ್ರೀಂ ಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ಹಾಕಿದ ಪಿಎಫ್ಐ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಎಂಬ ಇಸ್ಲಾಮಿಕ್ ಸಂಘಟನೆ ಅಯೋಧ್ಯೆ ತೀರ್ಪಿಗೆ ಸಂಬಂಧಿಸಿ ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದೆ.

published on : 6th March 2020

ಅಯೋಧ್ಯೆಯಲ್ಲಿ ಸರ್ಕಾರ ನೀಡಿದ 5 ಎಕರೆ ಜಾಗದಲ್ಲಿ ಮಸೀದಿ, ಆಸ್ಪತ್ರೆ ನಿರ್ಮಾಣ: ಸುನ್ನಿ ವಕ್ಫ್​ ಬೋರ್ಡ್

ಅಯೋಧ್ಯೆ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಉತ್ತರ ಪ್ರದೇಶ ಸರ್ಕಾರ ನೀಡಿದ ಐದು ಎಕರೆ ಜಮೀನನಲ್ಲಿ ಮಸೀದಿ, ಭಾರತ-ಇಸ್ಲಾಮಿಕ್ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ನಿರ್ಮಿಸುವುದಾಗಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸೋಮವಾರ ಹೇಳಿದೆ.

published on : 24th February 2020

ಮೂರುವರೆ ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣ- ಟ್ರಸ್ಟ್ ಸದಸ್ಯ

ಮೂರು ಅಥವಾ ಮೂರೂವರೆ ವರ್ಷಗಳಲ್ಲಿ ಅಯೋಧ್ಯೆಯಲ್ಲಿ  ರಾಮ ಮಂದಿರ ನಿರ್ಮಾಣವಾಗಲಿದೆ ಎಂದು  ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿಜಿ ಮಹಾರಾಜ್ ಹೇಳಿದ್ದಾರೆ.

published on : 23rd February 2020

ಪೇಜಾವರ ಮಠದಿಂದ ವಿಶ್ವೇಶತೀರ್ಥ ಶ್ರೀಗಳ ಹೆಸರಿನಲ್ಲಿ ರಾಮ ಮಂದಿರಕ್ಕೆ 5 ಲಕ್ಷ ರೂ ದೇಣಿಗೆ 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ನಿರ್ಮಾಣವಾಗುತ್ತಿದ್ದಂತೆಯೇ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ್ಯ ಪ್ರಾರಂಭವಾಗಿದೆ. 

published on : 20th February 2020

ರಾಮ ಮಂದಿರ ನಿರ್ಮಾಣ ಟ್ರಸ್ಟ್ ಗೆ ಅಧ್ಯಕ್ಷ-ಕಾರ್ಯದರ್ಶಿಗಳ ನೇಮಕ

ರಾಮ ಮಂದಿರ ನಿರ್ಮಾಣ ಟ್ರಸ್ಟ್ ಗೆ ಅಧ್ಯಕ್ಷ-ಕಾರ್ಯದರ್ಶಿಗಳ ನೇಮಕ ಮಾಡಲಾಗಿದ್ದು, ಪ್ರಧಾನಿ ಮೋದಿ ಆಪ್ತರೆಂದು ಹೇಳಲಾಗುತ್ತಿರುವ ನೃಪೇಂದ್ರ ಮಿಶ್ರಾ ಅವರಿಗೆ ದೇಗುಲ ನಿರ್ಮಾಣ ಸಮಿತಿಯಲ್ಲಿ ಪ್ರಮುಖ ಪಾತ್ರ ನೀಡಲಾಗಿದೆ ಎನ್ನಲಾಗಿದೆ.

published on : 20th February 2020

ಮುಸ್ಲಿಮರ ಸಮಾಧಿಗಳ ಮೇಲೆ ರಾಮ ಮಂದಿರವೇ..? ಟ್ರಸ್ಟ್‌ಗೆ ಮುಸ್ಲಿಮರ ಪತ್ರ!

ರಾಮಮಂದಿರ ನಿರ್ಮಿಸಲು ಹಂಚಿಕೆ ಮಾಡಿರುವ ಭೂಮಿಯಲ್ಲಿ ಗೋರಿಗಳಿವೆ ಎಂದು ಕೆಲ ಅಯೋಧ್ಯ ಮುಸ್ಲಿಮರು ದೇಗುಲ ನಿರ್ಮಾಣ ಸಂಬಂಧ ರಚಿಸಲಾಗಿರುವ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.

published on : 18th February 2020
1 2 3 4 5 6 >